UPSC JOBS-2024, ಕೇಂದ್ರ ಲೋಕಸೇವಾ ಆಯೋಗದಲ್ಲಿ ಭರ್ಜರಿ ನೇಮಕಾತಿಗೆ ಚಾಲನೆ,ಕಂಬೈನ್ಡ್ ಸರ್ವೀಸ್‌ನಿಂದ ಅರ್ಜಿ ಆಹ್ವಾನ.

UPSC JOBS RECURITMENT 

ನ್ಯಾಷನಲ್‌ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.

ಹುದ್ದೆಗಳ ವಿವರ:

UPSC: ನ್ಯಾಷನಲ್‌ ಡಿಫೆನ್ಸ್ ಅಕಾಡೆಮಿ

  • ಭೂ ಸೇನೆ-208 (10 ಮಹಿಳಾ ಅಭ್ಯರ್ಥಿ),
    ನೌಕಾಸೇನೆ-42 (6 ಮಹಿಳಾ ಅಭ್ಯರ್ಥಿ),
    ವಾಯು ಸೇನೆ – ಫೈಯಿಂಗ್ 92 (2 ಮಹಿಳಾ ಅಭ್ಯರ್ಥಿ),
  • ಗ್ರೌಂಡ್ ಡ್ಯೂಟಿಸ್ ಟೆಕ್ನಿಕಲ್ 18 (2 ಮಹಿಳಾ ಅಭ್ಯರ್ಥಿ)
  • ಗ್ರೌಂಡ್ ಡ್ಯೂಟಿಸ್ ನಾನ್ ಟೆಕ್ನಿಕಲ್ 10 (2 ಮಹಿಳಾ ಅಭ್ಯರ್ಥಿ)
  • ನೇವಲ್ ಅಕಾಡೆಮಿ 36 (5 ಮಹಿಳಾ ಅಭ್ಯರ್ಥಿ)

ವಿದ್ಯಾರ್ಹತೆ:

ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10+12ರ ಮಾದರಿಯ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ನೌಕಾಸೇನೆ/ ವಾಯುಸೇನೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಕಡ್ಡಾಯವಾಗಿ ಭೌತಶಾಸ್ತ್ರ/ರಸಾಯನಶಾಸ್ತ್ರ/ ಗಣಿತ ವಿಷಯವನ್ನು ಪಿಯುಸಿಯಲ್ಲಿ ಅಧ್ಯಯನ ಮಾಡಿರಬೇಕು.

ವಯೋಮಿತಿ:
2006 ಜುಲೈ 2 ರಿಂದ 2009 ಜುಲೈ 1ರ ಅವಧಿಯಲ್ಲಿ ಜನಿಸಿರುವ ಅವಿವಾಹಿತ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಎನ್‌ಡಿಎ-ಎನ್‌ಎ (1) ಸಿಡಿಎಸ್(I)ಗೆ ಅಧಿಸೂಚನೆ ಪ್ರಕಟ.

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿ/ ಜೆಸಿಒ, ಎನ್‌ಸಿಒ, ಒಆರ್ ವಾರ್ಡ್‌ಗಳನ್ನು ಹೊರತು ಪಡಿಸಿ ಇತರ ಅಭ್ಯರ್ಥಿಗಳು 100ರೂ.ಅರ್ಜಿ ಶುಲ್ಕ ಪಾವತಿಸಬೇಕು.

ವೇತನ ಶ್ರೇಣಿ: ಹುದ್ದೆಗೆ ಅನುಗುಣವಾಗಿ 15,500ರೂ. ದಿಂದ 2,50,000. ವೇತನ ಶ್ರೇಣಿ ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ:

900 ಅಂಕಗಳ ಲಿಖಿತ ಪರೀಕ್ಷೆ ಹಾಗೂ 900 ಅಂಕಗಳ ಸಂದರ್ಶನದ ಮೂಲಕ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಬೆಂಗಳೂರು ಪರೀಕ್ಷಾ ಕೇಂದ್ರವಾಗಿರಲಿದೆ.

UPSC: ಕಂಬೈನ್ಡ್ ಸರ್ವೀಸ್‌ನಿಂದ ಅರ್ಜಿ ಆಹ್ವಾನ.

ಇಂಡಿಯನ್ ಮಿಲಿಟರಿ ಅಕಾಡೆಮಿ , ಇಂಡಿಯನ್ ನೇವಲ್ ಅಕಾಡೆಮಿ, ಏರ್. ಪೋರ್ಸ್ ಅಕಾಡೆಮಿ ಹಾಗೂ ಆಫೀಸರ್ ಟ್ರೇನಿಂಗ್ ಅಕಾಡೆಮಿಗೆ ಅಭ್ಯರ್ಥಿಗಳನ್ನು ಅಯ್ಕೆ ಮಾಡುವ ನಿಟ್ಟಿನಲ್ಲಿ ಯುಪಿಎಸ್ಸಿ ಕಂಬೈನ್ಸ್ ಸರ್ವಿಸ್ ಎಕ್ಸಾಮ್-1ರ ಪರೀಕ್ಷೆ ನಡೆಸುತ್ತಿದ್ದು, 2025ರ ಸಾಲಿನ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಿಸಿದೆ.

ವಿದ್ಯಾರ್ಹತೆ, ವಯೋಮಿತಿ :

ಏರ್ ಫೋರ್ಸ್ ಅಕಾಡೆಮಿಗೆ ಅರ್ಜಿ ಸಲ್ಲಿಸುವವರು ಭೌತಶಾಸ್ತ್ರ/ಗಣಿತದಲ್ಲಿ ಪಿಯುಸಿ, ನೇವಲ್ ಅಕಾಡೆಮಿಗೆ ಅರ್ಜಿ ಸಲ್ಲಿಸುವವರು ಇಂಜಿನಿಯರಿಂಗ್ ಪದವಿ, ಮಿಲಿಟರಿ ಅಕಾಡೆಮಿ ಮತ್ತು ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಗೆ ಅರ್ಜಿ ಸಲ್ಲಿಸುವವರು ಪದವಿ ಪಾಸಾಗಿರಬೇಕು.

ವಿದ್ಯಾರ್ಹತೆ, ವಯೋಮಿತಿ :

ಏರ್ ಫೋರ್ಸ್ ಅಕಾಡೆಮಿಗೆ ಅರ್ಜಿ ಸಲ್ಲಿಸುವವರು ಭೌತಶಾಸ್ತ್ರ/ಗಣಿತದಲ್ಲಿ ಪಿಯುಸಿ, ನೇವಲ್ ಅಕಾಡೆಮಿಗೆ ಅರ್ಜಿ ಸಲ್ಲಿಸುವವರು ಇಂಜಿನಿಯರಿಂಗ್ ಪದವಿ, ಮಿಲಿಟರಿ ಅಕಾಡೆಮಿ ಮತ್ತು ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಗೆ ಅರ್ಜಿ ಸಲ್ಲಿಸುವವರು ಪದವಿ ಪಾಸಾಗಿರಬೇಕು.

2002 ಜ,2 ರಿಂದ 2007 ಜ.1ರ ಅವಧಿಯಲ್ಲಿ ಜನಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ದೊರಕಿದ್ದು, ಇತರ ಅಭ್ಯರ್ಥಿಗಳು 200ರೂ. ಶುಲ್ಕ ಭರಿಸಬೇಕಿದೆ.

ವೇತನ ಶ್ರೇಣಿ:

ಹುದ್ದೆಗೆ ಅನುಗುಣವಾಗಿ 15,500.-2,50,000.ರೂ ಶ್ರೇಣಿ ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಬುದ್ಧಿಮತ್ತೆ ಮತ್ತು ವ್ಯಕ್ತಿತ್ವ ಪರೀಕ್ಷೆ, ಸೈಕಲಾಜಿಕಲ್ ಆಪ್ಟಿಟ್ಯೂಡ್ ಟೆಸ್ಟ್, ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆರ್ಮಿ, ನೇವಲ್, ಏರ್ ಫೋರ್ಸ್ ಅಕಾಡೆಮಿಗೆ 300 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಗೆ 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು ಪರೀಕ್ಷಾ ಕೇಂದ್ರವಾಗಿರಲಿದೆ. ಏ.13ರಂದು ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಯುಪಿಎಸ್ಸಿ ವೆಬ್‌ಸೈಟ್ upsc.gov.inಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯಲ್ಲಿ ಯಾವುದೇ ಬದಲಾವಣೆ ಮಾಡಲು ಜ.1 ರಿಂದ ಜ.7ರ ತನಕ ಅವಕಾಶ ನೀಡಲಾಗಿದೆ. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಛಾಯಾಚಿತ್ರ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ. ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31-12-2024

ಅಧಿಸೂಚನೆಗಾಗಿ

 

2 thoughts on “UPSC JOBS-2024, ಕೇಂದ್ರ ಲೋಕಸೇವಾ ಆಯೋಗದಲ್ಲಿ ಭರ್ಜರಿ ನೇಮಕಾತಿಗೆ ಚಾಲನೆ,ಕಂಬೈನ್ಡ್ ಸರ್ವೀಸ್‌ನಿಂದ ಅರ್ಜಿ ಆಹ್ವಾನ.”

Leave a Comment