Karnataka Open School (KOS) Main Examination-April-2025 Notification and Tentative Timetable Published

Karnataka Open School (KOS) Main Examination-April-2025

Karnataka Open School (KOS) Main Examination-April-2025:ಏಪ್ರಿಲ್-2025ರಲ್ಲಿ ನಡೆಯಲಿರುವ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಮುಖ್ಯ ಪರೀಕ್ಷೆಯ ಅಧಿಸೂಚನೆ ಮತ್ತು ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.

2025ನೇ ಸಾಲಿನ ಕರ್ನಾಟಕ ಮುಕ್ತ ಶಾಲೆ (ಕೆ.ಓ .ಎಸ್) ಮುಖ್ಯ ಪರೀಕ್ಷೆಯನ್ನು ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದು ಇದರೊಂದಿಗೆ ಲಗತ್ತಿಸಿದೆ. 2025ನೇ ಸಾಲಿನಿಂದ ಪರೀಕ್ಷಾ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಉಂಟಾಗುವ ಅನಗತ್ಯ ಕಾರ್ಯವಿಳಂಬ/ಅಡೆತಡೆಗಳನ್ನು ತಡೆಗಟ್ಟಲು ಉಲ್ಲೇಖ (3) ರಂತೆ ಕಲಿಕಾ ಕೇಂದ್ರಗಳಲ್ಲಿ ಹೊಸದಾಗಿ ದಾಖಲಾಗಿರುವ ಅಭ್ಯರ್ಥಿಗಳ ದಾಖಲಾತಿ ಮಾಹಿತಿಗಳನ್ನು ಸಂಗ್ರಹಣೆ ಮಾಡುವ ಸಂಬಂಧ Candidate Enrollment ತಂತ್ರಾಂಶವನ್ನು ರೂಪಿಸಲಾಗಿದೆ. ಕಲಿಕಾ ಕೇಂದ್ರಗಳ ಮುಖ್ಯಸ್ಥರು online ಮೂಲಕ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳ ದಾಖಲಾತಿ ಮಾಹಿತಿಗಳನ್ನು ಪರೀಕ್ಷಾ ಪೂರ್ವದಲ್ಲಿಯೇ Enrollment ತಂತ್ರಾಂಶದಲ್ಲಿ ಇಂದೀಕರಿಸುವ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ದಾಖಲಾತಿ Enrollment ಮುಕ್ತಾಯಗೊಂಡಿರುತ್ತದೆ. ಪರೀಕ್ಷೆಗೆ ನೋಂದಾಯಿಸುವ ಸಂದರ್ಭದಲ್ಲಿ ಇದೇ ಮಾಹಿತಿಗಳು AUTO FETCH ಆಗುವುದರಿಂದ ತಿದ್ದುಪಡಿಗೆ ಅವಕಾಶವಿರುವುದಿಲ್ಲ.

ಪ್ರಸ್ತುತ ಸಾಲಿನಲ್ಲಿ Candidate Enrollment ಮೂಲಕ ನೊಂದಾಯಿಸಿದ ಅರ್ಹ ಹೊಸ ಅಭ್ಯರ್ಥಿಗಳು (RF) ಮತ್ತು ಅರ್ಹ ಪುನರಾವರ್ತಿತ (RR) ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಪರೀಕ್ಷೆಗೆ ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೊಸ ಅಭ್ಯರ್ಥಿಗಳ (RF) ಪರೀಕ್ಷಾ ಅರ್ಜಿಯನ್ನು online ಮೂಲಕ ಪರೀಕ್ಷೆಗೆ ನೊಂದಾಯಿಸುವ ಸಂದರ್ಭದಲ್ಲಿ ಈಗಾಗಲೇ ದಾಖಲಾತಿಗಾಗಿ ನೋಂದಾಯಿಸಿ ನೀಡಿರುವ Enrollment Number ಬಳಸಿ ಪರೀಕ್ಷೆಗೆ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಪುನರಾವರ್ತಿತ ಅಭ್ಯರ್ಥಿಗಳು ನೋಂದಣಿ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ತಮ್ಮ ಸಂಸ್ಥೆಯ ಲಾಗಿನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪರೀಕ್ಷೆ ತೆಗೆದುಕೊಳ್ಳಲು ಇರಬೇಕಾದ ಅರ್ಹತೆಗಳು:-

1.ಅಭ್ಯರ್ಥಿಗಳು ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿರಬೇಕು. (ಏಳನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ/ಅನುತ್ತೀರ್ಣ).

2.ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗೆ ಶೈಕ್ಷಣಿಕ ವರ್ಷದ ಮಾರ್ಚ್ 1ನೇ ತಾರೀಖಿಗೆ 15 ವರ್ಷ ವಯೋಮಿತಿ ಪೂರ್ಣಗೊಂಡಿರಬೇಕು. ಅಂತಹವರು ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಅಂದರೆ ಏಪ್ರಿಲ್-2025 ರ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ದಿನಾಂಕ: 01.03.2025 ಕ್ಕೆ ಹದಿನೈದು ವರ್ಷಗಳ ವಯೋಮಿತಿ ಪೂರ್ಣಗೊಂಡಿರಬೇಕು.

II. ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.

1.ಹೊಸ ಅಭ್ಯರ್ಥಿಗಳು:- ಮಾನ್ಯತೆ ಪಡೆದು ನಡೆಸುತ್ತಿರುವ ಕರ್ನಾಟಕ ಮುಕ್ತ ಶಾಲೆ (ಕೆ.ಪಿ.ಎಸ್)ಗೆ ಹೊಸದಾಗಿ ನೋಂದಣಿಯಾಗಿ ಪ್ರಥಮ ಬಾರಿಗೆ ಕರ್ನಾಟಕ ಮುಕ್ತ ಶಾಲೆ ಪರೀಕ್ಷೆ ತೆಗೆದುಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಸಂಕೇತ-ಆರ್.ಎಫ್ (RF) ಎಂದು ವರ್ಗೀಕರಿಸಿದೆ. ಪ್ರಸ್ತುತ ಪರೀಕ್ಷೆಗೆ ಪ್ರಥಮ ಬಾರಿಗೆ ಕುಳಿತುಕೊಳ್ಳುವ ಎಲ್ಲಾ ಅಭ್ಯರ್ಥಿಗಳಿಗೆ ಆರು ವಿಷಯಗಳು ಕಡ್ಡಾಯವಾಗಿದೆ. ಅವುಗಳಲ್ಲಿ ಪ್ರಥಮ ಭಾಷೆ-ಕನ್ನಡ, ದ್ವಿತೀಯ ಭಾಷೆ ಇಂಗ್ಲೀಷ್ ಹಾಗೂ ತೃತೀಯ ಭಾಷೆ ಹಿಂದಿ ವಿಷಯಗಳು ಕಡ್ಡಾಯವಾಗಿರುತ್ತದೆ.

2.ಪುನರಾವರ್ತಿತ ಅಭ್ಯರ್ಥಿಗಳು:- ಕರ್ನಾಟಕ ಮುಕ್ತ ಶಾಲೆ ಪರೀಕ್ಷೆಯನ್ನು ಬರೆದು ಅನುತ್ತೀರ್ಣ ಹೊಂದಿದ್ದು, ಪುನಃ ಪರೀಕ್ಷೆ ಬರೆಯಲು ಇಚ್ಛಿಸಿರುವ ಅಭ್ಯರ್ಥಿಗಳಿಗೆ-ಸಂಕೇತ ಆರ್.ಆರ್ (RR) ಎಂದು ವರ್ಗೀಕರಿಸಿದೆ.

III. ಈ ಕೆಳಕಂಡಂತೆ ವಿಷಯ ಹಾಗೂ ವಿಷಯವಾರು ಅಂಕಗಳನ್ನು ನಿಗಧಿಪಡಿಸಲಾಗಿದೆ.

 

 

1.ಈಗಾಗಲೇ ಹೊಸ ಅಭ್ಯರ್ಥಿಯ ದಾಖಲಾತಿ ನೋಂದಣಿ ಸಮಯದಲ್ಲಿ ಒಮ್ಮೆ ಅಭ್ಯರ್ಥಿಯು ಆಯ್ಕೆ ಮಾಡಿರುವ ವಿಷಯಗಳು ಅಂತಿಮವಾಗಿದ್ದು, ಯಾವುದೇ ಕಾರಣಕ್ಕೂ ವಿಷಯ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಈ ವಿಷಯವನ್ನು ಸಂಬಂಧಿಸಿದ ಕರ್ನಾಟಕ ಮುಕ್ತ ಶಾಲೆಯ ಕಲಿಕಾ ಕೇಂದ್ರಗಳ ಸಮನ್ವಯಾಧಿಕಾರಿಗಳು ಅಭ್ಯರ್ಥಿಗಳ ಗಮನಕ್ಕೆ ತರುವುದು.

2.ಪುನರಾವರ್ತಿತ ಅಭ್ಯರ್ಥಿಗಳು ಅನುತ್ತೀರ್ಣ ವಿಷಯಗಳಿಗೆ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಏಪ್ರಿಲ್-2023 ಹಾಗೂ ನಂತರದ ವರ್ಷದಲ್ಲಿ ಕೆ.ಓ.ಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳ ಪರೀಕ್ಷಾ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವಾಗ ನೋಂದಣಿ ಸಂಖ್ಯೆಯನ್ನು ನಮೂದಿಸಿದಾಗ ಅಭ್ಯರ್ಥಿಗಳ ಅನುತ್ತೀರ್ಣ ವಿಷಯಗಳ ಮಾಹಿತಿಗಳು AUTO FETCH ಆಗುತ್ತದೆ.

IV. ತೇರ್ಗಡೆ ನಿಯಮಗಳು:-

(i) ಸದರಿ ಪರೀಕ್ಷೆಯನ್ನು ಪ್ರಥಮ ಬಾರಿಗೆ ತೆಗೆದುಕೊಂಡ ಅಭ್ಯರ್ಥಿಯು ಪ್ರಥಮ ಭಾಷೆ-ಕನ್ನಡ 125 ಅಂಕಗಳಿಗೆ ಕನಿಷ್ಠ 38 ಮತ್ತು ಇತರೆ ವಿಷಯಗಳಲ್ಲಿ 100 ಅಂಕಗಳಿಗೆ ಕನಿಷ್ಠ 30 ಅಂಕಗಳನ್ನು ಒಟ್ಟಾರೆ ಶೇ.35 ಅಂಕಗಳನ್ನು ಗಳಿಸಿರಬೇಕು.

(ii) ಅಭ್ಯರ್ಥಿಯು ತೇರ್ಗಡೆ ಹೊಂದಲು 625 ಅಂಕಗಳಿಗೆ ಕನಿಷ್ಠ 219 ಅಂಕ ಪಡೆದಿರಬೇಕು. (ಶೇ.35) ಅಭ್ಯರ್ಥಿಯು ತೇರ್ಗಡೆಗೆ ಪ್ರತಿ ವಿಷಯದಲ್ಲಿ ಶೇ.30 ಅಂಕಗಳನ್ನು ಒಟ್ಟಾರೆ ಶೇ.35 ಅಂಕಗಳನ್ನು ಪಡೆದಿರಬೇಕು.

(iii) ಅನುತ್ತೀರ್ಣ ಪುನರಾವರ್ತಿತ ಅಭ್ಯರ್ಥಿಗಳು ತೇರ್ಗಡೆ ಹೊಂದಲು ಪ್ರಥಮ ಭಾಷೆ ಕನ್ನಡ-125 ಅಂಕಗಳಿಗೆ ಕನಿಷ್ಠ-44 ಅಂಕಗಳು ಹಾಗೂ ಇತರೆ ವಿಷಯಗಳಲ್ಲಿ ಕನಿಷ್ಠ 35 ಅಂಕಗಳನ್ನು ಪಡೆದಿರಬೇಕು. ಶೇ.35 ಅಂಕಗಳಿಗಿಂತ ಕಡಿಮೆ ಗಳಿಸಿರುವ ಅಂದರೆ ಪ್ರಥಮ ಭಾಷೆ ಕನ್ನಡ-44 ಅಂಕಗಳಿಗಿಂತ ಕಡಿಮೆ ಮತ್ತು ಇತರೆ ವಿಷಯಗಳಲ್ಲಿ 35 ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಪಡೆದಿರುವ ವಿಷಯಗಳಿಗೆ ಪುನಃ ಪರೀಕ್ಷೆ ತೆಗೆದುಕೊಳ್ಳಬೇಕಾಗಿರುವುದು ಕಡ್ಡಾಯವಾಗಿದೆ.

V. ಅಂಕಗಳು ಮತ್ತು ದರ್ಜೆಗಳ ವಿವರ:- ಒಟ್ಟು 625 ಅಂಕಗಳಿಗೆ

 

 

ಪರೀಕ್ಷೆಗೆ ನೋಂದಾಯಿಸಿ ಪ್ರಥಮ ಬಾರಿಗೆ ತೇರ್ಗಡೆಯಾದವರಿಗೆ ಮಾತ್ರ ದರ್ಜೆ ನೀಡಲಾಗುವುದು ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ದರ್ಜೆ ನೀಡಲಾಗುವುದಿಲ್ಲ. ಎಂದು ತಿಳಿಸಲಾಗಿದೆ.

ಪರೀಕ್ಷಾ ಶುಲ್ಕ ಪಾವತಿಸುವ ವಿಧಾನ:-

• ಅಭ್ಯರ್ಥಿಗಳ ಪರೀಕ್ಷಾ ಅರ್ಜಿಯನ್ನು ಕಲಿಕಾ ಕೇಂದ್ರದ ಮುಖ್ಯಸ್ಥರು ಮಂಡಲಿಯ ಜಾಲತಾಣದಲ್ಲಿ, ತಮ್ಮ ಸಂಸ್ಥೆಯ Login ಮೂಲಕ Upload ಮಾಡಬೇಕು. ನಿಗದಿಪಡಿಸಿದ ಅವಧಿಯೊಳಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಯಟ್ ನವರು ಅನುಮೋದಿಸಿದ ಅಭ್ಯರ್ಥಿಗಳಿಗೆ ಮಾತ್ರ ಸಂಸ್ಥೆಯ Login ನಲ್ಲಿ ಪರೀಕ್ಷಾ ಶುಲ್ಕ ಪಾವತಿ ಸಂಬಂಧ ಆನ್‌ಲೈನ್ ಮೂಲಕ (ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್) ಪಾವತಿಸಲು ಅವಕಾಶ ಕಲ್ಪಿಸಲಾಗುವುದು.

ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಮಾಡಲಾಗಿದ್ದು, ಆನ್‌ಲೈನ್ ಮೂಲಕ ಪಾವತಿಸಿದಲ್ಲಿ ಶುಲ್ಕ ಪಾವತಿಯಾದ ಬಗ್ಗೆ ಆನ್‌ಲೈನ್ ರಸೀದಿ ಪ್ರತಿಯಲ್ಲಿ “S” Successfull ಎಂಬುದನ್ನು ಖಾತ್ರಿ ಪಡಿಸಿಕೊಂಡು ಶುಲ್ಕ ಪಾವತಿಯ ರಸೀದಿ ಪ್ರತಿಯನ್ನು ಡಯಟ್‌ಗಳಿಗೆ ಸಲ್ಲಿಸಬೇಕು. ಡಯಟ್ ಪ್ರಾಂಶುಪಾಲರು ಎಲ್ಲಾ ಕಲಿಕಾ ಕೇಂದ್ರಗಳ ಶುಲ್ಕ ಪಾವತಿಯ ರಸೀದಿ ಪ್ರತಿಗಳನ್ನು ಕ್ರೂಢೀಕರಿಸಿ ಮಂಡಲಿಗೆ ಸಲ್ಲಿಸುವುದು. ಶುಲ್ಕ ಪಾವತಿಸಿದ ರಸೀದಿ ಪ್ರತಿಯಲ್ಲಿ “F” ಎಂದು ನಮೂದಾಗಿದ್ದಲ್ಲಿ ಸದರಿ ಶುಲ್ಕವು ಮಂಡಲಿಯ ಖಾತೆಗೆ ಜಮಾ ಆಗಿರುವುದಿಲ್ಲ ಹಾಗೂ ಅಂತಹ ಕಲಿಕಾ ಕೆಂದ್ರಗಳ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ.

10) ವಿಶೇಷ ಸಾಮರ್ಥ್ಯವುಳ್ಳ (Special Disability) ಮಕ್ಕಳಿಗೆ ನೀಡುವ ಸೌಲಭ್ಯಗಳು ಮತ್ತು ವಿನಾಯಿತಿ:

ಸರ್ಕಾರದ ಆದೇಶದ ಸಂಖ್ಯೆ:ಮಮ65ಪಿಹೆಚ್ ಪಿ2000, ಬೆಂಗಳೂರು ದಿನಾಂಕ:10.03.2000 ರನ್ವಯ, ಅಧಿಕೃತ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಸ್ಪಾಸ್ಟಿಕ್/ಕಿವುಡು/ಮೂಗ ಮತ್ತು ಕಲಿಕಾ ನ್ಯೂನತೆ ಹಾಗೂ ಬುದ್ದಿ ಮಾಂದ್ಯ ಅಭ್ಯರ್ಥಿಗಳು ಶಿಕ್ಷಣ ಮಾಧ್ಯಮದ ಭಾಷೆಯ ಒಂದನ್ನು ಮಾತ್ರ ತೆಗೆದುಕೊಳ್ಳಬಹುದು. ಉಳಿದ ಎರಡು ಭಾಷಾ ವಿಷಯಗಳಿಗೆ ವಿನಾಯಿತಿ ಇರುತ್ತದೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು(ಅಭಿವೃದ್ಧಿ) ರಿಂದ ಅನುಮತಿ ಪಡೆದುಕೊಂಡು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ತಿಳಿಸಿದೆ. ಈ ಮಾಹಿತಿಯನ್ನು ಸಂಬಂಧಿಸಿದ ಡಯಟ್ ಪ್ರಾಂಶುಪಾಲರು ಸೂಕ್ತ ದಾಖಲೆಗಳಾದ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಆನ್‌ಲೈನ್‌ನಲ್ಲಿ ಅನುಮೋದಿಸುವುದು.

 

CLICK HERE TO DOWNLOAD NOTIFICATION AND TIME TABLE 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!