UPSC 2026: ಯುಪಿಎಸ್ ಸಿ 2026 ರ ಪರೀಕ್ಷಾ ವೇಳಾಪಟ್ಟಿ ಪ್ರಕಟ
UPSC 2026: ಕೇಂದ್ರೀಯ ಲೋಕಸೇವಾ ಆಯೋಗವು (UPSC) 2026ನೇ ಸಾಲಿನ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮುಂದಿನ ವರ್ಷ ನಾಗರಿಕ ಸೇವಾ ಹುದ್ದೆಗಳ ಪರೀಕ್ಷೆಗೆ (ಸಿಎಸ್ಇ) ಜ.14ರಂದು ಪೂರ್ವಭಾವಿ ಅಧಿಸೂಚನೆ ಹೊರಡಿಸಲಿದೆ.
ಅರ್ಜಿ ಸಲ್ಲಿಕೆಗೆ ಫೆ.3 ಕೊನೆಯ ದಿನವಾಗಿರಲಿದೆ. ಈ ಬಾರಿ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆ ಮೇ 25ರಂದು ನಡೆಯಲಿದ್ದು, ಮುಂದಿನ ವರ್ಷ ಮೇ 24ಕ್ಕೆ ನಿಗದಿಯಾಗಿದೆ. ಭಾರತೀಯ ಅರಣ್ಯ ಸೇವೆಗೂ ಇದೇ ಪೂರ್ವಭಾವಿ ಪರೀಕ್ಷೆ ಅನ್ವಯಿಸಲಿದೆ.
ಇನ್ನು, ಈ ಬಾರಿ ಆಗಸ್ಟ್ 21ರಂದು ಮುಖ್ಯ ಪರೀಕ್ಷೆ ನಡೆಯಲಿದ್ದು, ಮುಂದಿನ ವರ್ಷ ಆ.21ಕ್ಕೆ ನಿಗದಿಯಾಗಿದೆ. ಅರಣ್ಯ ಸೇವೆಗಳ ಹುದ್ದೆಗೆ ಮುಖ್ಯ ಪರೀಕ್ಷೆ ನ.22ರಂದು ನಡೆಯಲಿದೆ ಎಂದು UPSC ತಿಳಿಸಿದೆ.
ಇಂಜಿನಿಯರಿಂಗ್ ಸರ್ವೀಸ್ ಹುದ್ದೆಗಳಿಗೆ ಮುಂಬರುವ ಸೆಪ್ಟೆಂಬರ್ 17ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅ.7ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೂರ್ವಭಾವಿ ಪರೀಕ್ಷೆಯು 2026ರ ಫೆ.2 ರಂದು ನಡೆಯಲಿದೆ. ಮುಖ್ಯ ಪರೀಕ್ಷೆ ಜೂ.21ರಂದು ಆಯೋಜಿಸಲಾಗಿದೆ.
ಕಂಬೈನ್ಡ್, ಜಿಯೋ ಸೈಂಟಿಸ್ಟ್ ಪೂರ್ವಭಾವಿ ಪರೀಕ್ಷೆಗೆ 2025ರ ಸೆ.3ರಿಂದ 23ರವರೆಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆಯು ಫೆ.8ರಂದು ನಡೆಯಲಿದೆ. ಜೂ.20ರಂದು ಮುಖ್ಯ ಪರೀಕ್ಷೆಯಿದೆ. ಐಇಎಸ್ / ಐಎಸ್ಎಸ್ ಪರೀಕ್ಷೆಗೆ 2026ರ ಫೆ.11ರಿಂದ ಮಾ.3ರವರೆಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆಯು ಜೂ.19ರಂದು ನಡೆಯಲಿದೆ.

CLICK HERE DOWNLOAD TIME TABLE