PC RECURITMENT: 4,656 ಪೊಲೀಸ್ ಕಾನ್‌ಸ್ಟೆಬಲ್ಸ್ ಭರ್ತಿ ಶೀಘ್ರವೇ 5 ನೇಮಕಾತಿ 2 ಅಧಿಸೂಚನೆ ಪ್ರಕಟ
PC RECURITMENT: ಪರಿಶಿಷ್ಟರ ಒಳಮೀಸಲಾತಿ ಸ್ಪಷ್ಟಗೊಂಡಿರುವ ಬೆನ್ನಲ್ಲೇ, ನೇಮಕಾತಿ ಮೇಲೆ ವಿಧಿಸಲಾಗಿದ್ದ ನಿರ್ಬಂಧ ಆದೇಶಗಳನ್ನು ಸರ್ಕಾರವು ಹಿಂಪಡೆದಿದೆ. ಹೀಗಾಗಿ ಹೊಸ ಅಧಿಸೂಚನೆಗಳನ್ನು ಹೊರಡಿಸಲು ಮುಕ್ತ ಅವಕಾಶ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ನೇಮಕಾತಿಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಅದರಂತೆಯೇ, ಪೊಲೀಸ್ ಇಲಾಖೆಯಲ್ಲಿ ಒಟ್ಟು 4,656 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ತಯಾರಾಗುತ್ತಿದೆ. ಕೆಲ ದಿನಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ.
ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ನೇಮಕಾತಿಗೆ ಮರುಹಂಚಿಕೆ ಮಾಡಲಾಗಿರುವ ಹುದ್ದೆಗಳ ಕುರಿತಾದ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಂತೆ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್, ಸಿವಿಲ್ ಪೊಲೀಸ್, ಕೆಎಸ್‌ಆರ್‌ಪಿ ಹಾಗೂ ಕೈಗಾರಿಕಾ ರಕ್ಷಣಾ ಪಡೆಯ ಕಾನ್‌ಸ್ಟೆಬಲ್‌ಗಳ ಒಟ್ಟಾರೆ 4,656 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಸರ್ಕಾರವು ಈ ಹಿಂದೆ ಕೆಎಸ್‌ಆರ್‌ಪಿಯ 1,500 ಹಾಗೂ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳ 2,000 ಹುದ್ದೆಗಳ ಭರ್ತಿಗೆ ಅನುಮತಿ ನೀಡಿತ್ತು. ಅದರ ಜತೆಗೆ, ಖಾಲಿಯಿರುವ ಎಪಿಸಿ ಹಾಗೂ ಸ್ಪೆ.ಆರ್‌ಪಿಸಿ ಹುದ್ದೆಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ಒಳಮೀಸಲಾತಿ ಗೊಂದಲದಿಂದ ಇವುಗಳಿಗೆ ಅಧಿಸೂಚನೆ ಪ್ರಕಟವಾಗಿರಲಿಲ್ಲ. ಇದೀಗ ಒಳ ಮೀಸಲಾತಿ ಆದೇಶ ಹೊರಬಿದ್ದಿದೆ. ಇದರ ಪರಿಣಾಮವಾಗಿ ಕೆಲ ಘಟಕಗಳಲ್ಲಿ ಹಿಂದೆ ಪ್ರಸ್ತಾಪಿಸಲಾದ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿದೆ. ಆದ್ದರಿಂದ ಸರ್ಕಾರವು ಹೊರಡಿಸಿರುವ ಪರಿಷ್ಕೃತ ರೋಸ್ಟರ್ ಬಿಂದುಗಳಡಿಯಲ್ಲಿ ಬ್ಯಾಕ್‌ಲಾಗ್, ಕ್ರೀಡಾ ಮೀಸಲಾತಿಯು ಸೇರಿದಂತೆ ಸಂಬಂಧಪಟ್ಟ ಘಟಕಗಳಿಂದ ವರ್ಗೀಕರಣ ಪಡೆದು ನೇರ ನೇಮಕಾತಿಗೆ ಹುದ್ದೆಗಳನ್ನು ಮರುಹಂಚಿಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಅದರಂತೆ, ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ 20 ಹುದ್ದೆ, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳ (ಎಪಿಸಿ) 1,650 ಸ್ಥಾನಗಳು, ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್‌ಗಳ 614, ಕೆಎಸ್‌ಆರ್‌ಪಿಯ 2032 ಕಾನ್‌ಸ್ಟೆಬಲ್ ಹಾಗೂ ಕೈಗಾರಿಕಾ ಭದ್ರತಾ ಪಡೆಯ 340 ಸೇರಿ 4,656 ಹುದ್ದೆಗಳನ್ನು ಮರುಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇದರಲ್ಲಿ 1,766 ಕಲ್ಯಾಣ ಕರ್ನಾಟಕ ಹಾಗೂ 2,890 ಕಲ್ಯಾಣ ಕರ್ನಾಟಕೇತರ ಹುದ್ದೆಗಳು ಎಂದು ವಿಂಗಡಿಸಲಾಗಿದೆ.
ಆಯಾ ಘಟಕಗಳಿಗೆ ಮರು ಹಂಚಿಕೆ ಮಾಡಿರುವ ಸಂಖ್ಯೆಗೆ ಅನುಗುಣವಾಗಿ ನೇಮಕಾತಿ ವಿಭಾಗಕ್ಕೆ ವರ್ಗೀಕರಣವನ್ನು ಒದಗಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಘಟಕ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಪೊಲೀಸ್ ಇಲಾಖೆಯಿಂದ ನೇಮಕಾತಿ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.
ಹುದ್ದೆಗಳ ವಿವರ:
▪️ಡಿಟೆಕ್ಟಿವ್ ಸಬ್ ಇನ್ ಸ್ಪೆಕ್ಟರ್(ಡಿಎಸ್‌ಐ): 20
▪️ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್(ಸಿವಿಲ್): 614
▪️ಸಶಸ್ತ್ರ ಪೊಲೀಸ್ ಕಾನ್ ಕಾನ್‌ಸ್ಟೆಬಲ್(ಎಪಿಸಿ): 1,650
▪️ಸ್ಪೆ.ರಿಸರ್ವ್ ಪೊಲೀಸ್ ಕಾನ್‌ಸ್ಟೆಬಲ್(KSRP): 2,032
▪️ಪೊಲೀಸ್ ಕಾನ್‌ಸ್ಟೆಬಲ್ (ಕೆಎಸ್‌ಐಎಸ್‌ಎಫ್): 340
ಎಸ್‌ಐ ಹುದ್ದೆಗಳಿಗೂ ನೇಮಕ:
▪️ನಾಗರಿಕ, ಸಶಸ್ತ್ರ ಪೊಲೀಸ್ ವಿಭಾಗದ ಹುದ್ದೆಗಳು
▪️ಸಬ್ ಇನ್‌ಸ್ಪೆಕ್ಟರ್‌ಗಳ 20 ಸ್ಥಾನಗಳಿಗೂ ನೇಮಕ
▪️ಸಿವಿಲ್ ಕಾನ್‌ಸ್ಟೆಬಲ್‌ಗಳ 615 ಹುದ್ದೆ ಭರ್ತಿ
▪️ವರ್ಗಿಕರಣ ಸಲ್ಲಿಸಲು ಘಟಕಗಳಿಗೆ ನಿರ್ದೇಶನ
▪️ನೇಮಕಾತಿ ವಿಭಾಗಕ್ಕೆ ವಿವರ ಸಲ್ಲಿಸಲು ಸೂಚನೆ
▪️ಕ್ರೀಡಾ ಮೀಸಲು, ಬ್ಯಾಕ್‌ಲಾಗ್ ಹುದ್ದೆ ಪರಿಗಣನೆ
▪️ಪರಿಷ್ಕೃತ ರೋಸ್ಟರ್ ಬಿಂದು ಅನ್ವಯ ನಿಗದಿ