B.Ed Notification – 2025-26: 2025-26ನೇ ಸಾಲಿಗೆ ಎರಡು ವರ್ಷದ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ.
B.Ed Notification – 2025-26: 2025-26ನೇ ಸಾಲಿಗೆ ಎರಡು ವರ್ಷದ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
B.Ed Notification – 2025-26: 2025-26ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ. ಪದವಿಯ ವ್ಯಾಸಂಗಕ್ಕಾಗಿ ದಾಖಲಾತಿ ಸಂಬಂಧ ಉಲ್ಲೇಖ: 1 ರಿಂದ 7ರ ವರೆಗಿನ ಆದೇಶಗಳನ್ವಯ ಮತ್ತು ಉಲ್ಲೇಖ (8) ರಲ್ಲಿ ವಿಶ್ವವಿದ್ಯಾಲಯಗಳಿಂದ ಸಲ್ಲಿಕೆಯಾದ ಪ್ರಸ್ತಾವನೆ ಹಾಗೂ ಉಲ್ಲೇಖ (9)ರ ಸರ್ಕಾರದ ಅನುಮತಿಯಂತೆ ಬಿ.ಇಡಿ. ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಇಲಾಖೆ ವೆಬ್ಸೈಟ್ www.schooleducation.karnataka.gov.in ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಅರ್ಜಿ ಸಲ್ಲಿಕೆಯ ಅವಧಿ:
ಅರ್ಜಿ ಸಲ್ಲಿಸಲು ದಿನಾಂಕ : 03/10/2025 ರಿಂದ 03/11/2025 ರವರೆಗೆ ಆನ್‌ಲೈನ್‌ನಲ್ಲಿ ಮಾತ್ರ
▪️ಮೂಲ ದಾಖಲೆಗಳೊಂದಿಗೆ ಅರ್ಜಿ ಪರಿಶೀಲನೆಯ ಅವಧಿ:
ಅರ್ಜಿ ಸಲ್ಲಿಸಿದ ದಿನಾಂಕದಿಂದ ಒಂದು ವಾರ.
ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್ಸೈಟ್ www.schooleducation.karnataka.gov.in ಮೂಲಕ ಆನ್‌ಲೈನ್ ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ತಮ್ಮ User ID ಮತ್ತು Password ಅನ್ನು ನಮೂದಿಸಿ ಲಾಗಿನ್ ಆಗಿ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ತನ್ನ User name ಮತ್ತು Password ಅನ್ನು ಗೌಪ್ಯವಾಗಿಟ್ಟುಕೊಳ್ಳತಕ್ಕದ್ದು ಮತ್ತು ಆನ್‌ಲೈನ್ ಅರ್ಜಿಯ ಸಂಬಂಧ ಎಷ್ಟೇ ಬಾರಿ Login ಆದರೂ ಕಡ್ಡಾಯವಾಗಿ Logout ಆಗಬೇಕಾಗಿರುತ್ತದೆ. ಅಭ್ಯರ್ಥಿಯು Logout ಆಗದೇ ಅರ್ಜಿಗಳ ಮಾಹಿತಿಯಲ್ಲಿ ವ್ಯತ್ಯಾಸಗಳುಂಟಾದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕ ಜವಾಬ್ದಾರಿಯಾಗಿರುವುದಿಲ್ಲ ಎಂದು ತಿಳಿಸಿದೆ.
1. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಇಲಾಖಾ ವೆಬ್‌ಸೈಟ್ www.schooleducation.karnataka.gov.in ದಲ್ಲಿ ಈ ಕುರಿತು ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಅನುಸರಿಸುವುದು.
2. ಸ್ಕ್ಯಾನ್ ಮಾಡಿದ ಅಭ್ಯರ್ಥಿಯ ಭಾವಚಿತ್ರ (50KBಗೆ ಮೀರದಂತೆ) ಹಾಗೂ ಸಹಿಯನ್ನು (50KB ಮೀರದಂತೆ) ಹಾಗೂ ಇನ್ನಿತರ ದಾಖಲೆಗಳನ್ನು JPEG Format ನಲ್ಲಿ ಹಾಗೂ ಇತರೆ ಮೂಲದಾಖಲೆಗಳನ್ನು 1KB ಯಿಂದ 1MB ವರೆಗೆ PDF Format ನಲ್ಲಿ Upload ಮಾಡುವುದು.
3. ಅಭ್ಯರ್ಥಿಗಳು ಮೂಲ ದಾಖಲಾತಿಗಳ ಪರಿಶೀಲನೆಗೆ ಆಯ್ಕೆ ಮಾಡಿಕೊಳ್ಳಬಯಸುವ ಜಿಲ್ಲಾ ನೋಡಲ್ ಕೇಂದ್ರ/ವ್ಯವಸ್ಥಾಪಕ ಕೇಂದ್ರ (DIET/CTE) ಗಳ ಪಟ್ಟಿಯನ್ನು ಅನುಬಂಧ-04ರಲ್ಲಿ ನೀಡಲಾಗಿದ್ದು, ಯಾವುದಾದರೂ ಒಂದು ನೋಡಲ್ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಮ್ಮೆ ಆಯ್ಕೆ ಮಾಡಲಾದ ನೋಡಲ್ ಕೇಂದ್ರದ ಬದಲಾವಣೆಗೆ ಅವಕಾಶ ಇರುವುದಿಲ್ಲ.
4. ಅಭ್ಯರ್ಥಿಗಳು ಕೆಳಕಂಡಂತೆ ಅಭ್ಯರ್ಥಿಗಳಿಗೆ ಅನ್ವಯಿಸುವ ಮೂಲ ದಾಖಲೆಗಳನ್ವಯ ಅರ್ಜಿ ನಮೂನೆಯಲ್ಲಿ ನೀಡಿರುವ ಅಂಕಣಗಳಲ್ಲಿ ಭರ್ತಿ ಮಾಡಬೇಕು ಸಂಬಂಧಿಸಿದ ಪ್ರಮಾಣಪತ್ರದ ಪ್ರತಿಯನ್ನು ತಪ್ಪದೇ ಅಪ್‌ಲೋಡ್ ಮಾಡಬೇಕು.
ಈ ರೀತಿಯಲ್ಲಿ ಕ್ರಮವಹಿಸುವುದು:
* ರಿಜಿಸ್ಟ್ರೇಷನ್ ಸ್ಕ್ರೀನಿನ ಅಂಕಣಗಳನ್ನು ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳುವುದು.
* ಲಾಗ್‌ಇನ್ ಸ್ಕ್ರೀನಿನ ಅಂಕಣಗಳನ್ನು ಭರ್ತಿ ಮಾಡಿ ಲಾಗ್ ಇನ್ ಆಗುವುದು.
* ವೈಯಕ್ತಿಕ ವಿವರಗಳು ಮತ್ತು ವಿಳಾಸವನ್ನು ಭರ್ತಿ ಮಾಡುವುದು.
* ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡುವುದು.
* ಆದಾಯದ ವಿವರಗಳನ್ನು ಭರ್ತಿ ಮಾಡುವುದು
* ಕಾಲೇಜುಗಳ ಆಯ್ಕೆ ಮಾಡುವುದು
* ಜಿಲ್ಲೆಯ ಆದ್ಯತೆಯನ್ನು ಭರ್ತಿ ಮಾಡುವುದು
* ಫೋಟೋ, ಸಹಿ ಮತ್ತು ಅಂಕ ಪಟ್ಟಿಗಳು ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು.
* ಶುಲ್ಕ ಪಾವತಿ ವಿವರಗಳನ್ನು ಭರ್ತಿ ಮಾಡುವುದು.
▪️ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಪಾವತಿಸಬೇಕಾದ ಅರ್ಜಿ ಶುಲ್ಕದ ವಿವರ:
* ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ/ ಪ್ರವರ್ಗ-1 – ₹100
* ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
* ಇತರೆ ಅಭ್ಯರ್ಥಿಗಳು-₹300

▪️ಸಂಪೂರ್ಣ ಮಾಹಿತಿಗಾಗಿ – CLICK HERE
▪️ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು- CLICK HERE
▪️ಅಧಿಕೃತ ವೆಬ್ಸೈಟ್ – CLICK HERE