ಶಿಷ್ಯವೇತನದೊಂದಿಗೆ UPSC ತರಬೇತಿ-2024-25

ಶಿಷ್ಯವೇತನದ ಜತೆಗೆ UPSC ತರಬೇತಿ

ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಕೇಂದ್ರ ನಾಗರಿಕ ಸೇವಾ ಆಯೋಗ (UPSC) ಪೂರ್ವಭಾವಿ ಪರೀಕ್ಷಾ ತರಬೇತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 400 ಪ.ಜಾತಿ ಹಾಗೂ 200 ಪ.ಪಂಗಡದ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಿ ಶಿಷ್ಯವೇತನದ ಜೊತೆಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 21-37 ವರ್ಷದೊಳಗಿರಬೇಕು. ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿರಬಾರದು. ಅಭ್ಯರ್ಥಿಗಳಿಗೆ 6 ತಿಂಗಳುಗಳ ಕಾಲ ಪೂರ್ವಭಾವಿ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಬಳಿಕ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 3 ತಿಂಗಳು ಮುಖ್ಯ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ.

ಈಗಾಗಲೇ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗೆ ಇಲಾಖೆಯಿಂದ ತರಬೇತಿ ಪಡೆದವರು ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸುವ ಕೊನೇ ದಿನಾಂಕದೊಳಗೆ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಪಡೆದಿರಬೇಕು. ಅಂಗವಿಕಲ/ ವಿದ್ಯಾರ್ಥಿನಿಲಯ/ ಕ್ರೈಸ್ ವಿದ್ಯಾರ್ಥಿನಿಲಯ/ ಸಫಾಯಿ ಕರ್ಮಚಾರಿ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರುವುದು ಕಡ್ಡಾಯವೆಂದು ಸೂಚಿಸಲಾಗಿದೆ. ದೆಹಲಿಯಲ್ಲಿ ತರಬೇತಿ ಪಡೆಯುವವರಿಗೆ 15,000 ರೂ., ಹೈದರಾಬಾದ್ 8,000 ರೂ., ಬೆಂಗಳೂರು 6,000 ರೂ., ಹಾಗೂ ಇತರ ಸ್ಥಳಗಳಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ 5,000 ರೂ. ಮಾಸಿಕ ಶಿಷ್ಯವೇತನ ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ https://swdservices.karnataka.gov.in/petccoaching/WebPages/StudentLogin.aspxಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ UPSC ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ.

2025ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ UPSC ಪೂರ್ವಭಾವಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.

UPCS ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ, ಅಂಕಗಳ ಆಧಾರದ ಮೇಲೆ ನಿಗಧಿತ ಗುರಿಗನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಸದರಿ ಅಭ್ಯರ್ಥಿಗಳಿಗೆ ಶಿಷ್ಯ ವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಮತ್ತು ತರಬೇತಿ ವೆಚ್ಚವನ್ನು ತರಬೇತಿ ಸಂಸ್ಥೆಗಳಿಗೆ ಪಾವತಿಸಲಾಗುವುದು.

UPSC ಪೂರ್ವಭಾವಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿಸಲ್ಲಿಸಬೇಕಾದ ವೆಬ್ ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.

01. ಕೋರ್ಸ್ ವಿವರ & ತರಬೇತಿ ಅವಧಿ:

UPSC- 6 months for Prelims and 3 months for Mains (Those who have cleared prelims and eligible for mains examinations).

02. ವಯಸ್ಸು:  21 ರಿಂದ 37 ವರ್ಷ

03.ಕೋರ್ಸ್ ವಿವರ:

ಕೇಂದ್ರ ಲೋಕಸೇವಾ ಆಯೋಗ ಪ್ರತಿ ವರ್ಷ IAS,IFS,.IPS,IRS ಮೊದಲಾದ 23 ವಿವಿಧ ಸೇವೆಯ ಹುದ್ದೆಗಳ ಪರೀಕ್ಷೆಗೆ ತರಬೇತಿ.

ಸದರಿ ತರಬೇತಿಗೆ ಪದವಿಯಲ್ಲಿ ಉತ್ತೀರ್ಣರಾಗಿರುವ ಮತ್ತು ಅಂತಿಮ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದು, ಆಯ್ಕೆ ಪ್ರಕ್ರಿಯೆ ಹಂತದಲ್ಲಿ ಪದವಿ ವ್ಯಾಸಂಗ ಪೂರ್ಣ ಮಾಡಿದ ಬಗ್ಗೆ ಅಧಿಕೃತ ದಾಖಲೆಗಳನ್ನು ಹೊಂದಿರಬೇಕಾದದು ಮುಖ್ಯ.

04. ಅಭ್ಯರ್ಥಿಯ ಸಾಮಾನ್ಯ ಅರ್ಹತೆ:

1.ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು;

2.ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

3.ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ, ನಿಗಧಿತ ಪ್ರಾಧಿಕಾರದಿಂದ ನಿಗಧಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪ್ರಮಾಣ ಪತ್ರ ಪಡೆದಿರಬೇಕು.

4.ವಿದ್ಯಾರ್ಥಿನಿಲಯ / ಕ್ರೈಸ್ ವಿದ್ಯಾರ್ಥಿನಿಲಯ / ಸಫಾಯಿ ಕರ್ಮಚಾರಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ನಿಗಧಿತ ನಮೂನೆಯಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.

05. ವಾರ್ಷಿಕ ಆದಾಯದ ಮಿತಿ:

ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 5.00 ಲಕ್ಷ ಮೀರರಬಾರದು.

06. ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

1.ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷಯಲ್ಲಿ ಅಂಕಗಳ ಆಧಾರದ ಮಾಡಲಾಗುತ್ತದೆ. ಮೇಲೆ ಆಯ್ಕೆ

2.ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳನ್ನು ತರಬೇತಿ ಸಂಸ್ಥೆಗೆ ನಿಯೋಜಿಸಲಾಗುತ್ತದೆ.

7.ಶಿಷ್ಯವೇತನ (ಮಾಸಿಕ)

UPSC ತರಬೇತಿ:

ದೆಹಲಿ- ₹15,000

ಹೈದರಾಬಾದ್ – ₹ 8,000/-

ಬೆಂಗಳೂರು- ₹6000

ಇತರೆ ಸ್ಥಳಗಳು- ₹5,000/-

ಮುಖ್ಯ ಸೂಚನೆ: ಬಯೋಮೆಟ್ರಿಕ್ ಶಿಷ್ಯವೇತನವನ್ನು ಪ್ರತಿ ಮಾಹೆ ತರಬೇತಿ ಸಂಸ್ಥೆಯವರು ಸಲ್ಲಿಸುವ ಹಾಜರಾತಿಯನ್ವಯ ಪಾವತಿಸಲಾಗುವುದು. ಆದರೆ ತರಬೇತಿ ಅವಧಿಯಲ್ಲಿ ಯಾವುದೇ ವಸತಿ ಸೌಲಭ್ಯವನ್ನು ಇಲಾಖಾವತಿಯಿಂದ ನೀಡಲಾಗುವುದಿಲ್ಲ.

ಅರ್ಜಿ ಸಲ್ಲಿಕೆ ಮಾಡಲು ಬಳಸಬೇಕಾದ ವೆಬ್ಸೈಟ್ ಲಿಂಕ್–  https://petc.kar.nic.in/

ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ: 30.11.2024

ಗಮನಿಸಬೇಕಾದ ಪ್ರಮುಖ ಅಂಶಗಳು:

ಸಂಬಂಧಿಸಿದ ಇಲಾಖಾ ಜಾಲತಾಣದಲ್ಲಿ ಕಾಲಕಾಲಕ್ಕೆ ಒದಗಿಸಲಾಗುವ ಮಾಹಿತಿಯು ಅಧಿಕೃತ ಮತ್ತು ಅಂತಿಮವಾಗಿರುತ್ತದೆ.

UPSC/KAS ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ಈಗಾಗಲೇ ತರಬೇತಿ ಪಡೆದ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಾಗಿರುವದಿಲ್ಲ. SSC / RRB / Banking /ಗ್ರೂಪ್-ಸಿ ಮತ್ತು ನ್ಯಾಯಾಂಗ ಸೇವೆ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳು UPSC ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಇಲಾಖೆಯ ವತಿಯಿಂದ ಯಾವುದೇ ಪತ್ರ ವ್ಯವಹಾರವನ್ನು ಮಾಡಲಾಗದಿಲ್ಲದಿರುವದರಿಂದ, ಇಲಾಖಾ ಜಾಲತಾಣವನ್ನು ಕಾಲಕಾಲಕ್ಕೆ ವೀಕ್ಷಿಸುವುದು ಅವಶ್ಯ ಹಾಗೂ ವೆಬ್ ಸೈಟ್ ನಲ್ಲಿ ನೀಡಲಾದ ಸೂಚನೆಗನುಗುಣವಾಗಿ ಪ್ರವೇಶ ಪರೀಕ್ಷಾ ಪತ್ರ ಡೌನ್ ಲೋಡ್ ಮಾಡಿಕೊಂಡು, ಸಾಮಾನ್ಯ ಪ್ರವೇಶ ಪರೀಕ್ಷೆಗೆ, ತರಬೇತಿ ಸಂಸ್ಥೆಯ ಆಯ್ಕೆ ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವುದು ಕಡ್ಡಾಯ.

ತಪ್ಪು ಮಾಹಿತಿಯ ಕಾರಣದಿಂದ ಊಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.

ನಿಗಧಿತ ದಿನಾಂಕದಂದು ಪ್ರವೇಶ ಪರೀಕ್ಷೆ, ಕೌನ್ಸಿಲಿಂಗ್, ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು, ಆಯ್ಕೆಗೆ ಪರಿಗಣಿಸುವುದಿಲ್ಲ. ಇಂತಹ ನಿರ್ಲಕ್ಷ್ಯಕ್ಕೆ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ.

2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ [Degree] ಪಾಸಾದ 400 SC & 200 ST ಸೇರಿದಂತೆ ಒಟ್ಟಾರೆ 600 ಅಭ್ಯರ್ಥಿಗಳಿಗೆ IAS ಪೂರ್ವಭಾವಿ ಪರೀಕ್ಷಾ ತಯಾರಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನ.

2 thoughts on “ಶಿಷ್ಯವೇತನದೊಂದಿಗೆ UPSC ತರಬೇತಿ-2024-25”

Leave a Comment