Distribution of Textbooks:2026-27ನೇ ಸಾಲಿನ ಪಠ್ಯಪುಸ್ತಕ ವಿತರಣೆ ಆರಂಭ| ಶಾಲೆಗಳಿಗೆ ಮಹತ್ವದ ಸೂಚನೆ

Distribution of Textbooks:2026-27ನೇ ಸಾಲಿನ ಪಠ್ಯಪುಸ್ತಕ ವಿತರಣೆ ಆರಂಭ| ಶಾಲೆಗಳಿಗೆ ಮಹತ್ವದ ಸೂಚನೆ

Distribution of Textbooks: 2026–27ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ವಿತರಣೆ ಕುರಿತು ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿ, ಮಾರ್ಗಸೂಚಿಗಳು, ವಿತರಣಾ ಪ್ರಕ್ರಿಯೆ, ಶಾಲೆಗಳಿಗಾಗಿ ಸೂಚನೆಗಳು ಹಾಗೂ ಪ್ರಮುಖ ನವೀಕರಣಗಳನ್ನು ಇಲ್ಲಿ ತಿಳಿದುಕೊಳ್ಳಿ.

2026-27 ನೇ ಶೈಕ್ಷಣಿಕ ಸಾಲಿಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ಇಂದ 10 ನೇ ತರಗತಿ ಪಠ್ಯಪುಸ್ತಕಗಳು ಹಾಗೂ ದಿನಚರಿಗಳು, 4 ರಿಂದ 9 ನೇ ತರಗತಿ ಅಭ್ಯಾಸ ಪುಸ್ತಕಗಳು ಹಾಗೂ 1 ರಿಂದ 10 ನೇ ತರಗತಿ ಮೌಲ್ಯ ಶಿಕ್ಷಣ ಪುಸ್ತಕಗಳನ್ನು SATS ತಂತ್ರಾಂಶದ ಮೂಲಕ ಸಲ್ಲಿಕೆಯಾಗಿರುವ ಬೇಡಿಕೆಯಂತೆ ಮುದ್ರಿಸಿ ಸರಬರಾಜು ಮಾಡಲು ಕಾರ್ಯಾದೇಶವನ್ನು ಜಾರಿಗೊಳಿಸಲಾಗಿದೆ. ಕಾರ್ಯಾದೇಶದಂತೆ ಮುದ್ರಕರು ಪಠ್ಯಪುಸ್ತಕಗಳನ್ನು ಮುದ್ರಿಸಿ ತಾಲ್ಲೂಕು ಗೋದಾಮುಗಳಿಗೆ ಸರಬರಾಜು ಮಾಡಲಾಗುತ್ತಿದೆ.

2026-27ನೇ ಸಾಲಿಗೆ ಮುದ್ರಕರಿಂದ ಸರಬರಾಜಾಗುವ ಪಠ್ಯಪುಸ್ತಕಗಳನ್ನು ಪಡೆದು ನಿಖರ ಮಾಹಿತಿಯನ್ನು SATS ತಂತ್ರಾಂಶದಲ್ಲಿ ನಮೂದಿಸುವುದು. SATS ತಂತ್ರಾಂಶದ DC ಯೊಂದಿಗೆ ಭೌತಿಕವಾಗಿಯೂ ಸಹ DC ಗಳನ್ನು ಸೃಜಿಸಲಾಗಿದ್ದು, ಎಲ್ಲಾ DC ಗಳನ್ನು ಪರಿಶೀಲಿಸಿ SATS ತಂತ್ರಾಂಶದಲ್ಲಿ ಹಾಗೂ ಭೌತಿಕ DC ಗಳನ್ನು Stock Register ನಲ್ಲಿ ದಾಖಲಿಸುವುದು. ಸ್ವೀಕೃತವಾಗಿರುವ ಪಠ್ಯಪುಸ್ತಕಗಳ ಸಂಖ್ಯೆಗೆ ಮಾತ್ರ DC ಯಲ್ಲಿ ಸಹಿ, ದಿನಾಂಕ ಮತ್ತು ಮೊಹರಿನೊಂದಿಗೆ ದೃಢೀಕರಣ ನೀಡುವುದು. ದೃಢೀಕೃತ DC ಆಧಾರದ ಮೇಲೆ ಮುದ್ರಕರಿಗೆ ಹಣ ಪಾವತಿಯಾಗುವುದರಿಂದ ಎಚ್ಚರಿಕೆಯಿಂದ ಪರಿಶೀಲಿಸಿಕೊಂಡು DC ಗಳಲ್ಲಿ ದೃಡೀಕರಣ ನೀಡುವುದು. ಮುಂದಿನ ದಿನಗಳಲ್ಲಿ ಇದರಲ್ಲಿ ವ್ಯತ್ಯಾಸ ಉಂಟಾದಲ್ಲಿ ಸಂಬಂಧಿಸಿದವರನ್ನೇ ನೇರ ಹೊಣೆಗಾಗರರನ್ನಾಗಿ ಮಾಡಲಾಗುವುದು.

2026-27ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳನ್ನು ದಿನಾಂಕ:18-05-2026 ರಿಂದ ಬೇಡಿಕೆಯನ್ವಯ ಶಾಲೆಗಳಿಗೆ ವಿತರಿಸಲು ವೇಳಾಪಟ್ಟಿಯನ್ನು ತಯಾರಿಸಿಕೊಂಡು ಕ್ರಮವಹಿಸುವುದು. ಅನುದಾನರಹಿತ ಶಾಲೆಗಳಿಗೆ ಶೇ.25 ರಷ್ಟು ಮುಂಗಡವನ್ನು ಪಾವತಿಸಲು ಸೂಚಿಸಲಾಗಿದ್ದು, ಪ್ರಸ್ತುತ ಶೇ.100 ರಷ್ಟು ಮೊತ್ತವನ್ನು ಪಾವತಿಸಿದ ನಂತರ ಪಠ್ಯಪುಸ್ತಕಗಳನ್ನು ವಿತರಿಸಲು ಕ್ರಮವಹಿಸುವುದು.

ಮಾರಾಟ ವಿಭಾಗದಲ್ಲಿ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸಿ ಮುಂಗಡ ಮೊತ್ತವನ್ನು ಪಾವತಿಸದೇ ಇರುವ ಶಾಲೆಗಳಿಂದ ಶೇ.100 ರಷ್ಟು ಮೊತ್ತ ಪಾವತಿಸುವಂತೆ ಕ್ರಮವಹಿಸಿ ನಂತರ ಪಠ್ಯಪುಸ್ತಕಗಳನ್ನು ವಿತರಿಸುವುದು.

ಉಚಿತ ಪಠ್ಯಪುಸ್ತಕಗಳ ವಿತರಣೆಗೆ ಸಂಬಂಧಿಸಿದಂತೆ, 2026-27ನೇ ಸಾಲಿಗೆ ಮುಖ್ಯ ಶಿಕ್ಷಕರ ಖಾತೆಗೆ DBT ಮುಖಾಂತರ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಸಾಗಾಣಿಕ ವೆಚ್ಚವನ್ನು ನಿಗಧಿಪಡಿಸಿ ಮುಖ್ಯ ಶಿಕ್ಷಕರ ಖಾತೆಗೆ ಜಮಾ ಮಾಡಲಾಗುವುದು. ಅದರಂತೆ ಮುಖ್ಯ ಶಿಕ್ಷಕರು ತಾಲ್ಲೂಕು ಗೋದಾಮಿನಿಂದ ಪಠ್ಯಪುಸ್ತಕಗಳನ್ನು ಪಡೆದು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಕ್ರಮವಹಿಸುವುದು.

ಉಪನಿರ್ದೇಶಕರು(ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಶಾಲಾ ಪ್ರಾರಂಭೋತ್ಸವದ ಮುಂಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸಲು ಹಾಗೂ ಈ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮವಹಿಸುವುದು. ಈ ಕುರಿತು ಹೊರಡಿಸಲಾದ ಸುತ್ತೋಲೆ.

Distribution of Textbook

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!