RATION CARD: ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಕುರಿತು ಇಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ
Ration Card:
ಪ್ರಶ್ನೆ: ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಕುರಿತು ಸರ್ಕಾರ ಯಾವ ಕ್ರಮ ಕೈಗೊಂಡಿದೆ; ಮಾಹಿತಿ ನೀಡುವುದು;
ಉತ್ತರ:
ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಮಾರ್ಚ್ 2023ರ ವರೆಗೆ ಸಲ್ಲಿಕೆಯಾಗಿರುವ 2,95,986 ಅರ್ಜಿಗಳ ವಿಲೇವಾರಿ ಗೊಳಿಸಲು ಸರ್ಕಾರದ ಆದೇಶ ಸಂಖ್ಯೆ: ಆನಾಸ 211 ಡಿಆರ್ ಎ 2021, ದಿನಾಂಕ: 29.09.2023 ಆದೇಶಿಸಲಾಗಿರುತ್ತದೆ.
ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ರಡಿ ಕರ್ನಾಟಕ ರಾಜ್ಯದಲ್ಲಿ 4,01,93,000 ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಗುರಿಯನ್ನು ನಿಗಧಿ ಪಡಿಸಲಾಗಿರುತ್ತದೆ.
ಆದ್ದರಿಂದ, ಈಗಾಗಲೇ ಆದ್ಯತಾ ಪಡಿತರ ಚೀಟಿ (ಪಿಹೆಚ್‌ಹೆಚ್) ಪಡೆದಿರುವವರಲ್ಲಿ ಅನರ್ಹರನ್ನು ಪತ್ತೆ ಹಚ್ಚುವ ಕಾರ್ಯವು ನಿರಂತರವಾಗಿ ನಡೆಯುತ್ತಿದೆ.
ಅನರ್ಹ ಪಡಿತರ ಚೀಟಿಯನ್ನು ರದ್ದು ಪಡಿಸಿದ್ದಲ್ಲಿ ಅಷ್ಟೇ ಪ್ರಮಾಣದ ಹೊಸ ಪಡಿತರ ಚೀಟಿ ನೀಡಲು ಅವಕಾಶವಿರುತ್ತದೆ.
1.ತುರ್ತು ವೈದ್ಯಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅರ್ಹರಿಗೆ ಆದ್ಯತಾ ಪಡಿತರ ಚೀಟಿ ನೀಡಲು ಹಾಗೂ ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆ/ತಿದ್ದು ಪಡಿ ಬಗ್ಗೆ ಅವಕಾಶ ಕಲ್ಪಿಸಲಾಗಿದೆ.
2.ಇ-ಶ್ರಮ್ ನೊಂದಾಯಿತ ಕಾರ್ಮಿಕರಿಗೆ ಹಾಗೂ ಬುಡಕಟ್ಟು ಜನಾಂಗದವರಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು ನೀಡಲು ಸಹ ಅವಕಾಶ ಕಲ್ಪಿಸಲಾಗಿದೆ.
ಆದ್ಯತೇತರ ಪಡಿತರ ಚೀಟಿ ವಿತರಣೆಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಲಾಗಿದೆ.
