50% discount on 5 BE courses: 5 ಬಿಇ ಕೋರ್ಸ್‌ಗೆ ಶೇ.50 ರಿಯಾಯಿತಿ|ಕಂಪ್ಯೂಟರ್ ಸೈನ್ಸ್‌ ಕೋರ್ಸ್‌ಗಳಿಗೆ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಉತ್ತೇಜನ

50% discount on 5 BE courses: 5 ಬಿಇ ಕೋರ್ಸ್‌ಗೆ ಶೇ.50 ರಿಯಾಯಿತಿ|ಕಂಪ್ಯೂಟರ್ ಸೈನ್ಸ್‌ ಕೋರ್ಸ್‌ಗಳಿಗೆ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಉತ್ತೇಜನ

50% discount on 5 BE courses: 2025-26ನೇ ಶೈಕ್ಷಣಿಕ ಸಾಲಿನ ವೃತ್ತಿಪರ ಇಂಜಿನಿಯರಿಂಗ್/ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶಾತಿ ಶುಲ್ಕ ಮತ್ತು ಸೀಟು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸುವ ಕುರಿತು.

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ಅಧಿನಿಯಮ, 2015 (Act No.39 of 2015)ರಲ್ಲಿನ ಪ್ರಕರಣ 4(ಎ) ಮತ್ತು 4(ಬಿ) ರಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗಧಿಯ ಸಂಬಂಧವಾಗಿ ಸರ್ಕಾರವು, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ/ಪ್ರತಿನಿಧಿಗಳೊಂದಿಗೆ ಸಮ್ಮತಾಭಿಪ್ರಾಯದ ಒಪ್ಪಂದಕ್ಕೆ/ಒಡಂಬಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರಂತೆ 2024-25ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು/ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ(ಯು.ವಿ.ಸಿ.ಇ)/ಮೈಸೂರು ವಿಶ್ವವಿದ್ಯಾಲಯ (ಶೇ.50ರಷ್ಟು ಸೀಟುಗಳು)/ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳು/ಖಾಸಗಿ ಅನುದಾನಿತ/ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಪ್ರವೇಶಾತಿ ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸಿ, ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3) ರಂತೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ/ವಿಶ್ವವಿದ್ಯಾಲಯ/ಖಾಸಗಿ ಅನುದಾನಿತ/ ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ, ಸೀಟು ಹಂಚಿಕೆ ಪ್ರಮಾಣ ಮತ್ತು ಶುಲ್ಕ ನಿಗದಿಯ ಬಗ್ಗೆ ದಿನಾಂಕ:09.05.2025ರಂದು ಮಾನ್ಯ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿರುತ್ತದೆ. ಸದರಿ ಸಭೆಯಲ್ಲಿನ ನಿರ್ಣಯದ ಹಿನ್ನೆಲೆಯಲ್ಲಿ, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ/ ಪ್ರತಿನಿಧಿಗಳಾದ ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ (KUPECA), ಕರ್ನಾಟಕ ರಾಜ್ಯ ಮತೀಯ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘ (KRLMPCA) ಮತ್ತು ಅಸೋಸಿಯೇಷನ್ ಆಫ್ ಮೈನಾರಿಟಿ ಪ್ರೊಫೆಷನಲ್ ಕಾಲೇಜ್ ಇನ್ ಕರ್ನಾಟಕ (AMPCK) ಸಂಘಗಳ ಪದಾಧಿಕಾರಿಗಳೊಂದಿಗೆ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ನಿಗಧಿಪಡಿಸಿರುವ ಬೋಧನಾ ಶುಲ್ಕದ ಮೇಲೆ ಶೇ.7.5 ರಷ್ಟು ಹೆಚ್ಚಿಸಲು ಸರ್ಕಾರದಿಂದ ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿರುತ್ತದೆ.

KUPECA ಸಂಘದೊಂದಿಗೆ ಮಾಡಿಕೊಂಡಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಎಐಸಿಟಿಇ, ನವದೆಹಲಿ ಇವರಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ.45 ರಷ್ಟು ಪ್ರಮಾಣದ ಸೀಟುಗಳನ್ನು KUPECA ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದು, ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹಾಗೂ ಶೇ.30 ರಷ್ಟು ಸೀಟುಗಳನ್ನು ಕಾಮೆಡ್-ಕೆ ಪರೀಕ್ಷೆಯ ಮೆರಿಟ್ ಪಟ್ಟಿಯಂತೆ ಹಾಗೂ ಶೇ.15 ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ/ಅನಿವಾಸಿ ಭಾರತೀಯ ಪ್ರಾಯೋಜಕತ್ವದಿಂದ (NRI/NRI Sponsored) ಮತ್ತು ಶೇ.10 ರಷ್ಟು ಸೀಟುಗಳನ್ನು ಪಾರದರ್ಶಕ ಅಧಿಸೂಚನೆ ಮೂಲಕ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಪ್ರವೇಶಾತಿ ಮಾಡಬೇಕಾಗಿರುತ್ತದೆ.

ಅದೇ ರೀತಿ, KRLMPCA ಹಾಗೂ AMPCK ಪದಾಧಿಕಾರಿಗಳೊಂದಿಗೆ ಮಾಡಿಕೊಂಡಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಎಐಸಿಟಿಇ, ನವದೆಹಲಿ ಇವರಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ.40 ರಷ್ಟು ಪ್ರಮಾಣದ ಸೀಟುಗಳನ್ನು KRLMPCA ಹಾಗೂ AMPCK ಸರ್ಕಾರಕ್ಕೆ ಬಿಟ್ಟುಕೊಡಲಾಗಿದ್ದು, ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಹಾಗೂ ಶೇ.30 ರಷ್ಟು ಸೀಟುಗಳನ್ನು KRLMPCA ಹಾಗೂ AMPCK ವತಿಯಿಂದ ನಡೆಸುವ ಪ್ರವೇಶ ಪರೀಕ್ಷೆಯ ಮೆರಿಟ್ ಪಟ್ಟಿಯಂತೆ ಪ್ರವೇಶಾತಿ ಮಾಡಬೇಕು. ಶೇ.20 ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ / ಅನಿವಾಸಿ ಭಾರತೀಯ ಪ್ರಾಯೋಜಕತ್ವದಿಂದ (NRI/NRI Sponsored) ಮತ್ತು ಶೇ.10 ರಷ್ಟು ಪಾರಕರ್ಶಕ ಅಧಿಸೂಚನೆ ಮೂಲಕ ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಪ್ರವೇಶಾತಿ ಮಾಡಬೇಕಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4) ರ ಆದೇಶದಲ್ಲಿ 2024-25ನೇ ಶೈಕ್ಷಣಿಕ ಸಾಲಿನಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಅಧೀನದ ಘಟಕ ಕಾಲೇಜುಗಳಲ್ಲಿ ನಡೆಸುತ್ತಿರುವ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳ ಶೇ.100 ರಷ್ಟು ಸೀಟುಗಳ ಪೈಕಿ ಶೇ.50 ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಾಗೂ ಉಳಿದ ಶೇ. 50ರಷ್ಟು ಸೀಟುಗಳಿಗೆ ಸರ್ಕಾರವು ಖಾಸಗಿ ಕಾಲೇಜುಗಳಿಗೆ ಗೊತ್ತುಪಡಿಸಿದ ಶುಲ್ಕವನ್ನು ನಿಗಧಿಪಡಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5) ರ ಆದೇಶದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಅನುಮೋದಿತ ಪ್ರವೇಶಾತಿಯ 50% ಕ್ಕಿಂತ ಕಡಿಮೆ ಪ್ರವೇಶಾತಿ ದಾಖಲಾಗುತ್ತಿರುವ ಕೆಳಕಂಡ ಕೋರ್ಸುಗಳ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನಿಂದ 50% ರಷ್ಟು ಶುಲ್ಕ ವಿನಾಯಿತಿ ನೀಡಲಾಗಿದೆ.

1) Mechanical Engineering

2) Textile Technology

3) Automobile Engineering

4) Silk Technology

5) Civil Engineering

ಮುಂದುವರಿದು, 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು/ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ)/ ಮೈಸೂರು ವಿಶ್ವವಿದ್ಯಾಲಯ (ಶೇ.50 ರಷ್ಟು ಸೀಟುಗಳು) / ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು (ಶೇ.50 ರಷ್ಟು ಸೀಟುಗಳು) ಮತ್ತು ಸ್ನಾತಕೋತ್ತರ ಕೇಂದ್ರಗಳು / ಖಾಸಗಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು / ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಭರಿಸಬೇಕಾದ ಬೋಧನಾ ಶುಲ್ಕದಲ್ಲಿ ಶೇ. 5 ರಷ್ಟು ಮಾತ್ರ ಹೆಚ್ಚಿಸಲು ತೀರ್ಮಾನಿಸಿದೆ. ಅನುದಾನರಹಿತ ಕಾಲೇಜುಗಳಿಗೆ ಸಂಬಂಧಿಸಿದಂತೆ ಸಮ್ಮತಾಭಿಪ್ರಾಯದ ಒಪ್ಪಂದದಂತೆ 7.5% ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.

ಅನುದಾನರಹಿತ ಕಾಲೇಜುಗಳು ಮಾತ್ರ ವರ್ಷಕ್ಕೆ ಇತರೆ ಶುಲ್ಕ ರೂ.20,000/-ಗಳನ್ನು ಮೀರದಂತೆ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಪಡೆಯಲು, ತದನಂತರದ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಯವರು ಇತರೆ ಶುಲ್ಕವನ್ನು ಪಡೆಯುವ ಬಗ್ಗೆ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಆದೇಶದ ವಿವರ:

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು, 2025-26ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು/ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ)/ ಮೈಸೂರು ವಿಶ್ವವಿದ್ಯಾಲಯ (ಶೇ.50 ರಷ್ಟು ಸೀಟುಗಳು) / ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಶೇ.50ರಷ್ಟು ಸೀಟುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳು / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಪ್ರವೇಶಾತಿ ಶುಲ್ಕ (ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ, ಇತರೆ ಶುಲ್ಕ) ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ಅನುಬಂಧದಲ್ಲಿರುವಂತೆ ಕೆಳಕಂಡ ಷರತ್ತು ಮತ್ತು ಸೀಟುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳು / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಪ್ರವೇಶಾತಿ ಶುಲ್ಕ (ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ, ಇತರೆ ಶುಲ್ಕ) ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ಅನುಬಂಧದಲ್ಲಿರುವಂತೆ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ನಿಗದಿಪಡಿಸಿ, ಆದೇಶಿಸಿದೆ

ಷರತ್ತು ಮತ್ತು ನಿಬಂಧನೆಗಳು:

1) ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು / ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳು/ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ) / ಖಾಸಗಿ ಅನುದಾನಿತ ಇಂಜಿನಿಯರಿಂಗ್ ಕಾಲೇಜು/ಖಾಸಗಿ ಅನುದಾನರಹಿತ (ಅಲ್ಪಸಂಖ್ಯಾತ ಹಾಗೂ ಅಲ್ಪಸಂಖ್ಯಾತವಲ್ಲದ) ಇಂಜಿನಿಯರಿಂಗ್ ಕಾಲೇಜುಗಳಲ್ಲಿ 2.2.2.3.2. ಅನುಮೋದಿಸಿರುವ/ನಿಗಧಿಪಡಿಸಿರುವ ಪ್ರತಿ ಕೋರ್ಸುಗಳ ಒಟ್ಟು ಪ್ರವೇಶ ಮಿತಿಯ ಮೇಲೆ ಶೇ.5 ರಷ್ಟು ಸಂಖ್ಯಾಧಿಕ ಸೀಟುಗಳನ್ನು (Supernumerary Seats (SNQ) ಯಾವುದೇ ಬೋಧನಾ ಶುಲ್ಕವಿಲ್ಲದೆ (Tuition fee waiver schemes) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ರೂ.8.00 ಲಕ್ಷದ ಮಿತಿಯೊಳಗಿರಬೇಕು) ಮೆರಿಟ್ ಆಧಾರದ ಮೇಲೆ ಸೀಟುಗಳನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ, ಹಂಚಿಕೆ ಮಾಡುವುದು.

(ಅ) ರಾಜ್ಯ ಸರ್ಕಾರವು ನಿಗದಿಪಡಿಸಿರುವ ಬೋಧನಾ ಶುಲ್ಕವನ್ನು ಸಂಖ್ಯಾಧಿಕ (SNQ) ಸೀಟುಗಳನ್ನು ಪಡೆದ ಫಲಾನುಭವಿಯು ಭರಿಸತಕ್ಕದ್ದಲ್ಲ. ಆದರೆ, ಈ ಅಭ್ಯರ್ಥಿಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಿಗಧಿಪಡಿಸಿರುವ ಶುಲ್ಕ ರೂ.10,610/-ಗಳನ್ನು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸತಕ್ಕದ್ದು.

(ಆ) ಇದು ಎಐಸಿಟಿಇ ಯೋಜನೆಯಾಗಿದ್ದು, ಈ ಸಂಖ್ಯಾಧಿಕ (SNO) ಸೀಟುಗಳ ಹಂಚಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳು ಪಡೆದ ರಾಂಕ್ (Rank) ಆಧಾರದ ಮೇಲೆ ಮಾತ್ರ ಭರ್ತಿ ಮಾಡತಕ್ಕದ್ದು.

(ಇ) ಸಂಖ್ಯಾಧಿಕ (SNQ) ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಅಂತಹ ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಸೀಟುಗಳಾಗಿ ಮತ್ತು ಇತರೆ ಯಾವುದೇ ಕೋಟಾದ ಸೀಟುಗಳನ್ನಾಗಿ ಪರಿವರ್ತಿಸತಕ್ಕದ್ದಲ್ಲ ಹಾಗೂ ಈ ಪ್ರವೇಶಾತಿಗಳಿಗೆ 2ನೇ ವರ್ಷದ / 3ನೇ ಸೆಮಿಸ್ಟರ್ ಲ್ಯಾಟರಲ್ ಎಂಟ್ರಿ ಪ್ರವೇಶಾತಿಗೆ ಪರಿಗಣಿಸತಕ್ಕದ್ದಲ್ಲ.

(ಈ) ಸಂಖ್ಯಾಧಿಕ (SNQ) ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ರವರಿಗೆ ಪೂರ್ಣ ವಿವರಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಲ್ಲಿಸತಕ್ಕದ್ದು.

(ಉ) ಸಂಖ್ಯಾಧಿಕ (SNQ) ಕೋಟಾದಡಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣದಿಂದಲೂ ಶಿಕ್ಷಣ ಸಂಸ್ಥೆಗಳ ಹಾಗೂ ಕೋರ್ಸುಗಳ ಬದಲಾವಣೆಗೆ ಅವಕಾಶ ಇರತಕ್ಕದ್ದಲ್ಲ.

(ಊ) ಸಂಖ್ಯಾಧಿಕ (SNQ) ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಅಂತರ್ಜಾಲದಲ್ಲಿ ಕೂಡಲೇ ಪ್ರಕಟಿಸತಕ್ಕದ್ದು.

2) ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು/ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು (ಶೇ.50 ರಷ್ಟು ಸೀಟುಗಳಿಗೆ) ಮತ್ತು ಸ್ನಾತಕೋತ್ತರ ಕೇಂದ್ರಗಳು/ಮೈಸೂರು ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ (ಶೇ.50ರಷ್ಟು ಸೀಟುಗಳಿಗೆ ಮಾತ್ರ) ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ ಒಟ್ಟು ಶುಲ್ಕ ರೂ.44,200/-(ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶುಲ್ಕ ರೂ.10,610/-ಗಳನ್ನು ಒಳಗೊಂಡಂತೆ) ಮಾತ್ರ ಪಾವತಿಸತಕ್ಕದ್ದು.

ವಿದ್ಯಾರ್ಥಿ ವ್ಯಾಸಂಗದ ಪ್ರಥಮ ವರ್ಷದ ಸದರಿ ಶುಲ್ಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ದಾಖಲಾತಿ ಸಮಯದಲ್ಲಿ ಪಾವತಿಸತಕ್ಕದ್ದು. ಕಾಲೇಜುವಾರು ನಿಗಧಿಪಡಿಸಿರುವ ವಾರ್ಷಿಕ ಶುಲ್ಕ ಮತ್ತು ವಿಶ್ವವಿದ್ಯಾಲಯದ ಶುಲ್ಕದ ವಿವರಗಳನ್ನು ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕುಲಸಚಿವರು, ಮೈಸೂರು ವಿಶ್ವವಿದ್ಯಾಲಯ ಇವರು ಸಾರ್ವಜನಿಕರ ಮಾಹಿತಿಗಾಗಿ ತಮ್ಮ ಅಧಿಕೃತ ಜಾಲತಾಣದಲ್ಲಿ ಕೂಡಲೇ ಪ್ರಕಟಿಸತಕ್ಕದ್ದು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳ ಸ್ನಾತಕ ಪದವಿ ಕೋರ್ಸುಗಳ ಉಳಿದ ಶೇ.50 ರಷ್ಟು ಸೀಟುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾಗಳಲ್ಲಿ ನಿಗದಿಪಡಿಸಿರುವ ಕನಿಷ್ಠ ಶುಲ್ಕ (Lowe limit fee) ರೂ.81,800 + ಸ್ಕಿಲ್ ಲ್ಯಾಬ್ ಶುಲ್ಕವನ್ನು (ಐಚ್ಛಿಕವಾಗಿ) ಮಾತ್ರ ಪಾವತಿಸತಕ್ಕದ್ದು.

ಸ್ನಾಯತ್ತ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯಕ್ಕೆ (ಯು.ವಿ.ಸಿ.ಇ) ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ ಶುಲ್ಕ ರೂ.49,600/-(ಎಲ್ಲಾ ರೀತಿಯ ಶುಲ್ಕಗಳನ್ನು ಒಳಗೊಂಡಂತೆ ಅನುಬಂಧದಲ್ಲಿ ತಿಳಿಸಿದ ರೀತಿ) ಮಾತ್ರ ಪಾವತಿಸತಕ್ಕದ್ದು, ಬೋಧನಾ ಶುಲ್ಕದ ಮೊತ್ತ ರೂ.32,000/- ಗಳು ಒಳಗೊಂಡಿರುತ್ತದೆ.

ವಿದ್ಯಾರ್ಥಿ ವ್ಯಾಸಂಗದ ಪ್ರಥಮ ವರ್ಷದ ಸದರಿ ಶುಲ್ಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ದಾಖಲಾತಿ ಸಮಯದಲ್ಲಿ ಪಾವತಿಸತಕ್ಕದ್ದು. ಈ ವಾರ್ಷಿಕ ಶುಲ್ಕ ಹಾಗೂ ವಿಶ್ವವಿದ್ಯಾಲಯದ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ) ಅಧಿಕೃತ ಜಾಲತಾಣಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಕೂಡಲೇ ಪ್ರಕಟಿಸತಕ್ಕದ್ದು.

3) ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಅನುದಾನಿತ ಕೋರ್ಸುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಸರ್ಕಾರ ನಿಗಧಿಪಡಿಸಿರುವ ವಾರ್ಷಿಕ ಶುಲ್ಕ, ರೂ. 44,200/-(ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶುಲ್ಕ ರೂ.10,610/- ಗಳನ್ನು ಒಳಗೊಂಡಂತೆ) ಮಾತ್ರ ಪಾವತಿಸತಕ್ಕದ್ದು. ಸದರಿ ಶುಲ್ಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ದಾಖಲಾತಿ ಸಮಯದಲ್ಲಿ ಪಾವತಿಸತಕ್ಕದ್ದು.

ಕಾಲೇಜುವಾರು ನಿಗಧಿಪಡಿಸಿರುವ ವಾರ್ಷಿಕ ಶುಲ್ಕ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಕೂಡಲೇ ಪ್ರಕಟಿಸತಕ್ಕದ್ದು. ಅದೇ ರೀತಿ ಸಂಬಂಧಿತ ಎಲ್ಲಾ ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರುಗಳು ಸಹ ಕೂಡಲೇ ಅವರ ಅಧಿಕೃತ ಜಾಲತಾಣದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ನಿಗಧಿಪಡಿಸಿರುವ ಸೀಟುಗಳ ವಿವರಗಳೊಂದಿಗೆ ಸರ್ಕಾರ ನಿಗಧಿಪಡಿಸಿರುವ ವಾರ್ಷಿಕ ಶುಲ್ಕ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶುಲ್ಕ ರೂ.10,610/-ಗಳ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಕೂಡಲೇ ಪ್ರಕಟಿಸತಕ್ಕದ್ದು.

4) ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಅನುದಾನರಹಿತ ಕೋರ್ಸುಗಳಿಗೆ ಮತ್ತು ಅನುದಾನರಹಿತ ಇಂಜಿನಿಯರಿಂಗ್/ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಯು ಒಟ್ಟು ವಾರ್ಷಿಕ ಶುಲ್ಕ ರೂ.81,800/-* ಅಥವಾ ರೂ.91,000/- ಗಳನ್ನು ಮಾತ್ರ ಪಾವತಿಸತಕ್ಕದ್ದು. ಸದರಿ ಶುಲ್ಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ದಾಖಲಾತಿ ಸಮಯದಲ್ಲಿ ಪಾವತಿಸತಕ್ಕದ್ದು. ಕಾಲೇಜುವಾರು ನಿಗಧಿಪಡಿಸಿರುವ ಈ ವಾರ್ಷಿಕ ಶುಲ್ಕ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಕೂಡಲೇ ಪ್ರಕಟಿಸತಕ್ಕದ್ದು.

ಅದೇ ರೀತಿ ಸಂಬಂಧಿತ ಎಲ್ಲಾ ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ಸಹ ಕೂಡಲೇ ಅವರ ಅಧಿಕೃತ ಜಾಲತಾಣದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ನಿಗಧಿಪಡಿಸಿರುವ ಸೀಟುಗಳ ವಿವರಗಳೊಂದಿಗೆ ಸರ್ಕಾರ ನಿಗಧಿಪಡಿಸಿರುವ ವಾರ್ಷಿಕ ಶುಲ್ಕ ರೂ.81,800/-* ಅಥವಾ ರೂ.91,000/- ಗಳ ಮಾಹಿತಿಯನ್ನು ಸಾರ್ವಜನಿಕ ಮಾಹಿತಿಗಾಗಿ ಕೂಡಲೇ ಪ್ರಕಟಿಸತಕ್ಕದ್ದು.

ಕಾರಣ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು, ಆಡಳಿತ ಮಂಡಳಿ ಕೋಟಾದ COMED-K/KRLMPCA/AMPCK ಪ್ರವೇಶಾತಿಗೆ ವಾರ್ಷಿಕ ರೂ.2,00,000/- ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ, ಆ ಸಂಸ್ಥೆಯಲ್ಲಿನ ಸರ್ಕಾರಿ ಕೋಟಾದ ವಿದ್ಯಾರ್ಥಿಗೆ ವಾರ್ಷಿಕ ರೂ.91,000/- ಗಳು ಬೋಧನಾ ಶುಲ್ಕವಾಗಿರುತ್ತದೆ. ಅದೇ ರೀತಿ, ಆಡಳಿತ ಮಂಡಳಿ ಕೋಟಾದ COMED-K/KRLMPCA ಪ್ರವೇಶಾತಿಗೆ ವಾರ್ಷಿಕ ರೂ.2,81,100/-ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ ಆ ಸಂಸ್ಥೆಯಲ್ಲಿನ ಸರ್ಕಾರಿ ಕೋಟಾದ ವಿದ್ಯಾರ್ಥಿಗೆ ವಾರ್ಷಿಕ ರೂ.81,800/- ಗಳು ಬೋಧನಾ ಶುಲ್ಕವಾಗಿರುತ್ತದೆ.

5) ಸಮ್ಮತಾಭಿಪ್ರಾಯದ ಒಡಂಬಡಿಕೆಯ ಪ್ರಕಾರ, ಆಡಳಿತ ಮಂಡಳಿ ಕೋಟಾದ ಕಾಮೆಡ್-ಕೆ ಪ್ರವೇಶಾತಿಗೆ ಸಂಬಂಧಿಸಿದಂತೆ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ವಾರ್ಷಿಕ ಬೋಧನಾ ಶುಲ್ಕವನ್ನು ರೂ.2,00,000/- ಅಥವಾ ಗರಿಷ್ಠ ರೂ.2,81,100/- ಗಳ ಮಿತಿಗೆ ಒಳಪಟ್ಟು ಮಾತ್ರ ಪಡೆಯತಕ್ಕದ್ದು ಹಾಗೂ ಆಯ್ಕೆ ಮಾಡಿಕೊಂಡಿರುವ ಬೋಧನಾ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಕಾಲೇಜುವಾರು ಕಾಮೆಡ್-ಕೆ ಜಾಲತಾಣದಲ್ಲಿ ಕೂಡಲೇ ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ ರವರು ಪ್ರಕಟಿಸತಕ್ಕದ್ದು.

ಹಾಗೂ ಕಾಮೆಡ್- ಯು ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳು ಆಯ್ಕೆ ಮಾಡಿರುವ ಸೀಟ್‌ಗಳನ್ನು ಸುತ್ತುಗಳವಾರು, ದಿನಾಂಕವಾರು ಕಡ್ಡಾಯವಾಗಿ ಕಾಮೆಡ್-ಕೆ ವೆಬ್‌ಸೈಟ್‌ ನಲ್ಲಿ ಪ್ರಕಟಿಸತಕ್ಕದ್ದು.

ಕಾರಣ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು, ಆಡಳಿತ ಮಂಡಳಿ ಕೋಟಾದ COMED-K/KRLMPCA/AMPCK ಪ್ರವೇಶಾತಿಗೆ ವಾರ್ಷಿಕ ರೂ.2,00,000/-ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ, ಆ ಸಂಸ್ಥೆಯಲ್ಲಿನ ಸರ್ಕಾರಿ ಕೋಟಾದ ವಿದ್ಯಾರ್ಥಿಗೆ ವಾರ್ಷಿಕ ರೂ.91,000/-ಗಳು ಬೋಧನಾ ಶುಲ್ಕವಾಗಿರುತ್ತದೆ.

ಅದೇ ರೀತಿ, ಆಡಳಿತ ಮಂಡಳಿ ಕೋಟಾದ COMED-K/KRLMPCA ಪ್ರವೇಶಾತಿಗೆ ವಾರ್ಷಿಕ ರೂ.2,81,100/-ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ ಆ ಸಂಸ್ಥೆಯಲ್ಲಿನ ಸರ್ಕಾರಿ ಕೋಟಾದ ವಿದ್ಯಾರ್ಥಿಗೆ ವಾರ್ಷಿಕ ರೂ.81,800/-ಗಳು ಬೋಧನಾ ಶುಲ್ಕವಾಗಿರುತ್ತದೆ. ಇಂಜಿನಿಯರಿಂಗ್ ಕೋರ್ಸುಗಳಿಗೆ ಸಂಬಂಧಿಸಿದಂತೆ, ಆಡಳಿತ ಮಂಡಳಿಗಳು ವಿವಿಧ ಕೋರ್ಸುಗಳಿಗೆ/ ವಿಭಾಗಗಳಿಗೆ ವಿವಿಧ ಬೋಧನಾ ಶುಲ್ಕವನ್ನು ನಿಗದಿಪಡಿಸಬಹುದು. ಆದರೆ, ಈ ಬೋಧನಾ ಶುಲ್ಕವು ಮೇಲೆ ತಿಳಿಸಿರುವ ಗರಿಷ್ಠ ಮಿತಿ (Upper Limit) ಒಳಗೆ ಇರಬೇಕು.

6) ಈ ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ KUPECA ಮತ್ತು KRLMPCA ರವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಇತರೆ ಶುಲ್ಕಗಳನ್ನು ಸಂಸ್ಥೆಯವರು ಪಡೆಯುವ ಬಗ್ಗೆ ಪ್ರತಿಬಿಂಬಿಸಿಲ್ಲದ/ಪ್ರಚುರಪಡಿಸಿಲ್ಲದ ಕಾರಣ, 2021-22ನೇ ಶೈಕ್ಷಣಿಕ ಸಾಲಿನಿಂದ ಅನುದಾನರಹಿತ ಕಾಲೇಜುಗಳಿಗೆ ಮಾತ್ರ ಪ್ರತಿ ವಿದ್ಯಾರ್ಥಿಗೆ ಪ್ರತಿ ವರ್ಷಕ್ಕೆ ಇತರೆ ಶುಲ್ಕ ರೂ.20,000/-ಗಳನ್ನು ಮೀರದಂತೆ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಪಡೆಯಲು ಆದೇಶಿಸಲಾಗಿದ್ದು, ಅದೇ ರೀತಿ ಈ ವರ್ಷವು ಸಹ ಅನುಷ್ಠಾನಗೊಳಿಸತಕ್ಕದ್ದು. ಆದರೆ, ಈ ಇತರೆ ಶುಲ್ಕದ item wise break-up ಅನ್ನು ಸಂಬಂಧಿತ ಕಾಲೇಜುಗಳು ಕೂಡಲೇ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರಿಗೆ ಸಲ್ಲಿಸತಕ್ಕದ್ದು.

ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಕಾಲೇಜುವಾರು ಇತರೆ ಶುಲ್ಕದ item wise break-up ನೊಂದಿಗೆ ವಿವರಗಳನ್ನು ಅಧಿಕೃತ ಜಾಲತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸತಕ್ಕದ್ದು. ಅದೇ ರೀತಿ ಸಂಬಂಧಿತ ಎಲ್ಲಾ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರುಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಂತದಲ್ಲಿ ಇತರೆ ಶುಲ್ಕದ ವಸೂಲಾತಿಯ item wise break-up ವಿವರಗಳನ್ನು ಅವರ ಕಾಲೇಜಿನ ಅಧಿಕೃತ ಜಾಲತಾಣದಲ್ಲಿ ಕೂಡಲೇ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸತಕ್ಕದ್ದು. ಈ ಇತರೆ ಶುಲ್ಕವನ್ನು ಹೊರತುಪಡಿಸಿ, ಕಾಲೇಜಿನ ಹಂತದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಆಯ್ಕೆಯಾಗುವ ಎಲ್ಲಾ ವಿದ್ಯಾರ್ಥಿಗಳಿಂದ ಯಾವುದೇ ಇತರೆ ಶುಲ್ಕಗಳನ್ನು ಕಾಲೇಜಿನ ಆಡಳಿತ ಮಂಡಳಿಗಳು ಬೇಡಿಕೆ ಮಾಡತಕ್ಕದ್ದಲ್ಲ ಅಥವಾ ವಸೂಲಾತಿ ಮಾಡಬಾರದು.

7) ಸ್ಕಿಲ್ ಲ್ಯಾಬ್ ಸೌಲಭ್ಯಗಳನ್ನು ಪಡೆಯಬೇಕೆ ಎಂಬುದರ ಬಗ್ಗೆ ನಿರ್ಣಯಿಸಲು ವಿದ್ಯಾರ್ಥಿಗಳ ವಿವೇಚನೆಗೆ ಒಳಪಟ್ಟಿರುತ್ತದೆ ಹಾಗೂ ಇದರ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಂತದಲ್ಲಿ ಯಾವುದೇ ಬೇಡಿಕೆ ಅಥವಾ ಶುಲ್ಕ ವಸೂಲಾತಿ ಮಾಡತಕ್ಕದ್ದಲ್ಲ. ಮುಂದುವರೆದು, ಕಾಲೇಜುಗಳ ಹಂತದಲ್ಲಿ ಸ್ಕಿಲ್ ಲ್ಯಾಬ್ ಇದ್ದು, ಅದರ ಮುಖೇನ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ರೆಡಿಟ್ ನೀಡುತ್ತಿದ್ದರೆ ಮಾತ್ರ ಅಂತಹ ಕಾಲೇಜುಗಳು ಪ್ರಕಟಣೆ ಮುಖಾಂತರ ಆಸಕ್ತಿ ಇರುವ ವಿದ್ಯಾರ್ಥಿಗಳಿಂದ ಮಾತ್ರ ಪ್ರೊಫೆಸರ್ ಕರಿಸಿದ್ದಪ್ಪ ಕಮಿಟಿಯು ವರದಿಯಲ್ಲಿ ನಿಗಧಿಪಡಿಸಿರುವ ಶುಲ್ಕದಂತೆ ತಮ್ಮ ಕಾಲೇಜಿನ ಅಧಿಕೃತ ಜಾಲತಾಣದಲ್ಲಿ ಪ್ರಚುರಪಡಿಸಬಹುದು.

8) ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿಯೇ ಪ್ರತಿ ವಿದ್ಯಾರ್ಥಿಯಿಂದ ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ, ಇತರೆ ಶುಲ್ಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಪಡೆಯತಕ್ಕದ್ದು, ಈ ಸಂಬಂಧ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಮುಂಚಿತವಾಗಿಯೇ ಈಗಾಗಲೇ ಸೂಚಿಸಿರುವಂತೆ ಕಾಲೇಜುವಾರು ಪ್ರಕಟಿಸತಕ್ಕದ್ದು. ಕಾಲೇಜಿನ ಪ್ರಾಂಶುಪಾಲರು ಅಥವಾ ಆಡಳಿತ ಮಂಡಳಿಗಳು ಮುಂದಿನ ದಿನಗಳಲ್ಲಿ ಯಾವುದೇ ಇತರೆ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಬಾರದು.

9) ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಅನುಮೋದಿತ ಪ್ರವೇಶಾತಿಯ 50% ಕ್ಕಿಂತ ಕಡಿಮೆ ಪ್ರವೇಶಾತಿ ದಾಖಲಾಗುತ್ತಿರುವ ಕೆಳಕಂಡ ಕೋರ್ಸುಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ ಸಂಖ್ಯೆ:ED 180 TEC 2025,ದಿನಾಂಕ:26.06.2025 ರಲ್ಲಿ 2025-26 ನೇ ಸಾಲಿನಿಂದ 50% ರಷ್ಟು ಶುಲ್ಕ ವಿನಾಯಿತಿ ನೀಡಿದ್ದು, ಸದರಿ ಆದೇಶದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶುಲ್ಕ ಪಡೆಯತಕ್ಕದ್ದು.

1) Mechanical Engineering

2) Textile Technology

3) Automobile Engineering

4) Silk Technology

5) Civil Engineering

10)ಕೌನ್ಸಿಲಿಂಗ್‌ ಪೂರ್ಣಗೊಂಡ ನಂತರ 2 ತಿಂಗಳೊಳಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ, ಇತರೆ ಶುಲ್ಕ ಹಾಗೂ ಆಯಾಯ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯ ಶುಲ್ಕವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯು.ವಿ.ಸಿ.ಇ), ಮೈಸೂರು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ನಡೆಸುವ ವೃತ್ತಿಪರ ಕೋರ್ಸುಗಳಿಗೆ ಕೌನ್ಸಿಲಿಂಗ್ ಮುಖಾಂತರ ಆಯ್ಕೆಯಾಗುವ ಸರ್ಕಾರಿ ಕೋಟಾದಡಿಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಮೇಲಿನಂತೆ ಶುಲ್ಕಗಳನ್ನು ಪಾವತಿಸಿದ ತರುವಾಯ, ಸದರಿ ವಿದ್ಯಾರ್ಥಿಗಳಿಂದ ಕಾಲೇಜುಗಳು ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ.

ಹಾಗೂ ಮುಂದಿನ ಶೈಕ್ಷಣಿಕ ವರ್ಷಗಳಿಂದ ಅನುಬಂಧದಲ್ಲಿ ನಿಗಧಿಪಡಿಸಿರುವ ಪ್ರಮಾಣದ ಶುಲ್ಕವನ್ನು ಮಾತ್ರ ಕಾಲೇಜು ಹಂತದಲ್ಲಿ ಭರಿಸಿಕೊಳ್ಳತಕ್ಕದ್ದು

11)ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಪ್ರವೇಶಾತಿ ಮತ್ತು ಪ್ರವೇಶಾತಿಗಾಗಿ ನಿಗಧಿಪಡಿಸಿದ ಅವಧಿಯ ನಂತರ ಖಾಲಿ ಉಳಿಯುವ ಸೀಟುಗಳನ್ನು ರಿಕನ್ಸಿಲೇಷನ್ ಮೂಲಕ ಆಯಾಯ ಶಿಕ್ಷಣ ಸಂಸ್ಥೆಗಳಿಗೆ ನೀಡತಕ್ಕದ್ದು. ಇದಕ್ಕೆ ಅನುಸರಿಸಬೇಕಾದ ವಿಧಿವಿಧಾನಗಳ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು. ಶಿಕ್ಷಣ ಸಂಸ್ಥೆಗಳು ಖಾಲಿ ಉಳಿಯುವ ಈ ಸೀಟುಗಳು ವ್ಯರ್ಥವಾಗುವುದನ್ನು ತಪ್ಪಿಸಲು ಈ ಸೀಟುಗಳನ್ನು ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳಿಂದ ತುಂಬತಕ್ಕದ್ದು.

12)ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಅಲ್ಪಸಂಖ್ಯಾತವಲ್ಲದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಒಟ್ಟು ಪ್ರವೇಶಾತಿಯಲ್ಲಿ ಎನ್.ಆ‌ರ್.ಐ ಮತ್ತು ಇತರೆ ಕೋಟಾದ ಪ್ರವೇಶಾತಿಗೆ ನಿಗಧಿಯಾಗಿರುವ ಶೇ.25 (ಎನ್.ಆರ್.ಐ ಶೇ.15 ಮತ್ತು ಆಡಳಿತ ಮಂಡಳಿ ಶೇ.10) ರಷ್ಟು ಪ್ರಮಾಣವು ಯಾವುದೇ ಕಾರಣದಿಂದಲೂ ಮೀರತಕ್ಕದ್ದಲ್ಲ. ಅದೇ ರೀತಿ, ಅಲ್ಪ ಸಂಖ್ಯಾತ ಖಾಸಗಿ ಕಾಲೇಜುಗಳಿಗೆ ಇದೇ ಕೋಟಾದ ಪ್ರವೇಶಾತಿಗೆ ನಿಗದಿಯಾಗಿರುವ ಶೇ.30 (ಎನ್.ಆರ್.ಐ ಶೇ.20 ಮತ್ತು ಆಡಳಿತ ಮಂಡಳಿ ಶೇ.10) ರಷ್ಟು ಪ್ರಮಾಣವು ಯಾವುದೇ ಕಾರಣದಿಂದಲೂ ಮೀರತಕ್ಕದ್ದಲ್ಲ.

13) ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಪ್ರವೇಶಾತಿಯ ನಂತರ ಯಾವುದೇ ಪರಸ್ಪರ ಸೀಟುಗಳ ವರ್ಗಾವಣೆಗೆ ಸರ್ಕಾರದಿಂದಾಗಲೀ/ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರಿಂದಾಗಲೀ/ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಾಗಲೀ/COMED-K/KRLMPCA/AMPCK ಗಳಿಂದಾಗಲೀ ಅವಕಾಶ ಇರುವುದಿಲ್ಲ.

14)ಪ್ರವೇಶಾತಿಗಾಗಿ ನಿಗಧಿಪಡಿಸಿದ ಅವಧಿಯೊಳಗಾಗಿ ಪ್ರವೇಶಾತಿ ಪಡೆಯಲು ವಿಫಲರಾದ ಅಭ್ಯರ್ಥಿಗಳ ಸೀಟುಗಳು ರದ್ದಾಗುವುದು ಮತ್ತು ಈ ಬಗ್ಗೆ ಶುಲ್ಕ ಮುಟ್ಟುಗೋಲು / ದಂಡ ವಿಧಿಸುವಿಕೆ ಇತ್ಯಾದಿಗಳ ಬಗ್ಗೆ ಇರುವ ನಿಯಮಗಳನ್ನು  ಕರ್ನಾಟಕ ಪರೀಕ್ಷಾ ಪ್ರಾಧಿಕಾರ /COMED-K/KRLMPCA/AMPCK ಗಳು ಕಟ್ಟು ನಿಟ್ಟಾಗಿ ಪಾಲಿಸುವುದು.

ಸರ್ಕಾರವು ದಿನಾಂಕ:04.11.2020ರ ಅಧಿಸೂಚನೆ ಸಂಖ್ಯೆ:ಇಡಿ 147 ಟಿಇಸಿ 2020ರಲ್ಲಿ ಹೊರಡಿಸಿರುವಂತೆ “If a Candidates does not surrender the allotted a seat in any discipline in an Engineering College orinstitution under sub-rule (4) of Rule 10 or fail to join the allotted college even after the completion of the casual vacancy round, the Executive Director, Karnataka Examination Authority shall forfeit the entire fee amount paid by the candidates and the candidate shall be liable to pay a penalty of five times of the fee” ರಂತೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಕ್ರಮ ಕೈಗೊಳ್ಳತಕ್ಕದ್ದು.

ಮುಂದುವರೆದು The Engineering Colleges or institutions shall report to the Karnataka Examination Authority regarding status of admission of the candidate that remained unfilled or candidates desirous to surrender the seats, well in time to the Karnataka Examination Authority so that, necessary action can be taken to fill up the seats.Because of the non-reporting by Engineering Colleges or Institutions, if the seats remain unfilled, then the concerned Engineering Colleges or Institutions shall pay penalty of five times of the fee.” ರಂತೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಕ್ರಮ ಕೈಗೊಳ್ಳತಕ್ಕದ್ದು.

15)ಹೈದ್ರಾಬಾದ್-ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳ ಮೀಸಲಾತಿ ಬಗ್ಗೆ ಸರ್ಕಾರಿ ಆದೇಶಗಳಲ್ಲಿ ಇರುವ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸುವುದು.

16)ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಕಾರಣಾಂತರಗಳಿಂದ ಒಂದು ವೇಳೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಲ್ಲಿ ಸದರಿ ವಿದ್ಯಾರ್ಥಿಗಳು ಪ್ರವೇಶಾತಿ ಸಂದರ್ಭದಲ್ಲಿ ಸಂಸ್ಥೆಗೆ ಸಲ್ಲಿಸಲ್ಪಟ್ಟ ಮೂಲ ದಾಖಲೆಗಳನ್ನು ಮತ್ತು ಬೋಧನಾ ಶುಲ್ಕವನ್ನು ಹಾಗೂ ಇತರೆ ಶುಲ್ಕಗಳನ್ನು ತಕ್ಷಣವೇ ಹಿಂದಿರುಗಿಸುವ ಬಗ್ಗೆ ಸಂಸ್ಥೆಗಳು/ಕಾಲೇಜುಗಳು ಕ್ರಮವಹಿಸುವುದು. ಈ ಬಗ್ಗೆ ಕಾಲಕಾಲಕ್ಕೆ ಎಐಸಿಟಿಇ, ನವದೆಹಲಿ ಇವರು ಹೊರಡಿಸಿರುವ ಮಾರ್ಗಸೂಚಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.

17)ರಾಜ್ಯದ ಎಲ್ಲಾ ವೃತ್ತಿಪರ ಶಿಕ್ಷಣ ಸಂಸ್ಥೆಗಳು ವೃತ್ತಿಪರ ಕೋರ್ಸುಗಳಿಗೆ ಕಡ್ಡಾಯವಾಗಿ ಎಐಸಿಟಿಇ, ನವದೆಹಲಿ ಇವರಿಂದ ಅನುಮೋದನೆಯನ್ನು ಪಡೆದಿರಬೇಕು.

18) ಆಡಳಿತ ಮಂಡಳಿಗಳು/ಸಂಸ್ಥೆಗಳು ತಮ್ಮ ಆಡಳಿತ ಮಂಡಳಿ ಕೋಟಾ/COMED-K/KRLMPCA/AMPCK ಕೋಟಾದ ಸೀಟುಗಳನ್ನು ಸರ್ಕಾರಕ್ಕೆ ಒಂದು ವೇಳೆ ಅಧ್ಯರ್ಪಿಸಲು ಇಚ್ಚಿಸಿದ್ದಲ್ಲಿ ಮೊದಲನೇ ಸುತ್ತಿನ ಕೌನ್ಸಿಲಿಂಗ್ ಆರಂಭವಾಗುವ 15 ದಿನಗಳ ಮುಂಚಿತವಾಗಿ ಕಡ್ಡಾಯವಾಗಿ ಸರ್ಕಾರಕ್ಕೆ ಅಧ್ಯರ್ಪಿಸುವುದು, ತದನಂತರದಲ್ಲಿ ಸ್ವೀಕೃತವಾಗುವ ಅಧ್ಯರ್ಪಿತ ಸೀಟುಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ.

19)KUPECA, KRLMPCA & AMPCK ಅಡಿ ಬರುವ ಪ್ರತಿಯೊಂದು ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಲ್ಪಸಂಖ್ಯಾತ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು, A.I.C.T.E ನಿಗಧಿಪಡಿಸಿರುವ Mandatory Disclouresನ್ನು ತಮ್ಮ ಕಾಲೇಜಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಕೂಡಲೇ ಪ್ರಕಟಿಸಬೇಕು.

20) 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ / ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 4/5 ವರ್ಷದ ಪದವಿ ಕೋರ್ಸು ಪೂರ್ಣಗೊಳ್ಳುವವರೆಗೂ ವಾರ್ಷಿಕವಾಗಿ ಅನುಬಂಧದಲ್ಲಿರುವಂತೆ ಶುಲ್ಕಗಳನ್ನು ಮಾತ್ರ ಪಾವತಿಸತಕ್ಕದ್ದು.

21)2025-26ನೇ ಶೈಕ್ಷಣಿಕ ಸಾಲಿಗೆ ವೃತ್ತಿಪರ ಇಂಜಿನಿಯರಿಂಗ್/ಆರ್ಕಿಟೆಕ್ಟರ್ ಕೋರ್ಸುಗಳಿಗೆ ಮೇಲ್ಕಂಡಂತೆ ಪ್ರವೇಶಾತಿ ಪ್ರಕ್ರಿಯೆ ಮತ್ತು ಶುಲ್ಕ ನಿಗದಿಯು ಈ ಆದೇಶದನ್ವಯವೇ ಅನುಷ್ಠಾನದ ಕ್ರಮ ಜರುಗಿಸತಕ್ಕದ್ದು. ಎಂದು ತಿಳಿಸಲಾಗಿದೆ.

 

▪️ಶೇ. 5 ರಷ್ಟು ಸಂಖ್ಯಾರಿಕ್ತ ಸೀಟುಗಳಿಗೆ (supernumerary quota) ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ ಪಾವತಿಸುವುದರಿಂದ ವಿನಾಯಿತಿ ಇರುತ್ತದೆ.

▪️ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಇತರ ಶುಲ್ಕವಾಗಿ ವಾರ್ಷಿಕ ರೂ.20,000/-ಗಳನ್ನು ಮೀರದಂತೆ ಪ್ರಥಮ ವರ್ಷದ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ಪಾವತಿಸತಕ್ಕದ್ದು ತದನಂತರದ ವರ್ಷಗಳಲ್ಲಿ ಆಯಾಯ ಕಾಲೇಜುಗಳಲ್ಲಿಯೇ ಪಾವತಿಸುವುದು. ಈ ಶುಲ್ಕಕ್ಕೆ Break up ನ್ನು ಕಾಲೇಜುಗಳಿಂದ ಪಡೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಹಾಗೂ ಆಯಾಯ ಕಾಲೇಜುಗಳ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಕಾ ಪ್ರಾಧಿಕಾರ ಹಾಗೂ ಆಯಾಯ ಕಾಲೇಜುಗಳ ಪ್ರಾಂಶುಪಾಲರುಗಳು ಕೂಡಲೇ ಕ್ರಮ ಕೈಗೊಳ್ಳತಕ್ಕದ್ದು.

▪️ಶುಲ್ಕ ನಿಗಧಿಪಡಿಸುವಾಗ ರೂ 50/- ಕ್ಕಿಂತ ಹೆಚ್ಚಾಗಿರುವ ಮೊತ್ತವನ್ನು ಮುಂದಿನ ರೂ. 100/- ರ ಪೂರ್ಣಾಂಕಕ್ಕೆ, ಹಾಗೂ ರೂ 50/- ಕ್ಕಿಂತ ಕಡಿಮೆ ಇದ್ದಲ್ಲಿ, ಹಿಂದಿನ ರೂ. 100/- ರ ಪೂರ್ಣಾಂಕಕ್ಕೆ ಪರಿಗಣಿಸಲಾಗಿದೆ.

▪️ಸರ್ಕಾರಿ ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯದ 50% ಸೀಟುಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು, ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ವಿಶ್ವವಿದ್ಯಾಲಯದ ಶುಲ್ಕ ಮತ್ತು ಇತರೆ ಶುಲ್ಕ ಸೇರಿದಂತೆ ಮೊದಲನೆ ವರ್ಷಕ್ಕೆ ರೂ.44,200/ ಮತ್ತು ತದನಂತರ ವರ್ಷಗಳಿಗೆ ರೂ.37,100/-ಗಳನ್ನು ಪ್ರತಿ ವಿದ್ಯಾರ್ಥಿಯಿಂದ ಪಡೆಯಲು ವೆಬ್‌ಸೈಟ್ ನಲ್ಲಿ ಪ್ರಕಟಿಸತಕ್ಕದ್ದು

▪️ದಿನಾಂಕ 25ನೇ ಮಾರ್ಚ್ 2021ರಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಅಧಿನಿಯಮ, 2021ರನ್ವಯ IIT ಮಾದರಿಯಲ್ಲಿ ಪ್ರತ್ಯೇಕ ವಿಶ್ವ ವಿದ್ಯಾಲಯವಾಗಿರುವ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವ ವಿದ್ಯಾಲಯ (UVCE) ಬೆಂಗಳೂರು ಸಂಸ್ಥೆಯಲ್ಲಿನ ಇಂಜಿನಿಯರಿಂಗ್ ಕೋರ್ಸುಗಳಿಗೆ ಮೊದಲನೇ ವರ್ಷಕ್ಕೆ ರೂ. 49,600/ (ಎಲ್ಲಾ ರೀತಿಯ ಶುಲ್ಕಗಳನ್ನು ಒಳಗೊಂಡಂತೆ) ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ ಮತ್ತು ತದನಂತರ ವರ್ಷಗಳಿಗೆ ರೂ.48,250/-ಗಳನ್ನು ಪ್ರತಿ ವಿದ್ಯಾರ್ಥಿಯಿಂದ ಪಡೆಯಲು ವೆಬ್‌ಸೈಟ್‌ನಲ್ಲಿ ಪ್ರಕಟಿಸತಕ್ಕದ್ದು, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯಕ್ಕೆ (UVCE) ನಿಗದಿಪಡಿಸಿರುವ ಶುಲ್ಕದಲ್ಲಿ ರೂ.32,000/-ಗಳನ್ನು ಬೋಧನಾ ಶುಲ್ಕವೆಂದು ಪರಿಗಣಿಸತಕ್ಕದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಅಧೀನದ ಘಟಕ ಕಾಲೇಜುಗಳಲ್ಲಿ ನಡೆಸುತ್ತಿರುವ ಸ್ನಾತಕ ಕೋರ್ಸುಗಳ ಶೇಕಡ 100 ರಷ್ಟು ಸೀಟುಗಳ ಪೈಕಿ ಶೇ. 50 ರಷ್ಟು ಶುಲ್ಕವನ್ನು ಸರ್ಕಾರಿ ಕೋಟಾದ ಸೀಟುಗಳಿಗೆ ಹಾಗೂ ಉಳಿದ ಶೇ.50 ರಷ್ಟು ಸೀಟುಗಳಿಗೆ 2025-26ನೇ ಸಾಲಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳಿಗೆ ನಿಗದಿ ಪಡಿಸಿರುವ ಕನಿಷ್ಠ ಶುಲ್ಕ (Lower Limit fee) ರೂ.81,800+ಸ್ಕಿಲ್ ಶುಲ್ಕವನ್ನು ಐಚ್ಚಿಕವಾಗಿ ಮಾತ್ರ ಪಡೆಯತಕ್ಕದ್ದು.

▪️ಖಾಸಗಿ ಅನುದಾನರಹಿತ ಇಂಜಿನಿಯರಿಂಗ್/ಆರ್ಕಿಟೆಕ್ಟರ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಸರ್ಕಾರವು ನಿಗದಿಪಡಿಸಿರುವ ರೂ.81,800/- ಗಳನ್ನು ಸಂಸ್ಥೆಗಳು ಪಡೆದಲ್ಲಿ ಕಾಮೆಡ್-ಕೆ ಕೋಟಾದ ಸೀಟುಗಳಿಗೆ ರೂ,2,81,100/- ಗಳನ್ನುಪಡೆಯತಕ್ಕದ್ದು ಹಾಗೆಯೇ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಸರ್ಕಾರವು ನಿಗಧಿಪಡಿಸಿರುವ ರೂ.91,000/-ಗಳನ್ನು ಸಂಸ್ಥೆಗಳು ಪಡೆದಲ್ಲಿ ಕಾಮೆಡ್- ಕೋಟಾದ ಸೀಟುಗಳಿಗೆ ರೂ.2,00,000/-ಗಳನ್ನು ಪಡೆಯತಕ್ಕದ್ದು ಹಾಗೂ ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಪ್ರಕಟಿಸತಕ್ಕದ್ದು. ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

CLICK HERE TO DOWNLOAD ORDER

 

ಇದನ್ನೂ ನೋಡಿ…..2025-26ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯ ಫಲಿತಾಂಶ ವೃದ್ಧಿಗಾಗಿ ಅನುಸರಿಸಬೇಕಾದ ಕ್ರಮಗಳು

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!