CBSE BOARD EXAM-2026: 2026ನೇ ಸಾಲಿನಿಂದ ಎರಡು ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು CBSE ಅನುಮೋದನೆ ನೀಡಿದೆ

CBSE BOARD EXAM-2026: 2026ನೇ ಸಾಲಿನಿಂದ ಎರಡು ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು CBSE ಅನುಮೋದನೆ ನೀಡಿದೆ

CBSE BOARD EXAM-2026: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮಾನದಂಡಗಳನ್ನು ಅನುಮೋದಿಸಿದೆ, ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಶಿಫಾರಸು ಮಾಡಲಾಗಿದೆ. ಮೊದಲ ಹಂತವು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತವು ಮೇನಲ್ಲಿ ನಡೆಯಲಿದೆ. ಮೊದಲ ಹಂತಕ್ಕೆ ಹಾಜರಾಗುವುದು ಕಡ್ಡಾಯವಾಗಿದ್ದರೂ, ಎರಡನೇ ಹಂತವು ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿರುತ್ತದೆ ಎಂದು ತಿಳಿಸಲಾಗಿದೆ.

ಇಂದು ದಿನಾಂಕ:25-06-2025 ರ ಬುಧವಾರ ದಂದು ಕೇಂದ್ರ ಪ್ರೌಢ ಶಿಕ್ಷಣ ಬೋರ್ಡ್ ತೆಗೆದುಕೊಂಡ ಮಹತ್ವದ ನಿರ್ಧಾರದಲ್ಲಿ, 2026 ರಿಂದ ವರ್ಷಕ್ಕೆ ಎರಡು ಬಾರಿ 10ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಮಂಡಳಿಯು ಅನುಮೋದನೆ ನೀಡಿದೆ.

10 ನೇ ತರಗತಿಯ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ನಡೆಯುವ ಪರೀಕ್ಷೆಗಳಿಗೆ ಕಡ್ಡಾಯವಾಗಿ ಹಾಜರಾಗುವುದು  ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ. CBSE ಮಂಡಳಿಯ ಪ್ರಕಾರ ಎರಡನೇ ಹಂತವು ಐಚ್ಛಿಕವಾಗಿದೆ ಎಂದು ತಿಳಿಸಿದೆ.

ಪ್ರಥಮ ಹಂತದ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್‌ನಲ್ಲಿ ಮತ್ತು ಎರಡನೇ ಹಂತದ ಫಲಿತಾಂಶವನ್ನು ಜೂನ್‌ನಲ್ಲಿ ಪ್ರಕಟ ಮಾಡಲಾಗುವುದು.ಆದ್ರೆ ಆಂತರಿಕ ಮೌಲ್ಯಮಾಪನವನ್ನು ಒಮ್ಮೆ ಮಾತ್ರ ನಡೆಸಲಾಗುತ್ತದೆ ಎಂದು ಹೇಳಿದೆ.

CLICK HERE MORE INFORMATION 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

2 thoughts on “CBSE BOARD EXAM-2026: 2026ನೇ ಸಾಲಿನಿಂದ ಎರಡು ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು CBSE ಅನುಮೋದನೆ ನೀಡಿದೆ”

Leave a Comment

You cannot copy content of this page

error: Content is protected !!