Vidyavikasa Scheme 2026–27: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 2 ಜೊತೆ ಉಚಿತ ಸಮವಸ್ತ್ರ ವಿತರಣೆ

Vidyavikasa Scheme 2026–27: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 2 ಜೊತೆ ಉಚಿತ ಸಮವಸ್ತ್ರ ವಿತರಣೆ

Vidyavikasa Scheme 2026–27: ಮೇಲೆ ಓದಲಾದ ಕ್ರಮಾಂಕ (1) ರಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಪತ್ರದಲ್ಲಿ ಪ್ರತಿ ವರ್ಷದಂತೆ ವಿದ್ಯಾವಿಕಾಸ ಯೋಜನೆಯಡಿ 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿನ 1ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಲಿರುವ ಸುಮಾರು 38.22 ಲಕ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ, ಸರಬರಾಜುಗೊಳಿಸಲು ಉದ್ದೇಶಿಸಿದೆ.

ಮೊದಲನೇ ಜೊತೆ ಸಮವಸ್ತ್ರ ಸರಬರಾಜಿಗೆ ಮೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮೆ:ಕೆ.ಹೆಚ್.ಡಿ.ಸಿ) ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ 1 ರಿಂದ 7ನೇ ತರಗತಿ ಗಂಡು ಮಕ್ಕಳು ಹಾಗೂ 1 ರಿಂದ 5ನೇ ತರಗತಿಯ ಹೆಣ್ಣು ಮಕ್ಕಳಿಗೆ ಒಟ್ಟು 19.84 ಲಕ್ಷ ಮೀಟ‌ರ್ ಸಮವಸ್ತ್ರ, ಬಟ್ಟೆ ಸರಬರಾಜಿಗೆ ರೂ. 14.68 ಕೋಟಿ ಮತ್ತು ಇ-ಟೆಂಡರ್ ಮೂಲಕ ಧಾರವಾಡ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ 8 ರಿಂದ 10 ನೇ ತರಗತಿಯ ಹೆಣ್ಣು ಮಕ್ಕಳಿಗೆ ಚೂಡಿದಾರ್ ಒಳಗೊಂಡಂತೆ ಒಟ್ಟು 48.40 ಲಕ್ಷ ಮೀಟರ್ ಬಟ್ಟೆಯನ್ನು ರೂ.64.63 ಕೋಟಿ ಅನುದಾನದ ಅವಶ್ಯಕತೆ ಇರುತ್ತದೆ..

2026-27ನೇ ಸಾಲಿಗೆ ಎರಡನೇ ಜೊತೆ ಸಮವಸ್ತ್ರ, ಸರಬರಾಜು ಸಂಬಂಧ PAB ಯಿಂದ 2026-27 ಸಾಲಿಗೆ ಮಂಜೂರಾಗುವ ಅನುದಾನದಿಂದ ಅಗತ್ಯವಿರುವ ಒಟ್ಟು 68.24 ಲಕ್ಷ ಮೀಟ‌ರ್ ಸಮವಸ್ತ್ರ ಬಟ್ಟೆಯನ್ನು ಇ-ಟೆಂಡರ್ ಮೂಲಕ ಅಂದಾಜು ಶೇ.5 ರಷ್ಟು ಹೆಚ್ಚುವರಿ ಮೊತ್ತ ಒಳಗೊಂಡಂತೆ ರೂ.80.20 ಕೋಟಿ ಅನುದಾನದ ಅವಶ್ಯಕತೆ ಇರುತ್ತದೆ.

2026-27ನೇ ಸಾಲಿಗೆ 1 ರಿಂದ 10ನೇ ತರಗತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರಗಳನ್ನು ಒಟ್ಟು ಅಂದಾಜು ರೂ.83.00 ಕೋಟಿ (ಮೊದಲನೇ ಜೊತೆ) ಹಾಗೂ ರೂ.80.20 ಕೋಟಿ (ಎರಡನೇ ಜೊತೆ) ಒಟ್ಟು ರೂ.163.20 ಕೋಟಿ ಅನುದಾನದಲ್ಲಿ (ಸಮಗ್ರ ಶಿಕ್ಷಣ ಕರ್ನಾಟಕದ ಯೋಜನೆಯಲ್ಲಿ ಮಂಜೂರಾಗುವ ಅನುದಾನ ಸೇರಿದಂತೆ) ಸರಬರಾಜು ಮಾಡಲು ಅನುಮೋದನೆ ಕೋರಿದ್ದಾರೆ. ರೂ.80.20 ಕೋಟಿ

ಮೇಲೆ ಓದಲಾದ ಕ್ರಮಾಂಕ (2) ರಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇವರು 2026-27ನೇ ಸಾಲಿನ ಸಮವಸ್ತ್ರ, ಸರಬರಾಜು ಸಂಬಂಧ ಮೆ: ಕೆ.ಹೆಚ್.ಡಿ.ಸಿ ಸಂಸ್ಥೆಗೆ ಬೆಂಗಳೂರು ಮತ್ತು ಮೈಸೂರು ವಿಭಾಗದ ಜಿಲ್ಲೆಗಳ ಆದೇಶದ ಬದಲಾಗಿ ಕಲಬುರಗಿ ವಿಭಾಗದ ಜಿಲ್ಲೆಗಳ 1 ರಿಂದ 10 ನೇ ತರಗತಿ ಗಂಡು ಮತ್ತು 1 ರಿಂದ 5ನೇ ತರಗತಿ ಹೆಣ್ಣು ಮಕ್ಕಳಿಗೆ ಬೇಕಾಗುವ ಪ್ರಮಾಣ ಒಟ್ಟು 20.18 ಲಕ್ಷ ಮೀಟ‌ರ್ ಸಮವಸ್ತ್ರ ಬಟ್ಟೆಯನ್ನು ಸರಬರಾಜು ಮಾಡಲು ಆದೇಶಿಸುವಂತೆ ಕೋರಿದ್ದಾರೆ.

ಪ್ರಸ್ತಾವನೆಯ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಸುಮಾರು 38.22 ಲಕ್ಷ ವಿದ್ಯಾರ್ಥಿಗಳಿಗೆ 1 ರಿಂದ 10 ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ 2 ಜೊತೆ ಸಮವಸ್ತ್ರಗಳನ್ನು ಒಟ್ಟು ಅಂದಾಜು ರೂ.163.20 ಕೋಟಿ ಅನುದಾನದಲ್ಲಿ (2 ನೇ ಜೊತೆ ಸಮವಸ್ತ್ರ, ಸರಬರಾಜಿಗೆ ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ PAB ಯಿಂದ 2026-27ನೇ ಸಾಲಿಗೆ ಮಂಜೂರಾಗುವ ಅನುದಾನದಿಂದ) ಮೆ: ಕೆ.ಹೆಚ್.ಡಿ.ಸಿ ಹಾಗೂ ಇ-ಟೆಂಡರ್ ಮೂಲಕ ಖರೀದಿಸಿ ಸರಬರಾಜು ಮಾಡಲು ಈ ಕೆಳಗಿನ ಷರತ್ತುಗಳಿಗೊಳಪಟ್ಟು ಖರೀದಿಸಿ, ವಿತರಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.

ಸರ್ಕಾರದ ಆದೇಶದ ಸಂಖ್ಯೆ:ಇಪಿ 102 ಎಂ ಪಿಇ 2005, ದಿನಾಂಕ:07-01-2026

ಕಾರ್ಯಕ್ರಮದ ಅನುಷ್ಠಾನಕ್ಕೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರು ಪಾಲಿಸಬೇಕಾದ ಷರತ್ತುಗಳು.

1. ಸದರಿ ಕಾರ್ಯಕ್ರಮಕ್ಕಾಗಿ ಒದಗಿಸಲಾಗಿರುವ ರೂ.163.20 ಕೋಟಿಗಳ (ಒಂದು ನೂರ ಅರವತ್ತೂರು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು ಮಾತ್ರ) ಅನುದಾನದ ಮಿತಿಯೊಳಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸತಕ್ಕದ್ದು.

2. ಮೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮೆ:ಕೆ.ಹೆಚ್.ಡಿ.ಸಿ) ಸಂಸ್ಥೆ ತನ್ನ ನೊಂದಾಯಿತ ನೇಕಾರರಿಂದಲೇ ಸಮವಸ್ತ್ರ ಬಟ್ಟೆಯನ್ನು ಖರೀದಿ ಮಾಡಿ ಸರಬರಾಜು ಮಾಡುವಂತೆ ಷರತ್ತು ವಿಧಿಸಿ, ಈ ಪ್ರಕಾರ ಸರಬರಾಜು ಮಾಡುತ್ತಿರುವುದು ಖಚಿತಪಡಿಸಿಕೊಳ್ಳತಕ್ಕದ್ದು.

4. ಮೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮೆ:ಕೆ.ಹೆಚ್.ಡಿ.ಸಿ) ಸಂಸ್ಥೆಗೆ ತನ್ನ ಸಾಮರ್ಥ್ಯದ ಪ್ರಕಾರ ಕಲಬುರಗಿ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ಸರಬರಾಜು ಮಾಡಲು ಇತರೆ ಎಲ್ಲಾ ಸಮವಸ್ತ್ರ ಸರಬರಾಜು ಷರತ್ತುಗಳಿಗೆ ಒಳಪಟ್ಟು ಅನುಮತಿಸಿದೆ.

5. ಮೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮ.ಕೆ.ಹೆಚ್.ಡಿ.ಸಿ) ಸಂಸ್ಥೆ ಸರಬರಾಜು ಮಾಡುವ ಸಮವಸ್ತ್ರ, ಬಟ್ಟೆಗಳಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಅಧ್ಯಕ್ಷತೆಯ ಸಮಿತಿಯು ನಿಗದಿಪಡಿಸಿದ ದರದಲ್ಲಿ ಖರೀದಿಸತಕ್ಕದ್ದು.

6. ಶಾಲಾವಾರು ಸಮವಸ್ತ್ರ ಬೇಡಿಕೆಯನ್ನು ಪಡೆಯುವಾಗ ಹಿಂದಿನ ಸಾಲುಗಳಲ್ಲಿ ವಿತರಣೆಯಾಗದೇ ಉಳಿಕೆಯಾಗಿರುವ ಸಮವಸ್ತ್ರಗಳ ಸಂಖ್ಯೆಯನ್ನು ಹೊರತುಪಡಿಸಿ ಬಾಕಿ ಸಂಖ್ಯೆಗೆ ಮಾತ್ರ ಬೇಡಿಕೆಯನ್ನು ಪಡೆದು ಖರೀದಿಸಿ ವಿತರಿಸಲು ಕ್ರಮವಹಿಸುವುದು. ಈ ಸಂಬಂಧ ಯಾವುದೇ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ತೋರದೇ ಕ್ರಮವಹಿಸತಕ್ಕದ್ದು.

7. ಸರಬರಾಜು ಸಂಸ್ಥೆಗಳೊಂದಿಗೆ ಸಮವಸ್ತ್ರ ಬಟ್ಟೆಯ ಪರಿಮಾಣ ಮತ್ತು ದರಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿ ಒಡಂಬಡಿಕೆ ಮಾಡಿಕೊಳ್ಳತಕ್ಕದ್ದು.

8. ಸಮವಸ್ತ್ರ, ಬಟ್ಟೆಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದಂತೆ ಎಚ್ಚರವಹಿಸತಕ್ಕದ್ದು ಹಾಗೂ ಸಮವಸ್ತ್ರದ ಗುಣಮಟ್ಟ ಪರೀಕ್ಷೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಕೈಗೊಳ್ಳಲು ಕ್ರಮವಹಿಸತಕ್ಕದ್ದು.

9. ಸಮವಸ್ತ್ರ ಗುಣಮಟ್ಟ ವರದಿ ಮೂಲಕ ಸಮವಸ್ತ್ರದ ಗುಣಮಟ್ಟ ಖಾತರಿಪಡಿಸಿಕೊಂಡ ನಂತರ ಸರ್ಕಾರದ ಅನುಮತಿ ಪಡೆದು ಸರಬರಾಜು ಸಂಸ್ಥೆಗಳಿಗೆ ಬಾಕಿ ಮೊತ್ತ ಪಾವತಿ ಮಾಡತಕ್ಕದ್ದು.

10. ಸಮವಸ್ತ್ರ, ಸರಬರಾಜು ನಂತರ ಒಂದು ತಿಂಗಳ ಅವಧಿಯೊಳಗೆ ಮಕ್ಕಳಿಗೆ ಸರಬರಾಜು ಮಾಡಲಾಗಿರುವ ಸಮವಸ್ತ್ರಗಳ ಗುಣಮಟ್ಟ ವರದಿ ಪಡೆಯಲು ಕ್ರಮವಹಿಸತಕ್ಕದ್ದು. ಒಂದು ವೇಳೆ ಕಳಪೆ ಗುಣಮಟ್ಟದ ಸಮವಸ್ತ್ರ, ಸರಬರಾಜು ಕಂಡುಬಂದಲ್ಲಿ ಒಂದು ತಿಂಗಳ ಅವಧಿಯೊಳಗೆ ಬದಲಿ ಸಮವಸ್ತ್ರ ಪೂರೈಸಲು ಕ್ರಮವಹಿಸತಕ್ಕದ್ದು.

11. 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೂ ಮೊದಲು ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ತಲುಪಿಸತಕ್ಕದು.

12. ಸದರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಚಲಿತ ಎಲ್ಲಾ ಖರೀದಿ ನಿಯಮಗಳನ್ನು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ-1999 ಮತ್ತು ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

13. ಶಾಲಾವಾರು ಹಿಂದಿನ ಸಾಲಿನ ಸಮವಸ್ತ್ರಗಳ ಉಳಿಕೆ, ಪ್ರಸ್ತುತ ಸಾಲಿನ ಬೇಡಿಕೆ, ಶಾಲೆಗೆ ಸರಬರಾಜು ಮಾಹಿತಿ, ವಿದ್ಯಾರ್ಥಿಗಳಿಗೆ ವಿತರಿಸಿದ ಮಾಹಿತಿಯನ್ನು ಕಡ್ಡಾಯವಾಗಿ SATS ನಲ್ಲಿ ನಿರ್ವಹಿಸತಕ್ಕದ್ದು.

14. ಒದಗಿಸಲಾದ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸತಕ್ಕದ್ದು ಬಿಡುಗಡೆಗೊಳಿಸಲಾದ ಅನುದಾನಕ್ಕೆ ಆಯುಕ್ತರು, ಶಾಲಾ ಶಿಕ್ಷಣ ಇವರು ನಿಯಮಗಳಂತೆ ಲೆಕ್ಕ ಪತ್ರಗಳನ್ನು ಇಡತಕ್ಕದ್ದು.

15. ಸರ್ಕಾರದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ನಿಗದಿಪಡಿಸತಕ್ಕದ್ದು ಹಾಗೂ ಅದರನ್ವಯ ಭರಿಸಲಾದ ವೆಚ್ಚದ ವಿವರಗಳನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕ ಅವಲೋಕನ (New Decision Support System) ತಂತ್ರಾಂಶದಲ್ಲಿ ಇಂದೀಕರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 788ವೆಚ್ಚ-8/2025 ದಿನಾಂಕ:08.12.2025 ಹಾಗೂ ಸರ್ಕಾರದ ಆದೇಶ ಸಂಖ್ಯೆ: ಆಇ 03 ಟಿಎಫ್ ಪಿ 2025 ದಿನಾಂಕ:24.09.2025 ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ.

Vidyavikasa Scheme 2026–27

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!