SPEAK FOR INDIA:The country’s biggest debate competition-2025
SPEAK FOR INDIA: ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಮನಸ್ಸುಗಳಿಗೆ ದೇಶದ ಅತಿದೊಡ್ಡ ಚರ್ಚಾ ವೇದಿಕೆಯಾಗಿರುವ ‘ಸ್ಪೀಕ್ ಫಾರ್ ಇಂಡಿಯಾ’ದಲ್ಲಿ ತಮ್ಮ ಚರ್ಚಾ ಕೌಶಲಕ್ಕೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ.
ವಿಜಯ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನವು ವಿದ್ಯಾರ್ಥಿಗಳಲ್ಲಿ ಚರ್ಚಿಸುವ ಮನೋಭಾವ ಬೆಳೆಸಬೇಕೆಂಬ ಉದ್ದೇಶ ಹೊಂದಿದ್ದು, ಈ ಸ್ಪರ್ಧೆ ನಡೆಸುತ್ತಾ ಬಂದಿದೆ. ಪ್ರಸಕ್ತ ವರ್ಷದ ಸ್ಪರ್ಧೆಗೆ ನೋಂದಣಿ ಕಾರ್ಯ ಇದೀಗ ಆರಂಭಿಸಿದೆ.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಲಕ್ಷಾಂತರ ರೂಪಾಯಿ ಮೌಲ್ಯದ ಬಹುಮಾನವನ್ನು ಪಡೆದುಕೊಳ್ಳಬಹುದು. ಕಾಲೇಜು ವಿದ್ಯಾರ್ಥಿಗಳು ತಮ್ಮ ಮಾತು ಮತ್ತು ಸೃಜನಶೀಲ ಚಿಂತನೆ. ವಿಮರ್ಶಾ ಕೌಶಲಗಳನ್ನು ಬಹಿರಂಗಪಡಿಸುವುದಕ್ಕಾಗಿ ಬಹುಮುಖ್ಯ ವೇದಿಕೆ ಕಲ್ಪಿಸಿಕೊಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚೆ ಇರುವ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.
ಈ ಉಪಕ್ರಮವು ದೇಶಾದ್ಯಂತ ಯುವ, ಕ್ರಿಯಾಶೀಲ ಮತ್ತು ಉತ್ಸಾಹ ಶಾಲಿ ಮನಸ್ಸುಗಳಿಗೆ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಸಾಮಾಜಿಕ ಬದಲಾವಣೆಯನ್ನು ವೇಗೋತ್ಕರ್ಷ ಗೊಳಿಸಲು ಪರಿಣಾಮಕಾರಿ ಪಾತ್ರ ವಹಿಸುವಂತೆ ಉದ್ದೀಪಿಸುತ್ತದೆ. ಈ ಸ್ಪರ್ಧೆಯು ಸಾಮಾಜಿಕ ಕಾಳಜಿಯೊಂದಿಗೆ ಹೊಸಪೀಳಿಗೆ (ಜೆನ್‌ಕ್ಸ್) ಯನ್ನು ಆತ್ಮವಿಶ್ವಾಸದಿಂದ ಒಗ್ಗೂಡಿಸುತ್ತದೆ. ತಮ್ಮ ಧ್ವನಿಯು ತಮ್ಮ ಆಲೋಚನೆಗಳನ್ನು ಪ್ರತಿಧ್ವನಿಸಲು ಅವಕಾಶ ನೀಡುವ ಸ್ಪರ್ಧೆಯು ಕರ್ನಾಟಕದಲ್ಲಿ ಜರುಗಲಿದೆ.
ಲೀಗ್ ಹಂತದಲ್ಲಿ ಕಾಲೇಜುಗಳ ಹಂತದಲ್ಲಿ ಕ್ಯಾಂಪಸ್‌ಗಳಲ್ಲಿನ ಯುವ ಮನಸ್ಸುಗಳು ತಮ್ಮ ಆಲೋ ಚನೆಗಳನ್ನು ವಾಕ್ ಚಾತುರ್ಯದ ಕೌಶಲ ಪ್ರದರ್ಶಿಸಲು ಮತ್ತು ಸವಾಲು ಗಳಿಗೆ ಉತ್ತರ ಕಂಡುಕೊಳ್ಳಲು ಅನನ್ಯ ಅವಕಾಶ ಒದಗಿಸುತ್ತದೆ.
ಸ್ಪರ್ಧೆ ಹೇಗೆ ನಡೆಯುತ್ತದೆ. & ಬಹುಮಾನ:
ಸ್ಪೀಕ್ ಫಾರ್ ಇಂಡಿಯಾ ಸ್ಪರ್ಧೆಯು ಜಿಲ್ಲೆ ಮತ್ತು ವಲಯ ಮಟ್ಟದಲ್ಲಿ ನಡೆಯಲಿದೆ. ಆನಂತರ ಸೆಮಿಫೈನಲ್ ಮತ್ತು ಅಂತಿಮ ಸುತ್ತು ಜರುಗಲಿದೆ.
ಪ್ರಥಮ ಸ್ಥಾನ ಪಡೆದವರಿಗೆ 2.50 ಲಕ್ಷ ರೂ.,
ದ್ವಿತೀಯ ಸ್ಥಾನ ಪಡೆದವರಿಗೆ 1.50 ಲಕ್ಷ ರೂ.
ಹಾಗೂ ಇತರ ಆರು ಅಂತಿಮ ಸ್ಪರ್ಧಿಗಳಿಗೆ ತಲಾ 35 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ.
ಜಿಲ್ಲಾ ಮಟ್ಟದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುತ್ತದೆ.
ನೋಂದಣಿ ಹೇಗೆ ಮಾಡುವದು?:
ವಿದ್ಯಾರ್ಥಿಗಳು www.speakforindia.in ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬಹುದು.
ಕನ್ನಡದಲ್ಲೂ ಮಾತನಾಡಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಚರ್ಚೆಗಾಗಿ ಕನ್ನಡ ಇಲ್ಲವೇ ಇಂಗ್ಲಿಷ್ ಭಾಷೆಯನ್ನು ತಮ್ಮ ಆದ್ಯತೆಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಕಾರ್ಯಕ್ರಮ ನಡೆಯುವ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಶೀಘ್ರ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ – CLICK HERE