ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025|ಜಾತಿ ಸಮೀಕ್ಷೆ ಗೌರವ ಧನ ಬಿಡುಗಡೆ ಆದೇಶ.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025|ಜಾತಿ ಸಮೀಕ್ಷೆ ಗೌರವ ಧನ ಬಿಡುಗಡೆ ಆದೇಶ: ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಮಧಂತರ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ:05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರಲ್ಲಿ ಗಣತಿದಾರರಾಗಿ ರಾಜ್ಯಾದ್ಯಂತ ಸಮೀಕ್ಷಾ ಕಾರ್ಯನಿರ್ವಹಿಸಿದ ಪ್ರತಿ ಸಮೀಕ್ಷಾದಾರರಿಗೆ ಪ್ರಥಮ ಹಂತದಲ್ಲಿ 1 ನೇ ಕಂತಿನಲ್ಲಿ ತಲಾ ರೂ. 3000/- ಗಳ ಸಂಭಾವನೆಯಂತೆ ಒಟ್ಟು ರೂ.17,28,00,000/- ಗಳನ್ನು 1 ನೇ ಕಂತಿನಲ್ಲಿ ಪಾವತಿಸಲು ಈ ಕೆಳಕಂಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಿ.ಓ ಕೋಡ್ಗಳಿಗೆ ಬಿಡುಗಡೆ ಮಾಡಲು ಹಾಗೂ ಉಳಿದ ಬಾಕಿ ಮೊತ್ತವನ್ನು 2ನೇ ಕಂತಿನಲ್ಲಿ ಬಿಡುಗಡೆ ಮಾಡಲು ಪ್ರಸ್ತಾಪಿಸಲಾಗಿದೆ.
ಉಲ್ಲೇಖ (1) ರ ಸರ್ಕಾರದ ಆದೇಶಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿದ್ದತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸುಗಳೊಂದಿಗೆ ವರದಿ ಸಲ್ಲಿಸಲು ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಲಾಗಿರುತ್ತದೆ. ಈ ಸಂಬಂಧ ಸದರಿ ಆಯೋಗವು ದಿನಾಂಕ:27-03-2025 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿರುತ್ತದೆ. ಸದರಿ ಮಧ್ಯಂತರ ವರದಿಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಕುಟುಂಬಗಳ ಮನೆ-ಮನೆ ಸಮೀಕ್ಷೆ ನಡೆಸಲು ಶಿಫಾರಸ್ಸು ಮಾಡಲಾಗಿರುತ್ತದೆ.
ಗೌರವಾನ್ವಿತ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ದತ್ತಾಂಶ ಸಂಗ್ರಹಿಸಲು ಸರ್ಕಾರದಿಂದ ನಡೆಸಲು ಉದ್ದೇಶಿಸಿರುವ ಸಮೀಕ್ಷಾ ಕಾರ್ಯವನ್ನು ಸರ್ಕಾರದ ಅಗತ್ಯ ಕಾರ್ಯವೆಂದು ಪರಿಗಣಿಸಿ, ಕರಾರುವಕ್ಕಾದ ಪ್ರಮಾಣೀಕೃತ ಮಾಹಿತಿಯನ್ನು ಪಡೆಯುವ ಸಲುವಾಗಿ ಸಮೀಕ್ಷಾ ಕಾರ್ಯಕ್ಕೆ ಅಗತ್ಯವಿರುವ ಶಿಕ್ಷಕರನ್ನು ಗಣತಿದಾರರನ್ನಾಗಿ (Enumerators) ಗುರುತಿಸಿ ನೇಮಕ ಮಾಡಲು ಉಲ್ಲೇಖ (2) ರಲ್ಲಿ ಆದೇಶಿಸಲಾಗಿರುತ್ತದೆ.
ಸದರಿ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಸಮೀಕ್ಷೆಗೆ ಅವಶ್ಯವಿರುವ ಅನುದಾನವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ: ಆಇ 352 ವೆಚ್ಚ-3/ 2025 ದಿನಾಂಕ:24-04-2025 ರಂತೆ ವಿವಿಧ ಅಭಿವೃದ್ಧಿ ಯೋಜನೆಯ ಲೆಕ್ಕ ಶೀರ್ಷಿಕೆ:2225-01-796-0-02 ರಡಿ 2025-26 ನೇ ಸಾಲಿನಲ್ಲಿ ಒದಗಿಸಲಾಗಿರುವ ಒಟ್ಟು ರೂ.7075.00 ಲಕ್ಷಗಳ ಅನುದಾನದಿಂದ ಸಮೀಕ್ಷೆಗೆ ಅವಶ್ಯಕವಿರುವ ಅನುದಾನ ರೂ.9149.53 ಲಕ್ಷಗಳನ್ನು ಬಳಸಿಕೊಳ್ಳುವಂತೆ ಹಾಗೂ ಈ ಲೆಕ್ಕ ಶೀರ್ಷಿಕೆಯಡಿ ಅನುದಾನದ ಕೊರತೆ ಉಂಟಾದಲ್ಲಿ ಪೂರಕ ಅಂದಾಜಿನಲ್ಲಿ ಒದಗಿಸಲು ಕ್ರಮವಹಿಸಲಾಗುವುದೆಂದು ಉಲ್ಲೇಖ (3) ರ ಪತ್ರದಲ್ಲಿ ತಿಳಿಸಲಾಗಿರುತ್ತದೆ.
ಮುಂದುವರೆದು, ಉಲ್ಲೇಖ (4) ರಲ್ಲಿ ಕಾರ್ಯದರ್ಶಿಗಳು, ಏಕ ಸದಸ್ಯ ವಿಚಾರಣಾ ಆಯೋಗ, ಬೆಂಗಳೂರು ರವರು ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ದಿನಾಂಕ:27-03-2025 ರಂದು ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ.
ಈ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ:05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿದ್ದು, ಸದರಿ ಸಮೀಕ್ಷಾ ಕಾರ್ಯನಿರ್ವಹಿಸಿದ ಸಮೀಕ್ಷಾದಾರರಿಗೆ Flat ದರವಾಗಿ ರೂ.5,000/- ಗಳ ಸಂಭಾವನೆಯನ್ನು ಹಾಗೂ ಪ್ರತಿ ಪರಿಶಿಷ್ಟ ಜಾತಿಯ ಕುಟುಂಬದ ಸಮೀಕ್ಷೆಗೆ ರೂ.100/- ರಂತೆ ಮೊತ್ತವನ್ನು ನಿಗಧಿಪಡಿಸಲಾಗಿರುತ್ತದೆ. ಅದರಂತೆ, ಅವಶ್ಯಕವಿರುವ ಒಟ್ಟು ರೂ.62,03,92,500/- ಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ/ಬಿ.ಬಿ.ಎಂ.ಪಿ ಮುಖ್ಯ ಆಯುಕ್ತರಿಗೆ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಆದುದರಿಂದ, ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ:05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರಲ್ಲಿ ಗಣತಿದಾರರಾಗಿ ರಾಜ್ಯಾದ್ಯಂತ ಸಮೀಕ್ಷಾ ಕಾರ್ಯನಿರ್ವಹಿಸಿದ ಪ್ರತಿ ಸಮೀಕ್ಷಾದಾರರಿಗೆ ಪ್ರಥಮ ಹಂತದಲ್ಲಿ 1 ನೇ ಕಂತಿನಲ್ಲಿ ತಲಾ ರೂ.3000/- ಗಳ ಸಂಭಾವನೆಯಂತೆ ಒಟ್ಟು ರೂ.17,28,00,000/- ಗಳನ್ನು 1 ನೇ ಕಂತಿನಲ್ಲಿ ಪಾವತಿಸಲು ಈ ಕೆಳಕಂಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಿ.ಓ ಕೋಡ್ ಗಳಿಗೆ ಬಿಡುಗಡೆ ಮಾಡಲು ಹಾಗೂ ಉಳಿದ ಬಾಕಿ ಮೊತ್ತವನ್ನು 2ನೇ ಕಂತಿನಲ್ಲಿ ಬಿಡುಗಡೆ ಮಾಡಲು ಪ್ರಸ್ತಾಪಿಸಲಾಗಿದೆ.


ಮೇಲ್ಕಂಡ ಮೊತ್ತವನ್ನು ಜಿಲ್ಲಾಧಿಕಾರಿಗಳ ಸಿ.ಓ ಕೋಡ್ಗಳಿಗೆ ಬಿಡುಗಡೆ ಮಾಡಲು ಹಾಗೂ ಈ ವೆಚ್ಚದ ಬಾಬನ್ನು ಉಲ್ಲೇಖ (5) ರ ಸರ್ಕಾರದ ಆದೇಶದಲ್ಲಿ 2025-26 ನೇ ಸಾಲಿನ ಪರಿಶಿಷ್ಟ ಜಾತಿಯವರ ಅಭಿವೃದ್ಧಿ ಯೋಜನೆ ರಾಜಶ್ವ ಲೆಕ್ಕ ಶೀರ್ಷಿಕೆ 2225-01-796-0-02 (059) ໖ ನಾಗಮೋಹನ್ ದಾಸ್ ಆಯೋಗದ ನಿರ್ವಹಣಾ ವೆಚ್ಚ ಮತ್ತು ಒಳ ಮೀಸಲಾತಿ ಸಮೀಕ್ಷಾ ವೆಚ್ಚಕ್ಕೆ ಈವರೆಗೆ ಬಿಡುಗಡೆ ಮಾಡಲಾಗಿರುವ ರೂ.37.00 ಕೋಟಿ ಅನುದಾನದಲ್ಲಿ ಭರಿಸಲು ನಿರ್ಧರಿಸಿರುವುದರಿಂದ ಈ ಕೆಳಕಂಡಂತೆ ಆದೇಶ.
ಸಂಖ್ಯೆ:ಸಕನಿ/ಸಿಬ್ಬಂದಿ/ಲೇಸಾ/ಸಿಆರ್-21/2025-26
ದಿನಾಂಕ15-08-2025
ಆದೇಶ
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಮಧಂತರ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ: 05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರಲ್ಲಿ ಗಣತಿದಾರರಾಗಿ ರಾಜ್ಯಾದ್ಯಂತ ಸಮೀಕ್ಷಾ ಕಾರ್ಯನಿರ್ವಹಿಸಿದ ಪ್ರತಿ ಸಮೀಕ್ಷಾದಾರರಿಗೆ 1 ನೇ ಕಂತಿನಲ್ಲಿ ರೂ.3000/- ಗಳ ಸಂಭಾವನೆಯಂತೆ ಒಟ್ಟು ರೂ.17,28,00,000/- ಗಳನ್ನು ಪಾವತಿಸಲು ಈ ಕೆಳಕಂಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಿ.ಓ ಕೋಡ್ಗಳಿಗೆ ಬಿಡುಗಡೆ ಮಾಡಿ ಆದೇಶಿಸಿದೆ.


ಮೇಲ್ಕಂಡ ಬಾಬನ್ನು 2025-26 ನೇ ಸಾಲಿನ ಪರಿಶಿಷ್ಟ ಜಾತಿಯವರ ವಿವಿಧ ಅಭಿವೃದ್ಧಿ ಯೋಜನೆ ರಾಜಸ್ವ ಲೆಕ್ಕ ಶೀರ್ಷಿಕೆ:2225-01-796-0-02 (059) ರಡಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ನಿರ್ವಹಣಾ ವೆಚ್ಚ ಮತ್ತು ಒಳ ಮೀಸಲಾತಿ ಸಮೀಕ್ಷಾ ವೆಚ್ಚಕ್ಕೆ ಬಿಡುಗಡೆ ಮಾಡಲಾಗಿರುವ ಅನುದಾನದಲ್ಲಿ ಭರಿಸುವುದು.
ಇದನ್ನೂ ನೋಡಿ…..ನವೋದಯ ಪ್ರವೇಶ ಪರೀಕ್ಷೆ -2025 ಅರ್ಜಿ ಸಲ್ಲಿಸುವ ಕೊನೆ ದಿನಾಂಕ:27-08-2025 ರ ವರೆಗೆ ವಿಸ್ತರಣೆ