KASS:ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ-2025
KASS: ರಾಜ್ಯ ಸರಕಾರಿ ನೌಕರರು, ಅವರ ಕುಟುಂಬದ ಅವಲಂಬಿತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾಸೌಲಭ್ಯ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯನ್ನು ಇದೇ ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಸರಕಾರ ಆದೇಶ ಹೊರಡಿಸಿದೆ.
ನೌಕರ ಸಮುದಾಯದ ಬಹುದಿನಗಳ ಬೇಡಿಕೆಯಂತೆ ಈ ಯೋಜನೆ ಜಾರಿಯಿಂದಾಗಿ 5.25 ಲಕ್ಷ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸೇರಿ ಸುಮಾರು 25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಯೋಜನೆ ಜಾರಿಗೆ ಸರಕಾರ ವಾರ್ಷಿಕ 500 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಈ ಯೋಜನೆಯನ್ನು ನಿರ್ವಹಣೆ ಮಾಡಲಾಗುತ್ತದೆ. ಯೋಜನೆ ಸೌಲಭ್ಯ ಪಡೆಯಲು ಸರಕಾರಿ ಅಧಿಕಾರಿ/ ನೌಕರರು ಪ್ರತಿ ತಿಂಗಳು ನಿಗದಿ ಪಡಿಸಿದ ವಂತಿಗೆಯನ್ನು ಅಕ್ಟೋಬರ್ ತಿಂಗಳಿಂದಲೇ ಪಾವತಿಸಬೇಕಿದೆ. ಮಾಸಿಕ ವಂತಿಗೆ ನೀಡಲು ಇಚ್ಛಿಸದವರು ಅಕ್ಟೋಬರ್ 18 ರೊಳಗೆ ಸಂಬಂಧಿತ ಬಟವಾಡೆ ಅಧಿಕಾರಿಗೆ (ಡಿಡಿಒ) ಲಿಖಿತವಾಗಿ ತಿಳಿಸಬೇಕು ಎಂದು ಸೂಚಿಸಲಾಗಿದೆ.
ಪತಿ-ಪತ್ನಿ ಇಬ್ಬರೂ ಸರಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವಂತಿಗೆ ನೀಡಬೇಕಿದೆ. ನೌಕರರ ತಂದೆ-ತಾಯಿ ಪಿಂಚಣಿದಾರ ರಾಗಿದ್ದರೆ, ಅವರ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸಿ 17 ಸಾವಿರ ರೂ.ಗಳಿಂದ 27 ಸಾವಿರಕ್ಕೆ ನಿಗದಿ ಪಡಿಸಲಾಗಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿ ಇಬ್ಬರೂ ಈ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಈ ಯೋಜನೆ ಜಾರಿಗೆ ಬಂದ ದಿನದಿಂದ ಸದ್ಯ ಜಾರಿಯಲ್ಲಿರುವ ‘ಜ್ಯೋತಿ ಸಂಜೀವಿನಿ’ ಯೋಜನೆ ಸ್ಥಗಿತಗೊಳ್ಳಲಿದೆ.
CLICK HERE TO DOWNLOAD HOSPITAL LIST
CLICK HERE TO DOWNLOAD KASS FORM A,A1,A2,A3,A4 EMPTY
ಇದನ್ನೂ ನೋಡಿ….ITR- ಐಟಿಆರ್ ಫೈಲಿಂಗ್ ಡೆಡ್ಲೈನ್ ಮಿಸ್ ಮಾಡಿದ್ರಾ? ಮುಂದೇನು?