Promotion:ಮುಂಬಡ್ತಿ ಬಿಟ್ಟು ಕೊಡುವುದು|1977ರ ನಿಯಮ 4ಎಸಾಮಾನ್ಯ ನೌಕರಿ ಬಡ್ತಿ ನಿಯಮಗಳು 1977ರ ನಿಯಮ 4ಎ
Promotion: ಸಾಮಾನ್ಯವಾಗಿ ನೌಕರನು ಒಂದು ನಿರ್ದಿಷ್ಟ ಹುದ್ದೆಗೆ ನೇಮಕಾತಿ ಹೊಂದಿದ ಮೇಲೆ ಕಾಲಕಾಲಕ್ಕೆ ಅವನ ಜೇಷ್ಠತೆ ಮತ್ತು ಅರ್ಹತೆಗಳಿಗನುಗುಣವಾಗಿ ಮುಂದಿನ ಹುದ್ದೆಗೆ ಮುಂಬಡ್ತಿ/ಪದೋನ್ನತಿ ಹೊಂದಿ ವೇತನ/ವೇತನ ಶ್ರೇಣಿ ಬದಲಾಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ..
ಮುಂಬಡ್ತಿ (Promotion) ಬಿಟ್ಟು ಕೊಡುವುದು (“Forgo”)
ಒಂದು ವೇಳೆ….ನೌಕರರು ಬಡ್ತಿಯನ್ನು ಬಿಟ್ಟಕೊಡಲು ಮುಂದಾದರೆ
ಕರ್ನಾಟಕ ಮುಖ್ಯ ಸೇವಾ ಸಾಮಾನ್ಯ ನೌಕರಿ ಬಡ್ತಿ ನಿಯಮಗಳು 1977ರ ನಿಯಮ 4ಎ ರಂತೆ ಸರ್ಕಾರಿ ನೌಕರನು ಪದೋನ್ನತಿ ಪಡೆಯಲು ವಿವಿಧ ಕಾರಣದಿಂದ ತಾತ್ಕಾಲಿಕವಾಗಿ ನಿರಾಕರಿಸಿದರೆ /ಇಚ್ಛಿಸದಿದ್ದರೆ ಪದೋನ್ನತಿ ಆದೇಶ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗೆ ಹಾಗೆ ನೀಡಲಾದ ಪದೋನ್ನತಿಯನ್ನು ಬಿಟ್ಟುಕೊಡಲು ನೇಮಕ ಪ್ರಾಧಿಕಾರದ ಅನುಮತಿಯನ್ನು ಕೋರಿ ಲಿಖಿತ ಮನವಿ ಸಲ್ಲಿಸಬಹುದು.
ಅಂಥ ಕೋರಿಕೆ/ಮನವಿಯನ್ನು ಪರಿಗಣಿಸಿದ ಮೇಲೆ ಬಡ್ತಿಯನ್ನು ಬಿಟ್ಟುಕೊಡಲು ನೀಡಿರುವ ಕಾರಣಗಳು ಅಂಗೀಕಾರರ್ಹವೆಂದು ನೇಮಕಾತಿ ಪ್ರಾಧಿಕಾರಕ್ಕೆ ಕಂಡು ಬಂದರೆ, ಆಗ ಬಡ್ತಿಯನ್ನು ಬಿಟ್ಟುಕೊಡಲು ಸರ್ಕಾರಿ ನೌಕರನಿಗೆ ಆ ಪ್ರಾಧಿಕಾರವು ಅನುಮತಿ ನೀಡಬಹುದು.
ಮಹಿಳಾ ನೌಕರರು ಬಡ್ತಿಯನ್ನು ಬಿಟ್ಟಕೊಡುವುದಕ್ಕಾಗಿ ಅನುಮತಿ ಕೋರಿ ಸಲ್ಲಿಸಿರುವ ಅಂಥ ಕೋರಿಕೆಗಳನ್ನು ಸಾಮಾನ್ಯವಾಗಿ ನಿರಾಕರಿಸತಕ್ಕದ್ದಲ್ಲ ಎಂದು ತಿಳಿಸಲಾಗಿದೆ…
1. ಹೀಗೆ ಸರ್ಕಾರಿ ನೌಕರನು ಬಡ್ತಿ ಬಿಟ್ಟುಕೊಡುವ ಬಗ್ಗೆ ಲಿಖಿತ ಮನವಿ ಸಲ್ಲಿಸಿದ ದಿನಾಂಕದಿಂದ 1 ವರ್ಷದ ಅವಧಿಯವರೆಗೆ…
ಅಥವಾ…
2. ಬಡ್ತಿಗಾಗಿ ಪರಿಗಣಿಸಲಾಗುವ ನಿಕಟ ತರುವಾಯದ ದಿನಾಂಕವರೆಗೆ ಅವನನ್ನು ಪದೋನ್ನತಿಗಾಗಿ ಪರಿಗಣಿಸತಕ್ಕದ್ದಲ್ಲ.
ನಂತರದಲ್ಲಿ ತಾತ್ಕಾಲಿಕವಾಗಿ ಪದೋನ್ನತಿ ನಿರಾಕರಿಸಿದ್ದ ನೌಕರನಿಗೆ ಮತ್ತೇ ಪದೋನ್ನತಿಗೆ ಅವಕಾಶ ನೀಡಿ ಆ ನೌಕರನನ್ನು ಸಹ ಪದೋನ್ನತಿಗೆ ಪರಿಗಣಿಸಲಾಗುವುದು. ಈ ರೀತಿ ಪರಿಗಣಿಸಿದಾಗ ಆ ನೌಕರನು ಪದೋನ್ನತಿ ಪಡೆದರೆ ಆಗ ಆ ನೌಕರನ ಜೇಷ್ಠತೆಯು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನು ಆಗ ಆ ನೌಕರನು ಈ ಹಿಂದೆ ಪದೋನ್ನತಿ ನಿರಾಕರಿಸಿದ್ದರ ಪರಿಣಾಮವಾಗಿ ಆ ನೌಕರನ ಕಿರಿಯರಿಗಿಂತ ಜೇಷ್ಠತೆಯಲ್ಲಿ ಕಿರಿಯರಾಗುತ್ತಾರೆ.
ಒಂದು ವೇಳೆ ಆ ನೌಕರನು ಪದೋನ್ನತಿ ಪಡೆಯಲು ಮತ್ತೋಮ್ಮೆ ನಿರಾಕರಿಸಿದರೆ ಆ ನಿರಾಕರಣೆಯನ್ನು ಶಾಶ್ವತವಾಗಿ ನಿರಾಕರಿಸಿದಂತೆ ಎಂದು ಲಿಖಿತವಾಗಿ ಬರೆಸಿಕೊಂಡು ಸೇವಾಪುಸ್ತಕದಲ್ಲಿ ನಮೂದಿಸಲಾಗುತ್ತದೆ.
ಶಾಶ್ವತವಾಗಿ ಪದೋನ್ನತಿ ನಿರಾಕರಿಸಿದ ನೌಕರನು ಪದೋನ್ನತಿ ಇಲ್ಲದೆ ತನ್ನ ಧೀರ್ಘ ಸೇವೆಗಾಗಿ ಪಡೆಯಬಹುದಾಗಿದ್ದ 10, 15, 20 ವರ್ಷಗಳ ಹಾಗೂ ಕರ್ನಾಟಕ ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ12ಎಸ್‌ಆರ್‌ಪಿ (8) ದಿನಾಂಕ 14-6-2012ರನ್ವಯ 25 ವರ್ಷಗಳ ಮತ್ತು 30 ವರ್ಷಗಳ ಹೆಚ್ಚುವರಿ ವೇತನ ದಿನಾಂಕ 14-6-2012ರನ್ವಯ 25 ವರ್ಷಗಳ ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ನೀಡುವುದಿಲ್ಲ ಹಾಗೂ ಸ್ಥಗಿತ ವೇತನ ಬಡ್ತಿಯನ್ನು ಸಹಾ ನೀಡುವಂತಿಲ್ಲ…
ಹೀಗೆ ತನ್ನ ಧೀರ್ಘಾವಧಿಯ ಸೇವೆಯಲ್ಲಿ ಪದೋನ್ನತಿ ನಿರಾಕರಿಸಿದ್ದರಿಂದ ತನ್ನ ವೇತನ ಶ್ರೇಣಿಯು ಬದಲಾಗುವುದಿಲ್ಲ. ಯಾವುದೇ ವೇತನವು ಸಹಾ ಹೆಚ್ಚಾಗುಧನ್ಯವಾದಗಳು ಪದೋನ್ನತಿ ನಿರಾಕರಣೆಯಿಂದಾಗಿ ತನ್ನ ಧೀರ್ಘ ಸೇವಾವಧಿಯಲ್ಲಿ ಒಂದೇ ವೇತನ ಶ್ರೇಣಿಯಲ್ಲಿ ಉಳಿಯಬೇಕಾಗುತ್ತದೆ..
