ಆಶಾ ಮೆಂಟರ್’ಗಳಿಗೆ ಬಿಗ್ ಶಾಕ್: ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಆದೇಶ-2025

ಆಶಾ ಮೆಂಟರ್’ಗಳಿಗೆ ಬಿಗ್ ಶಾಕ್: ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಆದೇಶ

ಆಶಾ ಮೆಂಟರ್’ಗಳಿಗೆ ಬಿಗ್ ಶಾಕ್: ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಆದೇಶ:ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಏನ್.ಹೆಚ್.ಎಮ್ ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟ‌ರ್’ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ತರಬೇತಿಗಾಗಿ ನೇಮಕಗೊಂಡ ಆಶಾ ಮೆಂಟರ್‌’ಗಳನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಆದೇಶಿಸಿದೆ. ಆಶಾ ಮೆಂಟರ್ಸ್ ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಇನ್ನು ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹಾಗೂ ಉಪಕೇಂದ್ರಗಳಲ್‌ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ನಿರ್ವಹಿಸುವಂತೆ ಆದೇಶಿಸಿದ್ದಾರೆ.

ಪ್ರಸ್ತಾವನೆ:

ಮೇಲೆ ಓದಲಾದ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನರವರ ಕಡತದಲ್ಲಿ 2007-08ನೇ ಸಾಲಿನಲ್ಲಿ NHM ಅಡಿಯಲ್ಲಿ ನೇಮಕಗೊಂಡ ಗುತ್ತಿಗೆ ನರ್ಸಿಂಗ್ ಸಿಬ್ಬಂದಿಯನ್ನು ಹೊಸದಾಗಿ ಸೇರ್ಪಡೆಗೊಂಡ ಆಶಾಕಾರ್ಯಕರ್ತೆಯರಿಗೆ ತರಬೇತಿ ನೀಡಲು TOT ಆಗಿ ನಿಯೋಜನೆ ಮಾಡಲಾಗಿದ್ದು, ಅವರುಗಳನ್ನು District Community Mobilizer/Block Community Mobilizer (ASHA Mentor) ಎಂದು ಮರುನಾಮಕರಣ ಮಾಡಲಾಗಿರುತ್ತದೆ. ಸದರಿಯವರು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು, ಅವರುಗಳ ಮೇಲ್ವಿಚಾರಣೆ ಮಾಡುವುದು, ಆಶಾ ನಿಧಿ ಪೋರ್ಟಲ್ ಅನ್ನು ನಿರ್ವಹಿಸುವುದು ಹಾಗೂ ಪ್ರೋತ್ಸಾಹಧನದ ಪಾವತಿ ಪ್ರಕ್ರಿಯೆಯಂತಹ ಸಕಾಲಿಕ ನಿರ್ವಹಣೆ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ.

ಪ್ರಸ್ತುತ ರಾಜ್ಯದಲ್ಲಿ 195 ಆಶಾ ಮೆಂಟರಸ್ (District Community Mobilizer / BlockCommunity Mobilizer) ಕಾರ್ಯನಿರ್ವಹಿಸುತ್ತಿದ್ದು, ಇವರುಗಳು ನಿರ್ವಹಿಸುತ್ತಿರುವ ಕಾರ್ಯಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ LHV/Sr HIO, ತಾಲ್ಲೂಕು ಮಟ್ಟದಲ್ಲಿ LHV/ST HIO ಮತ್ತು ಜಿಲ್ಲಾಮಟ್ಟದಲ್ಲಿ DNO ಗಳು ನಿರ್ವಹಿಸಬಹುದೆಂದು, ಈ ಕಾರ್ಯಗಳ ನಿರ್ವಹಣೆಗೆ LHV/ST HID ಮತ್ತು DNO ಗಳಿಗೆ ತರಬೇತಿ ನೀಡಬಹುದೆಂದು ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಆಶಾ ಮಾರ್ಗದರ್ಶಕರ (ASHA Mentors) ಹುದ್ದೆಗಳು ಅಗತ್ಯವಿಲ್ಲವೆಂದು ಸದರಿ ಹುದ್ದೆಗಳನ್ನು ಮುಕ್ತಗೊಳಿಸುವಂತೆ ಪ್ರಸ್ತಾಪಿಸಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶಿಸಿದೆ.

ಆದೇಶದ ವಿವರ ಇಲ್ಲಿದೆ:

ರಾಜ್ಯದಲ್ಲಿನ 195 ಆಶಾ ಮೆಂಟರ್ಸ್ ಆಗಿ NHM ಅಡಿಯಲ್ಲಿ ಶುಶೂಷಕರ ಅರ್ಹತೆಯಿರುವ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಕರ್ತವ್ಯದಿಂದ ಮುಕ್ತಗೊಳಿಸಿದೆ. ಇವರುಗಳನ್ನು ಅರ್ಹರಿದ್ದಲ್ಲಿ ಆಯಾ ಜಿಲ್ಲೆಗಳಲ್ಲಿ NHM ಅಡಿ ಖಾಲಿ ಇರುವ ಶುಶೂಷಕರ ಹುದ್ದೆಗಳಿಗೆ ಗುತ್ತಿಗೆ ನೌಕರರಾಗಿ ಆದ್ಯತೆ ಮೇಲೆ ನೇಮಿಸಲು ಪರಿಗಣಿಸಬಹುದಾಗಿದೆ.

ಆಶಾ ಮೆಂಟರ್ಸ್‌ಗಳು ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಇನ್ನು ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಮಹಿಳಾ ಆರೋಗ್ಯ ಸಂದರ್ಶಕರು/ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹಾಗೂ ಉಪಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು/ ಸಮುದಾಯ ಆರೋಗ್ಯ ಅಧಿಕಾರಿಗಳು ನಿರ್ವಹಿಸುವಂತೆ ಆದೇಶಿಸಿದೆ.

 

 

ಇದನ್ನೂ ನೋಡಿ……ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯಿಂದ ನೇಮಕಾತಿ

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!