Application Invitation for Recruitment to Various Posts in NTPC-2025,Recruitment of Assistant Executive, GDMO and Medical Specialists.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ (NTPC) ಆಪರೇಷನ್ ವಿಭಾಗದಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಮತ್ತು ಜೆಡಿಎಂಒ ಹಾಗೂ ಮೆಡಿಕಲ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ.
400 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ. ಒಟ್ಟು ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 172, ಆರ್ಥಿಕ ದುರ್ಬಲ ವರ್ಗಕ್ಕೆ 40, ಒಬಿಸಿ ಅಭ್ಯರ್ಥಿಗಳಿಗೆ 82, ಎಸ್‌ಸಿ ಅಭ್ಯರ್ಥಿಗಳಿಗೆ 66 ಹಾಗೂ ಎಸ್‌ಟಿ ವರ್ಗಕ್ಕೆ 40 ಹುದ್ದೆಗಳನ್ನು ಮೀಸಲಿಡಲಾಗಿದೆ.
ಜೆಡಿಎಂಒ 20 ಹುದ್ದೆಗಳು ಖಾಲಿ ಇವೆ. ಫಿಸಿಷಿಯನ್, ಪೀಡಿಯಾಟ್ರಿಷನ್, ರೇಡಿಯಾಲಜಿಸ್ಟ್, ಆರ್ಥೋಪಿಡಿಕ್, ಆಫಲ್ಮಾಲಜಿಸ್ಟ್ ಮತ್ತು ಇಎನ್‌ಟಿ ವಿಭಾಗದಲ್ಲಿ 61 ಸ್ಪೆಷಲಿಸ್ಟ್‌ಗಳ ನೇಮಕಾತಿ ನಡೆಯಲಿದೆ.
ಅರ್ಹತೆಗಳೇನು?:
ಮೆಕಾನಿಕಲ್ ಅಥವಾ ಎಲೆಕ್ಟಿಕಲ್ ವಿಭಾಗದಲ್ಲಿ ಕನಿಷ್ಠ ಶೇಕಡಾ 40 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ಬಿಇ/ಬಿಟೆಕ್ ಪದವೀಧರರು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಒಂದು ವರ್ಷದ ಸೇವಾನುಭವ ಕಡ್ಡಾಯ. 35 ವರ್ಷದೊಳಗಿನವರಿಗೆ ಅವಕಾಶವಿದೆ. ಈ ಹುದ್ದೆಗೆ ಆರಂಭಿಕ ವೇತನ 55,000 ರೂ. ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 1 ಕೊನೆ ದಿನ.
▪️ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಮಾ.1ರೊಳಗೆ ಅರ್ಜಿ ಸಲ್ಲಿಸಿ.
▪️ಜಿಡಿಎಂಒ, ಸ್ಪೆಷಲಿಸ್ಟ್ ಹುದ್ದೆಗಳಿಗೆ ಫೆ.27 ಅರ್ಜಿ ಸಲ್ಲಿಕೆಗೆ ಕೊನೆ ದಿನ.
▪️ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
▪️ದೇಶದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಬೇಕಾಗಬಹುದು.
ವೈದ್ಯರ ಹುದ್ದೆಗಳ ಭರ್ತಿ
ಜಿಡಿಎಂಒ ಎಂಬಿಬಿಎಸ್ ಆಕಾಂಕ್ಷಿಗಳು ಪದವೀಧರ ರಾಗಿರಬೇಕು. ಉಳಿದಂತೆ ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸಂಬಂಧಿಸಿದ ತಜ್ಞ ವಿಷಯಗಳಲ್ಲಿ ಎಂಡಿ/ಡಿಎನ್‌ಬಿ ಅಥವಾ ಎಂಬಿಬಿಎಸ್ ಜೊತೆಗೆ ಪಿಜಿ ಡಿಪ್ಲೊಮಾ (ಸಂಬಂಧಿಸಿದ ತಜ್ಞ ವಿಷಯ ಗಳಲ್ಲಿ) ವಿದ್ಯಾರ್ಹತೆ ಹೊಂದಿರ ಬೇಕು. 1-2 ವರ್ಷಗಳ ಸೇವಾನುಭವ ನಿರೀಕ್ಷಿಸಲಾಗಿದೆ. ಈ ಹುದ್ದೆಗಳಿಗೆ ಫೆ.27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು, (ಎಸ್‌ಸಿ/ಎಸ್/ಮಹಿಳಾ ಅಭ್ಯರ್ಥಿ ಗಳು/ ಮಾಜಿ ಸೈನಿಕರು ಹೊರತುಪಡಿಸಿ) 300 ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಎನ್‌ಟಿಪಿಸಿ ವೆಬ್‌ಸೈಟ್‌ಗೆ (www.careers.ntpc.co.in) ಪಡೆಯಬಹುದು.