ELEC Training-2025 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ELEC ತರಬೇತಿ

ELEC Training-2025 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ELEC ತರಬೇತಿ

ELEC Training-2025 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ELEC ತರಬೇತಿ: ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ

ಶಿಕ್ಷಕರಿಗೆ ಇಂಗ್ಲಿಷ್ ಲ್ಯಾಂಗ್‌ಜ್ ಎನ್‌ರಿಚ್‌ಮೆಂಟ್ ಕೋರ್ಸ್ (ELEC) ಜಿಲ್ಲಾ ಹಂತದ ತರಬೇತಿಯನ್ನು ಆಯೋಜಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಭಾಷಾ ಪುಷ್ಟಿಕರಣ ಕೋರ್ಸ್ (ELEC) ಆಯೋಜಿಸಲು ಅಗತ್ಯವಿರುವ 102 ಮಾರ್ಗದರ್ಶಕರುಗಳಿದ್ದು, ರಾಜ್ಯದ 34 ಜಿಲ್ಲೆಗಳ ಡಯಟ್‌ನ ELEC ನೋಡಲ್ ಅಧಿಕಾರಿಗಳು, ಪ್ರಾಥಮಿಕ ಶಾಲಾಶಿಕ್ಷಕರು ಹಾಗೂ ಸಿ.ಆ‌ರ್.ಪಿ ಸೇರಿ ಪ್ರತಿ ಜಿಲ್ಲೆಯಿಂದ ಮೂವರು ಸಂಪನ್ಮೂಲ ವ್ಯಕ್ತಿಗಳಿಗೆ 9 ವಾರಗಳ ತರಬೇತಿ ನಡೆಯಲಿದೆ. ಇದನ್ನು ಬೆಂಗಳೂರಿನ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾನಿಲಯದ ಮೆಂಟರ್ಸ್‌ಗಳಿಂದ ತರಬೇತಿ ನೀಡಲಾಗುತ್ತಿದೆ. ಆಯಾ ಜಿಲ್ಲೆಗಳ ಮೂವರು ಮಾರ್ಗದರ್ಶಕರ (Mentors) ಸಹಯೋಗದೊಂದಿಗೆ ಮುಖಾಮುಖಿ ತರಬೇತಿ (F2F) ಮತ್ತು ವೆಬಿನಾರ್‌ಗಳನ್ನು ಆಯೋಜಿಸಲಾಗಿದೆ.

ಸರ್ಕಾರದ ಆದೇಶದಂತೆ ಶಿಕ್ಷಕರನ್ನು ತರಬೇತಿಗೆ ನಿಯೋಜಿಸಲು ಸಾಧ್ಯವಾಗದ ಕಾರಣದಿಂದ ಆಗಸ್ಟ್ 4ರಿಂದ 8 ರವರೆಗೆ ಆಯೋಜಿಸಬೇಕಾಗಿದ್ದ ಮುಖಾಮುಖಿ ತರಬೇತಿಯನ್ನು ಮುಂದೂಡಲಾಗಿತ್ತು. ಇದೀಗ ಆ ಮುಖಾಮುಖಿ ತರಬೇತಿಯನ್ನು ನವೆಂಬರ್ 24ರಿಂದ 28 ರವರೆಗೆ ಆಯೋಜಿಸಲು ಸೂಚಿಸಿದೆ.

ತರಬೇತಿಯ ವಿವಿಧ ಹಂತಗಳಲ್ಲಿ ಅನುಸರಿಸಬೇಕಾದ ಕ್ರಮಗಳು.

1. ದಿ-24-11-2025 ರಿಂದ 28-11-2025 ರವರೆಗೆ ಶಿಕ್ಷಕರ Week-9( ಮುಖಾಮುಖಿ ( F2F) ತರಬೇತಿಯನ್ನು ಆಯೋಜಿಸುವುದು.

2. ರಾಜ್ಯದ 34 ಜಿಲ್ಲೆಗಳಿಂದ ಒಟ್ಟು 1125 ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸುವುದು. (ಅನುಮೋದಿತ ಕ್ರಿಯೋಜನೆಯಲ್ಲಿ ಉಲ್ಲೇಖಿಸಿರುವಂತೆ)

3. ಅಜೀಂ ಪ್ರೇಮ್ ಜೀ ವಿಶ್ವ ವಿದ್ಯಾನಿಲಯದ ಉಪನ್ಯಾಸಕರು ಹಾಗೂ ಡಿ.ಎಸ್.ಇ.ಆರ್.ಟಿ. ಕಛೇರಿಯ ಅಧಿಕಾರಿಗಳಿಂದ ಜಿಲ್ಲಾ ಹಂತದ ತರಬೇತಿಯ ಭೇಟಿ ಮತ್ತು ಅನುಪಾಲನೆ ನಿರ್ವಹಿಸಲಾಗುತ್ತದೆ.

4. ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಮತ್ತು ಶೌಚಾಲಯಗಳ ಶುಚಿತ್ವವನ್ನು ಕಾಪಾಡುವುದು.

5. ನಿರೀಕ್ಷಿತ ಎಲ್ಲಾ ಕಾರ್ಯಗಳಿಗೆ ತಗುಲುವ ಖರ್ಚನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುವ ಅನುದಾನದಲ್ಲಿ ಬ್ರೇಕ್‌ಅಪ್ ಅನ್ನುಮಾಡಿಕೊಳ್ಳುವುದು.(ಮಾದರಿ ಬ್ರೇಕ್ ಅಪ್ ಅನುಗುಣವಾಗಿ)

6. ಘಟಕ ವೆಚ್ಚ ರೂ. 290 /- ರಂತೆ ಆಂತರಿಕ ಹೊಂದಾಣಿಕೆ ಮೂಲಕ ಖರ್ಚುವೆಚ್ಚ ಭರಿಸುವುದು.
7. ಸದರಿ ಕಾರ್ಯಕ್ರಮದ ಅಡಿಯಲ್ಲಿ ಖರೀದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಖರೀದಿ ನಿಯಮಗಳನ್ನು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಮತ್ತು ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವುದು.

8. ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ನಿಗದಿತ ಭತ್ಯೆ ಮತ್ತು ಸಂಭಾವನೆ ಮೊತ್ತವನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು. ನಗದು ರೂಪದಲ್ಲಿ ಪಾವತಿಸಲು ಅವಕಾಶವಿರುವುದಿಲ್ಲ.

9. ರಾಜ್ಯದ ಎಲ್ಲಾ ಜಿಲ್ಲೆಯವರು ತರಬೇತಿಯ ನಂತರ ಉಪಯೋಗಿತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ DSERT ಗೆ ಸಲ್ಲಿಸುವುದು. ಮೂಲ ಓಚರ್ ಗಳನ್ನು ಡಯಟ್‌ನಲ್ಲಿ ರಕ್ಷಿಸಿಡುವುದು ಹಾಗೂ ಆಡಿಟ್ ಸಂದರ್ಭದಲ್ಲಿ ಹಾಜರುಪಡಿಸುವಂತೆ ಸಂಬಂಧಿಸಿದ ಡಯಟ್‌ ಗಳ ಪ್ರಾಂಶುಪಾಲರು ಕ್ರಮವಹಿಸುವುದು.

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!