Indian Bank 2025 ರಲ್ಲಿ 171 ಸ್ಪೆಷಲಿಸ್ಟ್ ಅಧಿಕಾರಿಗಳ (SO – Specialist Officer) ನೇಮಕಾತಿಗೆ ಅರ್ಜಿ ಆಹ್ವಾನ.
Indian Bank: ಇಂಡಿಯನ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಅಕ್ಟೋಬರ್ 13ರ ಒಳಗೆ ಅರ್ಜಿ ಸಲ್ಲಿಸಬಹುದು.
ಒಟ್ಟು 171 ಸ್ಪೆಷಲಿಸ್ಟ್ ಹುದ್ದೆಗಳಿಗೆ ನೇಮಕ ನಡೆಸಲಿದೆ. ಒಟ್ಟು ಹುದ್ದೆಗಳಲ್ಲಿ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಅಂಗೀಕೃತ ವಿದ್ಯಾಸಂಸ್ಥೆಗಳಿಂದ ನಾಲ್ಕು ವರ್ಷಗಳ ಬಿಇ, ಬಿಟೆಕ್, ಸ್ನಾತ ಕೋತ್ತರ ಪದವಿ, ಸಿಎ, ಎಂಎಸ್‌ಸಿ, ಎಂಬಿಎ, ಪಿಜಿಡಿಎಂ, ಎಂಸಿಎ, ಎಂಎಸ್, ಐಸಿಎಸ್‌ಐ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಲ್ಲ ಹುದ್ದೆಗಳಿಗೂ ನಿರ್ದಿಷ್ಟ ಸೇವಾನುಭವ ನಿರೀಕ್ಷಿಸಲಾಗಿದೆ.
ವಯೋಮಿತಿ ವಿವರ:
ಕನಿಷ್ಠ 23 ವರ್ಷ ಮೇಲ್ಪಟ್ಟು ಗರಿಷ್ಠ 36 ವರ್ಷದ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಎಸ್‌ಸಿ, ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವಯೋಮಿತಿ ಸಡಿಲಿಕೆ (Age Relaxation):
SC/ST/OBC/PwBD/Ex-Servicemen ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಹುದ್ದೆಗಳ ವಿವರ:
▪️ಐ.ಟಿ (IT),
▪️ಮಾಹಿತಿ ಭದ್ರತೆ (Information Security), ಕಾರ್ಪೊರೇಟ್ ಕ್ರೆಡಿಟ್
▪️ಫೈನಾನ್ಸಿಯಲ್ ಆನಾಲಿಸಿಸ್
▪️ರಿಸ್ಕ್ ಮ್ಯಾನೆಜ್ಮೆಂಟ್
▪️ಡೇಟಾ ಅನಾಲಿಸಿಸ್
▪️ಕಂಪನಿ ಸೆಕ್ರಟರಿ ಇತ್ಯಾದಿ
ವೇತನ ವಿವರ (Pay Scale):
• Scale II: ₹ 64,820 – 93,960
• Scale III: ₹ 85,920 – 1,05,280
• Scale IV: ₹ 1,02,300 – 1,20,940
ಅನುಭವ ಮತ್ತು ಅರ್ಹತೆ:
ಹುದ್ದೆ/ವಿಭಾಗ ಪ್ರಕಾರ ಸಂಬಂಧಿತ ಶೈಕ್ಷಣಿಕ ಅರ್ಹತೆ ಮತ್ತು ಪೂರ್ವ-ಅನುಭವ ಅವಶ್ಯಕ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ:
ಅರ್ಜಿ ಶಾರ್ಟ್‌ಲಿಸ್ಟ್ (shortlisting), ನಂತರ ಲಿಖಿತ ಪರೀಕ್ಷೆ / ಆನ್‌ಲೈನ್ ಟೆಸ್ಟ್ + ಸಂದರ್ಶನ (Interview) ಅಥವಾ ನೇರ ಸಂದರ್ಶನ — ಆವೃತ್ತಿಯ ಪ್ರಕಾರವಾಗಿ ಜರುಗಲಿದೆ.
ಅರ್ಜಿ ಶುಲ್ಕದ ವಿವರ:
• ಸಾಮಾನ್ಯ / OBC / EWS: ₹ 1000
• SC / ST / PwBD: ₹ 175 ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ:
ದೇಶದಾದ್ಯಂತ ವಿವಿಧ ನಗರಗಳಲ್ಲಿ ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಶಿವಮೊಗ್ಗದಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.
ಆಯ್ಕೆ ಪರೀಕ್ಷೆ ಹೇಗಿರಲಿದೆ.?
ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇಂಗ್ಲಿಷ್ ಲ್ಯಾಂಗ್ವೇಜ್, ಪ್ರೊಫೆಷನಲ್ ನಾಲೆಜ್, ರೀಸನಿಂಗ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ ಸಂಬಂಧಿ ಸಿದಂತೆ 220 ಅಂಕಗಳಿಗೆ 160 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ತಪ್ಪಾದ ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ಇರಲಿದೆ. ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಉತ್ತರಿಸಬೇಕಿರುತ್ತದೆ. 100 ಅಂಕಗಳಿಗೆ ಸಂದರ್ಶನ ಇರಲಿದೆ.
ಅಭ್ಯರ್ಥಿಗಳು ಗಮನಿಸಬೇಕಾದ ಮುಖ್ಯ ಅಂಶಗಳು:
▪️ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ಘಟಕದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು.
▪️ಹುದ್ದೆಗೆ ಸೇರಿದ ಕನಿಷ್ಠ ಎರಡು ವರ್ಷಗಳ ಕಾರ್ಯನಿರ್ವಹಿಸಲೇಬೇಕು. ಬಳಿಕ ಕಾಲ
▪️ರಾಜೀನಾಮೆ ನೀಡಿದ ಬಳಿಕ ಮೂರು ತಿಂಗಳ ನೋಟಿಸ್ ಪೀರಿಯಡ್ ಕಡ್ಡಾಯ.
▪️ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ, ಬೇರಾವುದೇ ಮಾದರಿಯ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
▪️ಹುದ್ದೆಗೆ ಸಂಬಂಧಿಸಿದ ಅರ್ಹತೆ, ಅನುಭವ ಮತ್ತು ಅಗತ್ಯ ಪ್ರಮಾಣ ಪತ್ರಗಳು (certifications) ಅರ್ಜಿಯ ಸಲ್ಲಿಕೆ ಮಾಡುವ ಸಮಯಕ್ಕಿಂತ ಪೂರ್ವದಲ್ಲಿ ಅಧಿಸೂಚನೆಯನ್ನು ನೋಡಿಕೊಳ್ಳಬಹುದು. ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು:
▪️ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಆರಂಭಿಕ ದಿನಾಂಕ : 23 ಸೆಪ್ಟೆಂಬರ್ 2025
▪️ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಆರಂಭಿಕ ದಿನಾಂಕ :13 ಅಕ್ಟೋಬರ್ 2025
ಹೆಚ್ಚಿನ ವಿವರಗಳಿಗೆ- www.indianbank.in