Aadhaar Card: ನಿಮ್ಮ ಆಧಾರ್ ಕಾರ್ಡ್‌ನಲ್ಲಿನ ಮೊಬೈಲ್ ನಂಬರ್ ಬದಲಾಯಿಸಬೇಕೆ? ಸುಲಭ ವಿಧಾನ-2025

Aadhaar Card: ನಿಮ್ಮ ಆಧಾರ್ ಕಾರ್ಡ್‌ನಲ್ಲಿನ ಮೊಬೈಲ್ ನಂಬರ್ ಬದಲಾಯಿಸಬೇಕೆ? ಸುಲಭ ವಿಧಾನ

Aadhaar Card: ನಿಮ್ಮ ಆಧಾರ್ ಕಾರ್ಡ್‌ನಲ್ಲಿನ ಮೊಬೈಲ್ ನಂಬರ್ ಬದಲಾಯಿಸಬೇಕೆ? ಹಾಗಾದರೆ ಆಧಾರ್ ಸೇವಾ ಕೇಂದ್ರಕ್ಕೆ ಹೋಗುವ ಅಗತ್ಯದಿಲ್ಲ. ಮುಂದಿನ ದಿನಗಳಲ್ಲಿ ಮನೆಯಿಂದಲೇ ನಿಮ್ಮ ಮೊಬೈಲ್ ನಂಬರ್ ಬದಲಾಯಿಸಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಮುಖ ಚಹರೆ ದೃಢೀಕರಣ ಮೂಲಕ ಮನೆಯಿಂದಲೇ ಮೊಬೈಲ್ ನಂಬರ್ ಬದಲಾವಣೆಗೆ ಅವಕಾಶ ನೀಡುತ್ತಿದೆ.

ಬದಲಾವಣೆ ಹೇಗೆ?

ಮೈ ಆಧಾರ್ ಪೋರ್ಟಲ್ ಅಥವಾ ಎಂ-ಆ್ಯಪ್‌ನಲ್ಲಿ ಆಧಾರ್‌ಲ್ಲಿನ ನಿಮ್ಮ ಮೊಬೈಲ್ ನಂಬರ್ ಬದಲಾಯಿಸಿಕೊಳ್ಳಬಹುದು.

ಆಧಾರ್ ಸಂಬಂಧಿತ ಡಾಕ್ಯುಮೆಂಟ್ಸ್ ಅಪ್‌ ಡೇಟ್ ಮಾಡಲು ಯಾವುದೇ ಶುಲ್ಕವಿಲ್ಲ. ಆದರೆ, ವಿಳಾಸ ಬದಲಾವಣೆಗೆ ನಿಗದಿತ ಶುಲ್ಕ ಪಾವತಿಸಬೇಕು. ಈ ಸೌಲಭ್ಯ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿಸಿಗುವ ಸಾಧ್ಯತೆ ಇದೆ.

ಮುಖ ಚಹರೆ ದೃಢೀಕರಣ ಅಗತ್ಯ:

ಮೊಬೈಲ್ ನಂಬರ್ ಬದಲಾಯಿಸುವ ವ್ಯಕ್ತಿ ಆ್ಯಪ್‌ನಲ್ಲಿ ತನ್ನ ಆಧಾ‌ರ್ ನಂಬರ್ ನಮೂದಿಸಿ ಕ್ಯಾಮೆರಾ ಮುಂದೆ ಮುಖ ಚಹರೆ L ದೃಢೀಕರಣ ಮಾಡಿಸಿಕೊಂಡು ಆಧಾ‌ರ್ ಕಾರ್ಡ್‌ನಲ್ಲಿನ ವ್ಯಕ್ತಿ ತಾನೇ ಎಂಬುದನ್ನು ಖಚಿತಪಡಿಸುವುದು ಅತ್ಯಗತ್ಯ.

ದೃಢೀಕರಣದ ಅಗತ್ಯವೇನು?

ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಇತರರು ನಮೂದಿಸಿಕೊಂಡರೆ ಆ ನಂಬರ್‌ನ ಎಲ್ಲಾ ಮಾಹಿತಿ ತಪ್ಪು ವ್ಯಕ್ತಿಯ ಕೈಗೆ ಸೇರುವ ಸಾಧ್ಯತೆ ಇದೆ. ಇದರಿಂದ ಬ್ಯಾಂಕಿಂಗ್‌ನಿಂದ ಹಿಡಿದು ಹಲವಾರು ರೀತಿಯ ವಂಚನೆ ಆಗುವ ಸಾಧ್ಯತೆ ಇದೆ. ಹೀಗಾಗಿ ನಂಬರ್ ಬದಲಾಯಿಸಲು ಬಯಸುವ ವ್ಯಕ್ತಿ ಆಧಾರ್ ಕೇಂದ್ರಕ್ಕೆ ಹೋಗಿ ದೃಢೀಕರಣ ಮಾಡುವ ಅಗತ್ಯವಿದೆ. ಆದರೆ, ಮುಂದಿನ ದಿನಗಳಲ್ಲಿ ಆ್ಯಪ್ ಬಂದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

50 ರೂ.ನಲ್ಲಿ ಪ್ಲಾಸ್ಟಿಕ್ ಆಧಾರ್:

ಪ್ರಾಧಿಕಾರವು ಆ್ಯಪ್‌ ಗಳ ಮೂಲಕ ಅನೇಕ ಈ ಸೌಲಭ್ಯಗಳನ್ನು ಒದಗಿಸುತ್ತಿದ್ದು, 50 ರೂ. ಪಾವತಿಸಿ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಆನಲೈನ್ ಮೂಲಕ ತರಿಸಿಕೊಳ್ಳಬಹುದು.

ಆಧಾರ್ ಕೇಂದ್ರಗಳೇ ಆಸರೆ:

ಸದ್ಯ ಮೊಬೈಲ್ ನಂಬರ್ ಸೇರಿದಂತೆ ಯಾವುದೇ ರೀತಿಯ ಬದಲಾವಣೆಗೆ ಆಧಾರ್ ಸೇವಾ ಕೇಂದ್ರಗಳಿಗೆ ಹೋಗುವ ಅಗತ್ಯವಿದೆ. ಅಲ್ಲಿ ವ್ಯಕ್ತಿಯ ಗುರುತನ್ನು ಪ್ರಮಾಣಿಕರಿಸಲು ಬಯೋಮೆಟ್ರಿಕ್ ಅಂದರೆ ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ.

ಆಧಾರ್ ಸಂಖ್ಯೆಯನ್ನು (12 ಅಂಕಿಗಳ UID) ಒಮ್ಮೆ ನೀಡಿದ ಮೇಲೆ ಅದನ್ನು ಬದಲಾಯಿಸುವುದು ಸಾಧ್ಯವಿಲ್ಲ. ಆ ಸಂಖ್ಯೆ ಜೀವನಪೂರ್ತಿ ಒಂದೇ ಆಗಿರುತ್ತದೆ.

ಆದರೆ, ಆಧಾರ್ ಕಾರ್ಡ್‌ನಲ್ಲಿ ಇರುವ ವೈಯಕ್ತಿಕ ವಿವರಗಳು (ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ, ಮೊಬೈಲ್ ನಂಬರ್, ಇಮೇಲ್) ಬದಲಾಯಿಸಲು ಅವಕಾಶ ಇದೆ.

ಬದಲಾವಣೆ ಮಾಡಲು ಇರುವ ಮಾರ್ಗಗಳು:

1. ಆನ್‌ಲೈನ್ ಮೂಲಕ (UIDAI Portal / mAadhaar App)

UIDAI Website ಗೆ ಹೋಗಿ.

▪️”Update Aadhaar” ಆಯ್ಕೆ ಮಾಡಿ.
▪️OTP ಮೂಲಕ ಲಾಗಿನ್ ಮಾಡಿ (ಮೊಬೈಲ್ ನಂಬರ್ ಆಧಾರ್‌ಗೆ ಲಿಂಕ್ ಆಗಿರಬೇಕು).
▪️ಬದಲಾಯಿಸಬೇಕಾದ ಮಾಹಿತಿಯನ್ನು ಸೇರಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
▪️ಅರ್ಜಿ ಸಲ್ಲಿಸಿದ ನಂತರ URN (Update Request Number) ಸಿಗುತ್ತದೆ.


2. ಆಧಾರ್ ಎನ್ರೋಲ್‌ಮೆಂಟ್/ಅಪ್ಡೇಟ್ ಸೆಂಟರ್‌ನಲ್ಲಿ

▪️ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ.
▪️ಅಪ್ಡೇಟ್ ಫಾರ್ಮ್ ಭರ್ತಿ ಮಾಡಿ.
▪️ಗುರುತಿನ ದಾಖಲೆ/ಪ್ರಮಾಣ ಪತ್ರಗಳನ್ನು ನೀಡಿ.
▪️ಬಯೋಮೆಟ್ರಿಕ್ ದೃಢೀಕರಣದ ಬಳಿಕ ಅಪ್ಡೇಟ್ ಪ್ರಕ್ರಿಯೆ ನಡೆಯುತ್ತದೆ.

ಸೇವಾ ಶುಲ್ಕ:

ಸಾಮಾನ್ಯವಾಗಿ ₹50/- (ಪ್ರತಿ ಅಪ್ಡೇಟ್‌ಗೆ).


👉 ಸೂಚನೆ: ನಿಮ್ಮ ಆಧಾರ್ ಸಂಖ್ಯೆ ಬದಲಾಗುವುದಿಲ್ಲ, ಆದರೆ ಅದರಲ್ಲಿನ ಮಾಹಿತಿಯನ್ನು ಮಾತ್ರ ತಿದ್ದುಪಡಿ ಮಾಡಬಹುದು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment