DSERT Value Education Activity Book-2025 ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕಗಳು ಡೌನ್ಲೋಡ್ ಮಾಡಲು ನೇರ ಲಿಂಕ್ ನೀಡಲಾಗಿದೆ.
DSERT Value Education Activity Book-2025: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ದ್ವಿಭಾಷಾ ಮಾಧ್ಯಮದಲ್ಲಿ ಮೌಲ್ಯ ಶಿಕ್ಷಣ ಚಟುವಟಿಕೆ ಪುಸ್ತಕಗಳನ್ನು ಸಿದ್ದಪಡಿಸಿದೆ.
ಈ ಪುಸ್ತಕಗಳು ಮಕ್ಕಳಲ್ಲಿ ಮೌಲ್ಯಗಳನ್ನು ಪೋಷಿಸಿ, ಅವರನ್ನು ಜಾಗತಿಕ ಪ್ರಜೆಗಳಾಗಿ ರೂಪಿಸಲು ನೆರವಾಗುತ್ತವೆ.
ಇವುಗಳಲ್ಲಿ ಅಡಕವಾಗಿರುವ 10 ಪ್ರಮುಖ ಮೌಲ್ಯಗಳು ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಪ್ರತಿಪಾದಿಸಲಾದ ಅಮೂಲ್ಯ ತತ್ವಗಳು ಮತ್ತು ಇಂದಿನ ಜಗತ್ತಿಗೆ ಬೇಕಾದ ಕೌಶಲ್ಯಗಳ ಸಂಯೋಜನೆಯಾಗಿವೆ. ಇವುಗಳನ್ನು ಸಮಕಾಲೀನ, ಅನುಭವಾತ್ಮಕ ಮತ್ತು ಚಿಂತನಾತ್ಮಕ ವಿಧಾನದ ಮೂಲಕ ಬೆಳೆಸಲಾಗುತ್ತದೆ.
ಸ್ವಯಂಸೇವಕತ್ವ, ನ್ಯಾಯ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು.
ಹತ್ತು ಪ್ರಮುಖ ಮೌಲ್ಯಗಳೆಂದರೆ,
1. ಗೌರವ
ತನ್ನ ಮತ್ತು ಇತರರ ಬಗ್ಗೆ ವಿಶ್ವಾಸ, ವೃತ್ತಿ ಗೌರವ, ಸಾಮರಸ್ಯ, ಸಹಬಾಳ್ವೆ ಮತ್ತು
ಅಭಿಪ್ರಾಯಗಳನ್ನು ಗೌರವಿಸುವುದು ಹಾಗೂ ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿ ಮತ್ತು ಕಾಳಜಿ ವಹಿಸುವುದು.
2. ಪ್ರಾಮಾಣಿಕತೆ ಮತ್ತು ನಿಷ್ಠೆ:
ಧೈರ್ಯ ಮತ್ತು ವಿಶ್ವಾಸದಿಂದ ಸತ್ಯವನ್ನು ಒಪ್ಪಿಕೊಳ್ಳುವುದು, ವಿವೇಚನೆಯಿಂದ ನ್ಯಾಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು, ಸ್ವಯಂ ಜವಾಬ್ದಾರಿಯುತ ನಡವಳಿಕೆ, ಇತರರು ಗಮನಿಸದೇ ಇದ್ದಾಗಲೂ ನಿಷ್ಠೆಯಿಂದ ನಡೆದುಕೊಳ್ಳುವುದು.
10. ಸುರಕ್ಷತೆ (ದೈಹಿಕ , ರಸ್ತೆ , ಡಿಜಿಟಲ್)
ಸಾಮಾಜಿಕ ಮತ್ತು ವೈಯಕ್ತಿಕ ಸುರಕ್ಷತಾ ವಲಯಗಳನ್ನು ಅರ್ಥ ಮಾಡಿಕೊಂಡು ಗೌರವಿಸುವುದು. ದೈಹಿಕ, ರಸ್ತೆ, ಡಿಜಿಟಲ್ ಸುರಕ್ಷತೆ ಕಾಪಾಡಲು ಮತ್ತು ಸೈಬರ್ ಅಪರಾಧ ತಡೆಗಟ್ಟಲು ಜವಾಬ್ದಾರಿಯಿಂದ ವರ್ತಿಸುವುದು.
3.ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸ್ಥಿತಿಸ್ಥಾಪಕತ್ವ:
ಸ್ವ-ಅರಿವು ಮತ್ತು ಸಮಚಿತ್ತತೆಯಿಂದ ಭಾವನೆಗಳನ್ನು ಗುರುತಿಸಿ, ಸ್ವೀಕರಿಸುವುದು. ಆತ್ಮವಿಶ್ವಾಸ, ಆಶಾಭಾವ ಮತ್ತು ಸಕಾರಾತ್ಮಕವಾಗಿ ಸವಾಲುಗಳನ್ನು ಸ್ವೀಕರಿಸಿ ಸ್ಪಂದಿಸುವುದು.
4. ಅನುಭೂತಿ:
ಅಂಗಾಂಗದಾನದಂತಹ ಸಾಮಾಜಿಕ ಹೊಣೆಗಾರಿಕೆಯಿರುವ ಕಾರ್ಯಗಳನ್ನು ಒಳಗೊಂಡಂತೆ, ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ಸಹನೆ ಮತ್ತು ಕ್ಷಮೆ ತೋರಿಸುವುದು ಮತ್ತು ದಯೆಯಿಂದ ವರ್ತಿಸುವುದು.
5. ವೈವಿಧ್ಯತೆ, ಸಮತೆ ಮತ್ತು ಒಳಗೊಳ್ಳುವಿಕೆ:
ವೈವಿಧ್ಯಮಯ ಆಚಾರ-ವಿಚಾರಗಳನ್ನು, ಉಡುಗೆ -ತೊಡುಗೆ ಆಹಾರ ಪದ್ದತಿಗಳನ್ನು ಸ್ವೀಕರಿಸಿ ಗೌರವಿಸುವುದು. ಮತ, ಭಾಷೆ, ಹಿನ್ನೆಲೆ, ಜೆಂಡರ್, ವರ್ಣ, ಭೌದ್ಧಿಕ, ಆರ್ಥಿಕ ಸ್ತರಗಳು ಮತ್ತು ವಿಶೇಷ ಚೇತನರ ಅಗತ್ಯತೆಗಳನ್ನು ಅರ್ಥೈಸಿಕೊಂಡು ಒಳಗೊಳ್ಳುವ ಮನೋಭಾವಗಳನ್ನು ಮೈಗೂಡಿಸಿಕೊಳ್ಳುವುದು.
6. ಜೆಂಡರ್ ಸಮಾನತೆ:
ಎಲ್ಲಾ ಜೆಂಡರ್‌ಗಳನ್ನು ಗೌರವಿಸುವುದು, ಜೆಂಡರ್ ರೂಢಿಗತ ಆಚರಣೆಗಳನ್ನು ಪ್ರಶ್ನಿಸುವುದು. ಮನೆಯಲ್ಲಿ, ಶಾಲೆಯಲ್ಲಿ ಹಾಗೂ ಸಮಾಜದಲ್ಲಿ ಸುರಕ್ಷತೆ ಹಾಗೂ ಸಮಾನ ಜವಾಬ್ದಾರಿಗಳನ್ನು ಉತ್ತೇಜಿಸುವುದು
7. ವೈಜ್ಞಾನಿಕ ಮನೋಭಾವ ಮತ್ತು ಸೃಜನಾತ್ಮಕತೆ:
‘ಏಕೆ?’ ಮತ್ತು ‘ಹೇಗೆ?’ ಎಂಬ ಕುತೂಹಲವನ್ನು ಉತ್ತೇಜಿಸುವುದು. ವಿಮರ್ಶಾತ್ಮಕ ಚಿಂತನೆ, ನಾವೀನ್ಯತೆ ಮತ್ತು ಪ್ರಯೋಗಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಾರ್ಯತಂತ್ರಗಳನ್ನು ಕಂಡುಕೊಳ್ಳುವುದು
8. ಸುಸ್ಥಿರ ಜೀವನ ಪದ್ಧತಿ ಮತ್ತು ಪರಿಸರ ಜಾಗೃತಿ:
ಸ್ಥಳೀಯ ಪರಿಸರ ಪೂರಕ ಆಚರಣೆಗಳು, ಶುಚಿತ್ವ, ಸಂಪನ್ಮೂಲಗಳ ಸಂರಕ್ಷಣೆಯ ಮೂಲಕ ಇರುವುದೊಂದೇ ಭೂಮಿ ಎಂದು ಪ್ರೀತಿಸುವುದು. ಹೆಚ್ಚಿನ ಕಾಳಜಿಯಿಂದ ಪರಿಸರವನ್ನು ಸಂರಕ್ಷಿಸುವುದು
9. ನಾಗರೀಕ ಜವಾಬ್ದಾರಿ:
ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಜವಾಬ್ದಾರಿಯಿಂದ ವರ್ತಿಸುವುದು. ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು, ಸ್ವಯಂಸೇವಕತ್ವ, ನ್ಯಾಯ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು.
10. ಸುರಕ್ಷತೆ (ದೈಹಿಕ , ರಸ್ತೆ , ಡಿಜಿಟಲ್)
ಸಾಮಾಜಿಕ ಮತ್ತು ವೈಯಕ್ತಿಕ ಸುರಕ್ಷತಾ ವಲಯಗಳನ್ನು ಅರ್ಥ ಮಾಡಿಕೊಂಡು ಗೌರವಿಸುವುದು. ದೈಹಿಕ, ರಸ್ತೆ, ಡಿಜಿಟಲ್ ಸುರಕ್ಷತೆ ಕಾಪಾಡಲು ಮತ್ತು ಸೈಬರ್ ಅಪರಾಧ ತಡೆಗಟ್ಟಲು ಜವಾಬ್ದಾರಿಯಿಂದ ವರ್ತಿಸುವುದು.
ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕಗಳು
01. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 1ನೇ ತರಗತಿ
02. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 2ನೇ ತರಗತಿ
03. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 3ನೇ ತರಗತಿ
04. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 4ನೇ ತರಗತಿ
05. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 5ನೇ ತರಗತಿ
06. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 6ನೇ ತರಗತಿ
07. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 7ನೇ ತರಗತಿ
08. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 8ನೇ ತರಗತಿ
09. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 9ನೇ ತರಗತಿ
10. ಮೌಲ್ಯ ಶಿಕ್ಷಣದ ಚಟುವಟಿಕಾ ಪುಸ್ತಕ – 10ನೇ ತರಗತಿ
12. ಮೌಲ್ಯ ಶಿಕ್ಷಣದ ಕನ್ನಡ ಹಿಮ್ಮಾಹಿತಿ ಮಾರ್ಗಸೂಚಿಗಳು
13. ಮೌಲ್ಯ ಶಿಕ್ಷಣದ ಆಂಗ್ಲ ಹಿಮ್ಮಾಹಿತಿ ಮಾರ್ಗಸೂಚಿಗಳು
14. ಮೌಲ್ಯ ಶಿಕ್ಷಣದ ಹಿಮ್ಮಾಹಿತಿ ನಮೂನೆ
CLICK HERE TO OFFICIAL WEBSITE