ಶಾಲಾ ಶಿಕ್ಷಣ ಇಲಾಖೆಯಿಂದ ಅನುಷ್ಟಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಸುಧಾರಣೆ ಕುರಿತು.ಜ್ಞಾಪನ ದಿನಾಂಕ:01-08-2025
ಶಾಲಾ ಶಿಕ್ಷಣ ಇಲಾಖೆಯಿಂದ ಅನುಷ್ಟಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಸುಧಾರಣೆ ಕುರಿತು.ಜ್ಞಾಪನ ದಿನಾಂಕ:01-08-2025:
ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಬದ್ಧತೆಯನ್ನು ಹೊಂದಿದ್ದು, ಈ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದಲ್ಲಿ, ಹಂತದಿಂದ ರಾಜ್ಯ ಹಂತದವರೆಗೆ ಎಲ್ಲಾ ಸ್ತರದ ಆಡಳಿತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿಯನ್ನು ಉತ್ತಮಗೊಳಿಸಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಹ
ಪರಿಶೀಲನಾ ಆದರೆ, ವಿವಿಧ ಹಂತದಲ್ಲಿ ಆಯೋಜಿಸಲಾಗುವ ಪ್ರಗತಿ ಸಭೆಗಳಲ್ಲಿ, ವಿವೇಚನಾಯುಕ್ತವಾಗಿ ಅವಲೋಕಿಸಿದ ಸಂದರ್ಭಗಳಲ್ಲಿ ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ ದಾಖಲಾತಿ, ನಿರಂತರ ಹಾಜರಾತಿ ಹಾಗೂ ಮಾಹಿತಿಗಳನ್ನು ಪರಿಶೀಲಿಸಿದಾಗ, ವಿದ್ಯಾರ್ಥಿಗಳ ಕಾರ್ಯಕ್ರಮಗಳ ಅನುಷ್ಟಾನವು ಇನ್ನೂ ಹೆಚ್ಚು ಪರಿಣಾಮಕಾರಿಯಾಗಬೇಕಾಗಿರುವುದನ್ನು ಗಮನಿಸಲಾಗಿದೆ. ಇದು ಪರಿಣಾಮಕಾರಿಯಾಗಿ ಜಾರಿಯಾದಲ್ಲಿ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಲಿದೆ.
ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕಾ ಅನುಷ್ಠಾನಗೊಳಿಸಲಾಗುತ್ತಿರುವ ಎಲ್ಲಾ ಗುಣಮಟ್ಟವನ್ನು ಹೆಚ್ಚಿಸಲು ಸಮರ್ಪಕವಾಗಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳಿಗೆ ತಲುಪುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕೆಳಕಂಡ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳಲು ಸೂಚನೆ ನೀಡಲಾಗಿದೆ :
ಆಡಳಿತಾತ್ಮಕ :
ದಾಖಲಾತಿಗೆ ಸ್ಯಾಟ್ಸ್ ತಂತ್ರಾಂಶದಲ್ಲಿ ಕೆಲವೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಬಂಧಿಸಿದಂತೆ ನಮೂದಿಸಲಾಗಿರುವ ಅಂಕಿ-ಅಂಶಗಳು ವಾಸ್ತವ ದಾಖಲಾತಿಗಿಂತಲೂ ಅಧಿಕವಾಗಿರುವುದನ್ನು ಗಮನಿಸಲಾಗಿದೆ. ಕೇವಲ ದಾಖಲಾತಿ ಒಂದೇ ಅಲ್ಲದೇ ಇತರೆ ಯಾವುದೇ ಅಂಕಿ-ಅಂಶಗಳನ್ನು ಸಹ ತಂತ್ರಾಂಶದಲ್ಲಿ ನಮೂದಿಸುವಾಗ ನಿಖರತೆಯನ್ನು ಕಾಯ್ದು ಕೊಳ್ಳುವುದು.
ಸ್ಯಾಟ್ಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಇಂದೀಕರಿಸುವಾಗ ಪ್ರತಿಯೊಂದು ವ್ಯವಹರಣೆಯಲ್ಲಿ ಸಕ್ಷಮ ಪ್ರಾಧಿಕಾರಿಗಳಲ್ಲದ ಇತರೇ ವ್ಯಕ್ತಿಗಳಿಂದ ನಿರ್ವಹಿಸುತ್ತಿರುವದನ್ನು ಗಮನಿಸಲಾಗಿದೆ. ಇದನ್ನು ಸರಿಪಡಿಸಲು OTP ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೂ ಸಹ, ಕೆಲವು ಶಾಲೆಗಳಲ್ಲಿ ಇಂದೀಕರಣ ಕಾರ್ಯವನ್ನು ಬೇರೆ ವ್ಯಕ್ತಿಗಳಿಂದ ಮಾಡಲಾಗುತ್ತಿರುವುದನ್ನು ಗಮನಿಸಿದೆ. ಇದು ಸರಿಯಾದ ಕ್ರಮವಲ್ಲ. ತಂತ್ರಾಂಶ ಹಾಗೂ ಅಂಕಿ-ಅಂಶಗಳ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯವು ಸಕ್ಷಮ ಅಧಿಕಾರ ಹೊಂದಿರುವ ವ್ಯಕ್ತಿಗಳು ಮಾತ್ರ ವ್ಯವಹರಿಸಬೇಕು.
ಬೇರೆ ಮೂಲಕ ವ್ಯಕ್ತಿಗಳ ವಿದ್ಯಾರ್ಥಿಗಳ ಮಾಹಿತಿಯನ್ನು ಇಂದೀಕರಿಸುವುದಾಗಲೀ ಅಥವಾ ತಂತ್ರಾಂಶ ಬಳಕೆಯನ್ನು ಮಾಡುವುದಾಗಲೇ. ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿ / ಸಿಬ್ಬಂದಿ ವರ್ಗದವರ ಮೇಲೆ ನಿಯಮಾನುಸಾರ. ಶಿಸ್ತು ಕ್ರಮ ಜರುಗಿಸಲು ಸೂಚಿಸಿದೆ.
ಸಿಆರ್‌ಸಿ ಗಳು ಶಾಲೆಗಳ ನಿಗದಿಪಡಿಸಿರುವ ವೇಳಾ ಪಟ್ಟಿಯಂತೆ ಶಾಲೆಗಳ ಶೈಕ್ಷಣಿಕ ತಪಾಸಣೆಯು ನಿಯಮಿತವಾಗಿ ಕೈಗೊಳ್ಳದೇ ಇರುವುದನ್ನು ಗಮನಿಸಲಾಗಿದೆ. ಉಪನಿರ್ದೆಶಕರು (ಆಡಳಿತ), (ಅಭಿವೃದ್ಧಿ). ಬಿಇಒ, ವಿಷಯ ಪರಿವೀಕ್ಷಕರು ಬಿಆರ್‌ಪಿ, ಸಿಆರ್‌ಪಿ ಹಾಗೂ ಶೈಕ್ಷಣಿಕ ತಪಾಸಣೆಯನ್ನು ಕಡ್ಡಾಯವಾಗಿ ನಿಯಮಿತವಾಗಿ ಕೈಗೊಳ್ಳುವುದು. ಈ ಸಂಬಂಧ ಜಿಲ್ಲಾ ನೋಡಲ್ ಅಧಿಕಾರಿಗಳು ಕಾಲಕಾಲಕ್ಕೆ ಮೇಲ್ವಿಚಾರಣ ನಡೆಸಿ ಅಗತ್ಯ ಸಲಹೆ ನೀಡಲು ಸೂಚಿಸಿದೆ. ತಪಾಸಣೆಯನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿರುವ Inspection App ಮೂಲಕವೇ ನಡೆಸುವುದು.
ವಿದ್ಯಾರ್ಥಿಗಳಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ಮಧ್ಯಾಹ್ನ ಉಪಹಾರದೊಂದಿಗೆ ಪೂರಕ ಪೌಷ್ಠಿಕ ಆಹಾರವಾಗಿ ವಾರದ ಆರು ದಿನಗಳಿಗೆ ವಿದ್ಯಾರ್ಥಿಗಳಿಗೆ ಮೊಟ್ಟೆ / ಬಾಳೆ ಹಣ್ಣನ್ನು ವಿತರಿಸಲಾಗುತ್ತಿದೆ. ಆದರೆ, ಹಲವು ಶಾಲೆಗಳಲ್ಲಿ ಸ್ಯಾಟ್ಸ್ ತಂತ್ರಾಂಶದಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದಾಗ, ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ ಪೂರಕ ಪೌಷ್ಟಿಕ ಆಹಾರದ ವಿತರಣೆಯ ಸಂಖ್ಯೆಯು ಹೆಚ್ಚಾಗಿರುವುದು ಕಂಡು ಬಂದಿರುತ್ತದೆ. ಇದರಿಂದ ಸರ್ಕಾರಕ್ಕೆ ಅನಾವಶ್ಯಕ ಆರ್ಥಿಕ ಹೊರೆಯಾಗುವುದಲ್ಲದೇ, ಕಾರ್ಯಕ್ರಮದ ಮೂಲ ಉದ್ದೇಶವು ಈಡೇರಿದಂತಾಗುವುದಿಲ್ಲ.
ಮುಂದುವರೆದು, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪೂರಕ ಪೌಷ್ಟಿಕ ಆಹಾರದ ಪ್ರತಿದಿನದ ಬಳಕೆಯ ವಿವರಗಳನ್ನು ನಿಖರವಾಗಿ ಇಂದೀಕರಿಸಿದಲ್ಲಿ ಮಾತ್ರ, Details of actual consumption of SNF by the students ಹಾಗೂ ಇದರ ಆಧಾರದ ಮೇಲೆ ಅನುದಾನದ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಮಧ್ಯಾಹ್ನ ಉಪಹಾರವು ಅತ್ಯಂತ ಪ್ರಮುಖವಾದ ಯೋಜನೆಯಾಗಿರುತ್ತದೆ. ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಹಾಗೂ ಯಾವುದೇ ಬಾಧಕಗಳಿಲ್ಲದೇ ವಿತರಿಸಲಾಗುವ ನಿರ್ವಹಣೆಯಿಂದ ಅನುಷ್ಠಾನಗೊಳಿಸಬೇಕಾಗಿರುತ್ತದೆ.
ಸಾಮಾಗ್ರಿಗಳ ದಾಸ್ತಾನು ಕುರಿತ ಆದರೆ, ಯೋಜನೆಯಡಿ ಮಾಹಿತಿಗಳ ಅಸಮರ್ಪಕ ದಾಸ್ತಾನುಗಳ ಶೇಖರಣೆಯಲ್ಲಿ ವ್ಯತ್ಯಾಸವುಂಟಾಗುತ್ತದೆ, ಇದರಿಂದ ಯೋಜನೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಕ್ಷರ ದಾಸೋಹ ಅಧಿಕಾರಿಗಳು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ, ದಾಸ್ತಾನು ಲಭ್ಯತೆಯ ಕುರಿತು ಖಚಿತಪಡಿಸಿಕೊಳ್ಳುವುದು ಹಾಗೂ ಯಾವುದೇ ಸಾಮಾಗ್ರಿಗಳು ಅನುಪಯುಕ್ತವಾಗದಂತೆ ಎಚ್ಚರಿಕೆ ವಹಿಸುವುದು.
ಸಹಾಯಕ ರಾಜ್ಯದ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷರ ದಾಸೋಹ ನಿರ್ದೇಶಕರುಗಳು, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯವಹಿಸಿ ಯೋಜನೆಯು ಸುಗಮವಾಗಿ ನಡೆಯಲು ಅಗತ್ಯ ಕ್ರಮ ವಹಿಸುವುದು.
ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿರುವ ಆಹಾರದ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳುವುದು. ಈಗಾಗಲೇ ನಿಗದಿಪಡಿಸಿರುವ ಮಾನದಂಡಗಳಂತೆ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿರುವ ಆಹಾರದ ಮಾದರಿಯನ್ನು ಕಾಲಕಾಲಕ್ಕೆ ಪರಿವೀಕ್ಷಣೆಗೆ ಒಳಪಡಿಸಿ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಶಾಲೆಗಳಲ್ಲಿ ಕಲಿಕಾ, ಗುಣಮಟ್ಟವನ್ನು ಸುಧಾರಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಲಭ್ಯತೆ, ಶೌಚಾಲಯ, ಪೀಠೋಪಕರಣ, ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳುವುದು. ಒಂದು ವೇಳೆ, ತಮ್ಮ ವ್ಯಾಪ್ತಿಯ ಯಾವುದೇ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದು ಅಥವಾ ಶಿಥಿಲವಾದ ಕೊಠಡಿಗಳ ದುರಸ್ಥಿಯ ಅಗತ್ಯತೆ: ಕಂಡು ಬಂದಲ್ಲಿ ತಕ್ಷಣವೇ ನಿಯಮಾನುಸಾರ ಪ್ರಸ್ತಾವನೆಯನ್ನು ಸಲ್ಲಿಸುವುದು. ಮುಂದುವರೆದು, ಜಿಲ್ಲಾ ಹಂತದಲ್ಲಿ ಪ್ರತಿಯೊಂದು ಶಾಲೆಯ ಕೊಠಡಿಗಳ ಸದೃಡತೆಯ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಬಂಧಿಸಿದ ಅಭಿಯಂತರರ ಮೂಲಕ ಪರಿಶೀಲನೆ ನಡೆಸಿ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯತಕ್ಕದ್ದು. ತುರ್ತು ದುರಸ್ತಿ ಕಾರ್ಯಗಳನ್ನು SDRF ಅಡಿಯಲ್ಲಿ ಜರುಗಿಸುವುದು.
ಬಳಕೆಗೆ ಯೋಗ್ಯವಲ್ಲವೆಂದು ಕಂಡು ಬಂದಲ್ಲಿ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವುದು ಮತ್ತು ಶಿಥಿಲಗೊಂಡ ಕೊಠಡಿಗಳನ್ನು ನೆಲಸಮಗೊಳಿಸುವ ಕುರಿತು ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪತ್ರ ಪಡೆದು ನಿಯಮಾನುಸಾರ ಸದರಿ ಕೊಠಡಿಗಳನ್ನು ತೆರವುಗೊಳಿಸಿ ನೆಲಸಮ ಮಾಡಲು ಕ್ರಮಕೈಗೊಳ್ಳುವುದು.
ಶಾಲಾ ತರಗತಿಗಳ ಕೊಠಡಿಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯಕ್ಕಾಗಿ ವಿವಿಧ ಯೋಜನೆಗಳಡಿಯಲ್ಲಿ ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆ ಕುರಿತು ಹೆಚ್ಚಿನ ಗಮನ ಹರಿಸುವುದು. ಪ್ರಮುಖವಾಗಿ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ದುರಸ್ತಿಯ ಸಮಯದಲ್ಲಿ ಸಂಬಂಧಿಸಿದ ತಾಂತ್ರಿಕ ಪರಿಣಿತರೊಂದಿಗೆ ನಿಯಮಿತವಾಗಿ ಭೇಟಿ ನೀಡಿ, ವಿಶೇಷವಾಗಿ Columnಗಳ ನಿರ್ಮಾಣ, Beamಗಳ ಅಳವಡಿಕೆ ಹಾಗೂ ಆರ್ ಸಿ ಸಿ ಛಾವಣಿಯ ನಿರ್ಮಾಣದ ಸಮಯದಲ್ಲಿ ಹಾಜರಿದ್ದು, ಗುಣಮಟ್ಟದ ಹಾಗೂ ದೀರ್ಘಕಾಲದವರೆಗೆ ಬಾಳಿಕೆ ಬರುವ ಕಟ್ಟಡ ಸಾಮಾಗ್ರಿಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಎಲ್ಲಾ ಮಾನದಂಡಗಳನ್ನು ಅನುಸರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಹಾಗೂ ಕುರಿತು ಶಾಲಾ ಕಾಂಪೌಂಡ್ ಹಾಗೂ ಶೌಚಾಲಯಗಳ ಅವಶ್ಯಕತೆ ಇರುವ ಶಾಲೆಗಳನ್ನು ಮುಂದಿನ ಒಂದು ವಾರದಲ್ಲಿ ಗುರುತಿಸಿ ನರೇಗಾ ಯೋಜನೆಯಡಿ ನಿರ್ಮಾಣ / ದುರಸ್ತಿ ಕಾರ್ಯ ಕೈಗೊಳ್ಳಲು ಕ್ರಮವಹಿಸುವುದು.
ಶಾಲಾ ಆಸ್ತಿಗಳ ಸಂರಕ್ಷಣೆ ಮತ್ತು ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದ್ದು, ಶಾಲೆ ಹೆಸರಿಗೆ ನೊಂದಾಯಿಸಲು ಬಾಕಿ ಇರುವ ಎಲ್ಲಾ ಪ್ರಕರಣಗಳಲ್ಲಿ ದಾಖಲೆಗಳನ್ನು ನಿಖರವಾಗಿ ಶಾಲೆಗಳ ಹೆಸರಿಗೆ ಪಡೆಯಲು ಅಗತ್ಯ ಕ್ರಮ ವಹಿಸುವುದು. ಈ ಕಾರ್ಯಕ್ರಮವನ್ನು ಆಂದೋಲನದ ರೀತಿಯಲ್ಲಿ ಹಮ್ಮಿಕೊಂಡು ಮುಂದಿನ ಎರಡು ತಿಂಗಳೊಳಗಾಗಿ ಕಡ್ಡಾಯವಾಗಿ ಪೂರ್ಣಗೊಳಿಸತಕ್ಕದ್ದು, ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಹಾಗೂ ಸಹ ನಿರ್ದೇಶಕರು (ಶಾಲಾ ಶಿಕ್ಷಣ), ಆಯುಕ್ತರ ಕಛೇರಿ ಇವರು ಮೇಲ್ವಿಚಾರಣೆ ನಡೆಸಿ ಅನುಪಾಲನೆ ಮಾಡುವುದು.
ಎಸ್.ಎಸ್.ಎಲ್.ಸಿ ಪರೀಕ್ಷಾ ಸಮಯದಲ್ಲಿ ಎಲ್ಲಾ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ ಸಹ ಕೆಲವೊಂದು ಪ್ರಕರಣಗಳಲ್ಲಿ ಸಿ.ಸಿ. ಕ್ಯಾಮರಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದೇ ಇರುವುದು, ಪರೀಕ್ಷೆಗಳು ನಡೆಯುತ್ತಿರುವ ಸಮಯದಲ್ಲಿ ಕೆಟ್ಟುಹೋಗಿರುವುದು, ಸಿ.ಸಿ. ಟಿ.ವಿ ಸೆರೆಹಿಡಿದ ಡಾಟಾ ರೆಕಾರ್ಡಿಂಗ್ ಹಾರ್ಡ್ ಡಿಸ್ಕ್ ನಲ್ಲಿ Save ಆಗದೇ ಇರುವುದು ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಚಿತವಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಸಿ.ಸಿ.ಶ್ಯಾಮರಾಗಳ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು.
ಪರೀಕ್ಷೆ ಸಮಯದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ವೆಬ್ ಕ್ಯಾಸ್ಟಿಂಗ್ ಮಾಡಲು ಅನುವಾಗುವಂತೆ ಸಿದ್ದಪಡಿಸಿಕೊಳ್ಳುವುದು. ಜಿಲ್ಲಾ ನೋಡಲ್ ಅಧಿಕಾರಿಗಳು ಈ ಬಗ್ಗೆ ಉಪನಿರ್ದೇಶಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ನಡೆಸುವುದು.
ಶೈಕ್ಷಣಿಕ :
ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶವು ಬಹಳಷ್ಟು ಜಿಲ್ಲೆಗಳಲ್ಲಿ ಕಡಿಮೆಯಾಗಿರುವುದನ್ನು ಗಮನಿಸಿಲಾಗಿದೆ. ఫలితాలేవు కుందినవాణాలు ಕಾರಣಗಳನ್ನು ವಿಶ್ಲೇಷಿಸಿ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡು 20125-26ನೆ* ಶೈಕ್ಷಣಿಕ ಹಾಗೂ ಮುಂಬರುವ ಸಾಲುಗಳಲ್ಲಿ ಫಲಿತಾಂಶವನ್ನು ಹೆಚ್ಚಿಸುವುದು.
ಸಿ.ಆರ್.ಪಿ., ಬಿ.ಆರ್.ಪಿ, ಬಿ.ಆರ್.ಸಿ., ಹಾಗೂ ಇ.ಸಿ.ಓಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ನಿರಂತರವಾಗಿ ಭೇಟಿ ನೀಡಿ, ಶಾಲಾ ದಾಖಲಾತಿ, ಪೂರಕ ಪೌಷ್ಠಿಕ ಆಹಾರಗಳ ಬಳಕೆ, ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲೆಗಳ ಇಂದೀಕರಣ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಕರಾರುವಕ್ಕಾಗಿ ದಾಖಲಿಸಲು ಮುಖ್ಯೋಪಾಧ್ಯಾಯರೊಂದಿಗೆ ಸಮನ್ವಯವಹಿಸಿ ಎಲ್ಲಾ ದಾಖಲೆಗಳು ಕ್ರಮಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
> ಈಗಾಗಲೇ ಇಲಾಖೆಯಿಂದ ಸಿದ್ಧಪಡಿಸಲಾಗಿರುವ ‘Inspection App’ ತಪಾಸಣಾ ತಂತ್ರಾಂಶವನ್ನು ಎಲ್ಲಾ ಹಂತದ ಭೇಟಿ ಮತ್ತು ತಪಾಸಣಾ ಸಮಯದಲ್ಲಿ ತಪ್ಪದೇ ಅಳವಡಿಸಿಕೊಳ್ಳುವುದು.
ಮುಂದುವರೆದು, ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖೆಯಿಂದ ಹೊರಡಿಸಲಾದ ಮಾರ್ಗಸೂಚಿಯಲ್ಲಿನ ವೇಳಾಪಟ್ಟಿಯಂತೆ ಆಯಾಯ ಮಾಹೆಯಲ್ಲಿ ನಿಗದಿಪಡಿಸಲಾದ ಕಾರ್ಯಗಳನ್ನು ಶಾಲೆಗಳಲ್ಲಿ ಕೈಗೊಳ್ಳಲಾಗುತ್ತಿರುವ ಬಗ್ಗೆ ಪರಿಶೀಲಿಸುವುದು. ತಾಲ್ಲೂಕು ಹಂತದಲ್ಲಿ ಶೈಕ್ಷಣಿಕ ಜವಾಬ್ದಾರಿಗಳನ್ನು ಹೊಂದಿರುವ ಅಧಿಕಾರಿಗಳು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ, ಗ್ರಹಿಕೆಯ ಶಕ್ತಿ ಪಠ್ಯವಸ್ತುವಿನಲ್ಲಿ ಪೂರ್ಣಗೊಳಿಸಿರುವ ಅಭ್ಯಾಸಗಳನ್ನು ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ಅರ್ಥೈಸಿಕೊಂಡಿರುತ್ತಾರೆ ಎನ್ನುವ ಬಗ್ಗೆ ಪರಿಶೀಲಿಸುವುದು. ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಟ ಕಲಿಕಾ ಹಂತವನ್ನು ಸಾಧಿಸುವುದು FLN ಕಡ್ಡಾಯವಾಗಿದ್ದು, ಎಲ್ಲಾ ವಿದ್ಯಾರ್ಥಿಗಳ ಪ್ರಗತಿಯನ್ನು ಕಡ್ಡಾಯವಾಗಿ ಪರಿಶೀಲಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯ FLN ಸಾಧನೆಯನ್ನು ದಾಖಲಿಸುವುದು. ನಿರೀಕ್ಷಿತ ಮಟ್ಟದ ಸಾಧನೆಯನ್ನು ಸಾಧಿಸದೇ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಕ್ಲಿಷ್ಟಕರವಾಗಿ ತೋರುವ ವಿಷಯಗಳ ಕುರಿತು ಸತತವಾಗಿ ಅರ್ಥೈಸಿ ಮನನ ಮಾಡಿಸುವಂತೆ ಹಾಗೂ ಭಾಷಾ ವಿಷಯಗಳಾದ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ವಿಷಯಗಳ ಬರವಣಿಗೆಯನ್ನು ಅಭ್ಯಾಸ ಮಾಡಿಸುವಂತೆ ಸೂಚನೆ ನೀಡುವುದು.
ಪ್ರಸ್ತುತ FLN ಸಾಧನೆ ಆಗದಿರುವುದು ಶೇ 30 ರಿಂದ 35 ರಷ್ಟಿದ್ದು, ಸತತ ಮೇಲ್ವಿಚಾರಣೆ ನಡೆಸಿ ಉತ್ತಮ ಕಲಿಕಾ ಫಲಿತಾಂಶಗಳನ್ನು ಹೊಂದುವ ನಿಟ್ಟಿನಲ್ಲಿ ಕ್ರಮವಹಿಸತಕ್ಕದ್ದು. ಈ ಬಗ್ಗೆ ಡಯಟ್ ಪ್ರಾಂಶುಪಾಲರು ಹಾಗೂ ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿ FLN ಸಾಧನೆಯನ್ನು ಗರಿಷ್ಟಮಟ್ಟಕ್ಕೆ ತಲುಪಿಸಲು ಕ್ರಮವಹಿಸುವುದು.
ಪ್ರಸ್ತತ ಸಾಲಿನಲ್ಲಿ 10ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿರುವುದರಿಂದ, ಹಾಜರಾತಿಯಲ್ಲಿ ನಿರಂತರತೆಯನ್ನು ಕಾಯ್ದುಕೊಂಡು ಪಠ್ಯವಸ್ತುವನ್ನು ಸತತವಾಗಿ ಅಭ್ಯಾಸಿಸಿಕೊಂಡು ಪರಿಣಿತಿ ಸಾಧಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಆದರೆ, ಕೆಲವೊಂದು ತಾಲ್ಲೂಕುಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ವಿದ್ಯಾರ್ಥಿಗಳ ದೀರ್ಘಕಾಲಿಕ ಗೈರುಹಾಜರಾತಿಯು ಕಂಡು ಬಂದಿರುತ್ತದೆ. ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಹಿನ್ನಡೆ ಉಂಟಾಗಲು ಇದೂ ಸಹ ಕಾರಣವಾಗಿರುತ್ತದೆ.
8 ಮತ್ತು 9ನೇ ತರಗತಿಯ ಹಂತದಿಂದಲೇ ವಿದ್ಯಾರ್ಥಿಗಳಿಗೆ ನಿರಂತರ ಹಾಜರಾತಿ ಬಗ್ಗೆ ತಿಳುವಳಿಕೆ ಮೂಡಿಸಿ, ಕಲಿಕೆಯ శురితు ಅರಿವು ಮೂಡಿಸುವುದು ಹಾಗೂ ಪಠ್ಯವಸ್ತುವಿನ ಯಾವುದಾದರೂ ಪಾಠಗಳು ಕಷ್ಟಕರವೆನಿಸಿದಲ್ಲಿ, ಅಂತಹ ಪಾಠಗಳನ್ನು ಮತ್ತೊಮ್ಮೆ ಪುನರ್ ಮನನ ಮಾಡಿಸುವುದು ಹಾಗೂ ವಿಶೇಷವಾಗಿ ಗಣಿತ, ವಿಜ್ಞಾನ ಮತ್ತು ಆಂಗ್ಲ ಭಾಷಾ ವಿಷಯಗಳ ಕುರಿತು ಹೆಚ್ಚಿನ ಒತ್ತು ನೀಡಿ ಮನದಟ್ಟು ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡುವುದು. ಇದರಿಂದ ವಿದ್ಯಾರ್ಥಿಗಳು 10 ತರಗತಿಯ ಪರೀಕ್ಷೆಯನ್ನು ಸುಲಲಿತವಾಗಿ ಆತ್ಮವಿಶ್ವಾಸದಿಂದ ಬರೆಯಲು ಅನುಕೂಲವಾಗುತ್ತದೆ. ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯ ಕುರಿತು ವಿಶೇಷ ಗಮನ ಹರಿಸುವುದು. ರೂಪಣಾತ್ಮಕ ಹಾಗೂ ಸಂಕಲನಾತ್ಮಕ (Formative and Summative Assessment) ಮೌಲ್ಯಮಾಪನಗಳಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪದೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರುಗಳಿಗೆ ಕ್ಲಿಷ್ಟಕರವೆಂದು ಕಂಡುಬರುವ ಅಭ್ಯಾಸಗಳನ್ನು ಪುನರ್ ಮನನ ಮಾಡಿಸಿ ವಾರ್ಷಿಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಬರೆಯಲು ಸಜ್ಜುಗೊಳಿಸುವುದು. ಸಕಾಲದಲ್ಲಿ ಪಠ್ಯವಸ್ತುವಿನ ಎಲ್ಲಾ ಅಭ್ಯಾಸಗಳ ಬೋಧನೆಯನ್ನು ಪೂರ್ಣಗೊಳಿಸಿ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಪಠ್ಯಗಳ ಪುನರ್ ಮನನ ಮಾಡಿಸುವುದು. ಈ ಹಿಂದಿನ ಸಾಲುಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಧಿಸಲಾದ ಶೇಕಡವಾರು ಪರೀಕ್ಷಾ ಫಲಿತಾಂಶಕ್ಕಿಂತಲೂ ಹೆಚ್ಚಿನ ಫಲಿತಾಂಶವನ್ನು ಸಾಧಿಸಲು ಅಗತ್ಯ ಕ್ರಮ ವಹಿಸುವುದು.
ವಿಶೇಷವಾಗಿ ವಿಷಯ ಪರಿವೀಕ್ಷಕರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಸಮೀಕ್ಷೆ ನಡೆಸಿ, ಕಲಿಕೆಯಲ್ಲಿ ಹಿಂದುಳಿದ ಶಾಲೆಗಳನ್ನು ಗುರುತಿಸಿ, ಮುಖ್ಯೋಪಾಧ್ಯಾಯರೊಂದಿಗೆ ಸಮನ್ವಯವಹಿಸಿ ಕಲಿಕಾ ಗುಣಮಟ್ಟವನ್ನು ಉತ್ತಮಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿ ಫಲಿತಾಂಶವನ್ನು ಉತ್ತಮಪಡಿಸಲು ಕ್ರಮಕೈಗೊಳ್ಳುವುದು. ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಬಿಇಒ, ವಿಷಯ ಪರಿವೀಕ್ಷಕರು ಬಿಆರ್‌ಪಿ, ಹಾಗೂ ಸಿಆರ್‌ಪಿ ಗಳೊಂದಿಗೆ ನಿಯಮಿತವಾಗಿ ಭೇಟಿ ನೀಡಿ, ನ್ಯೂನತೆಗಳಿದ್ದಲ್ಲಿ ಸರಿಪಡಿಸಿ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಜಿಲ್ಲಾ ಉಪನಿರ್ದೇಶಕರಿಗೆ ವರದಿ ಸಲ್ಲಿಸುವುದು.
ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಅಂಶವಾರು ಟಿಪ್ಪಣಿಯನ್ನು ತಮ್ಮ ವ್ಯಾಪ್ತಿಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿದ್ಧಪಡಿಸಿ ಮಾಹೆಯಾನ ವರದಿಯನ್ನು ಸಲ್ಲಿಸುವುದು. ತಾವುಗಳು ವರದಿಯಲ್ಲಿನ ಅಂಶಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಸುಧಾರಣೆಯ ಅವಶ್ಯಕತೆ ಇದ್ದಲ್ಲಿ ಅಗತ್ಯ
ಸೂಚನೆ ನೀಡುವುದು ಹಾಗೂ ಯಾವುದಾದರೂ ಸುಧಾರಣೆಗಳು ಮಾದರಿಯೆಂದು ಕಂಡು ಬಂದಲ್ಲಿ ಅಂತಹ ವಿಷಯವನ್ನು ರಾಜ್ಯಾದ್ಯಂತ ಅಳವಡಿಸಿಕೊಳ್ಳಲು ಪ್ರಸ್ತಾವನೆಯನ್ನು ಸಹ ನಿರ್ದೇಶಕರು (ಶಾಲಾ ಶಿಕ್ಷಣ), ಆಯುಕ್ತರ ಕಛೇರಿ, ಬೆಂಗಳೂರು, ಇವರಿಗೆ ಸಲ್ಲಿಸುವುದು.
ಇಲಾಖೆಯಿಂದ ಕಾಲಕಾಲಕ್ಕೆ ಹಮ್ಮಿಕೊಳ್ಳಲಾಗುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮೇಲ್ಕಂಡ ಎಲ್ಲಾ ಅಂಶಗಳ ಮೇಲೆ ಕೈಗೊಂಡ ಕ್ರಮಗಳು ಹಾಗೂ ಸಾಧಿಸಲಾದ ಪ್ರಗತಿಯನ್ನು ಪರಿಶೀಲಿಸಲಾಗುವುದು.ಎಂದು ಜ್ಞಾಪನದಲ್ಲಿ ತಿಳಿಸಲಾಗಿದೆ.