CTET February 2026 Online Application: Complete Guide

CTET February 2026 Online Application: Complete Guide

CTET ಅರ್ಜಿ ಸಲ್ಲಿಕೆ 2025: ಅರ್ಹತೆ, ದಿನಾಂಕಗಳು, ದಾಖಲೆಗಳು, ಅರ್ಜಿ ಪ್ರಕ್ರಿಯೆ – ಪೂರ್ಣ ಮಾರ್ಗದರ್ಶಿ:

CTET ಫೆಬ್ರವರಿ – 2026 ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಪ್ರಮುಖ ಸೂಚನೆಗಳು ಮತ್ತು ಸಂಪೂರ್ಣ ಮಾರ್ಗದರ್ಶನ

Central Teacher Eligibility Test (CTET) ಫೆಬ್ರವರಿ – 2026 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ನೋಟಿಫಿಕೇಶನ್ ಪ್ರಕಟವಾಗಿದೆ.
ಅಭ್ಯರ್ಥಿಗಳು 27.11.2025 ರಿಂದ 18.12.2025 (ರಾತ್ರಿ 11:59 ಗಂಟೆಯೊಳಗೆ) CTET ಅಧಿಕೃತ ವೆಬ್‌ಸೈಟ್
https://ctet.nic.in ಮೂಲಕ ಅರ್ಜಿ ಸಲ್ಲಿಸಬಹುದು.

ಮುಖ್ಯ ಸೂಚನೆಗಳು (IMPORTANT NOTES)

CTET ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಸೂಚನೆಗಳನ್ನು ಪಾಲಿಸಬೇಕು:

1. ಅರ್ಜಿದಾರರು ಹೇಗೆ ಸಿದ್ಧರಾಗಬೇಕು?

◾ Information Bulletin ಅನ್ನು ಸಂಪೂರ್ಣ ಓದಿ, ಎಲ್ಲಾ ನಿಯಮ-ಶರತ್ತುಗಳನ್ನು ಅರ್ಥಮಾಡಿಕೊಳ್ಳಬೇಕು.
◾ ಪರೀಕ್ಷೆಗೆ ಅಗತ್ಯವಿರುವ ಅರ್ಹತೆಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.
◾ CTET ವೆಬ್‌ಸೈಟ್‌ನಲ್ಲಿ ಸಂಪೂರ್ಣ ವಿವರಗಳೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
◾ ಅರ್ಜಿಯಲ್ಲಿ ಪೂರ್ಣ ಅಂಚೆ ವಿಳಾಸ ಮತ್ತು ಪಿನ್ ಕೋಡ್ ಅನ್ನು ಸರಿಯಾಗಿ ನಮೂದಿಸಬೇಕು.
◾ ಅರ್ಜಿ ಸಲ್ಲಿಸುವ ಮೊದಲು ಶುಲ್ಕ ಪಾವತಿ ವಿಧಾನವನ್ನು ನಿರ್ಧರಿಸಿಕೊಳ್ಳಬೇಕು.
◾ ಅರ್ಜಿ ಸಲ್ಲಿಸಿದ ನಂತರ Confirmation Page ಅನ್ನು ಸಂರಕ್ಷಿಸಿಕೊಳ್ಳಬೇಕು.
◾ ಒಬ್ಬ ಅಭ್ಯರ್ಥಿ ಒಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ, ಅವರ ಅಭ್ಯರ್ಥಿತ್ವ ರದ್ದುಪಡಿಸಲಾಗುತ್ತದೆ ಮತ್ತು ಭವಿಷ್ಯದ ಪರೀಕ್ಷೆಗಳಿಗೆ ನಿರ್ಬಂಧಿಸಲೂಬಹುದು.

ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ (How to Apply Online?)

STEP 1:

CTET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  https://ctet.nic.in

STEP 2:

“Apply Online” ಲಿಂಕ್ ಅನ್ನು ಕ್ಲಿಕ್ ಮಾಡಿ.

STEP 3:

ಆನ್‌ಲೈನ್ ಅರ್ಜಿ ಫಾರ್ಮ್‌ನ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

Registration/Application Number ಅನ್ನು ಗಮನಿಸಿ.

STEP 4:

ಇತ್ತೀಚಿನ ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ.

STEP 5:

ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಿ.

STEP 6:

Confirmation Page ಅನ್ನು ಮುದ್ರಿಸಿ ಅಥವಾ PDF ರೂಪದಲ್ಲಿ ಉಳಿಸಿಕೊಳ್ಳಿ.


ನೋಂದಣಿ ಪ್ರಕ್ರಿಯೆ (Registration Procedure)

(a) Authentication Form ಭರ್ತಿ:

ನೀವು ಈ ವಿವರಗಳನ್ನು ನಮೂದಿಸಬೇಕು:

▪️ರಾಜ್ಯ (State)
▪️ಗುರುತಿನ ಪ್ರಕಾರ (Identification Document)
▪️ಅಭ್ಯರ್ಥಿಯ ಹೆಸರು
▪️ಜನ್ಮ ದಿನಾಂಕ
▪️ಲಿಂಗ (Gender)

(b) ಆನ್‌ಲೈನ್ ಅರ್ಜಿ ಫಾರ್ಮ್:

▪️ಅರ್ಜಿ ಫಾರ್ಮ್ ಅನ್ನು ಪೂರ್ಣವಾಗಿ ಭರ್ತಿ ಮಾಡಿ.
▪️ಲಾಗಿನ್‌ಗಾಗಿ ಪಾಸ್ವರ್ಡ್ ರಚಿಸಬೇಕು.
▪️ಸಲ್ಲಿಸಿದ ನಂತರ Registration/Application Number ಸೃಷ್ಟಿಯಾಗುತ್ತದೆ.

▪️ಪಾಸ್ವರ್ಡ್ ನಿಯಮಗಳು:

1. 8 ರಿಂದ 13 ಅಕ್ಷರಗಳ ನಡುವೆ ಇರಬೇಕು.
2. ಕನಿಷ್ಠ —
• 1 ದೊಡ್ಡ ಅಕ್ಷರ
• 1 ಸಣ್ಣ ಅಕ್ಷರ
• 1 ಸಂಖ್ಯೆ
• 1 ವಿಶೇಷ ಚಿಹ್ನೆ (!@#$%^&*-) ಇರಬೇಕು.


3. ಹೊಸ ಪಾಸ್ವರ್ಡ್ ಹಿಂದಿನ ಮೂರು ಪಾಸ್ವರ್ಡ್‌ಗಳಲ್ಲಿ ಒಂದಾಗಿರಬಾರದು.

▪️ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಅಪ್‌ಲೋಡ್ ಮಾಡುವ ನಿಯಮಗಳು

▪️ಫೋಟೋ (Photograph):
▪️ಗಾತ್ರ: 10 KB – 100 KB
▪️ಆಯಾಮ: 3.5 cm × 4.5 cm
▪️ಫಾರ್ಮ್ಯಾಟ್: JPG/JPEG
▪️ಸಹಿ (Signature):
▪️ಗಾತ್ರ: 3 KB – 30 KB
▪️ಆಯಾಮ: 3.5 cm × 1.5 cm
▪️ಫಾರ್ಮ್ಯಾಟ್: JPG/JPEG
▪️ ಇತ್ತೀಚಿನ ಫೋಟೋವನ್ನು ಮಾತ್ರ ಅಪ್‌ಲೋಡ್ ಮಾಡಬೇಕು.
▪️ ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆಗಾಗಿ ಅಪ್‌ಲೋಡ್ ಮಾಡಿದ ಫೋಟೋ ಮತ್ತು ಅಭ್ಯರ್ಥಿಯ ಮುಖ ಹೊಂದಿಕೆಯಾಗಬೇಕು.

✅ CTET ಫೆಬ್ರವರಿ – 2026 ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ!

▪️ ಕೊನೆಯ ದಿನಾಂಕ: 18 ಡಿಸೆಂಬರ್ 2025 (ರಾತ್ರಿ 11:59 ಒಳಗೆ)
▪️ ಅಧಿಕೃತ ವೆಬ್‌ಸೈಟ್: https://ctet.nic.in

 

CTET

ಅಧಿಸೂಚನೆ ಡೌನ್ಲೋಡ್ ಮಾಡಲು- CLICK HERE

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!