Yashaswini yojane-2024:ಯಶಸ್ವಿನಿ ಯೋಜನೆ ಜಾರಿ, ಹೊಸ ಸದಸ್ಯರ ನೋಂದಾವಣೆಗೆ ಅವಕಾಶ

Yashaswini yojane-2024:ಯಶಸ್ವಿನಿ ಯೋಜನೆ ಜಾರಿ, ಹೊಸ ಸದಸ್ಯರ ನೋಂದಾವಣೆಗೆ ಅವಕಾಶ.

Yashaswini yojane:2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಬಗ್ಗೆ.

2023-24ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು.

ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವನೆಯಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರ್ಕಾರವು ಜಾರಿಗೊಳಿಸಿರುವ ಒಂದು ಪುತಿಷ್ಠಿತ (Flagship) ವಿಶಿಷ್ಟ ಯೋಜನೆಯಾಗಿದ್ದು, ಇದರಲ್ಲಿ ಯಶಸ್ವಿನಿ ಪ್ರೋಟೋಕಾಲ್‌ನಂತೆ ನಿಗದಿ ಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳವಟ್ಟು ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5.00 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಯಶಸ್ವಿನಿ ಯೋಜನೆಯು ವಿಮಾ ಯೋಜನೆಯಾಗಿರುವುದಿಲ್ಲ. ಬದಲಾಗಿ ಇದೊಂದು ಸ್ವಯಂ ನಿಧಿ ಸಹಕಾರ ಸಂಘಗಳ ಸದಸ್ಯರ ಆರೋಗ್ಯ (CO-operative Society Members Health Assurance Scheme) ಯೋಜನೆಯಾಗಿದ್ದು, ಸಹಕಾರ ಸಂಘಗಳ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಅನುದಾನ ಒದಗಿಸುವ ಮೂಲಕ ಯೋಜನೆಯಲ್ಲಿ ಭಾಗವಹಿಸುತ್ತದೆ. ಯಶಸ್ವಿನಿ ಯೋಜನೆಯನ್ನು 2024-25ನೇ ಸಾಲಿಗೂ ಮುಂದುವರೆಸಲು ಅನುವಾಗುವಂತೆ ಸದಸ್ಯರ ನೋಂದಣಿಯನ್ನು ಪ್ರಾರಂಭಿಸಲು ಯೋಜನೆಯ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದ್ದು, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, “ಯಶಸ್ಸಿನಿ” ಯೋಜನೆಯನ್ನು 2024-25ನೇ ಸಾಲಿನಲ್ಲಿ ಮುಂದುವರೆಸಿ ಜಾರಿಗೊಳಿಸಲು ಈ ಕೆಳಕಂಡ ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸುವಂತೆ ನಿಬಂಧಕರು ಕೋರಿರುತ್ತಾರೆ.

ಯಶಸ್ವಿನಿ ಯೋಜನೆಯನ್ನು 2024-25ನೇ ಸಾಲಿಗೂ ಮುಂದುವರೆಸಲು ಅನುವಾಗುವಂತೆ ಸದಸ್ಯರ ನೋಂದಣಿಯನ್ನು ಪ್ರಾರಂಭಿಸಲು ಯೋಜನೆಯ ಮಾರ್ಗಸೂಚಿಗಳನ್ನು ಹೊಡಿಸಬೇಕಾಗಿದ್ದು, ಅದರಂತೆ ಈ ಕೆಳಕಂಡ ಆದೇಶ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ 2024-25ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯನ್ನು ಮುಂದುವರೆಸಲು ಹಾಗೂ ಈ ಯೋಜನಯಲ್ಲಿ ಹೊಸ ಸದಸ್ಯತ ನೋಂದಣಿ ಪ್ರಾರಂಭಿಸಲು ಈ ಕೆಳಕಂಡ ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಿದೆ

1.ಯಾವುದೇ ಸಹಕಾರ ಸಂಘಗಳ ಕಾಯ್ದೆಗಳಡಿ (ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕರ್ನಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ 1997 ಅಥವಾ ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002) ನೋಂದಾಯಿಸಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘ / ಬ್ಯಾಂಕುಗಳ (ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳು ಒಳಗೊಂಡಂತೆ) ಸದಸ್ಯರು ಅಥವಾ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು, ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದಲ್ಲಿ ಅಂತಹ ಸದಸ್ಯರು ಅಥವಾ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಡಿ ನೋಂದಣಿಯಾಗಿ ಕಾರ್ಯನಿರತ ಸಹಕಾರ ಸಂಘಗಳಲ್ಲಿ ಕನಿಷ್ಠ ಮೂರು ವರ್ಷ ಸೇವೆ ಪೂರ್ಣಗೊಳಿಸಿ ಮಾಸಿಕ ರೂ.30,000/- ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ನೌಕರರು ಮತ್ತು ಅವರ ಅರ್ಹ ಕುಟುಂಬ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುತ್ತಾರೆ (ನೌಕರರಾಗಿದ್ದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಮತ್ತು ರೂ.30,000/- ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಬಗ್ಗೆ ಸಂಬಂಧಿಸಿದ ಸಹಕಾರ ಸಂಘದ ಆಡಳಿತ ಮಂಡಳಿ ದೃಢೀಕರಣ ಪತ್ರ ಲಗತ್ತಿಸಬೇಕು)

2.ಸಮಾಪನೆ / ನಿಷ್ಕ್ರಿಯಗೊಂಡಿರುವ ಸಹಕಾರ ಸಂಘಗಳ ಹಾಗೂ ನೌಕರರ ಸಹಕಾರ ಸಂಘಗಳ ಸದಸ್ಯರು ಅಥವಾ ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾವುದೇ ಸದಸ್ಯನು ಸರ್ಕಾರಿ ನೌಕರರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿ ಖಾಸಗಿ ಕಂಪನಿ ಅಥವಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಾಸಿಕ ರೂ.30,000/-ಕ್ಕಿಂತ ಹೆಚ್ಚು ಒಟ್ಟು ವೇತನ ಪಡೆಯುತ್ತಿದ್ದಲ್ಲಿ ಅಥವಾ ಒಬ್ಬ ವ್ಯಕ್ತಿ ಯಾವುದೇ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸದಸ್ಯರಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುವುದಿಲ್ಲ. ಅಂತಹವರನ್ನು ಯಶಸ್ವಿನಿ ಯೋಜನೆಯ ‘ಫಲಾನುಭವಿಯಾಗಿ ನೋಂದಾಯಿಸಬಾರದು. ಆದಾಗ್ಯೂ ಯಾವುದೇ ಕಾರಣಕ್ಕೆ ನೋಂದಾಯಿಸಿದ್ದಲ್ಲಿ ಸಹಿತ ಅವರು ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ. ಅಂತಹ ವ್ಯಕ್ತಿಗಳು ಪಾವತಿಸಿದ ವಂತಿಗೆಯನ್ನು ಮುಟ್ಟುಗೋಲು ಹಾಕಿಕೊಳ್ಳುಲಾಗುವುದು.

3.ಯಶಸ್ವಿನಿ ಯೋಜನೆಯಲ್ಲಿನ ವ್ಯಾಖ್ಯಾನದಂತೆ “ಕುಟುಂಬ” ಎಂದರೆ ಪ್ರಧಾನ ಅರ್ಜಿದಾರರ (Principal Member) ತಂದೆ, ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು (ಗಂಡು ಮಕ್ಕಳ ಮಕ್ಕಳು) ಎಂದು ಅರ್ಥೈಯಿಸುವುದು. ಒಂದು ಮನೆಯಲ್ಲಿ ಸೊಸೆ ಪ್ರಧಾನ ಅರ್ಜಿದಾರರಾಗಿದ್ದಲ್ಲಿ ಅವರ ಗಂಡನ ತಂದೆ/ತಾಯಿ ಅಂದರೆ ಅರ್ಜಿದಾರರ ಅತ್ತೆ/ಮಾವ ಅರ್ಹ ಸದಸ್ಯರಾಗುತ್ತಾರೆ. ಆದರೆ ಅರ್ಜಿದಾರರ ತಂದೆ/ತಾಯಿಯವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಬರುವುದಿಲ್ಲ.

4.ಒಬ್ಬ ಯಶಸ್ವಿನಿ ಸದಸ್ಯ ಒಂದು ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರಿಗೆ ಒಂದೇ ರೇಷನ್ ಕಾರ್ಡು ಹೊಂದಿದ್ದು, ಅದನ್ನು ಹಾಜರು ಪಡಿಸಿದ್ದಲ್ಲಿ ಅಂತಹ ರೇಷನ್ ಕಾರ್ಡ್‌ನಲ್ಲಿ ಹೆಸರು ನಮೂದಾಗಿರುವ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರು ವಾರ್ಷಿಕ ವಂತಿಗೆ ಪಾವತಿಸಿದ್ದಲ್ಲಿ ಅಂತಹ ಕುಟುಂಬದ ಎಲ್ಲಾ ಸದಸ್ಯರಿಗೆ ಯೋಜನೆ ಸೌಲಭ್ಯ ಪಡೆಯಲು ಸರ್ಕಾರವು ಅವಕಾಶ ಕಲ್ಪಿಸಿದೆ. ಅವಿಭಕ್ತ ಕುಟುಂಬದ ಸದಸ್ಯರಿಗೆ ಒಂದೇ ರೇಷನ್ ಕಾರ್ಡ್ ಇಲ್ಲದಿದ್ದಲ್ಲಿ ಈ ಯೋಜನೆಯಡಿ ನೋಂದಾಯಿಸಲು ಅವಕಾಶವಿರುವುದಿಲ್ಲ.

5.ಮದುವೆಯಾಗಿರುವ ಹೆಣ್ಣು ಮಗಳು ಹಾಗೂ ಅವರ ಮಕ್ಕಳು ಅವರ ತವರು ಮನೆಯಲ್ಲಿ ಅಂದರೆ ಅವರ ತಂದೆ/ತಾಯಿ/ಅಣ್ಣ/ತಮ್ಮ ಪುಧಾನ ಅರ್ಜಿದಾರರ ಕುಟುಂಬದಲ್ಲಿಯೇ ಯಾವುದೇ (ವಿಧವೆ/ವಿಚ್ಛೇದನೆ/ಬೇರ್ಪಟ್ಟಿರುವುದು) ಕಾರಣಗಳಿಗೆ ವಾಸವಾಗಿದ್ದರೆ ಮತ್ತು ಅವರ ವಂತಿಗೆಯನ್ನು ಪ್ರಧಾನ ಅರ್ಜಿದಾರರು ಪಾವತಿಸಿದ್ದರೆ ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

6.ಆದಾಗ್ಯೂ ಮದುವೆಯಾಗಿರುವ ಹೆಣ್ಣು ಮಗಳು ತವರು ಮನೆಯ ಯಶಸ್ವಿನಿ ಕಾರ್ಡಿನಲ್ಲಿ ಆ ವರ್ಷದ ವಾರ್ಷಿಕ ವಂತಿಗೆ ಪಾವತಿಸಿ ಸದಸ್ಯರನ್ನಾಗಿ ನೋಂದಣಿ ಮಾಡಿಕೊಂಡಿದ್ದಲ್ಲಿ ಅಂತಹ ಮದುವೆಯಾಗಿರುವ ಹೆಣ್ಣು ಮಗಳು ತವರು ಮನೆಯ ರೇಷನ್ ಕಾರ್ಡ್‌ಲ್ಲಿ ತಮ್ಮ ಹೆಸರು ಇರುವ ಬಗ್ಗೆ ರೇಷನ್ ಕಾರ್ಡ್ ಪ್ರತಿಯನ್ನು ಹಾಜರು ಪಡಿಸಿದ್ದಲ್ಲಿ ಯೋಜನೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ತವರು ಮನೆಯವರು ರೇಷನ್ ಕಾರ್ಡ್ ಹೊಂದಿಲ್ಲದಿದ್ದರೆ, ಸಂಬಂಧಿಸಿದ ಸಹಕಾರ ಸಂಘದಿಂದ, ಮುದುವೆಯಾಗಿರುವ ಹೆಣ್ಣು ಮಗಳು ತವರು ಮನೆಯಲ್ಲಿ ಇರುವ ಬಗ್ಗೆ ದೃಢೀಕರಿಸಬೇಕು. ಇಲ್ಲದಿದ್ದಲ್ಲಿ ಅಂತಹ ಹೆಣ್ಣು ಮಗಳು ತವರು ಮನೆಯಲ್ಲಿನ ಯಶಸ್ವಿನಿ ಯೋಜನೆಗೆ ಅರ್ಹರಿರುವುದಿಲ್ಲ.

7.ನವಜಾತ ಶಿಶು ತಾಯಿ ಹೆಸರು ಇರುವ ಯಶಸ್ವಿನಿ ಕಾರ್ಡ್‌ ಆಧಾರದ ಮೇಲೆ ಈ ಯೋಜನೆಯಡಿಯಲ್ಲಿ ಸೌಲಭ್ಯವನ್ನು ಮುಂದಿನ ವರ್ಷ ನೋಂದಣಿಯಾಗುವ ವರೆವಿಗೆ ಪಡೆಯಬಹುದು. ನಂತರಲ್ಲಿ ಮಗುವಿನ ಹೆಸರನ್ನು ನೋಂದಾಯಿಸಿಕೊಂಡು ಯೋಜನೆಯ ಸೌಲಭ್ಯ ಪಡೆಯಬಹುದು.

8.ಮೇಲೆ ವಿವರಿಸಿರುವಂತೆ ಅರ್ಹ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾವುದೇ ಸದಸ್ಯರನ್ನು ಯಶಸ್ವಿನಿ ಯೋಜನೆಗೆ ಸೇರಿಸುವಂತಿಲ್ಲ. ಒಂದು ವೇಳೆ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಅರ್ಜಿದಾರ ಅಥವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯ ತಪ್ಪಿನಿಂದಾಗಲಿ ಅರ್ಹರಲ್ಲದ ಸದಸ್ಯರಿಂದ ವಂತಿಗೆ ಪಾವತಿಸಿಕೊಂಡು ಅಂತಹ ವ್ಯಕ್ತಿಗಳನ್ನು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನೋಂದಣಿ ಮಾಡಿದ್ದರೂ ಸಹ ಅಂತಹ ವ್ಯಕ್ತಿಗಳು ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ ಹಾಗೂ ಅಂತಹ ವ್ಯಕ್ತಿಗಳು ಪಾವತಿಸಿದ ವಂತಿಗೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅವರ ಯಶಸ್ವಿನಿ ಸದಸ್ಯತ್ವ ತಂತಾನೇ ರದ್ದುಗೊಳ್ಳುತ್ತದೆ. ಪ್ರತ್ಯೇಕ ರದ್ದತಿ ಆದೇಶ ಅವಶ್ಯಕತೆ ಇರುವುದಿಲ್ಲ.

9.2024-25 ನೇ ಸಾಲಿನಲ್ಲಿ 50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ನಿಗದಿ ವಡಿಸಲಾಗಿದೆ. ಪ್ರತಿ ಜಿಲ್ಲೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ಸಂಘಗಳ ನಿಬಂಧಕರು ಪ್ರತಿ ಜಿಲ್ಲೆಗೆ ಪ್ರತ್ಯೇಕ ಗುರಿ ನಿಗದಿಪಡಿಸುವಂತೆ ಸೂಚಿಸಲಾಗಿದೆ. ಹಿಂದಿನ ಸಾಲು ಅಂದರೆ 2023-24ನೇ ಸಾಲಿನಲ್ಲಿ ನೋಂದಾಯಿಸಿದ ಎಲ್ಲಾ ಸದಸ್ಯರನ್ನು 2024-25ನೇ ಸಾಲಿಗೆ ನವೀಕರಿಸಲು ಕ್ರಮ ವಿಡತಕ್ಕದ್ದು.

10.ರಾಜ್ಯದಲ್ಲಿ ಕೆಲವು ಹಾಲು ಉತ್ಪಾದಕರ ಒಕ್ಕೂಟಗಳು, ಡಿಸಿಸಿ ಬ್ಯಾಂಕುಗಳು ಹಾಗೂ ಸಹಕಾರ ಸಂಘ/ಸಂಸ್ಥೆಗಳು ಅವುಗಳ ಸದಸ್ಯರ ವಾರ್ಷಿಕ ಯಶಸ್ವಿನಿ ವಂತಿಗೆಯಲ್ಲಿ ಭಾಗಶಃ ಅಥವಾ ಪೂರ್ಣ ವಂತಿಗೆಯನ್ನು ಸಂಘದ ಸ್ವಂತ ಬಂಡವಾಳದಿಂದ ಭರಿಸುತ್ತಿವೆ. ಈ ಪದ್ಧತಿಯನ್ನು ರಾಜ್ಯದ ಎಲ್ಲಾ ಸಹಕಾರ ಸಂಘಗಳೂ ಕೂಡ ಅನುಸರಿಸುವಂತೆ ಪ್ರೋತ್ಸಾಹಿಸತಕ್ಕದು.

11.2024-25ನೇ ಸಾಲಿಗೆ ಈ ಯೋಜನೆಯಡಿ

(ಎ) ಗ್ರಾಮೀಣ ಸಹಕಾರ ಸಂಘಗಳ/ಸ್ವ-ಸಹಾಯ ಗುಂಪುಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500/-ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.100/- ಗಳನ್ನು ಪಾವತಿಸತಕ್ಕದ್ದು,

(ಬಿ) ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200/-ಗಳನ್ನು ಪಾವತಿಸತಕ್ಕದ್ದು.

(ಸಿ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಾಗಿರುವುದರಿಂದ ಈ ಸಮುದಾಯಗಳಿಗೆ ಸಂಬಂಧಿಸಿದಂತೆ ಜಾತಿ ಪ್ರಮಾಣ ಪತ್ರದಲ್ಲಿರುವ R.D ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. R D ಸಂಖ್ಯೆಗಳು ಒದಗಿಸದಿದ್ದಲ್ಲಿ ಯಶಸ್ವಿನಿ ಕಾರ್ಡನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಮತ್ತು ಸರ್ಕಾರದಿಂದ ಅನುದಾನ ಸೌಲಭ್ಯ ದೊರೆಯುವುದಿಲ್ಲ.

(ಡಿ) ಪರಿಶಿಷ್ಟ ಜಾತಿ/ಪರಿಶಿಷ್ಟ ವಂಗಡದ ಸದಸ್ಯರಿಂದ ಯಾವುದೇ ವಂತಿಗೆಯನ್ನು ಪಾವತಿಸಿಕೊಳ್ಳದಿರುವುದರಿಂದ ಈ ಸಮುದಾಯದ ಸದಸ್ಯರನ್ನು ಒಂದೇ ಬಾರಿ ಮೂರು ವರ್ಷಗಳ ಅವಧಿಗೆ ನೋಂದಾಯಿಸಿಕೊಂಡು ಅದರಂತೆ ಮೂರು ವರ್ಷಗಳ ಅವಧಿಗೆ ಕಾರ್ಡುಗಳನ್ನು ವಿತರಿಸಲಾಗುವುದು. ಸದರಿ ಕಾರ್ಡುಗಳಲ್ಲಿ ಯಾವುದೇ ತಿದ್ದುಪಡಿ/ಬದಲಾವಣೆ ಹಾಗೂ ಹೊಸ ಸದಸ್ಯರ ಸೇರ್ಪಡೆ/ತೆಗೆದು ಹಾಕುವುದು ಇದ್ದಲ್ಲಿ ಅದರಂತೆ ಪ್ರತಿ ವರ್ಷ ತಿದ್ದುಪಡಿ/ಬದಲಾವಣೆಗೆ ಕ್ರಮವಿಡಲಾಗುವುದು. ಪ್ರತಿ ವರ್ಷ ಆ ಸಮುದಾಯದ ಸದಸ್ಯರ ವಂತಿಗೆಯನ್ನು ಸರ್ಕಾರದಿಂದ ಭರಿಸಲಾಗುವುದು.

(ಇ) ಸದಸ್ಯರಿಂದ ಸಂಗ್ರಹಿಸಿದ ವಂತಿಗೆ ಮೊತ್ತದ ಪೈಕಿ (ಸದಸ್ಯರಿಂದ ಇದಕ್ಕಾಗಿ ಹೆಚ್ಚುವರಿ ಮೊತ್ತ ಸಂಗ್ರಹಿಸತಕ್ಕದ್ದಲ್ಲ) ಪ್ರತಿ ಕಾರ್ಡಿಗೆ ರೂ.25/- ಗಳನ್ನು ಸಹಕಾರ ಸಂಘಗಳು ಪ್ರೋತ್ಸಾಹಧನವಾಗಿ ಇಟ್ಟುಕೊಂಡು ಉಳಿದ ಮೊತ್ತವನ್ನು ಸದಸ್ಯತ್ವ ನೋಂದಣಿಯಾದ ಏಳು (7) ದಿನಗಳೊಳಗಾಗಿ ಸಂಬಂಧಿಸಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಲ್ಲಿ ಯಶಸ್ವಿನಿ ಟ್ರಸ್ಟ್ ಹೊಂದಿರುವ ಖಾತೆಗೆ ಜಮಾ ಮಾಡತಕ್ಕದ್ದು. ಕೇಂದ್ರ ಜಿಲ್ಲಾ ಸಹಕಾರ ಬ್ಯಾಂಕುಗಳು ಜಮಾ ಆಗಿರುವ ವಂತಿಗೆ ಮೊತ್ತವನ್ನು ಸ್ವೀಕರಿಸಿದ ಎರಡು (2) ದಿನಗಳೊಳಗಾಗಿ ಅಪೆಕ್ಸ್ ಬ್ಯಾಂಕ್‌ ಕೇಂದ್ರ ಕಛೇರಿಯಲ್ಲಿ ಹೊಸದಾಗಿ ತೆರೆದಿರುವ ಯಶಸ್ವಿನಿ ಟ್ರಸ್ಟ್‌ನ ಉಳಿತಾಯ ಖಾತೆಗೆ ಜಮಾ ಮಾಡತಕ್ಕದ್ದು/ವರ್ಗಾಯಿಸತಕ್ಕದ್ದು.

(ಎಫ್) ಸದಸ್ಯರನ್ನು ನೋಂದಾಯಿಸುವ ಸಹಕಾರ ಸಂಘ/ಬ್ಯಾಂಕುಗಳು ಸದಸ್ಯರಿಂದ ಸಂಗ್ರಹಿಸಿದ ವಂತಿಗೆಯನ್ನು ಆ ಜಿಲ್ಲೆಯ ಡಿಸಿಸಿ ಬ್ಯಾಂಕ್ ಮೂಲಕವೇ ಸಂದಾಯ ಮಾಡಬೇಕು. ಯಾವುದೇ ಕಾರಣಕ್ಕೆ ನೇರವಾಗಿ ಅಪೆಕ್ಸ್ ಬ್ಯಾಂಕಿನಲ್ಲಿರುವ ಟ್ರಸ್ಟ್ ಖಾತೆಗೆ ಪಾವತಿಸತಕ್ಕದಲ್ಲ.

(ಜಿ) ಕೆಲವೊಂದು ಸಹಕಾರ ಸಂಘಗಳು ಸದಸ್ಯರ ವಂತಿಗೆ ಮೊತ್ತವನ್ನು ಮೊದಲು ಡಿಸಿಸಿ ಬ್ಯಾಂಕಿಗೆ ಪಾವತಿಸಿ ನಂತರ ಸದಸ್ಯರ ಅರ್ಜಿ ಫಾರಂಗಳನ್ನು CDO ಗಳಿಗೆ ಸಲ್ಲಿಸುತ್ತಿರುವುದು ಕಂಡುಬರುತ್ತಿದೆ. ಸದಸ್ಯರ ಅರ್ಜಿ ಫಾರಂಗಳು ಸ್ವೀಕರಿಸಿ ಸದಸ್ಯರ ವಿವರ, ವಂತಿಗೆ ಮೊತ್ತ ತಾಳೆ ಮಾಡಿಸಿಕೊಂಡು ಅರ್ಜಿಗಳನ್ನು CDO ಗೆ ವರ್ಗಾಯಿಸಿ ವಂತಿಗೆ ಮೊತ್ತವನ್ನು ಡಿಸಿಸಿ ಬ್ಯಾಂಕಿಗೆ ಪಾವತಿಸಲು ಕ್ರಮವಿಡತಕ್ಕದ್ದು.

12.2024-25 ನೇ ಸಾಲಿಗೆ ನೋಂದಣಿ ದಿನಾಂಕ:01-12-2024 ಪ್ರಾರಂಭವಾಗಲಿದ್ದು, ದಿನಾಂಕ: 31-12-2024 ರವರೆಗೆ ಮುಂದುವರೆಯಲಿದೆ.

13.2024-25ನೇ ಸಾಲಿನಲ್ಲಿ ಚಿಕಿತ್ಸಾ ಅವಧಿಯನ್ನು ದಿನಾಂಕ:01/04/2025 ರಿಂದ ದಿನಾಂಕ:31/03/2026 ರವರೆಗೆ ನಿಗದಿಗೊಳಿಸಿದೆ.

14.ಯಶಸ್ವಿನಿ ಯೋಜನೆಯಡಿ ಸದಸ್ಯರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಪ್ಲಾಸ್ಟಿಕ್ ಕಾರ್ಡನ್ನು ದಿನಾಂಕ:01-03-2025 ರಿಂದ ಒದಗಿಸಲಾಗುವುದು. ಸದರಿ ಕಾರ್ಡನ್ನು ಹಾಜರು ಪಡಿಸಿ ದಿನಾಂಕ:01-04-2025 ರಿಂದ ಫಲಾನುಭವಿಗಳು ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಗುರುತಿನ ಚೀಟಿಯನ್ನು ಚಿಕಿತ್ಸೆಗಾಗಿ ನೆಟ್ವರ್ಕ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಫಲಾನುಭವಿಗಳು ಕಡ್ಡಾಯವಾಗಿ ಹಾಜರು ಪಡಿಸಬೇಕು. ಇಲ್ಲದಿದ್ದಲ್ಲಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯಡಿ ಚಿಕಿತ್ಸೆಯನ್ನು ನಿರಾಕರಿಸುತ್ತವೆ. ಇದಕ್ಕೆ ಟ್ರಸ್ಟ್ ಜವಾಬ್ದಾರಿಯಾಗುವುದಿಲ್ಲ. ಆದಾಗ್ಯೂ ಸದಸ್ಯರು ಯಶಸ್ವಿನಿ ಯೋಜನೆಯಲ್ಲಿ ನೋಂದಣಿಯಾಗಿದ್ದು, ಅರ್ಜಿ Scan ಆಗಿದ್ದು, ತುರ್ತಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಸಂದರ್ಭ ಬಂದಲ್ಲಿ. ಕಾರ್ಡ್ ಇನ್ನು ಬರದಿದ್ದಲ್ಲಿ ಅಂತಹ ಫಲಾನುಭವಿಗಳು ನೋಂದಣಿಯಾಗಿರುವ ಬಗ್ಗೆ ಸಹಕಾರ ಸಂಘದ ಮೂಲಕ ಪುರಾವೆ/ದಾಖಲೆ ಒದಗಿಸಿದ್ದಲ್ಲಿ ಸದಸ್ಯರಿಗೆ ತುರ್ತಾಗಿ ಟ್ರಸ್ಟ್ ಕಡೆಯಿಂದ ತಾತ್ಕಾಲಿಕ E-Card ಅನ್ನು ಒದಗಿಸಿ ಚಿಕಿತ್ಸೆಗೆ ಅನುವು ಮಾಡಿಕೊಡಲಾಗುವುದು.

15.ಯಶಸ್ವಿನಿ ಕಾರ್ಡನ್ನು ಫಲಾನುಭವಿಗಳು ಜೋಪಾನವಾಗಿ ಇಟ್ಟುಕೊಳ್ಳತಕ್ಕದು. ಒಂದು ವೇಳೆ ಕಾರ್ಡನ್ನು ಕಳೆದು ಕೊಂಡಲ್ಲಿ ರೂ.250/- ಗಳ ಶುಲ್ಕವನ್ನು ಟ್ರಸ್ಟ್‌ಗೆ ಪಾವತಿಸಿ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರ ಮೂಲಕ ಟ್ರಸ್ಟ್‌ಗೆ ಮನವಿ ಸಲ್ಲಿಸಿ ಡೂಪ್ಲಿಕೇಟ್ ಕಾರ್ಡನ್ನು ಪಡೆಯಬಹುದು. ಡೂಪ್ಲಿಕೇಟ್ ಕಾರ್ಡ್ ವಿತರಣೆಯಾದ ನಂತರ ಹಳೆಯ ಕಾರ್ಡನ್ನು ಸ್ಥಗಿತಗೊಳಿಸಲಾಗುವುದು.

16.ಈ ಕೆಳಕಂಡ ಸೌಲಭ್ಯಗಳನ್ನು ಯಶಸ್ವಿನಿ ಸದಸ್ಯರಿಗೆ ಒದಗಿಸಲಾಗುವುದು.

ಎ) ಪ್ರಸ್ತುತ ಯಶಸ್ವಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ಗುರ್ತಿಸಿದ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ.

ಬಿ) ರೋಗಿಗಳಿಗೆ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ನೆಟ್ವರ್ಕ್ ಆಸ್ಪತ್ರೆಗಳನ್ನು ಹೊರತುಪಡಿಸಿ ಇತರೆ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯವಿರುವುದಿಲ್ಲ. ಯಶಸ್ವಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು.

ಸಿ) ಯೋಜನೆಯಲ್ಲಿ ಒಳಪಡದ ಚಿಕಿತ್ಸೆಗಳ ಮತ್ತು ಟ್ರಸ್ಟ್ ಅಂಗೀಕರಿಸದ ಆಸ್ಪತ್ರೆಗಳಲ್ಲಿ ಪಡೆದಂತಹ ಚಿಕಿತ್ಸೆಗಳಿಗೆ ಯಶಸ್ವಿನಿ ಟ್ರಸ್ಟ್ ಜವಾಬ್ದಾರರಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಆಸ್ಪತ್ರೆಗಳಿಗಾಗಲಿ ಅಥವಾ ಫಲಾನುಭವಿಗಳಿಗಾಗಲಿ ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗುವುದಿಲ್ಲ.

ಡಿ) ಎರಡು ಜೀವಂತ ಮಕ್ಕಳು ಅಥವಾ ಎರಡು ಹೆರಿಗೆಗೆ ಮಾತ್ರ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ದೊರೆಯುತ್ತದೆ.

ಇ) ಯಶಸ್ವಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಯಶಸ್ವಿನಿ ಫಲಾನುಭವಿಗಳು ಜನರಲ್ ವಾರ್ಡನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳ ಯೋಜನೆಯಡಿ ನಿಗದಿಪಡಿಸಿರುವ ಜನರಲ್ ವಾರ್ಡ್ ಬದಲಾಗಿ ಉನ್ನತ (Semi Special Ward Or Special Ward)ನಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ, ಸದರಿ ಫಲಾನುಭವಿಗಳಿಗೆ ಯೋಜನೆಯಡಿ ನಿಗದಿ ಪಡಿಸಿರುವಂತೆ ಜನರಲ್ ವಾರ್ಡಗೆ ಅನ್ವಯಿಸುವ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಭರಿಸಲಾಗುವುದು. ಉನ್ನತ ವಾರ್ಡ್/ಸ್ಪೆಷಲ್ ವಾರ್ಡಿಗೆ ಆಗುವ ಹೆಚ್ಚುವರಿ ವ್ಯತ್ಯಾಸದ ಚಿಕಿತ್ಸಾ ಮೊತ್ತವನ್ನು ಸದರಿ ಫಲಾನುಭವಿಗಳೇ ಭರಿಸತಕ್ಕದ್ದು.

ಎಫ್) ಯಶಸ್ವಿನಿ ಯೋಜನೆಯ ಪ್ಯಾಕೇಜಿನಲ್ಲಿ Implants ಅಗತ್ಯವಿರುವ ಕಡೆ Implants ದರವನ್ನು ಒಳಗೊಂಡಿರುತ್ತದೆ. Ex. Knee replacement, Lens in cataract Surgery) ಒಂದು ವೇಳೆ ಫಲಾನುಭವಿಗಳು ಉನ್ನತ Implants ಅಥವಾ Lens ಪಡೆಯಲು ಸ್ವ-ಇಚ್ಛೆಯಿಂದ ಒಪ್ಪಿಗೆ

ಸೂಚಿಸಿದ್ದಲ್ಲಿ, ಅಂತಹ ಉನ್ನತ Implants ಮತ್ತು Lens ಗೆ ತಗಲುವ ವ್ಯತ್ಯಾಸದ ಹೆಚ್ಚುವರಿ ಮೊತ್ತವನ್ನು ಅಂತ ಫಲಾನುಭವಿಗಳೇ ಭರಿಸಿ ಚಿಕಿತ್ಸೆಯನ್ನು ಪಡೆಯತಕ್ಕದ್ದು.

ಜಿ) ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್ಠ ರೂ.200/-ಗಳನ್ನು (ಮೂರು ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ಈ ಪೈಕಿ ರೂ.100/- ಗಳನ್ನು ಯಶಸ್ವಿನಿ ಟ್ರಸ್ಟ್ ವತಿಯಿಂದ ಪಾವತಿಸಲಾಗುವುದು.

17.ಸದಸ್ಯರ ನೋಂದಣಿಗೆ ಮಾರ್ಗಸೂಚಿಗಳು, ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳ ಯಾದಿ, ಶಸ್ತ್ರಚಿಕಿತ್ಸೆಗಳ ಯಾದಿ ಇವುಗಳನ್ನು ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್‌ಸೈಟ್‌ನಲ್ಲಿ/ಟ್ರಸ್ಟ್ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗುವುದು.

18.ಸದಸ್ಯರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಒದಗಿಸತಕ್ಕದು.

19.ಯಶಸ್ವಿನಿ ಯೋಜನೆಯ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ನೀಡಲು ಆಯಾಯ ಪ್ರಾಂತ್ಯದ ಸಹಕಾರ ಸಂಘಗಳ ಜಂಟಿ ನಿಬಂಧಕರು ಅವರ ವ್ಯಾಪ್ತಿಯ ಇಲಾಖಾಧಿಕಾರಿಗಳ, ಜಿಲ್ಲಾ ಸಹಕಾರ ಬ್ಯಾಂಕುಗಳ, ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಮತ್ತು ಇತರೆ ಪ್ರಮುಖ ಸಹಕಾರ ಸಂಘ/ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಪ್ರಾಂತೀಯ ಮಟ್ಟದಲ್ಲಿ ನಿರ್ವಹಿಸಲು ಸೂಚಿಸಿದೆ. ನಂತರ ಎಲ್ಲಾ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು, ಅವರ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರ, ಮುಖ್ಯಕಾರ್ಯನಿರ್ವಹಣಾಧಿಕಾರಿ ರವರ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳ ಸಭೆ ಕರೆದು ಕಾರ್ಯಗಾರ ಏರ್ಪಡಿಸಿ ಯೋಜನೆಯ ಮಾರ್ಗಸೂಚಿ ನಿಯಮಗಳು, ಇತಿಮಿತಿಗಳು ಮತ್ತು ಯೋಜನೆಯಡಿ ಸೌಲಭ್ಯದ ವಿವರಗಳ ಮಾಹಿತಿ ನೀಡಿ, ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ನಿಬಂಧಕರಿಗೆ ಮತ್ತು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ: ಆಇ 113 ವೆಚ್ಚ-2/2022, ದಿನಾಂಕ: 21-11-2024 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಸಂಪೂರ್ಣ ಆದೇಶ ಪಡೆಯಲು –CLICK HERE

Leave a Comment