TET EXAM: ಶಿಕ್ಷಕರಿಗೆ TET ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
TET EXAM: ಶಿಕ್ಷಕರಿಗೆ TET ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟ.ಶಿಕ್ಷಕರು ಸೇವೆಯಲ್ಲಿ ಉಳಿಯಲು ಅಥವಾ ಬಡ್ತಿಗೆ ಅರ್ಹರಾಗಲು ಶಿಕ್ಷಕರ ಅರ್ಹತಾ ಪರೀಕ್ಷೆ (TET)ಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. TET ಕಡ್ಡಾಯಗೊಳಿಸುವ ಕಾನೂನು ಜಾರಿಗೆ ಬರುವ ಮೊದಲು ನೇಮಕಗೊಂಡವರಿಗೂ ಈ ತೀರ್ಪು ಅನ್ವಯಿಸುತ್ತದೆ. ನ್ಯಾ. ದೀಪಂಕರ್ ದತ್ತ & ನ್ಯಾ. ಮನಮೋಹನ್ ಅವರ ಪೀಠವು, ಶಿಕ್ಷಕರ ಅರ್ಹತೆಗೆ ಸಂಬಂಧಿಸಿದಂತೆ ಅಂಜುಮನ್ ಇಶಾತ್-ಇ-ತಾಲಿಮ್ ಟ್ರಸ್ಟ್ vs ಮಹಾರಾಷ್ಟ್ರದ ಹಲವಾರು ಸಿವಿಲ್ ಮೇಲ್ಮನವಿಗಳನ್ನ ಆಲಿಸುವಾಗ ಈ ತೀರ್ಪು ನೀಡಿತು.
ಶಿಕ್ಷಕ ವೃತ್ತಿ ಮತ್ತು ಬಡ್ತಿಗಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ(TET)ಯಲ್ಲಿ ತೇರ್ಗಡೆ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದು ಮುಂದೆ ಸೇವೆಗೆ ಸೇರುವ ಮತ್ತು ಈಗಾಗಲೇ ಸೇವೆಯಲ್ಲಿ ಇರುವವರಿಗೂ ಅನ್ವಯವಾಗುತ್ತದೆ ಎಂದೂ ಹೇಳಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಮನ್‌ಮೋಹನ್ ಅವರಿದ್ದ ಪೀಠವು ಈ ಸಂಬಂಧ ವಿಚಾರಣೆ ನಡೆಸಿದ್ದು, ಸೋಮವಾರ ತೀರ್ಪನ್ನು ಪ್ರಕಟಿಸಿತು. ಕಡ್ಡಾಯ ಶಿಕ್ಷಣ ಹಕ್ಕು ಜಾರಿಯಾದ ಮೇಲೆ ನೇಮಕವಾಗಿರುವ ಎಲ್ಲ ಶಿಕ್ಷಕರಿಗೆ ಇದು ಅನ್ವಯವಾಗುತ್ತದೆ. ಆದರೆ, ನಿವೃತ್ತಿಗೆ ಇನ್ನು 5 ವರ್ಷಕ್ಕಿಂತ ಕಡಿಮೆ ಇರುವಂಥವರಿಗೆ ಇದು ಅನ್ವಯವಾಗುವುದಿಲ್ಲ ಎಂದೂ ಹೇಳಿದೆ. ಅಲ್ಲದೆ, ನಿವೃತ್ತಿಗೆ ಐದು ವರ್ಷಕ್ಕಿಂತ ಹೆಚ್ಚು ಇರುವಂಥವರಿಗೆ 2 ವರ್ಷಗಳಲ್ಲಿ ಟಿಇಟಿ (TET)ಯಲ್ಲಿ ತೇರ್ಗಡೆ ಹೊಂದಬೇಕು ಎಂದೂ ಸೂಚಿಸಿದೆ.
ಸೇವೆಯಲ್ಲಿ ಮುಂದುವರಿಯಲು ಮತ್ತು ಬಡ್ತಿಗಾಗಿ ಟಿಇಟಿಯಲ್ಲಿ ತೇರ್ಗಡೆ ಹೊಂದಲೇಬೇಕು ಎಂದೂ ಹೇಳಿದೆ. ಒಂದು ವೇಳೆ ಇದರಲ್ಲಿ ತೇರ್ಗಡೆಯಾಗದಿದ್ದರೆ ಬಡ್ತಿಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲ, ವೃತ್ತಿಗೆ ರಾಜೀನಾಮೆ ನೀಡಬೇಕು ಅಥವಾ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಹೇಳಿದೆ.
ಆದರೆ, ಅಲ್ಪಸಂಖ್ಯಾತ ಶಾಲೆಗಳ ಬಗ್ಗೆ ಪೀಠ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ವಿಸ್ತ್ರತ ಪೀಠವು ನಿರ್ಧಾರ ತೆಗೆದುಕೊಳ್ಳಳಿದೆ ಎಂದೂ ಹೇಳಿದೆ. 2011ರ ಜು.29ರಂದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ(ಎನ್ ಸಿಟಿಇ) ಟಿಇಟಿಯನ್ನು ಕಡ್ಡಾಯ ಮಾಡಿತ್ತು. ಆದರೆ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು.
▪️ಸೇವೆಯಲ್ಲಿ ಮುಂದುವರಿಕೆ, ಬಡ್ತಿಗೆ ಅರ್ಹತೆ ಬೇಕೇಬೇಕು
▪️ಅಲ್ಪಸಂಖ್ಯಾತ ಶಾಲೆಗಳ ಬಗ್ಗೆ ವಿಸ್ತ್ರತ ಪೀಠದಿಂದ ನಿರ್ಧಾರ