Methods of Enquiry in Psychology:ಮನೋವಿಜ್ಞಾನದ ವಿಚಾರಣೆಯ ವಿಧಾನಗಳು- ನೋಟ್ಸ್-04

Methods of Enquiry in Psychology:ಮನೋವಿಜ್ಞಾನದ ವಿಚಾರಣೆಯ ವಿಧಾನಗಳು- ನೋಟ್ಸ್-04

Methods of Enquiry in Psychology: ಮನೋವಿಜ್ಞಾನವೆಂದರೆ ಮಾನವನ ವರ್ತನೆಗಳನ್ನು, ಅನುಭವಗಳನ್ನು ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುವುದೆಂದು ತಿಳಿದಿದ್ದೀರಿ. ನೀವು, ಮನೋವಿಜ್ಞಾನಿಗಳು ಯಾವ ರೀತಿ ಇವುಗಳನ್ನು ಅಭ್ಯಾಸ ಮಾಡಿದ್ದಾರೆ ಎಂಬುವುದನ್ನು ತಿಳಿಯಲು ಕುತೂಹಲರಾಗಿದ್ದೀರಿ. ಯಾವ ವಿಧಾನಗಳನ್ನು ಬಳಸಿ ವರ್ತನೆಗಳನ್ನು ಹಾಗೂ ಮಾನಸಿಕ ಪಕ್ರಿಯಗಳನ್ನು ಅಭ್ಯಸಿಸುತ್ತಾರೆ? ಎಲ್ಲಾ ವಿಜ್ಞಾನಿಗಳಂತೆ ಮನೋವಿಜ್ಞಾನಿಗಳು ತಾವು ಅಭ್ಯಾಸ ಮಾಡುವುದನ್ನು, ವಿವರಿಸಲು, ಊಹಿಸಲು ಮತ್ತು ನಿಯಂತ್ರಿಸಲು ಏನನ್ನು ಅಭ್ಯಸಿಸುತ್ತಾರೆ. ಮನೋವಿಜ್ಞಾನಿಗಳು ತಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಔಪಚಾರಿಕ ಕ್ರಮಬದ್ಧವಾದ ಅವಲೋಕನಗಳನ್ನು ಬಳಸುತ್ತಾರೆ. ಮನೋವಿಜ್ಞಾನಿಗಳು ವಿವಿಧ ರೀತಿಯ ಸಂಶೋಧನಾ ವಿಧಾನಗಳನ್ನು ಬಳಸುತ್ತಾರೆ. ಏಕೆಂದರೆ ಮಾನವನ ವರ್ತನೆಯ ಬಗೆಗಿನ ಪ್ರಶ್ನೆಗಳು ಹಲವಾರು. ಎಲ್ಲವುಗಳನ್ನು ಒಂದೇ ವಿಧಾನದಲ್ಲಿ ಅಭ್ಯಸಿಸಲು ಸಾಧ್ಯವಿಲ್ಲ. ಮನೋವಿಜ್ಞಾನದ ಸಮಸ್ಯೆಗಳನ್ನು ಅಧ್ಯಯನ ಮಾಡಲು, ಅವಲೋಕನ, ಪ್ರಾಯೋಗಿಕ, ಸಹಸಂಬಂಧ ಸಂಶೋಧನ, ಸಮೀಕ್ಷಾ, ಮನೋವೈಜ್ಞಾನಿಕ ಪರೀಕ್ಷೆಗಳು, ‘ವ್ಯಕ್ತಿ ಅಧ್ಯಯನ’ದಂತಹ ಹಲವು ವಿಧಾನಗಳನ್ನು ಹೆಚ್ಚಾಗಿ ಮನೋವಿಜ್ಞಾನದಲ್ಲಿ ಬಳಸಲಾಗುತ್ತದೆ. ಈ ಅಧ್ಯಾಯವು ಮನೋವಿಜ್ಞಾನದ ಗುರಿಗೆ ಮನೋವೈಜ್ಞಾನಿಕ ಅಧ್ಯಯನದಲ್ಲಿ ಸಂಗ್ರಹಿಸಿದ ಮಾಹಿತಿಯ ಸ್ವರೂಪ ಹಾಗೂ ಮನೋವಿಜ್ಞಾನದ ಅಧ್ಯಯನಕ್ಕಾಗಿ ಲಭ್ಯವಿರುವ ವೈವಿಧ್ಯಮಯ ಕ್ರಮಶಾಸ್ತ್ರೀಯ ಸಾಧನಗಳು, ಕೆಲವು ಪ್ರಮುಖ ಸಮಸ್ಯೆಗಳೊಂದಿಗೆ ಪರಿಚಯವನ್ನು ನೀಡುತ್ತದೆ.

ಮನೋವಿಜ್ಞಾನದ ವಿಚಾರಣೆಯ ಗುರಿಗಳು

(Goals of Psychological Enquiry)

ಯಾವುದೇ ವೈಜ್ಞಾನಿಕ ಅಧ್ಯಯನದ ವಿಧಾನದಂತೆ ಮನೋವಿಜ್ಞಾನ ಕೂಡ ಕೆಳಗಂಡ ಗುರಿಗಳನ್ನು ಹೊಂದಿದೆ. ಅವುಗಳೆಂದರೆ ವರ್ತನೆಯ ವರ್ಣನೆ, ಮುನ್ನರಿವು, ವಿವರಣೆ ನಿಯಂತ್ರಣ ಮತ್ತು ಅಧ್ಯಯನಗಳಿಂದ ಪಡೆದ ಜ್ಞಾನವನ್ನು “ವಸ್ತುನಿಷ್ಟ’ ರೀತಿಯಲ್ಲಿ ಸಮಸ್ಯೆ ನಿವಾರಣೆಗೆ ಅನ್ವಯಗೊಳಿಸುವುದು, ನಾವುಗಳು ಮೇಲ್ಕಂಡ ಪದಗಳ ಅರ್ಥವಿವರಣೆಯನ್ನು ತಿಳಿದುಕೊಳ್ಳೋಣ.

ವರ್ಣನೆ :-

ಮನೋವಿಜ್ಞಾನ ಅಧ್ಯಯನದಲ್ಲಿ ವರ್ತನೆಯನ್ನು ಸಾಧ್ಯವಾದಷ್ಟು ನಿಖರವಾಗಿ ಅಧ್ಯಯನ ಮಾಡಲು ಪ್ರಯತ್ನಿಸಲಾಗಿದೆ. ಇದರಿಂದ ಒಂದು ನಿರ್ದಿಷ್ಟ ವರ್ತನೆಯನ್ನು ಇತರ ವರ್ತನೆಗಳಿಂದ ಪ್ರತ್ಯೇಕಿಸಲು ಸಹಾಯವಾಗುತ್ತದೆ. ಉದಾಹರಣೆ : ಅಧ್ಯಯನ ಮಾಡುವ ವ್ಯಕ್ತಿಯು ವಿದ್ಯಾರ್ಥಿಗಳ ಕಲಿಕಾ ಅಭ್ಯಾಸವನ್ನು ಅಧ್ಯಯನ ಮಾಡಲು ಒಲವು ತೋರುತ್ತಾನೆ. ಕಲಿಕಾ ಅಭ್ಯಾಸವು ವಿವಿಧ ರೀತಿಯ ವರ್ತನೆಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ ನಿಯಮಿತವಾಗಿ ಹಾಜರಾಗುವುದು, ನೀಡಿರುವ ಕೆಲಸವನ್ನು ನಿಗದಿತ ಸಮಯಕ್ಕೆ ತಂದೊಪ್ಪಿಸುವುದು, ಕಲಿಕೆಗೆ ವೇಳಾ ಪಟ್ಟಿಯನ್ನು ರೂಪಿಸುವುದು ಮತ್ತು ಅದನ್ನು ಚಾಚು ತಪ್ಪದೆ ಪಾಲಿಸುವುದು. ಓದಿದ್ದನ್ನು ಪ್ರತಿದಿನ ಪುನಾರಾವರ್ತನೆ ಮಾಡುವುದು. ನಿರ್ದಿಷ್ಟ ವರ್ಗದಲ್ಲಿ ಮತ್ತಷ್ಟು ಚಿಕ್ಕ ವಿವರಗಳಾಗಿರಬಹುದು. ಸಂಶೋಧಕನು ಅವನು/ಳು ಕಲಿಕಾ ಅಭ್ಯಾಸಗಳನ್ನು ವಿವರಿಸಬೇಕಾಗಿದೆ. ಈ ವರ್ಣನೆಗೆ ರೆಕಾರ್ಡಿಂಗ್‌ (ದಾಖಲೆಯ) ಅಗತ್ಯವಿರುತ್ತದೆ. ಆಗ ಅದು ತಿಳುವಳಿಕೆಗೆ ಸಹಾಯ ಮಾಡುತ್ತದೆ.

ಮುನ್ನರಿವು :-

ಮನೋವೈಜ್ಞಾನಿಕ ಅಧ್ಯಯನದ ಎರಡನೆಯ ಗುರಿಯೆಂದರೆ ಅದು ವರ್ತನೆಯ ಮುನ್ನರಿವು. ನೀವು ವರ್ತನೆಯನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಮತ್ತು ವಿವರಿಸಲು ಸಾಧ್ಯವಾದರೆ, ಇತರ ರೀತಿಯ ವರ್ತನೆಗಳು, ಘಟನೆಗಳು/ವಿದ್ಯಮಾನಗಳೊಂದಿಗೆ ನಿರ್ದಿಷ್ಟ ವರ್ತನೆಯ ಸಂಬಂಧವನ್ನು ತಿಳಿದುಕೊಳ್ಳುತ್ತೀರಿ. ಕೆಲವು ಪರಿಸ್ಥಿತಿಗಳಲ್ಲಿ ಈ ನಿರ್ದಿಷ್ಟ ವರ್ತನೆಯ ದೋಷದ ಅಂಚಿನಲ್ಲಿ ಸಂಭವಿಸಬಹುದು ಎಂದು ಮುನ್ನರಿಯಬಹುದು. ಉದಾಹರಣೆಗೆ: ಅಧ್ಯಯನದ ಆಧಾರದ ಮೇಲೆ (ಕಲಿಕಾ ಸಮಯ ಮತ್ತು ವಿವಿಧ ವಿಷಯಗಳಲ್ಲಿನ) ಸಾಧನಾ ಮಟ್ಟವನ್ನು ಧನಾತ್ಮಕ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

ಕಲಿಕಾ ಅಧ್ಯಯನದಲ್ಲಿ ಅಧ್ಯಯನ ಮಾಡುವ ವ್ಯಕ್ತಿಯು ವಿವಿಧ ವಿಷಯಗಳಲ್ಲಿ ಆಗಿರುವ ಪ್ರಗತಿಗೂ ಮತ್ತು ಕಲಿಕೆಗೆ ನಿಗದಿಗೊಳಿಸಿರುವ ಸಮಯಕ್ಕೂ ನಡುವೆ ಸಂಬಂಧ ಸ್ಥಾಪಿಸುವುದು. ನಂತರ ವಿದ್ಯಾರ್ಥಿ ಕಲಿಕೆಗಾಗಿ ಹೆಚ್ಚು ಸಮಯ ನಿಗದಿ ಮಾಡಿಕೊಂಡಿದ್ದರೆ, ಆತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾನೆ ಎಂದು ಊಹಿಸಬಹುದು. ಹಲವು ಬಾರಿ ವೀಕ್ಷಿಸಿದಾಗ ಈ ಮುನ್ನರಿವು ಹೆಚ್ಚು ನಿಖರವಾಗುತ್ತದೆ.

ವಿವರಣೆ :-

ಮನೋವೈಜ್ಞಾನಿಕ ಅಧ್ಯಯನದ ಮೂರನೇ
ಗುರಿಯೆಂದರೆ, ವರ್ತನೆಯ ಕಾರಣಗಳನ್ನು ನಿರ್ಧರಿಸುವುದು. ಮನೋವಿಜ್ಞಾನಿಗಳು ವರ್ತನೆಯ ಕಾರಣಗಳನ್ನು ತಿಳಿಯಲು ಆದ್ಯತೆ ನೀಡುತ್ತಾರೆ. ಹಾಗೆಯೇ ಒಂದು ನಿರ್ದಿಷ್ಟ ವರ್ತನೆ ಯಾವ ಸಂದರ್ಭಗಳಲ್ಲಿ ಕಂಡು ಬರುವುದಿಲ್ಲ ಎಂಬುವುದನ್ನು ತಿಳಿಯಲು ಯತ್ನಿಸುತ್ತಾರೆ. ಉದಾಹರಣೆಗೆ : ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಹೆಚ್ಚು ಗಮನ ನೀಡಲು ಕಾರಣ ಏನು? ಕೆಲವು ವಿದ್ಯಾರ್ಥಿಗಳು ಕಲಿಕೆಗೆ ಅತಿ ಕಡಿಮೆ ವೇಳೆ ನಿಗದಿಗೊಳಿಸಲು ಕಾರಣವೇನು? ಆದ್ದರಿಂದ ವಿವರಣೆಯ ಉದ್ದೇಶ ವರ್ತನೆಯ ಕಾರಣಗಳನ್ನು ನಿರ್ಧರಿಸುವುದಾಗಿರುತ್ತದೆ.

ಈ ಗುರಿಯು ಎರಡು ಘಟನೆಗಳ ನಡುವಿನ ಕಾರಣ-ಪರಿಣಾಮದ ನಡುವಿನ ಸಂಬಂಧವನ್ನು ಸ್ಥಾಪಿಸಲು ಅಧ್ಯಯನ ಮಾಡಲಾದ ವರ್ತನೆಗಳು, ನಿರ್ಧಾರಗಳು ಅಥವಾ ಪೂರ್ವಸ್ಥಿತಿಯ ಪರಿಸ್ಥಿತಿಗಳನ್ನು (ಅಂದರೆ ನಿರ್ದಿಷ್ಟ ವರ್ತನೆಗೆ ಕಾರಣವಾದ ಪರಿಸ್ಥಿತಿಗಳ) ಗುರುತಿಸುವುದರೊಂದಿಗೆ ಸಂಬಂಧಿಸಿದೆ.

ನಿಯಂತ್ರಣ :-

ನಿರ್ದಿಷ್ಟ ವರ್ತನೆಯು ಏಕೆ ಸಂಭವಿಸುತ್ತದೆ ಎಂಬುವುದನ್ನು ವಿವರಿಸಲು ನಿಮಗೆ ಸಾಧ್ಯವಾದರೆ, ಅದರ ಪೂರ್ವಭಾವಿ ಪರಿಸ್ಥಿತಿಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಆ ವರ್ತನೆಯನ್ನು ನಿಯಂತ್ರಿಸಬಹುದು. ನಿಯಂತ್ರಣವು ಮೂರು ವಿಷಯಗಳನ್ನು ಸೂಚಿಸುತ್ತದೆ. ಸಂಭವಿಸುವಂತೆ ಮಾಡುವುದು, ಕಡಿಮೆ ಮಾಡುವುದು ಅಥವಾ ಹೆಚ್ಚು ಮಾಡುವದು. ಉದಾಹರಣೆಗೆ ಅಧ್ಯಯನಕ್ಕೆ ನಿಗದಿ ಮಾಡಿರುವ ಸಮಯವನ್ನು ಹೆಚ್ಚು ಮಾಡುವುದು. ಕಡಿಮೆ ಮಾಡುವುದು. ಆಥವ ಅಷ್ಟೇ ಇರುವಂತೆ ನೋಡಿಕೊಳ್ಳುವುದು. ಇನ್ನೊಂದು ಉತ್ತಮ ಉದಾಹರಣೆ ಎಂದರೆ ಮನೋಚಿಕಿತ್ಸೆ ಮೂಲಕ ಮನೋರೋಗಿಯ ಆರೋಗ್ಯದಲ್ಲಿ ನಡತೆಯಲ್ಲಿ ಒಳ್ಳೆಯ ಬದಲಾವಣೆ ಉಂಟುಮಾಡುವುದು.

ಅನ್ವಯ :-

ವೈಜ್ಞಾನಿಕ ವಿಚಾರಣೆಯ ಕೊನೆಯ ಗುರಿ ಎಂದರೆ ‘ಜನರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಉಂಟುಮಾಡುವುದು. ಮನೋವೈಜ್ಞಾನಿಕ ಅಧ್ಯಯನದಲ್ಲಿ ಪ್ರಮುಖವಾಗಿ ವಿವಿಧ ರೀತಿಯ ಸಮಸ್ಯೆಗಳಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವುದಾಗಿದೆ. ಈ ಪ್ರಯತ್ನಗಳಿಂದಾಗಿ ಜನರ ಜೀವನಮಟ್ಟ ಸುಧಾರಣೆ ಮನೋವಿಜ್ಞಾನಿಗಳ ಪ್ರಮುಖ ಕಾಳಜಿಯಾಗಿದೆ. ಉದಾಹರಣೆಗೆ: ಯೋಗ ಮತ್ತು ಧ್ಯಾನದ ಅನ್ವಯಗಳು ದಿನನಿತ್ಯದ ಜೀವನದ ಪ್ರತಿಬಲನ ಕಡಿಮೆ ಮಾಡಲು ಹಾಗು ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.

ವೈಜ್ಞಾನಿಕ ಅಧ್ಯಯನದ ಇತರೆ ಉದ್ದೇಶಗಳೆಂದರೆ ನೂತನ ಸಿದ್ಧಾಂತಗಳನ್ನು, ತತ್ವಗಳನ್ನು ರೂಪಿಸುವುದು ಇದರಿಂದ ಹೆಚ್ಚಿನ ಅಧ್ಯಯನಕ್ಕೆ ಅನುಕೂಲವಾಗುವುದು.

ವೈಜ್ಞಾನಿಕ ಸಂಶೋಧನೆಯನ್ನು ನಡೆಸುವ ಹಂತಗಳು:

ವಿಜ್ಞಾನವು ಏನನ್ನು ವ್ಯಾಖ್ಯಾನಿಸುತ್ತದೆ ಎಂಬುದಕ್ಕಿಂತ ಹೇಗೆ ಅಧ್ಯಯನ ಮಾಡುತ್ತದೆ ಎಂಬುದನ್ನು ನಿರೂಪಿಸುತ್ತದೆ. ವೈಜ್ಞಾನಿಕ ವಿಧಾನವು ಒಂದು ನಿರ್ದಿಷ್ಟ ವರ್ತನೆಯನ್ನು, ವಿದ್ಯಮಾನವನ್ನು ವ್ಯವಸ್ಥಿತವಾಗಿ ಮತ್ತು ಪರೀಕ್ಷಿಸಬಹುದಾದ ರೀತಿಯಲ್ಲಿ ಅಧ್ಯಯನ ಮಾಡುತ್ತದೆ. ವಸ್ತುನಿಷ್ಟತೆ ಎಂದರೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಕ್ತಿಗಳು ಒಂದೇ ವಿಷಯದ ಬಗ್ಗೆ ಸ್ವತಂತ್ರವಾಗಿ ಏಕಕಾಲದಲ್ಲಿ ನಡೆಸಿದ ಅಧ್ಯಯನದ ಅಂತಿಮ ಫಲಿತಾಂಶ ಒಂದೇ ಆಗಿರುತ್ತದೆ. ಉದಾಹರಣೆಗೆ ನೀವು ಮತ್ತು ನಿಮ್ಮ ಸ್ನೇಹಿತರು ಒಂದೇ ಅಳತೆಯ ಸಾಧನವನ್ನು ಬಳಸಿಕೊಂಡು ಮೇಜಿನ ಉದ್ದವನ್ನು ಅಳತೆ ಮಾಡಿದರೆ ಅದರ ಉದ್ದದ ಬಗ್ಗೆ ನೀವಿಬ್ಬರೂ ಒಂದೇ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ.

ವೈಜ್ಞಾನಿಕ ಅಧ್ಯಯನದ ಎರಡನೆಯ ಲಕ್ಷಣ ಎಂದರೆ, ಅಧ್ಯಯನದಲ್ಲಿ ವ್ಯವಸ್ಥಿತ ಕ್ರಮವನ್ನು ಅನುಸರಿಸುವುದು. ಇದು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ. ಸಮಸ್ಯೆಯ ಪರಿಕಲ್ಪನೆ (ಸಮಸ್ಯೆಯ ಆಯ್ಕೆ) ದತ್ತಾಂಶಗಳ ಸಂಗ್ರಹಣೆ, ಸಾರಾಂಶ ನಿರ್ಧಾರ ಮತ್ತು ಅಧ್ಯಯನ ಸಾರಾಂಶ ಮತ್ತು ಸಿದ್ಧಾಂತವನ್ನು ಪರಿಷ್ಕರಿಸುವುದು. ಈ ಹಂತಗಳನ್ನು ವಿವರವಾಗಿ ಚರ್ಚಿಸೋಣ.

(1) ಸಮಸ್ಯೆಯ ಪರಿಕಲ್ಪನೆ (ಅಧ್ಯಯನ ವಿಷಯದ ಆಯ್ಕೆ) :

ವೈಜ್ಞಾನಿಕ ಸಂಶೋಧನೆಯು ಪ್ರಾರಂಭದಲ್ಲಿ ಸಂಶೋಧನೆ ಅಧ್ಯಯನಕ್ಕಾಗಿ ವಿಷಯವನ್ನು ಆಯ್ಕೆ ಮಾಡುವಂತೆ ಮಾಡುತ್ತದೆ. ನಂತರ ಅವನು/ಳು ಗಮನವನ್ನು ಮಿತಿಗೊಳಪಡಿಸಿಕೊಳ್ಳುತ್ತಾರೆ. ನಿರ್ದಿಷ್ಟ ಸಂಶೋಧನಾ ಪ್ರಶ್ನೆಗಳನ್ನು / ಅಧ್ಯಯನಕ್ಕಾಗಿ ಸಮಸ್ಯೆಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಇದನ್ನು ಹಿಂದಿನ ಸಂಶೋಧನೆಗಳಿಂದ ಅವಲೋಕಿಸುವುದರಿಂದ ಮತ್ತು ವೈಯಕ್ತಿಕ ಅನುಭವಗಳಿಂದ ಮಾಡಲಾಗುತ್ತದೆ. ಉದಾಹರಣೆಗೆ: ಹಿಂದೆ ನೀವು ಓದಿದಂತೆ ಸಂಶೋಧಕನು ಆಸಕ್ತಿಗೊಂಡು ವಿದ್ಯಾರ್ಥಿಗಳನ್ನು ಅವಲೋಕಿಸಿ ಅವರ ಅಧ್ಯಯನದ ಅಭ್ಯಾಸಗಳನ್ನು ಅಭ್ಯಾಸ ಮಾಡಿದ್ದಾರೆಂಬುದು, ಈ ಉದ್ದೇಶಕ್ಕಾಗಿ ಅವನು/ಳು ಮೊದಲು ಅಧ್ಯಯನದ ಅಭ್ಯಾಸಗಳ ವಿವಿಧ ಅಂಶಗಳನ್ನು ಗುರುತಿಸಬಹುದು. ತದನಂತರ ಕಲಿಕಾ ಅಭ್ಯಾಸ ತರಗತಿಯಲ್ಲಿ ಅಥವಾ ಮನೆಯಲ್ಲಿ ಹೊಂದಿದ್ದಾನೆಂದು ನಿರ್ಧರಿಸಬಹುದು.

ಮನೋವಿಜ್ಞಾನದಲ್ಲಿ ನಮ್ಮ ವರ್ತನೆಗಳು ಮತ್ತು ಅನುಭವಗಳಿಗೆ ಸಂಭವಿಸಿದ ವೈವಿಧ್ಯಮಯ ಸಮಸ್ಯೆಗಳನ್ನು ಅಧ್ಯಯನ ಮಾಡುತ್ತೇವೆ. ಅವುಗಳು ಈ ಕೆಳಗಿನ ಸಮಸ್ಯೆಗಳಿಗೆ ಸಂಬಂಧಿಸಿರಬಹುದು.

(a) ನಮ್ಮ ಸ್ವಂತ ವರ್ತನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ (ಉದಾಹರಣೆಗೆ: ನಾನು ಸಂತೋಷವಾಗಿದ್ದಾಗ/ದುಃಖವಾಗಿದ್ದಾಗ ಹೇಗೆ ವರ್ತಿಸುತ್ತೇನೆ? ನಮ್ಮ ಸ್ವಂತ ಅನುಭವಗಳನ್ನು ಮತ್ತು ವರ್ತನೆಗಳನ್ನು ನಾವು ಹೇಗೆ ಬಿಂಬಿಸುತ್ತೇವೆ? ನಾವು ಏಕೆ ಮರೆಯುತ್ತೇವೆ?).

(b) ಇತರ ವ್ಯಕ್ತಿಯ ವರ್ತನೆಗಳನ್ನು ಅರ್ಥಮಾಡಿಕೊಳ್ಳುವುದು (ಉದಾಹರಣೆಗೆ: ‘ಅಂಕುರ’ನಿಗಿಂತ, ಅಭಿನವ್ ಹೆಚ್ಚು ಬುದ್ದಿವಂತನೇ? ಕೆಲವರು ಏಕೆ ಯಾವಾಗಲೂ ಇತರರಿಗಿಂತ ನಿಗದಿತ ಸಮಯದಲ್ಲಿ ಕೆಲಸವನ್ನು ಮುಗಿಸುವುದಿಲ್ಲ? ಧೂಮಪಾನದ ಅಭ್ಯಾಸವನ್ನು ನಿಯಂತ್ರಿಸಬಹುದೇ? ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಕೆಲವರು ಏಕೆ ಔಷಧಗಳನ್ನು ತೆಗೆದುಕೊಳ್ಳುತ್ತಿಲ್ಲಾ?

(c) ವ್ಯಕ್ತಿಯ ವರ್ತನೆ ಮೇಲೆ ಗುಂಪಿನ ಪ್ರಭಾವಗಳು (ಉದಾಹರಣೆಗೆ: ತನ್ನ ಕೆಲಸ ಬಿಟ್ಟು ರಹೀಮನು ಏಕೆ ಹೆಚ್ಚಿನ ಸಮಯವನ್ನು ಜನರೊಂದಿಗೆ ಸೇರಲು ಬಯಸುತ್ತಾನೆ?)

ಸೈಕಲ್ ಸವಾರನು ಒಬ್ಬನೇ ಸೈಕಲ್ ಸವಾರಿ ಮಾಡುವುದಕ್ಕಿಂತ ಗುಂಪಿನಲ್ಲಿ ಸೈಕಲ್ ಸವಾರಿ ಮಾಡುವಾಗ ಏಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾನೆ?

(d) ಗುಂಪು ವರ್ತನೆಗಳು (ಉದಾಹರಣೆಗೆ: ಜನರು ಗುಂಪಿನಲ್ಲಿರುವಾಗ ಅಪಾಯ ತೆಗೆದುಕೊಳ್ಳುವ ವರ್ತನೆ ಏಕೆ ಹೆಚ್ಚಾಗುತ್ತದೆ?)

(e) ಸಾಂಸ್ಥಿಕ ವರ್ತನೆಗಳು (ಉದಾಹರಣೆಗೆ: ಕೆಲವು ಸಂಸ್ಥೆಗಳು ಏಕೆ ಹೆಚ್ಚು ಯಶಸ್ವಿಯಾಗುತ್ತದೆ? ಉದ್ಯೋಗದಾರನು ಉದ್ಯೋಗಿಗಳಲ್ಲಿ ಹೇಗೆ ಅಭಿಪ್ರೇರಣೆ ಉಂಟುಮಾಡಬಹುದು?)

ಈ ಪಟ್ಟಿಯು ಉದ್ದವಾಗಿದೆ ಮತ್ತು ನಂತರದ ಅಧ್ಯಾಯಗಳಲ್ಲಿ ನೀವು ವಿವಿಧ ಅಂಶಗಳ ಬಗ್ಗೆ ಕಲಿಯುವಿರಿ. ನಿಮಗೆ ಕಲಿಯಲು ಆಸಕ್ತಿ ಇದ್ದರೆ, ನೀವು ತನಿಖೆ ಮಾಡಲು ಇಷ್ಟಪಡುವ ಹಲವಾರು ಸಮಸ್ಯೆಗಳನ್ನು ಬರೆಯಬಹುದು. ಸಮಸ್ಯೆಯನ್ನು ಗುರುತಿಸಿದ ನಂತರ ಸಂಶೋಧನಕಾರನು ಸಮಸ್ಯೆಗೆ ತಾತ್ಕಾಲಿಕ ಉತ್ತರವನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಾನೆ ಇದನ್ನು ಪ್ರಾಕ್ಕಲ್ಪನೆ ಎನ್ನುತ್ತೇವೆ.

ಉದಾಹರಣೆಗೆ: ಸಂಶೋಧನಾಕಾರನು ತನ್ನ ಹಿಂದಿನ ಅನುಭವಗಳ ಆಧಾರದ ಮೇಲೆ ಅಥವಾ ಅವಲೋಕನದ ಆಧಾರದ ಮೇಲೆ ಪ್ರಾಕ್ಕಲ್ಪನೆಗಳನ್ನು ರೂಪಿಸಬಹುದು. “ಮಕ್ಕಳು ದೂರದರ್ಶನದಲ್ಲಿ ಹೆಚ್ಚಾಗಿ ಹಿಂಸೆಗೆ ಸಂಬಂಧಿಸಿದ ವಿಷಯಗಳನ್ನು ನೋಡುತ್ತಿದ್ದಾರೆ. ಅವರು ಪ್ರದರ್ಶಿಸುವ ಆಕ್ರಮಣಶೀಲತೆ ಪ್ರಮಾಣವು ಹೆಚ್ಚಾಗಿರುತ್ತದೆ”. ನಿಮ್ಮ ಸಂಶೋಧನೆಯಲ್ಲಿ ನೀವು ಈಗ ಈ ವ್ಯಾಖ್ಯಾನ ಸರಿ/ತಪ್ಪೆ ಎಂಬುವುದನ್ನು ಸಾಬೀತುಪಡಿಸಲು ಪ್ರಯತ್ನಿಸಬೇಕು.

2) ದತ್ತಾಂಶಗಳ ಸಂಗ್ರಹಣೆ :

ವೈಜ್ಞಾನಿಕ ಸಂಶೋಧನೆಯ ಎರಡನೇ ಹಂತ ದತ್ತಾಂಶಗಳನ್ನು ಸಂಗ್ರಹಿಸುವುದು. ದತ್ತಾಂಶಗಳ ಸಂಗ್ರಹಣೆಯು ಸಮಸ್ಯೆಯ ಪ್ರಕಾರ, ಸಂಶೋಧನಾ ವಿನ್ಯಾಸ/ ಸಂಶೋಧನಾ ನೀಲನಕ್ಷೆಯನ್ನು ಒಳಗೊಂಡಿರಬೇಕು. ಇದು ನಾಲ್ಕು ಅಂಶಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.

(a) ಅಧ್ಯಯನದಲ್ಲಿ ಭಾಗವಹಿಸುವವರು

(b) ದತ್ತಾಂಶಗಳ ಸಂಗ್ರಹಣೆಯ ವಿಧಾನಗಳು

(c) ಸಂಶೋಧನೆಯಲ್ಲಿ ಬಳಸುವ ಸಾಧನೆಗಳು ಮತ್ತು

(d) ದತ್ತಾಂಶಗಳ ಸಂಗ್ರಹಣೆಯ ಕಾರ್ಯ ವಿಧಾನ, ಅಧ್ಯಯನದ ಸ್ವರೂಪಕ್ಕನುಗುಣವಾಗಿ ಯಾರು ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ರೀತಿಯ ಅರ್ಥೈಸುವಿಕೆಯ ವಿಧಾನ ಬಂದಿದೆ. ಇದು ಮಾನವನ ವರ್ತನೆಯ ಅರ್ಥೈಸುವಿಕೆ ಮತ್ತು ಮುನ್ನರಿವನ್ನು ಹೊಂದಿದೆ.

ಮಾನವನ ವರ್ತನೆ ಮತ್ತು ಅನುಭವದ ಸಂಕೀರ್ಣ ಸ್ವರೂಪದ ದೃಷ್ಟಿಯಿಂದ ಅದರ ಭೌತಿಕ ತನಿಖೆಯ ವಿಧಾನಕ್ಕಿಂತ ಭಿನ್ನವಾಗಿರಬೇಕು ಎಂಬ ನಿಲುವನ್ನು ತೆಗೆದುಕೊಳ್ಳುತ್ತದೆ. ಈ ದೃಷ್ಟಿಕೋನವು ಮಾನವರು ನಿರ್ದಿಷ್ಟ ಸಂದರ್ಭದಲ್ಲಿ ಸಂಭವಿಸಿದಂತೆ ಅವುಗಳನ್ನು ಹೇಗೆ ಅರ್ಥೈಸುತ್ತಾರೆ ಎಂಬುವುದರ ಮಹತ್ವವನ್ನು ಒತ್ತಿ ಹೇಳುತ್ತದೆ.

ಬಾಹ್ಯ ಅಂಶಗಳಿಂದ ಬಳಲುತ್ತಿರುವ ವ್ಯಕ್ತಿಗಳು (ಉದಾಹರಣೆಗೆ – ಸುನಾಮಿ, ಭೂಕಂಪ ಮತ್ತು ಚಂಡಮಾರುತ) ಮತ್ತು ಆಂತರಿಕ ಅಂಶಗಳು (ಉದಾಹರಣೆಗೆ ದೀರ್ಘಕಾಲಿನ ಅನಾರೋಗ್ಯ ಇತ್ಯಾದಿ) ಇಂತಹ ಸಂದರ್ಭಗಳಲ್ಲಿ ವಸ್ತುನಿಷ್ಟ ಮಾಪನವು ಸಾಧ್ಯವಿಲ್ಲ ಅಥವಾ ಅಪೇಕ್ಷಣೀಯವು ಅಲ್ಲ.

ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಅನುಭವಗಳ ಮೇಲೆ ಹಾಗೂ ಸಂದರ್ಭಗಳ ಮೇಲೆ ವಾಸ್ತವವನ್ನು ಅರ್ಥೈಸುತ್ತಾರೆ. ಆದ್ದರಿಂದ ನಾವು ವಾಸ್ತವದ ವ್ಯಕ್ತಿನಿಷ್ಟ ವ್ಯಾಖ್ಯಾನವನ್ನು ಅರ್ಥೈಸಿಕೊಳ್ಳಬೇಕು. ನೈಸರ್ಗಿಕ ಅರಿವಿಗೆ ಅಡ್ಡಿಪಡಿಸದೆ ಇಲ್ಲಿ ಮಾನವನ ಅನುಭವ ಹಾಗೂ ವರ್ತನೆಗಳನ್ನು ವಿವಿಧ ಅಂಶಗಳನ್ನು ಅನ್ವೇಷಿಸುವುದು ಇದರ ಗುರಿಯಾಗಿದೆ. ಉದಾಹರಣೆ- ಅನ್ವೇಷಕನು ಏನನ್ನು ಹುಡುಕುತ್ತಿದ್ದಾನೆ/ಳೆ? ಅದನ್ನು ಹೇಗೆ ಹುಡುಕುತ್ತಿದ್ದಾನೆ. ಹೇಗೆ ನೋಡಬೇಕು ಮತ್ತು ಏನನ್ನು ನೋಡಬೇಕು ಎಂಬುದು ತಿಳಿದಿರುವುದಿಲ್ಲ.

ಗುರುತು ಹಾಕಿದ ಅರಣ್ಯವನ್ನು ನಕ್ಷೆ ಮಾಡಲು ಪ್ರಯತ್ನಿಸುತ್ತಾನೆ. ಪ್ರದೇಶದ ಬಗ್ಗೆ ಸ್ವಲ್ಪ / ಯಾವುದೇ ಪೂರ್ವ ಜ್ಞಾನವಿಲ್ಲದೆ ಅವನ/ಅವಳ ಮುಖ್ಯ ಕಾರ್ಯವು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಕಂಡುಬರುವ ವಿವರವಾದ ವಿವರಣೆಯನ್ನು ದಾಖಲಿಸುವುದು.

ವೈಜ್ಞಾನಿಕ ಮತ್ತು ವಿವರಣಾತ್ಮಕ ಸಂಪ್ರದಾಯಗಳೆರಡೂ ಸಹ ಇತರರ ವರ್ತನೆ ಮತ್ತು ಅನುಭವಗಳನ್ನು ಕುರಿತು ಅಧ್ಯಯಿಸುತ್ತವೆ. ಹಾಗಾದರೆ ನಮ್ಮ ವೈಯಕ್ತಿಕ ಅನುಭವಗಳಲ್ಲಿ ವರ್ತನೆಗಳ ಬಗ್ಗೆ ಏನು ಹೇಳುತ್ತವೆ? ಮನೋವಿಜ್ಞಾನದ ವಿದ್ಯಾರ್ಥಿಯಾಗಿ ನೀವು ನಿಮ್ಮನ್ನು ಪ್ರಶ್ನಿಸಿಕೊಳ್ಳಬೇಕು ನಾನು ಏಕೆ ದುಃಖಿತವಾಗಿರುವೇ? ಅನೇಕ ಬಾರಿ ನೀವು ಕೆಲವು ಪ್ರತಿಜ್ಞೆಗಳನ್ನು ಮಾಡುವಿರಿ.

ಆಹಾರ ಕ್ರಮದಲ್ಲಿ ನಿಯಂತ್ರಣ ಅಥವಾ ಅಧ್ಯಯನಕ್ಕೆ ಹೆಚ್ಚಿನ ಸಮಯ ವಿನಿಯೋಗಿಸಬೇಕೆಂದು, ಆದರೆ ವಾಸ್ತವ್ಯದಲ್ಲಿ ನೀವು ಊಟಮಾಡುವಾಗ ಅಥವಾ ಓದುವಾಗ ನೀವು ಇದನ್ನು ಮರೆಯುವಿರಿ.

ನಿಮಗೆ ಆಶ್ಚರ್ಯವೆನಿಸಬಹುದು. ಏಕೆ ವ್ಯಕ್ತಿಯು ತನ್ನನ್ನು ಮತ್ತು ತನ್ನ ವರ್ತನೆಯನ್ನು ನಿಯಂತ್ರಿಸಲು ಆಗುವುದಿಲ್ಲ. ‘ಮನೋವಿಜ್ಞಾನವು ನಿಮಗೆ ನಿಮ್ಮ ಅನುಭವಗಳನ್ನು ಆಲೋಚನಾ ಪ್ರಕ್ರಿಯೆಗಳನ್ನು ಮತ್ತು ವರ್ತನೆಗಳನ್ನು ವಿಶ್ಲೇಷಿಸಲು ಸಹಾಯ ಮಾಡಬಹುದಲ್ಲವೇ’? ಖಂಡಿತ ಸಹಾಯ ಮಾಡುತ್ತದೆ.

ಮನೋವೈಜ್ಞಾನಿಕ ವಿಚಾರಣೆಯು ಒಬ್ಬರ ಸ್ವಂತ ಅನುಭವಗಳು ಮತ್ತು ಒಳ ನೋಟಗಳನ್ನು ಪ್ರತಿಬಿಂಬಿಸುವ ಮೂಲಕ ಸ್ವಯಂ ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.

Methods
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!