UPSC Recuritment-2025: Applications are invited for recruitment to various posts in UPSC
UPSC Recuritment-2025: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಸೇರಿದಂತೆ ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳ ನೇಮಕಾತಿಗಾಗಿ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಸಾಂವಿಧಾನಿಕ ಸಂಸ್ಥೆಯಾಗಿದೆ.
ಪ್ರಸ್ತುತ ಈ ಸಂಸ್ಥೆಯು ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್, ಅಸಿಸ್ಟೆಂಟ್ ಇಂಜಿನಿಯರ್, ಸಿಸ್ಟಮ್ ಅನಾಲಿಸ್ಟ್ ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಮೇ 1ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಖ್ಯೆ: 111
ವಯೋಮಿತಿ ವಿವರ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಗರಿಷ್ಠ 30-40 ವರ್ಷದೊಳಗಿರಬೇಕು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 10 ವರ್ಷ, ಅಂಗವಿಕಲ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 13 ವರ್ಷ, ಅಂಗವಿಕಲ ಎಸ್ಸಿ/ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 15 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ವೇತನ ವಿವರ:
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ನಿಯಮಾನುಸಾರ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳ ವಿವರ:
ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಸೇರಿದಂತೆ ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆಗಳ ವಿವರ ಈ ಕೆಳಗಿಂನಂತೆ ಇದೆ.
ಹುದ್ದೆಗಳ ವಿವರ ಮತ್ತು ಸಂಖ್ಯೆ:
ಸಿಸ್ಟಮ್ ಅನಾಲಿಸ್ಟ್ -01
ಡೆಪ್ಯೂಟಿ ಕಂಟ್ರೋಲರ್ -18
ಅಸಿಸ್ಟೆಂಟ್ ಇಂಜಿನಿಯರ್-01
ಅಸಿಸ್ಟೆಂಟ್ ಇಂಜಿನಿಯರ್ ನೇವಲ್ ಕ್ವಾಲಿಟಿ ಅಶುರೆನ್ಸ್- 07
ಅಸಿಸ್ಟೆಂಟ್ ಇಂಜಿನಿಯರ್ ನೇವಲ್ ಕ್ವಾಲಿಟಿ ಅಶುರೆನ್ಸ್ ಮೆಕಾನಿಕಲ್- 01
ಜಾಯಿಂಟ್ ಅಸಿಸ್ಟೆಂಟ್ ಡೈರೆಕ್ಟರ್- 13
ಅಸಿಸ್ಟೆಂಟ್ ಲೆಜಿಸ್ಟ್ರೇಟಿವ್ – 04
ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್- 66
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ಕೆಮಿಕಲ್ ಇಂಜಿನಿಯರಿಂಗ್/ಟೆಕ್ನಾಲಜಿ/ಕಂಪ್ಯೂಟರ್ ಅಪ್ಲಿಕೇಶನ್/ಎಲೆಕ್ಟಿಕಲ್ ಅಥವಾ ಎಲೆಕ್ಟ್ರಾನಿಕ್ಸ್/ಮೆಕಾನಿಕಲ್/ ಟೆಲಿಕಮ್ಯುನಿಕೇಷನ್/ಇನ್ಸಾರ್ಮೇಷನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ/ಬಿಟೆಕ್ /ಬಿಎಸ್ಸಿ/ಎಂಎಸ್ಸಿ, ಕಾನೂನು ಪದವಿ/ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಹೊಂದಿರಬೇಕು.
ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ಅಭ್ಯರ್ಥಿಗಳು UPSC ವೆಬ್‌ಸೈಟ್
https://upsconline.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಮೇ 2ರೊಳಗೆ ತೆಗೆದಿಟ್ಟುಕೊಳ್ಳಬೇಕು. ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್ ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಬೇಕು.
ಅರ್ಜಿ ಶುಲ್ಕದ ವಿವರ:
ಎಸ್ಸಿ/ಎಸ್ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಅನ್ವಯವಾಗುವುದಿಲ್ಲ. ಇತರ ಎಲ್ಲ ವರ್ಗದ ಅಭ್ಯರ್ಥಿಗಳು 25 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾತಿಸಬೇಕು.
ಆಯ್ಕೆ ಪ್ರಕ್ರಿಯೆ ಹೀಗಿರಲಿದೆ:
ಸಂದರ್ಶನ ನಡೆಸುವುದರೊಂದಿಗೆ ಅಭ್ಯರ್ಥಿಗಳ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅಂತಿಮವಾಗಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 01-05-2025
ಅಧಿಸೂಚನೆ ಡೌನ್ಲೋಡ್ ಮಾಡಲು- CLICK HERE
ಹೆಚ್ಚಿನ ಮಾಹಿತಿಗಾಗಿ – CLICK HEREHERE
ಇದನ್ನೂ ನೋಡಿ…..ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 9970 ಅಸಿಸ್ಟೆಂಟ್ ಲೋಕೊಪೈಲೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
1 thought on “UPSC Recuritment-2025: Applications are invited for recruitment to various posts in UPSC”