UPI ಮೂಲಕ EPF: 3 ದಿನಗಳಲ್ಲಿ ಚಂದಾದಾರರ ಕೈಗೆ ಭವಿಷ್ಯ ನಿಧಿ!

UPI ಮೂಲಕ EPF: 3 ದಿನಗಳಲ್ಲಿ ಚಂದಾದಾರರ ಕೈಗೆ ಭವಿಷ್ಯ ನಿಧಿ!

UPI ಮೂಲಕ EPF:EPFO ಹೊಸ ಅಪ್‌ಡೇಟ್: UPI ಮೂಲಕ EPF ಹಣ ವೇಗವಾಗಿ 3 ದಿನಗಳಲ್ಲಿ ಲಭ್ಯ.

ಏಪ್ರಿಲ್ ನಿಂದ ಜಾರಿ:

ಇಪಿಎಫ್‌ಒ ಚಂದಾದಾರರು ಏಪ್ರಿಲ್‌ನಿಂದ ನೌಕರರ ಭವಿಷ್ಯನಿಧಿಯನ್ನು ಯುಪಿಐ  ಆಧಾರಿತ ಪಾವತಿ ಮೂಲಕ ಪಡೆಯಬಹುದು.

ಯುಪಿಐ ಆಟೊ ಸೆಟಲ್‌ಮೆಂಟ್ ಆಯ್ಕೆ ಯಡಿ ಅರ್ಜಿ ಸಲ್ಲಿಸಿದ3 ದಿನಗಳಲ್ಲೇ ಮೊತ್ತವು ಚಂದಾದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಹೊಸ ವ್ಯವಸ್ಥೆ ಲಾಭ:

ಹಳೆಯ ವ್ಯವಸ್ಥೆಯಲ್ಲಿ ಆಗುತ್ತಿದ್ದ ವಿಳಂಬವನ್ನು ತಡೆಯಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.

ಎಷ್ಟು ಮಂದಿಗೆ ಅನುಕೂಲ?

ಸದ್ಯ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯಲ್ಲಿನ ಸಾಫ್ಟ್‌ವೇ‌ರ್ ಲೋಪಗಳನ್ನು ಇಪಿಎಫ್‌ಒ ಸರಿಪಡಿಸುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಸುಮಾರು 8 ಕೋಟಿಯಷ್ಟು ಚಂದಾದಾರರಿಗೆ ಅನುಕೂಲವಾಗಲಿದೆ.

ಬಾಕಿ ಪರಿಶೀಲನೆ:

ಭವಿಷ್ಯನಿಧಿಯನ್ನು ಹಿಂತೆಗೆದು ಕೊಳ್ಳುವುದು ಮಾತ್ರವಲ್ಲ, ಬಾಕಿ ಉಳಿದಿರುವ ಮೊತ್ತವನ್ನೂ ಯುಪಿಐ ಮೂಲಕ ಪರಿಶೀಲಿಸಬಹುದು.

ಉದ್ಯೋಗಿ ಮತ್ತು ಉದ್ಯೋಗದಾತ ಕಂಪನಿ ಇಬ್ಬರ ಪಾಲೂ ಸೇರಿ ಒಟ್ಟು ಅರ್ಹವಿರುವ ಶೇ.100ರಷ್ಟು ಮೊತ್ತವನ್ನೂ ಹಿಂತೆಗೆದುಕೊಳ್ಳಲು ಕಾರ್ಮಿಕರಿಗೆ ಅವಕಾಶವಿದೆ.

ಚಂದಾದಾರ ಸ್ನೇಹಿ:

ತುರ್ತು ಹಣಕಾಸು ಅಗತ್ಯ ಇರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕೋವಿಡ್-19 ಸಂದರ್ಭದಲ್ಲಿ ಇಪಿಎಫ್‌ಒ ಮೊದಲ ಬಾರಿಗೆ ಆನ್‌ಲೈನ್ ಆಟೊ ಸೆಟಲ್‌ಮೆಂಟ್ ಆಯ್ಕೆಯನ್ನು ಪರಿಚಯಿಸಿತ್ತು. ಪ್ರತಿವರ್ಷ ಸುಮಾರು 5 ಲಕ್ಷದಷ್ಟು ಇಪಿಎಫ್ ಕ್ಷೇಮ್‌ಗಳನ್ನು ಇಪಿಎಫ್‌ಒ ಇತ್ಯರ್ಥಪಡಿಸುತ್ತದೆ.

ಖಾತೆಗೆ ವರ್ಗಾವಣೆ:

ಇಪಿಎಫ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣವು ಸುರಕ್ಷಿತವಾಗಿ ವರ್ಗಾವಣೆಯಾಗಲು, ಚಂದಾದಾರರು ತಮ್ಮ ಲಿಂಕ್ ಮಾಡಲಾದ ಯುಪಿಐ ಪಿನ್ ಬಳಸಬೇಕು. ಒಮ್ಮೆ ಹಣವು ಬ್ಯಾಂಕ್ ಖಾತೆಗೆ ಜಮಾಗೊಂಡ ನಂತರ, ಆ ಮೊತ್ತವನ್ನು ಇನ್ನೊಂದು ಖಾತೆಗೆ ವರ್ಗಾಯಿಸಿಕೊಳ್ಳಲು ಅಥವಾ ಎಟಿಎಂ ಮೂಲಕ ತೆಗೆದುಕೊಳ್ಳಲು ಚಂದಾದಾರರಿಗೆ ಅವಕಾಶವಿರುತ್ತದೆ.

EPF

 

CLICK HERE MORE INFORMATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!