KSPSTA Election: ಶಿಕ್ಷಕರ ಸಂಘಕ್ಕೆ ಮೇ 10ಕೆ ಚುನಾವಣೆ, ಫಲಿತಾಂಶ: ಪರಿಷ್ಕತ ವೇಳಾಪಟ್ಟಿ ಪ್ರಕಟ
KSPSTA Election: KSPSTA ಶಿಕ್ಷಕರ ಸಂಘ ಚುನಾವಣೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ಸಂಪೂರ್ಣ ವೇಳಾಪಟ್ಟಿ ಮತ್ತು ಫಲಿತಾಂಶದ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಕೆಆರ್ ಪಿಎಸ್ಎಸ್ ) 2026-31ರ ಅವಧಿಯ ಚುನಾವಣೆಗೆ ಸಂಬಂಧಿಸಿ ರಾಜ್ಯ ಚುನಾವಣಾಧಿಕಾರಿಗಳು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ಮತ್ತು ತಾಲೂಕು, ವಿಶೇಷ, ಯೋಜನಾ ಪದಾಧಿಕಾರಿಗಳ ಚುನಾವಣೆಗೆ ಅರ್ಹ ಮತದಾರರ ಯಾದಿ ಮೇ 4ಕ್ಕೆ ಪ್ರಕಟವಾಗಲಿದೆ.
ಮೇ 4, 5 ಕ್ಕೆ ನಾಮಪತ್ರಗಳ ವಿತರಣೆ ಮತ್ತು ಸ್ವೀಕಾರ ನಡೆಯಲಿದ್ದು, ಮೇ 6ಕ್ಕೆ ಪರಿಶೀಲನೆ ನಡೆಯಲಿದೆ. ಮೇ 10ಕೆ ಬೆಳಗೆ ) 10ಕ್ಕೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12.30ರ ತನಕ ಚುನಾವಣೆ, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಮತದಾನ ಬಾಕಿ ಇರುವ ಕಡೆಗಳಲ್ಲಿ ಮೇ 1ಕ್ಕೆ ಬೆಳಗ್ಗೆ 8:30 ರಿಂದ ಸಂಜೆ 4:30ರವರೆಗೆ ಮತದಾನ ನಡೆದು ಆ ಬಳಿಕ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ.
ಈ ಹಿಂದೆ ಏಪ್ರಿಲ್ 1ಕ್ಕೆ ಚುನಾ ವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಏಕಸದಸ್ಯ ಪೀಠದ ತಡೆಯಾಜ್ಞೆಯಿಂದಾಗಿ ಏ.18ರಂದು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.
ಇದೀಗ ತಡೆಯಾಜ್ಞೆ ತೆರವಿನಿಂದ ಸ್ಥಗಿತಗೊಂಡಿದ್ದ ಹಂತದಿಂದಲೇ ಪ್ರಕ್ರಿಯೆ ಪುನರಾರಂಭಗೊಂಡಿದೆ.
