Information about the use of library grants by school principals to be incorporated in Vidyavahini software.
ಗ್ರಂಥಾಲಯ ಅನುದಾನ ಬಳಕೆಯಾಗಿರುವ ಬಗ್ಗೆ ಮಾಹಿತಿಯನ್ನು ಶಾಲಾ ಮುಖ್ಯೋಪಾದ್ಯಾಯರು ವಿದ್ಯಾವಾಹಿನಿ( Vidyavahini) ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳನ್ನಯ, ಉಲ್ಲೇಖ 1ರಂತೆ 2022-23ನೇ ಸಾಲಿನ PAB ಅನುಮೋದಿತ ಗ್ರಂಥಾಲಯ ಅನುದಾನ ರೂ.124.15ಲಕ್ಷವನ್ನು ರಾಜ್ಯದ 2483 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬಿಡುಗಡೆ ಮಾಡಲಾಗಿತ್ತು.
ಉಲ್ಲೇಖ 2ರಂತೆ 2023-24ನೇ ಸಾಲಿನ PAB ಅನುಮೋದಿತ ಗ್ರಂಥಾಲಯ ಅನುದಾನ ರೂ.880.62 ಲಕ್ಷವನ್ನು ರಾಜ್ಯದ 13458 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮತ್ತು ರೂ.176.7ಲಕ್ಷವನ್ನು ರಾಜ್ಯದ 1178 ಸರ್ಕಾರಿ ಪ್ರೌಢ ಶಾಲೆಗಳಿಗೆ ಬಿಡುಗಡೆ ಮಾಡಲಾಗಿತ್ತು.
ಉಲ್ಲೇಖ 3 ರಂತೆ 2023-24ನೇ ಶೈಕ್ಷಣಿಕ ಸಾಲಿನ ರಾಜ್ಯ ಬಜೆಟ್ ಯೋಜನೆಗಳಡಿಯಲ್ಲಿ ರಾಜ್ಯದ ಮಹತ್ವಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಓದುವ ಮೂಲೆಗಳನ್ನು ಸ್ಥಾಪಿಸುವ ಸಲುವಾಗಿ ರಾಜ್ಯದ ಒಟ್ಟು 24347 (14049-LPS, 8344-HPS, 1830-HS, 48-AV, 76- KPS) ಶಾಲೆಗಳಿಗೆ ಮೊದಲನೇ ಕಂತಿನಲ್ಲಿ ಗ್ರಂಥಾಲಯ ಅನುದಾನ ರೂ.1000.00 ಲಕ್ಷವನ್ನು ಬಿಡುಗಡೆ ಮಾಡಲಾಗಿತ್ತು.
ಉಲ್ಲೇಖ 4 ರಂತೆ 2023-24ನೇ ಶೈಕ್ಷಣಿಕ ಸಾಲಿನ ರಾಜ್ಯ ಬಜೆಟ್ ಯೋಜನೆಗಳಡಿಯಲ್ಲಿ ರಾಜ್ಯದ ಮಹತ್ವಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಅಸ್ಥಿತ್ವದಲ್ಲಿರುವ ಗ್ರಂಥಾಲಯಗಳ ಬಲವರ್ಧನೆ ಮಾಡಿ ಓದುವ ಮೂಲೆಗಳನ್ನು ಸ್ಥಾಪಿಸುವ ಸಲುವಾಗಿ ರಾಜ್ಯದ ಒಟ್ಟು (24347 (14049-LPS, 8344-HPS, 1830-HS, 48-AV, 76-KPS) ಶಾಲೆಗಳಿಗೆ ಎರಡನೇ ಕಂತಿನ ಗ್ರಂಥಾಲಯ ಅನುದಾನ ರೂ.1000.00 ಲಕ್ಷವನ್ನು ಮತ್ತು ಮೊದಲು ಕಂತಿನಲ್ಲಿ ಬಿಡುಗಡೆಯಾಗಿದ್ದ ಮತ್ತು ಮೊದಲ ಕಂತಿನಲ್ಲಿ ಬಿಡುಗಡೆಯಾಗಿದ್ದ ಅನುದಾನದಿಂದ ಮಾರ್ಚ್ 2024ರ ಮಾಸಾಂತ್ಯದಲ್ಲಿ ಬ್ಲಾಕ್ ಗಳಿಂದ ಶಾಲೆಗಳಿಗೆ ಬಿಡುಗಡೆಯಾಗದೇ ಉಳಿದಿದ್ದ ಅನುದಾನ ವ್ಯಪಗತವಾಗದಂತೆ ವಾಪಸ್ ಪಡೆದಿದ್ದ ರೂ.182.68728 ಲಕ್ಷವನ್ನು ಮರು ಬಿಡುಗಡೆ ಮಾಡಲಾಗಿತ್ತು. ಮೇಲ್ಕಂಡ ಎಲ್ಲಾ ಗ್ರಂಥಾಲಯ ಅನುದಾನಗಳಿಂದ ಶಾಲೆಗಳವರು ತಮ್ಮ ಶಾಲಾ ಗ್ರಂಥಾಲಯಕ್ಕೆ ಅಗತ್ಯವಿರುವ ಪುಸ್ತಕಗಳನ್ನು ಖರೀದಿಸಬೇಕಿದ್ದು, ಸಂಬಂಧಿತ ನಿರ್ದೇಶನಗಳನ್ನು ಆಯಾ ಸುತ್ತೋಲೆಗಳಲ್ಲಿಯೇ ನೀಡಲಾಗಿದ್ದು, ನಿಗಧಿತ ದಿನಾಂಕದೊಳಗೆ ವೆಚ್ಚ ಭರಿಸಲು ತಿಳಿಸಲಾಗಿತ್ತು.
Vidyavahini Software:ಪ್ರಸ್ತುತ ಉಲ್ಲೇಖ 1 ರಿಂದ 4 ರಲ್ಲಿ ಬಿಡುಗಡೆಯಾಗಿದ್ದ ಗ್ರಂಥಾಲಯ ಅನುದಾನದಿಂದ ಸಂಬಂಧಿತ ಪ್ರತಿ ಶಾಲೆಗಳು ಪಡೆದ ಅನುದಾನ, ಪುಸ್ತಕ ಖರೀದಿಗಾಗಿ ಮಾಡಿದ ವೆಚ್ಚ, ಬಿಡುಗಡೆಯಾಗಿರುವ ಅನುದಾನದಲ್ಲಿ ಉಳಿಕೆಯಾಗಿದ್ದಲ್ಲಿ ಅದರ ಮೊತ್ತ, ಖರೀದಿಸಿದ ಪುಸ್ತಕಗಳ ಸಂಖ್ಯೆಯ ವಿವರ, ಮತ್ತು ಉಪಯೋಗಿತ ಪ್ರಮಾಣ ಪತ್ರವನ್ನು ಆಯಾ ಶಾಲೆಗಳಿಂದಲೇ ಪಡೆಯುವ ಸಲುವಾಗಿ ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ವತಿಯಿಂದ ವಿದ್ಯಾವಾಹಿನಿ ತಂತ್ರಾಂಶದಲ್ಲಿ ಅಳವಡಿಸಲು ಅವಕಾಶ ಕಲ್ಪಿಸಲಾಗಿದ್ದು, ಸಂಬಂಧಿತ ಪ್ರತಿ ಶಾಲೆಯವರು ವಿದ್ಯಾವಾಹಿನಿ ತಂತ್ರಾಂಶದಲ್ಲಿ ಅಳವಡಿಕೆಯಾಗಿರುವ ಗ್ರಂಥಾಲಯ ಅನುದಾನ ಸಂಬಂಧದ ನಮೂನೆಯನ್ನು ಭರ್ತಿ ಮಾಡುವುದು ಮತ್ತು ತಂತ್ರಾಂಶದಲ್ಲಿ ನೀಡಿರುವಂತೆ ಉಪಯೋಗಿತ ಪ್ರಮಾಣ ಪತ್ರ ವನ್ನು JPG format ನಲ್ಲಿ 13-12-2024ರೊಳಗೆ upload ಮಾಡುವುದು.
ಸದರಿ ಸುತ್ತೋಲೆಯೊಂದಿಗೆ ವಿದ್ಯಾವಾಹಿನಿ ತಂತ್ರಾಂಶವನ್ನು ಬಳಸುವ ಬಗ್ಗೆ PPTಯನ್ನು ಲಗತ್ತಿಸಿದೆ. ಗ್ರಂಥಾಲಯ ಅನುದಾನ ಬಳಕೆ ಕುರಿತ ತಂತ್ರಾಂಶ ಬಳಕೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿರುತ್ತದೆ.
1. https://vidyavahini.karnataka.gov.in/ or 164.100.137.7 ತಂತ್ರಾಂಶವನ್ನು ಶಾಲಾ ಮುಖ್ಯೋಪಾದ್ಯಾಯರು ತಮ್ಮ password ಮೂಲಕ ಲಾಗಿನ್ ಆಗುವುದು. (Password ಮರೆತಿದ್ದರೆ’ Forgot Password’ ಬಟನ್ ಕ್ಲಿಕ್ ಮಾಡುವ ಮೂಲಕ ಪ್ರಯತ್ನಿಸಿ. Password ಅನ್ನು ಮರುಹೊಂದಿಸಲು ಬ್ಲಾಕ್ ಕಂಪ್ಯೂಟರ್ ಪ್ರೋಗ್ರಾಮ್ ಗಳು @ BRC ಕೇಂದ್ರವನ್ನು ಸಂಪರ್ಕಿಸಿಬಹುದು.)
2. “ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಖರೀದಿ” icon ಮೇಲೆ ಕ್ಲಿಕ್ ಮಾಡುವುದು.
3. Icon ಮೇಲೆ ಕ್ಲಿಕ್ ಮಾಡಿದ ನಂತರ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯ ಮುಖಪುಟ ಪರದೆ page open ಆಗುವುದು.
4. ಪ್ರಗತಿಯನ್ನು ನಮೂದಿಸಲು ಮೆನುವಿನಲ್ಲಿ ಅನುದಾನ ಬಿಡುಗಡೆಯಾದ ಸಾಲಿನ ಸಂಬಂಧದ ಆಯ್ಕೆಯನ್ನು ಆರಿಸುವುದು.
5. ಖರೀದಿಯ ಪ್ರಕಾರ form ಅನ್ನು ಭರ್ತಿ ಮಾಡಿ ಉಪಯೋಗಿತ ಪ್ರಮಾಣಪತ್ರವನ್ನು upload ಮಾಡುವುದು. (ಭರ್ತಿ ಮಾಡುವ ಮೊದಲು ಬಳಕೆಯ ಪ್ರಮಾಣ ಪತ್ರವನ್ನು ಸೀಲ್ ಮತ್ತು ಸಹಿಯೊಂದಿಗೆ ಭರ್ತಿ ಮಾಡಿ ಫೋಟೋ ತೆಗೆದು ಕಂಪ್ಯೂಟರ್ ನಲ್ಲಿ ಉಳಿಸಿಕೊಳ್ಳಬೇಕು.)
6.Vidyavahini Software: Data fill ಆದ ನಂತರ save button ಅನ್ನು ಕ್ಲಿಕ್ ಮಾಡುವುದು. Data ಯಶಸ್ವಿಯಾಗಿ ಉಳಿಸಿದ ನಂತರ Data successfully ಎಂದು ಸಂದೇಶವು ಕಾಣಿಸಿಕೊಳ್ಳುವುದು.
ಮೇಲ್ಕಂಡಂತೆ ಅನುದಾನ ಬಿಡುಗಡೆಯಾದ ಎಲ್ಲಾ ಶಾಲೆಗಳೂ ವಿದ್ಯಾವಾಹಿನಿ (Vidyavahini Software) ತಂತ್ರಾಂಶದಲ್ಲಿ ಮಾಹಿತಿ ಅಳವಡಿಸುವ ಸಂಬಂಧ ಎಲ್ಲಾ ಉಪನಿರ್ದೇಶಕರು(ಆಡಳಿತ)ರವರು ಅಗತ್ಯ ಕ್ರಮವಹಿಸುವುದು.
after login , there is no logout option.