Water Conservation:ರಾಷ್ಟ್ರೀಯ ಆವಿಷ್ಕಾರ ಸಪ್ತಾಹ -2024-25 ಕಾರ್ಯಕ್ರಮವನ್ನು ಅನುಷ್ಠಾನ.
Water Conservation: ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದಿಂದ ಅನುಮೋದಿತ ರಾಷ್ಟ್ರೀಯ ಅವಿಷ್ಕಾರ ಸಪ್ತಾಹ ಕಾರ್ಯಕ್ರಮವನ್ನು, NCERT ಯ DESM(ವಿಜ್ಞಾನ ಮತ್ತು ಗಣಿತ ಶಿಕ್ಷಣ ವಿಭಾಗ) ವತಿಯಿಂದ ವಿದ್ಯಾರ್ಥಿಗಳಲ್ಲಿ, ಪ್ರಯೋಗ ಶೀಲತೆ ಮತ್ತು ಅನ್ವೇಷಣಾ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, 2024-25ನೇ ಸಾಲಿಗೆ “Water Conservation” ಎಂಬ ವಿಷಯ ವಸ್ತುವನ್ನು ನಿಗದಿಪಡಿಸಿ, ಸರ್ಕಾರಿ ಶಾಲೆಗಳಲ್ಲಿನ 6 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ PM Shri ಶಾಲೆಗಳಲ್ಲಿ ಕಡ್ಡಾಯವಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ತಿಳಿಸಿದೆ. ಈ ಕುರಿತು ಉಲ್ಲೇಖ -2ರನ್ವಯ ಎನ್.ಸಿ.ಇ.ಆರ್.ಟಿ ರವರು ನೀಡಿರುವ ವಿಶ್ವತವಾದ ಮಾರ್ಗಸೂಚಿಯನ್ನು ಈ ಪತ್ರದೊಂದಿಗೆ ಅಡಕಗೊಳಿಸಿದ್ದು. ಅದರನ್ವಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ತಿಳಿಸಿದೆ.
ಈ ಪತ್ರದೊಂದಿಗೆ ಅಡಕಗೊಳಿಸಿರುವ ಅನುಬಂಧದಂತೆ ಜಿಲ್ಲಾವಾರು ಬ್ಲಾಕ್ ಸಂಖ್ಯೆಗೆ ಅನುಗುಣವಾಗಿ ಪ್ರತಿ ಬ್ಲಾಕ್‌ನಿಂದ ಮೂರು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಈ ಕೆಳಕಂಡ ನಮೂನೆಯಲ್ಲಿ ಶಾಲೆಗಳ ವಿವರವನ್ನು ಈ ಕಛೇರಿಯ ಇ-ಮೇಲ್ ವಿಳಾಸ: dsert.sis2020@gmail.comg ಗೆ ಸಲ್ಲಿಸುವುದು.
ಸದರಿ ಕಾರ್ಯಕ್ರಮದ ಚಟುವಟಿಕೆ ನಿರ್ವಹಿಸಲು ಆಯ್ಕೆ ಮಾಡಲಾದ ಪ್ರತಿ ಶಾಲೆಗೆ ರೂ.4000/- ಗಳಂತೆ ಜಿಲ್ಲೆಗೆ ಅವಶ್ಯಕವಿರುವ ಒಟ್ಟು ಅನುದಾನವನ್ನು ಡಯಟ್ ಪ್ರಾಂಶುಪಾಲರ ಖಾತೆಗೆ ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಡಯಟ್ ಪ್ರಾಂಶುಪಾಲರ ಬ್ಯಾಂಕ್ ಖಾತೆಯ ವಿವರ ವನ್ನು ಈ ಕೆಳಕಂಡಂತೆ ಸಲ್ಲಿಸಲು ತಿಳಿಸಿದೆ.
- Name of the Account Holder;
- Name of the Bank:
- Account Number:
- IFSC Code:
- Name of the Branch:
ಜಿಲ್ಲೆಯಲ್ಲಿ ಆಯ್ಕೆಮಾಡಲಾದ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನಿಸಲು ಜಿಲ್ಲಾ ಇನ್ ಸ್ಟೆರ್ ಅವಾರ್ಡ್ ನೋಡಲ್ ಅಧಿಕಾರಿಗಳು ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಅಗತ್ಯ ಮಾರ್ಗದರ್ಶನ ನೀಡಲು
ಅನುಬಂಧದನ್ವಯ ತಾಲ್ಲೂಕಿನಿಂದ ಆಯ್ಕೆ ಮಾಡಲಾದ ಮೂರು ಸರ್ಕಾರಿ ಶಾಲೆಗಳ ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡು, ಡಯಟ್ ಗೆ ಹಣ ಬಿಡುಗಡೆಯಾದ ಕೂಡಲೇ ಸಂಬಂಧಪಟ್ಟ ಶಾಲೆಗಳಿಗೆ ಹಣವನ್ನು ವರ್ಗಾಯಿಸಲು ಕ್ರಮವಹಿಸುವುದು. ಸದರಿ ಶಾಲೆಗಳಿಗೆ ಬಿಡುಗಡೆ ಮಾಡಿದ ಅನುದಾನ ಬಳಕೆಗೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯರುಗಳಿಂದ ದೃಢೀಕರಿಸಲ್ಪಟ್ಟ ಉಪಯೋಗಿತಾ ಪ್ರಮಾಣ ಪತ್ರವನ್ನು ಪಡೆದು ದೃಢೀಕರಿಸಿ ಈ ಕಛೇರಿಯ ಮೇಲ್ಕಂಡ ಇ-ಮೇಲ್ ವಿಳಾಸಕ್ಕೆ ಸಲ್ಲಿಸುವುದು.
ರಾಷ್ಟ್ರೀಯ ಆವಿಷ್ಕಾರ ಸಪ್ತಾಹ 2024-25 ಆಯ್ಕೆ ಮಾಡಲಾದ ಶಾಲೆಗಳ ವಿವರ.
ಜಿಲ್ಲೆಯ ಹೆಸರು____________________
I want model papers