Indian Railwy Technician Recuritment: ಭಾರತೀಯ ರೈಲ್ವೆಯಲ್ಲಿ 6,238 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ನೇರ ಲಿಂಕ್ ಇಲ್ಲಿದೆ.

Indian Railwy Technician Recuritment: ಭಾರತೀಯ ರೈಲ್ವೆಯಲ್ಲಿ 6,238 ITI ಪಾಸಾದವರಿಗೆ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ನೇರ ಲಿಂಕ್ ಇಲ್ಲಿದೆ.

 

Indian Railwy Technician Recuritment: ಭಾರತೀಯ ರೈಲ್ವೆಯಲ್ಲಿ  ಐಟಿಐ ಉತ್ತೀರ್ಣರು ಹಾಗೂ ತಾಂತ್ರಿಕ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗಾಗಿ ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ಶನಿವಾರ (ಜೂ.28) ಈ ವರ್ಷದ ಎರಡನೇ ಕೇಂದ್ರಿಕೃತ ಉದ್ಯೋಗ ಅಧಿಸೂಚನೆ (ಸಿಇಎನ್-2/2025) ಪ್ರಕಟಿಸಿದ್ದು, ಒಟ್ಟು 6,238 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. ಇದರಲ್ಲಿ 183 ಟೆಕ್ನಿಷಿಯನ್‌ ಗ್ರೇಡ್-1 ಹುದ್ದೆಯಾಗಿದ್ದು, ಗ್ರೇಡ್- III ರ 6,055 ಹುದ್ದೆಗಳಿವೆ ಎಂದು ತಿಳಿಸಲಾಗಿದೆ. ಶನಿವಾರದಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಜು.28 ಕೊನೆಯ ದಿನವಾಗಿದೆ.

ಆರ್‌ಆರ್‌ಬಿ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 140 ಹುದ್ದೆಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕಳೆದ ಬಾರಿ 14,298 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಒಟ್ಟಾರೆ ಹುದ್ದೆಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಕೇವಲ ಒಂದು ಆರ್‌ಆರ್‌ಬಿಯನ್ನು ಮಾತ್ರ ಆಯ್ದುಕೊಳ್ಳತಕ್ಕದ್ದು. ಎರಡೂ ಹುದ್ದೆಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಯಲಿದೆ.

▪️ಆರ್‌ಆರ್‌ಬಿ 2ನೇ ಕೇಂದ್ರಿಕೃತ ಅಧಿಸೂಚನೆ
▪️ವಿವಿಧ ವಲಯಗಳಲ್ಲಿ ತಂತ್ರಜ್ಞರ ನೇಮಕಾತಿ
▪️ಬೆಂಗಳೂರು ಆರ್‌ಆರ್‌ಬಿಯಲ್ಲಿ 140 ಸ್ಥಾನ

ಒಟ್ಟು ಹುದ್ದೆಗಳ ಸಂಖ್ಯೆ: 6,238

ಹುದ್ದೆಗಳ ವಿವರ:

▪️ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್- 183
▪️ಟೆಕ್ನಿಷಿಯನ್ ಗ್ರೇಡ್-3 – 6055

ವಯೋಮಿತಿ:

▪️2025ರ ಜು.1ಕ್ಕೆ ಅನ್ವಯವಾಗುವಂತೆ ಟೆಕ್ನಿಷಿಯನ್ ಗ್ರೇಡ್-1 ಅಭ್ಯರ್ಥಿಗಳು 18-33 ವರ್ಷದೊಳಗಿನವರಾಗಿರಬೇಕು.

▪️ಟೆಕ್ನಿಷಿಯನ್ -III ಆಕಾಂಕ್ಷಿಗಳು 18ರಿಂದ 30 ವರ್ಷದೊಳಗಿನವರಾಗಿರಬೇಕು.

ವೇತನ ವಿವರ:

▪️ಟೆಕ್ನಿಷಿಯನ್ ಗ್ರೇಡ್-01- ₹29,200
▪️ಟೆಕ್ನಿಷಿಯನ್ ಗ್ರೇಡ್-03- ₹19,900

ವಿದ್ಯಾರ್ಹತೆ ಏನಿರಬೇಕು?

▪️ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ/ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಿದ್ದು, ಐಟಿಐ ಮೂಲಕ ಅಗತ್ಯ ಟ್ರೇಡ್ ವ್ಯಾಸಂಗ ಮಾಡಿರಬೇಕು. ಈ ಪ್ರಾಥಮಿಕ ವಿದ್ಯಾರ್ಹತೆ ಜತೆಗೆ ಹೆಚ್ಚುವರಿ ವಿದ್ಯಾರ್ಹತೆ ಇದ್ದರೂ ಅರ್ಜಿ ಸಲ್ಲಿಸಬಹುದು. ಆದರೆ, ಪ್ರಾಥಮಿಕ ವಿದ್ಯಾರ್ಹತೆ ಇಲ್ಲದೆ, ಹೆಚ್ಚುವರಿ ಶೈಕ್ಷಣಿಕ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

▪️ಗ್ರೇಡ್- 1 ಹುದ್ದೆಗೆ ಬಿಎಸ್‌ಸಿ, ಡಿಪ್ಲೊಮಾ ಇಂಜಿನಿಯರಿಂಗ್ ಅಥವಾ ಇಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕದ ವಿವರ:

ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕ, ಅಂಗವಿಕಲರು, ಮಹಿಳೆಯರು, ಆರ್ಥಿಕ ದುರ್ಬಲರು 250 ರೂ. ಶುಲ್ಕ ಪಾವತಿಸತಕ್ಕದ್ದು.(ಅರ್ಜಿ ಶುಲ್ಕ ಪೂರ್ತಿ ಮರುಪಾವತಿ ಮಾಡಲಾಗುತ್ತದೆ.) ಉಳಿದವರಿಗೆ 500 ರೂ. ನಿಗದಿ ಮಾಡಲಾಗಿದೆ.( ಅರ್ಜಿ ಶುಲ್ಕ 400 ಮರುಪಾವತಿ ಮಾಡಲಾಗುತ್ತದೆ.) ಪ್ರತಿ ಹುದ್ದೆಯ ಅರ್ಜಿಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕು. ಪರೀಕ್ಷೆಗೆ ಹಾಜರಾದವರಿಗೆ ಕ್ರಮವಾಗಿ 250 ರೂ., 400 ರೂ. ಮರುಪಾವತಿಸಲಾಗುತ್ತದೆ.

ಯಾವ ಭಾಷೆಯಲ್ಲಿ ಪರೀಕ್ಷೆ:

ಕನ್ನಡ, ಕೊಂಕಣಿ ಭಾಷೆಯಲ್ಲಿಯೂ ಪರೀಕ್ಷೆ ಜರುಗಲಿದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಕಂಪ್ಯೂಟರ್ ಆಧಾರಿತ ಪರೀಕ್ಷೆ ಬಳಿಕ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎರಡೂ ಹುದ್ದೆಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತದೆ. 100 ಪ್ರಶ್ನೆಗಳಿಗೆ 90 ನಿಮಿಷಗಳಲ್ಲಿ ಉತ್ತರಿಸಬೇಕಿದ್ದು, ತಪ್ಪು ಉತ್ತರಗಳಿಗೆ 1/3 ಅಂಕಗಳನ್ನು ಕಳೆಯಲಾಗುತ್ತದೆ. ಅರ್ಹತೆಗಾಗಿ ಸಾಮಾನ್ಯ ವರ್ಗದವರು, ಆರ್ಥಿಕ ದುರ್ಬಲರು ಶೇ -40, ಒಬಿಸಿ ಶೇ-30, ಎಸ್ಸಿ-30, ಎಸ್ಟಿ- ವರ್ಗದ ವಿದ್ಯಾರ್ಥಿಗಳು ಶೇ 15 ಅಂಕಗಳನ್ನು ಪಡೆಯತಕ್ಕದ್ದು, ಎರಡೂ ಪರೀಕ್ಷೆಗಳಿಗೆ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ, ರೀಸನಿಂಗ್, ಕಂಪ್ಯೂಟರ್‌ನ ಪ್ರಾಥಮಿಕ ಜ್ಞಾನ, ಮೂಲ ವಿಜ್ಞಾನ, ಮತ್ತು ಗಣಿತ ವಿಷಯಗಳ ಕುರಿತ ಪ್ರಶ್ನೆಗಳಿರುತ್ತವೆ.

ಟೆಕ್ನಿಕಲ್ ಗ್ರೇಡ್-1ರ ಹುದ್ದೆಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳು 10 ಅಂಕಗಳಿಗೆ, ಸಾಮಾನ್ಯ ಬುದ್ದಿಮತ್ತೆ ಮತ್ತು ರೀಸನಿಂಗ್-15, ಕಂಪ್ಯೂಟರ್ ಜ್ಞಾನ-20, ಗಣಿತ-20, ವಿಜ್ಞಾನ ಮತ್ತು ತಾಂತ್ರಿಕತೆಯ ಪ್ರಶ್ನೆಗಳನ್ನು 35 ಅಂಕಗಳಿಗೆ ನೀಡಲಾಗುತ್ತದೆ.

ಗ್ರೇಡ್-3 ಹುದ್ದೆಗಳಿಗೆ ಗಣಿತ-25, ಸಾಮಾನ್ಯ ಬುದ್ಧಿಮತ್ತೆ ಮತ್ತು ರೀಸನಿಂಗ್-25, ಸಾಮಾನ್ಯ ವಿಜ್ಞಾನ-40, ಸಾಮಾನ್ಯ ಜ್ಞಾನದ 10 ಪ್ರಶ್ನೆಗಳಿಗೆ ಉತ್ತರಿಸಬೇಕಿದ್ದು, ಒಟ್ಟಾರೆ 100 ಅಂಕಗಳಿರಲಿವೆ.

ಅಭ್ಯರ್ಥಿಗಳಿಗೆ ಸೂಚನೆಗಳು:

▪️ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

▪️ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದಲ್ಲಿ ಅನರ್ಹಗೊಳಿಸಲಾಗುತ್ತದೆ

▪️ಎಸ್‌ಎಸ್ಎಲ್‌ಸಿ ಅಂಕಪಟ್ಟಿಯಲ್ಲಿರುವಂತೆ ತಮ್ಮ ಹೆಸರು, ಪಾಲಕರ ಹೆಸರು ಹಾಗೂ ಜನ್ಮದಿನಾಂಕವನ್ನು ನಮೂದಿಸತಕ್ಕದ್ದು.

▪️ಆಯ್ಕೆಯಾದವರನ್ನು ಅರ್ಜಿ ಸಲ್ಲಿಸಿದ ಆರ್ ಆರ್‌ಬಿ ವ್ಯಾಪ್ತಿಯಲ್ಲಿ ನಿಯೋಜಿಸಲಾಗುತ್ತದೆ.

ಪ್ರಮುಖ ದಿನಾಂಕಗಳು:

▪️ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 28-07-2025
▪️ಶುಲ್ಕ ಪಾವತಿಗೆ ಕೊನೆಯ ದಿನಾಂಕ:30-07-2025
▪️ಅರ್ಜಿ ತಿದ್ದುಪಡಿಗೆ ಅವಕಾಶ: ಆಗಸ್ಟ್ 1ರಿಂದ 10
▪️ಅಭ್ಯರ್ಥಿಗಳು scribe ವಿವರ ಸಲ್ಲಿಸಲು ಅವಕಾಶ: ಆಗಸ್ಟ್ 11-15, 2025

 

 
 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “Indian Railwy Technician Recuritment: ಭಾರತೀಯ ರೈಲ್ವೆಯಲ್ಲಿ 6,238 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ನೇರ ಲಿಂಕ್ ಇಲ್ಲಿದೆ.”

Leave a Comment

You cannot copy content of this page

error: Content is protected !!