KGID: ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರಿಗೆ ವೈದ್ಯಕೀಯ ಶುಲ್ಕ ಪಾವತಿಸುವ ಬಗ್ಗೆ ಸುತ್ತೋಲೆ
KGID: ಕಡ್ಡಾಯ ಜೀವ ವಿಮಾ ನಿಯಮಾವಳಿ-1958 ರ ನಿಯಮ 12 ರನ್ವಯ, ಜೀವ ವಿಮಾ ಪಾಲಿಸಿಗಾಗಿ ಪ್ರಸ್ತಾವನೆ ಸಲ್ಲಿಸುವ ಪ್ರಸ್ತಾವನೆದಾರರು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದಲ್ಲಿ, ಅವರನ್ನು ಪರೀಕ್ಷಿಸಿದ ಅರ್ಹ ವೈದ್ಯರಿಗೆ ವೈದ್ಯಕೀಯ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ಹೊಸ ವಿಮಾ ವ್ಯವಹಾರವು ಆನ್ಲೈನ್ ಆದ ನಂತರ ತಮಗೆ ಯಾವುದೇ ವೈದ್ಯಕೀಯ ಶುಲ್ಕವನ್ನು ಪಾವತಿಸಿರುವುದಿಲ್ಲವೆಂದು ವೈದ್ಯರು ಮನವಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ, ಪಾಲಿಸಿಯಾಗಿ ಅಂಗೀಕಾರವಾಗಿರುವಂತಹ ಪ್ರಸ್ತಾವನೆಗಳಿಗೆ ವೈದ್ಯಕೀಯ ಶುಲ್ಕವನ್ನು ರೂ.8/- ದರದಂತೆ ಖಜಾನೆ-2 ಮೂಲಕ 8011-00-105-1-04-000 ಲೆಕ್ಕಶೀರ್ಷಿಕೆಯಡಿ ಪಾವತಿಸಲು ಕ್ರಮಕೈಗೊಳ್ಳುವಂತೆ ಸೂಚಿಸುತ್ತಾ, ಪಾವತಿ ಸಂದರ್ಭದಲ್ಲಿ ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿದ ವೈದ್ಯರ ಹೆಸರು ಮತ್ತು ಆಸ್ಪತ್ರೆಯ ವಿಳಾಸವುಳ್ಳ ಮಾಹಿತಿಯನ್ನು ಸ್ಪಷ್ಟವಾಗಿ ಪರಿಶೀಲಿಸಿದ ನಂತರ ತಮ್ಮ ಜಿಲ್ಲೆಗಳಲ್ಲಿ ಈ ಬಗ್ಗೆ ledger ನ್ನು ನಿರ್ವಹಿಸಿ, ಈ ಕೆಳಕಂಡ ನಮೂನೆಯನ್ವಯ ವರ್ಷಾವಾರುವಿನಂತೆ ಮಾಹಿತಿಯನ್ನು ಕ್ರೋಢೀಕರಿಸಿ ಪರಿಶೀಲಿಸಿದಂತೆ ಪಾವತಿಗೆ ಕ್ರಮವಹಿಸುವುದು, ಅದರಂತೆ ಮಾಹಿತಿಯನ್ನು ಈ ಕೆಳಕಂಡಂತೆ ದಾಖಲು ಮಾಡುವುದು.

ಸದರಿ ಕಾರ್ಯವನ್ನು ಕೈಗೊಳ್ಳಲು ಅನುವಾಗುವಂತೆ ಅಂಗೀಕಾರವಾಗಿರುವಂತಹ ಕ್ರೋಢೀಕೃತ excel ದಾಖಲೆಗಳನ್ನು ಗಣಕ ಶಾಖೆಯಿಂದ ಎಲ್ಲಾ ಜಿಲ್ಲೆಗಳಿಗೆ ಕಳುಹಿಸಲಾಗುವುದು. ಅದರಂತೆ ಆಯಾ ಜಿಲ್ಲೆಗಳಲ್ಲಿ ಈ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ, ನೀಡಿದ MER ವರದಿಗೆ ಅನುಗುಣವಾಗಿ, ಪ್ರತೀ ಪ್ರಸ್ತಾವನೆಗೆ ರೂ.8 ರಂತೆ ಸಂಬಂಧಿಸಿದ ವೈದ್ಯರಿಗೆ ಪತ್ರದ ಮುಖೇನ ಹಣ ಸಂದಾಯ ರಸೀದಿ ಕಳುಹಿಸಿ ಪಡೆದ ನಂತರ ಪಾವತಿ ಮಾಡುವಂತೆ ಸೂಚಿಸಲಾಗಿದೆ. ಈ ಕುರಿತು ಸುತ್ತೋಲೆ.