Teacher Recruitment 2026: ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು

Teacher Recruitment 2026: ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು

Teacher Recruitment 2026: ಶಾಲಾ ಶಿಕ್ಷಣ ಇಲಾಖೆಯ PST, PE Grade-II, GPT, CST, AM ಮತ್ತು PE Grade-I ಶಿಕ್ಷಕರ ಹುದ್ದೆಗಳ ಅರ್ಜಿ ಹಾಗೂ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು ಇಲ್ಲಿವೆ.

ಅಭ್ಯರ್ಥಿಗಳಿಗೆ ಸೂಚನೆಗಳು:

ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ [PST-1-5, PE_Grade-II-1-8, GPT-6-8, CST-1-8, ಪ್ರೌಢ ಶಾಲಾ ಸಹ ಶಿಕ್ಷಕರ AM, PE-Grade-I] ಶಿಕ್ಷಕರ ಹುದ್ದೆಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ) (ವಿಶೇಷ) ನಿಯಮಗಳು, 2026 ಸಂಖ್ಯೆ: ಇಪಿ 80 ಡಿಪಿಐ 2026 ಬೆಂಗಳೂರು, ದಿನಾಂಕ: 10.08.2026 ರ ನಿಯಮಗಳನ್ವಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿಯಿಂದ ಭರ್ತಿ ಮಾಡುವ ಸಂಬಂಧ ನಿಯಮಾನುಸಾರ ಅರ್ಹರಾಗಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಆನ್‌ಲೈನ್ https://schooleducation.karnataka.gov.in ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕ್ರ.ಸಂ ವಿಷಯ ದಿನಾಂಕ
1 ಅಧಿಸೂಚನೆ ಹೊರಡಿಸಿದ ದಿನಾಂಕ 10.08.2026
2 ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 18.08.2026
3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.09.2026

 

1. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮುನ್ನ ವಿವಿಧ ವೃಂದಗಳು ಅಂದರೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ (PST – 1 ರಿಂದ 5ನೇ ತರಗತಿ, PE_Grade-II] ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ (GPT – 6 ರಿಂದ 8ನೇ ತರಗತಿ, CST – 1 ರಿಂದ 8ನೇ ತರಗತಿ), ಪ್ರೌಢ ಶಾಲಾ ಸಹ ಶಿಕ್ಷಕರ AM, PE-Grade-I} ಸಂಬಂಧಿಸಿದಂತೆ ಆಯಾ ಜಿಲ್ಲಾ/ವಿಭಾಗೀಯ ಪ್ರಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆಗಳಲ್ಲಿರುವಂತೆ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಶುಲ್ಕ, ಮೀಸಲಾತಿ ಇತ್ಯಾದಿಗಳನ್ನು ಓದಿ ಅರ್ಥೈಸಿಕೊಳ್ಳುವುದು.

2. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದು ಬಾರಿಯ ನೊಂದಣಿ ಪ್ರಕ್ರಿಯೆಯನ್ನು ಒಳಗೊಂಡಿದ್ದು ಅಭ್ಯರ್ಥಿಗಳು ನೀಡಿರುವ ಮಾಹಿತಿಯನ್ನು ಈ ನೇಮಕಾತಿಯ ಮುಂದಿನ ಎಲ್ಲಾ ಹಂತದ ಪ್ರಕ್ರಿಯೆಗಳಲ್ಲಿ ಪರಿಗಣಿಸಲಾಗುವುದರಿಂದ ಅತ್ಯಂತ ಜಾಗರೂಕತೆಯಿಂದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡುವುದು.

3. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಯು User ID ಮತ್ತು Passwordನ್ನು ಸೃಜಿಸಿಕೊಂಡು ಆನ್‌ಲೈನ್ ನಲ್ಲಿ Login ಆಗಬೇಕು. ಅಭ್ಯರ್ಥಿಗಳು ಮುಂದಿನ ಹಂತಗಳಲ್ಲಿ ವೈಯಕ್ತಿಕ ವಿವರ, ಮೀಸಲಾತಿ ವಿವರ, ವೃತ್ತಿಪರ ಶಿಕ್ಷಣ ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗಳ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

4. ಅಭ್ಯರ್ಥಿಗಳು ಅರ್ಜಿಗಳನ್ನು Online ಮೂಲಕವೇ ಸಲ್ಲಿಸಬೇಕು. ಇತರೆ ಯಾವುದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

5. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು

6. ಅಭ್ಯರ್ಥಿಗಳು ಒಂದೇ ಅರ್ಜಿಯಲ್ಲಿ ಅವರು ಅರ್ಹರಿರುವ ಎಲ್ಲಾ ವೃಂದದ ಹುದ್ದೆಗಳಿಗೆ ರಾಜ್ಯದ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಜಿಲ್ಲೆಗಳ ಅಥವಾ ವಿಭಾಗಗಳ ಅಧಿಸೂಚನೆಗಳಿಗೆ ಅರ್ಜಿಯನ್ನು ಸಲ್ಲಿಸುವುದು.

7. 2026ನೇ ಸಾಲಿನ PST, GPT, AM ನೇಮಕಾತಿಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ 2026ನೇ ಸಾಲಿನ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದ್ದರೂ ಸಹ ಸದರಿ ಅಧಿಸೂಚನೆಯಲ್ಲಿ ನಮೂದಿಸಿದ ವಿವಿಧ ವೃಂದಗಳಿಗೆ (PST, GPT, AM) ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಒಂದೇ Online ಅರ್ಜಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

8. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡತಕ್ಕದ್ದು. ಒಂದು ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚಿನ ವೃಂದಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅದೇ ರೀತಿ, ಬೇರೆ ಬೇರೆ ವೃಂದದ ಬೇರೆ ಬೇರೆ ಹುದ್ದೆಗೆ ಬೇರೆ ಬೇರೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

9. ಪ್ರೌಢಶಾಲಾ ಸಹಶಿಕ್ಷಕರ (AM) ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 (PE-Grade-1) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಒಂದು ವೃಂದಕ್ಕೆ ಒಂದು (01) ವಿಭಾಗದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಯಾವುದಾದರೂ ಒಂದು ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅಭ್ಯರ್ಥಿಯು ತನ್ನ ಅರ್ಹತೆ ತಕ್ಕಂತೆ ಅರ್ಜಿಯನ್ನು ಸಲ್ಲಿಸಬಹುದು. ಆದೇ ರೀತಿ ಬೇರೆ ಬೇರೆ ವೃಂದಕ್ಕೆ ಬೇರೆ ಬೇರೆ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಉದಾ:-ಯಾವೊಬ್ಬ ಅಭ್ಯರ್ಥಿಯ ವಿದ್ಯಾರ್ಹತೆಯು PST ವೃಂದದಲ್ಲಿ PST-ಸಾಮಾನ್ಯ PE-Grade-II, ಎರಡೂ ಹುದ್ದೆಗೂ ಹಾಗೂ GPT ವೃಂದದಲ್ಲಿ , GPT (KAN)/ GPT (ENG)/ GPT (SS)/ GPT (M&S)/ GPT (Bio-Science), GPT (CST 1 to 8)/ ಪ್ರೌಢಶಾಲಾ ಸಹ ಶಿಕ್ಷಕರ AM) ವೃಂದದಲ್ಲಿ AM (KAN)/ AM (ENG)/ AM Arts)/ AM (CBZ)/ PE-Grade-I ಅಧಿಸೂಚಿತ ಮೂರೂ ವೃಂದದ ಹುದ್ದೆಗಳಿಗೂ ಅರ್ಹವಾಗಿದ್ದಲ್ಲಿ ಅಭ್ಯರ್ಥಿಯು ಬಯಸಿದಲ್ಲಿ, ಮೂರೂ ವೃಂದದ ಹುದ್ದೆಗಳಿಗೂ ಒಂದಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ/ವಿಭಾಗಗಳಲ್ಲಿ ಪ್ರತ್ಯೇಕ ಶುಲ್ಕದೊಂದಿಗೆ ಒಂದೇ ಅರ್ಜಿಯಲ್ಲಿ ಸಲ್ಲಿಸಬಹುದಾಗಿದೆ.

ಆದರೆ ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅಂದರೆ PST ವೃಂದದ ಅಭ್ಯರ್ಥಿಯು ಬಾಗಲಕೋಟೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದರೆ, ಬೇರೆ ಯಾವುದೇ ಜಿಲ್ಲೆಯಲ್ಲಿ PST ವೃಂದದ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅದೇ ರೀತಿ ಯಾವೊಬ್ಬ ಅಭ್ಯರ್ಥಿಯು GPT-SS ಹುದ್ದೆಗೆ ಮೈಸೂರು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಆತನು ಬೇರೆ ಜಿಲ್ಲೆಯಲ್ಲಿ GPT-SS ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ. ಆದರೆ GPT-M & S, GPT-KAN, GPT-ENG, GPT-BIO-SCIENCE, CST-1 to 8 ಹುದ್ದೆಗಳಿಗೆ ಆತನ ವಿದ್ಯಾರ್ಹತೆಗೆ ತಕ್ಕಂತೆ ಮೈಸೂರು ಅಥವಾ ಬೇರೆ ಜಿಲ್ಲೆಯಲ್ಲಿ ನಿಗದಿತ ಶುಲ್ಕ ಪಾವತಿಸಿ, ಒಂದೇ ಅರ್ಜಿ ಸಲ್ಲಿಸುವುದು.

ಅದೇ ರೀತಿ ಯಾವೊಬ್ಬ ಅಭ್ಯರ್ಥಿಯು AM-ENG ಹುದ್ದೆಗೆ ಬೆಂಗಳೂರು ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಆತನು AM-ENG ಹುದ್ದೆಗೆ ಬೇರೆ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವದಿಲ್ಲ. ಆದರೆ ಆತನು AM-KAN, AM-CBZ, AM-Arts, PE-GRADE-1 ಹುದ್ದೆಗಳಿಗೆ ಬೇರೆ ವಿಭಾಗಗಳಲ್ಲಿ ಆತನ ವಿದ್ಯಾರ್ಹತೆಗೆ ತಕ್ಕಂತೆ ನಿಗದಿತ ಶುಲ್ಕ ಪಾವತಿಸಿ, ಒಂದೇ ಅರ್ಜಿ ಸಲ್ಲಿಸುವುದು.

10. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ವೃಂದದ ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅವರು ಯಾವ ವೃಂದದ ಯಾವ ಹುದ್ದೆಗೆ ಆಯ್ಕೆಯಾಗಲು ಬಯಸುತ್ತಾರೋ ಅಂತಹ ವೃಂದದ ಹುದ್ದೆಯ ತಾತ್ಕಾಲಿಕ ಆದ್ಯತೆಯನ್ನು ಅರ್ಜಿ ಸಲ್ಲಿಸುವಾಗ ನೀಡುವುದು ಕಡ್ಡಾಯವಾಗಿರುತ್ತದೆ.

11. ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸುವ ಜಿಲ್ಲೆಯ ಆದ್ಯತೆಯನ್ನು ಅರ್ಜಿಯಲ್ಲಿ ತಪ್ಪದೇ ನಮೂದಿಸತಕ್ಕದ್ದು. ಆದರೆ, ಪರೀಕ್ಷಾ ಕೇಂದ್ರದ ಹಂಚಿಕೆಯನ್ನು ಅಭ್ಯರ್ಥಿಗಳ ಸಂಖ್ಯೆ, ಪರೀಕ್ಷಾ ಕೇಂದ್ರಗಳ ಲಭ್ಯತೆಯ ಆಧಾರದ ಮೇಲೆ ಮಾಡಲಾಗುವುದು.

12. ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವಾಗ ವಿಶೇಷ ಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುವುದು.

13. ಅಭ್ಯರ್ಥಿಯು Online ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡ ಹುದ್ದೆಯ ವೃಂದದ ಅಧಿಸೂಚನೆಗಳನ್ನು (PST ವೃಂದ, GPT ವೃಂದ, ಪ್ರೌಢಶಾಲಾ ಸಹಶಿಕ್ಷಕರ (AM) ವೃಂದ) ಸ್ಪಷ್ಟವಾಗಿ ನಮೂದಿಸಬೇಕು.

14. ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ 07 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಶೇ (80% ರಷ್ಟು) ಹುದ್ದೆಗಳಿಗೆ (LC) ಹಾಗೂ ಕಲ್ಯಾಣ ಕರ್ನಾಟಕ ಮಿಕ್ಕುಳಿದ ವೃಂದದ ಶೇ (20% ರಷ್ಟು) ಹುದ್ದೆಗಳಿಗೆ (RPC) ಹಾಗೂ ಅದೇ ರೀತಿಯಾಗಿ ಬೆಂಗಳೂರು ಉತ್ತರ ಜಿಲ್ಲೆ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆ ಇಲ್ಲಿಯೂ ರಾಜ್ಯ ಮಟ್ಟದ ಸ್ಥಳೀಯ ವೃಂದ ಶೇ.8ರಷ್ಟು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಪ್ರತ್ಯೇಕವಾಗಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ವೇಳಾಪಟ್ಟಿಯನ್ನು ಎರಡೂ ವೃಂದಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಆಯ್ಕೆ ಮಾಡುವುದರ ಬಗ್ಗೆ ಖಚಿತಪಡಿಸಕೊಳ್ಳತಕ್ಕದ್ದು. ಶುಲ್ಕವನ್ನೂ ಸಹಿತ ತಕ್ಕಂತೆ ಪಾವತಿಸುವುದರ ಬಗ್ಗೆ ಖಚಿತಪಡಿಸಕೊಳ್ಳತಕ್ಕದ್ದು.

15. ಅಭ್ಯರ್ಥಿಗಳು ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (ಗರಿಷ್ಠ: 50KB) ಮತ್ತು ಸಹಿಯನ್ನು (ಗರಿಷ್ಟ: 50KB) ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡುವುದು ಕಡ್ಡಾಯ.

16. ಅಭ್ಯರ್ಥಿಗಳು Online ಅರ್ಜಿಯಲ್ಲಿ ಮಾಹಿತಿಗಳನ್ನು ಭರ್ತಿ ಮಾಡುವಾಗ ಪ್ರತಿ ಹಂತದಲ್ಲಿಯೂ ಕಡ್ಡಾಯವಾಗಿ Submit ಮಾಡುವುದು.

17. Online ಅರ್ಜಿಯ ಪ್ರತಿ ಹಂತದಲ್ಲೂ ಅಗತ್ಯವಿರುವ ಮಾಹಿತಿಯ ಅಧಿಕೃತ ದಾಖಲೆಗಳನ್ನು ಜಾಗೂರಕತೆಯಿಂದ ಮೊದಲೇ ಸಿದ್ಧಪಡಿಸಿಟ್ಟುಕೊಂಡು, ಸರಿಯಾದ ಮಾಹಿತಿ ಭರ್ತಿ ಮಾಡಿರುವುದನ್ನು ಖಾತ್ರಿಪಡಿಸಿಕೊಂಡ ನಂತರವೇ ಆನ್‌ಲೈನ್ ಅರ್ಜಿಗಳನ್ನು ಪೂರ್ಣಗೊಳಿಸಿ Submit ಮಾಡುವುದು.

18. ಅಭ್ಯರ್ಥಿಯು ಅಂತಿಮವಾಗಿ Submit ಮಾಡಿ ಘೋಷಣೆ (Declaration) ನೀಡಿದ ನಂತರದಲ್ಲಿ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ತಿದ್ದುಪಡಿ (Edit) ಮಾಡಲು ಅವಕಾಶವಿರುವುದಿಲ್ಲ.

19. ಅಭ್ಯರ್ಥಿಯು ಅಂತಿಮವಾಗಿ ಘೋಷಣೆ (Declaration) ಮಾಡುವ ಮೊದಲು ಅಭ್ಯರ್ಥಿಯು ತಮ್ಮ ವೆಯಕ್ತಿಕ ವಿವರ, ಮೀಸಲಾತಿ, ವಿದ್ಯಾರ್ಹತೆ, ಆಯ್ಕೆ ಮಾಡಿಕೊಂಡಿರುವ ವೃಂದ, ಹುದ್ದೆ, ಪರೀಕ್ಷೆಯನ್ನು ಬರೆಯುವ ಜಿಲ್ಲೆ ಇತ್ಯಾದಿ ಮಾಹಿತಿಗಳನ್ನು ಕ್ರಮಬದ್ಧವಾಗಿ ಭರ್ತಿ ಮಾಡಿರುವ ಬಗ್ಗೆ ಕೂಲಂಕಷವಾಗಿ ಓದಿ, ಸರಿಯಾದ ಮಾಹಿತಿ ಭರ್ತಿ ಮಾಡಿರುವ ಬಗ್ಗೆ ದೃಢಪಡಿಸಿಕೊಂಡ ನಂತರವೇ ಅರ್ಜಿಯನ್ನು Submit ಮಾಡುವುದು.

20. ಶೈಕ್ಷಣಿಕ ಹಾಗೂ ವೃತ್ತಿಪರ ಶಿಕ್ಷಣದ ಅಂಕ ವಿವರಗಳನ್ನು ಅಂಕಪಟ್ಟಿಯಲ್ಲಿರುವಂತೆ ಎಲ್ಲಾ ವರ್ಷಗಳ ಗರಿಷ್ಠ ಅಂಕಗಳು ಹಾಗೂ ಪಡೆದ ಅಂಕಗಳನ್ನು ನಿಗದಿತ ಅಂಕಣಗಳಲ್ಲಿ ಭರ್ತಿ ಮಾಡುವುದು.

21. ಅರ್ಜಿಯಲ್ಲಿನ ಮಾಹಿತಿಗಳು ದೋಷಪೂರಿತ ಹಾಗೂ ತಪ್ಪಾಗಿದ್ದಲ್ಲಿ ಅಭ್ಯರ್ಥಿಗಳೇ ಸಂಪೂರ್ಣವಾಗಿ ನೇರ ಜವಾಬ್ದಾರರಾಗಿರುತ್ತಾರೆ ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

22. ಒಂದು ವೇಳೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ ತಿದ್ದುಪಡಿ ಮಾಡಲು ಬಯಸಿದ್ದಲ್ಲಿ, ಹೊಸದಾಗಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸತಕ್ಕದ್ದು.

23. ಶುಲ್ಕ ಪಾವತಿಸಿದ ನಂತರ ಅರ್ಜಿಯ ಪ್ರತಿಯನ್ನು ಮುದ್ರಿಸಿಕೊಂಡು ಮಾಹಿತಿಯು ಸರಿಯಾಗಿರುವ ಬಗ್ಗೆ ಪುನಃ ಓದಿ ಅಭ್ಯರ್ಥಿಯು ತಮ್ಮ ವೆಯಕ್ತಿಕ ವಿವರ, ಮೀಸಲಾತಿ, ವಿದ್ಯಾರ್ಹತೆ ಆಯ್ಕೆ ಮಾಡಿಕೊಂಡಿರುವ ವೃಂದ, ಹುದ್ದೆ, ಪರೀಕೆ ಬರೆಯುವ ಜಿಲ್ಲೆ ಇತ್ಯಾದಿ ಮಾಹಿತಿಗಳನ್ನು ಕ್ರಮಬದ್ಧವಾಗಿ ಭರ್ತಿ ಮಾಡಿರುವ ಬಗ್ಗೆ ಅಭ್ಯರ್ಥಿಯು ಮತ್ತೊಮ್ಮೆ ಓದಿ ಮಾಹಿತಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.

24. ನಿಗದಿ ಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. 

25. ಶುಲ್ಕವನ್ನು “ONLINE” ಮೂಲಕ ಅಂದರೆ INTERNET BANKING / CREDIT CARD / DEBIT CARD ಅಥವಾ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ ಚಲನ್ ಶುಲ್ಕ ಪಾವತಿಸುವುದು) ಮೂಲಕವೇ ಪಾವತಿಸತಕ್ಕದ್ದು. ಇನ್ಯಾವುದೇ ರೂಪದಲ್ಲಿ ಶೂಲ್ಕ ಪಾವತಿಸಲು ಅವಕಾಶವಿರುವುದಿಲ್ಲ. INTERNET Crash ಅನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು. ಒಮ್ಮೆ ಪರೀಕ್ಷಾ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಹಾಗೂ

 

ಸದರಿ ಶುಲ್ಕವನ್ನು ಇತರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ.

 

ವಿಶೇಷ ಸೂಚನೆ: ಅರ್ಜಿ ಶುಲ್ಕವನ್ನು ಚಲನ್ ಮೂಲಕ ಪಾವತಿಸುವವರು ಆನ್ ಲೈನ್ ಚಲನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಅರ್ಜಿ ಶುಲ್ಕ ಪಾವತಿಸುವುದು. ಶುಲ್ಕ ಪಾವತಿಸಿದ ನಂತರ ಆನ್ ಲೈನ್ ಅರ್ಜಿಲ್ಲಿ ಚಲನ್ ನಂಬರ್ (ATRN) ತಂತಾನೆ GENERATE ಆಗುತ್ತದೆ. ಚಲನ್ ನಂಬರ್ (ATRN) GENERATE ಆಗಲು 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುವುದು. ನಂತರವಷ್ಟೇ’ ಅರ್ಜಿಯ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳುವುದು.

26. ONLINE ಅರ್ಜಿಯಲ್ಲಿ ನೀಡಿರುವ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವುದರಿಂದ, ಯಾವುದೇ ಹಂತದಲ್ಲಿ ಅಪೂರ್ಣ / ಅಸ್ಪಷ್ಟ / ತಪ್ಪು ಮಾಹಿತಿ ನೀಡಿದಲ್ಲಿ ಅಭ್ಯರ್ಥಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಹಾಗೂ ಅಂತಹವರ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು,

27. ಅರ್ಜಿಯಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ಅಭ್ಯರ್ಥಿಯನ್ನೇ ಆಗಿರತಕ್ಕದ್ದು, ಅದನ್ನು ನೇಮಕಾತಿ ಪ್ರಕ್ರಿಯೆ ಮುಗಿಯವ ಮೊದಲು ಬದಲಾವಣೆ ಮಾಡಿದ್ದಲ್ಲಿ ಆಗಬಹುದಾದ ಪರಿಣಾಮಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗಿರುತ್ತಾರೆ.

28. ONLINE ಅರ್ಜಿಯಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಇರುವ ಅಂಕಣವನ್ನು, ಮೀಸಲಾತಿ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು. ಅಂಕಣವನ್ನು ಖಾಲಿ ಬಿಟ್ಟಲ್ಲಿ ಅಥವಾ ತಪ್ಪಾಗಿ ನಮೂದಿಸಿದ್ದಲ್ಲಿ ಸಂಬಂಧಿಸಿದ ಮೀಸಲಾತಿಗಳಿಗೆ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಅದರಿಂದಾಗುವ ತೊಂದರೆಗಳಿಗೆ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ. ನಂತರ ಯಾವುದೇ ಹಂತದಲ್ಲಿ ಮೀಸಲಾತಿಯನ್ನು ಸೇರ್ಪಡೆ/ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.

29. ಶುಲ್ಕ ಪಾವತಿಸಿದ ಕೂಡಲೇ ಆನ್ ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಮೂಲ ಪ್ರತಿಯನ್ನು ಪಡೆದುಕೊಂಡು ಮುಂದಿನ ಉಪಯೋಗಕ್ಕಾಗಿ ಸಂರಕ್ಷಿಸಿ ಇಟ್ಟುಕೊಳ್ಳವುದು.

30. ಒಂದು ವೇಳೆ ಮುದ್ರಿತ ಅರ್ಜಿಯು ಕಳೆದು ಹೋದಲ್ಲಿ ಮೇಲೆ ತಿಳಿಸಿದ ವೆಬ್‌ಸೈಟ್ ನಲ್ಲಿ ನಿಮ್ಮ User ID and Password ಗಳನ್ನು ಭರ್ತಿ ಮಾಡಿ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.

31. ಶೈಕ್ಷಣಿಕ ಹಾಗೂ ವೃತ್ತಿಪರ ಶಿಕ್ಷಣದ ಅಂಕ ವಿವರಗಳನ್ನು ಅಂಕಪಟ್ಟಿಯಲ್ಲಿರುವಂತೆ ಎಲ್ಲಾ ವರ್ಷಗಳ ಗರಿಷ್ಠ ಅಂಕಗಳು ಹಾಗೂ ಪಡೆದ ಅಂಕಗಳನ್ನು ನಿಗದಿತ ಅಂಕಣಗಳಲ್ಲಿ ಭರ್ತಿ ಮಾಡುವುದು.

32. ಕೆಲವು ವಿಶ್ವವಿದ್ಯಾಲಯಗಳ ಅಂಕಪಟ್ಟಿಯಲ್ಲಿ ಅಂಕಗಳಿಗೆ ಬದಲಾಗಿ ಗ್ರೇಡ್ ನಮೂದಿಸಿರುವ ಸಂದರ್ಭದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯದ ನಿಯಮಾನುಸಾರ ಗ್ರೇಡ್ ನ್ನು ಅಂಕಗಳಿಗೆ ಪರಿವರ್ತಿಸಿ ನಿಗದಿತ ಅಂಕಗಳಲ್ಲಿ ಅಂಕಗಳನ್ನು ಭರ್ತಿಮಾಡುವುದು, ಸಂಭಂಧಿತ ಬೋರ್ಡ್/ವಿಶ್ವವಿದ್ಯಾಲಯಗಳು ಗ್ರೇಡ್‌ನಿಂದ ಅಂಕಗಳಿಗೆ ಅಳವಡಿಸಲಾಗುವ ಅಂಕ ಪರಿಚರ್ತನಾ ಪಟ್ಟಿಯನ್ನು ಸ್ಕ್ಯಾನ್ ಮಾಡಿ ಕಡ್ಡಾಯವಾಗಿ Upload ಮಾಡುವುದು. (Scan and upload conversion table from Grade to Marks)’

33. ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ವಿಷಯಗಳನ್ನು (ಉದಾ: Constitution of India, Computer Fundamental ಇತ್ಯಾದಿ)ಪರೀಕ್ಷಾ ಪೂರಕ ವಿಷಯವನ್ನಾಗಿ (Subsidiary Subject) ಅಧ್ಯಯನ ಮಾಡಬೇಕಾಗಿರುತ್ತದೆ. ಈ ವಿಷಯಗಳ ಅಂಕಗಳನ್ನು ವಿಶ್ವವಿದ್ಯಾಲಯವು ಒಟ್ಟು ಅಂಕಗಳಿಗೆ ಪರಿಗಣಿಸಿದ್ದಲ್ಲಿ, (ಪರಿಗಣಿಸುವ ಬಗ್ಗೆ ಸಂಕಪಟ್ಟಿಯ Footnote ನಲ್ಲಿ ನಮೂದಿಸಿದ್ದಲ್ಲಿ ಮಾತ್ರ) ಆ ಅಂಕಗಳನ್ನು ಸೇರಿಸಿ ಆನ್ ಲೈನ್ ಅರ್ಜಿಯಲ್ಲಿ ಭರ್ತಿ ಮಾಡುವುದು. ಪದವಿಯ / ಬಿ.ಇಡಿ ಯ ಎಲ್ಲಾ ವರ್ಷಗಳ ಅಂಕಪಟ್ಟಿಗಳಲ್ಲಿ ನಮೂದಿಸಲಾದ ಗರಿಷ್ಟ ಅಂಕಗಳು (Maximum marks) ಹಾಗೂ ಪಡೆದ ಅಂಕಗಳನ್ನು (Obtained Marks) ಪರಿಗಣಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಭರ್ತಿ ಮಾಡುವಾಗ ಹುದ್ದೆಗೆ ಪದವಿ / ಬಿ.ಇಡಿ ಇನ್ನಿತರೆ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳಲ್ಲಿರುವ ಸೂಚನೆಗಳನ್ನು ಪರಿಗಣಿಸಿ ಗರಿಷ್ಠ ಪಡೆದ ಅಂಕಗಳನ್ನು ಮತ್ತು ಶೇಕಡವಾರು ಅಂಕಗಳನ್ನು ಲೆಕ್ಕಾಚಾರ ಮಾಡಿ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು.

34. ಆನ್ ಲೈನ್ ಅರ್ಜಿಯಲ್ಲಿ ನಮೂದಿಸಿದ ಅಭ್ಯರ್ಥಿಯ ಎಲ್ಲಾ ವಿವರಗಳು ಸಮರ್ಪಕವಾಗಿದೆ ಎಂದು ದೃಢಪಡಿಸಿಕೊಂಡು ಘೋಷಣೆ ನೀಡಿದ ನಂತರದಲ್ಲಿ ಯಾವುದೇ ಬದಲಾವಣೆ ಅವಕಾಶ ಇರುವುದಿಲ್ಲ

35. ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಹೈ.ಕ.ಮೀಸಲಾತಿ 371(ಜೆ) ಗೆ ಸಂಬಂಧಿಸಿದ ಮೀಸಲಾತಿಯ ಪ್ರಮಾಣ ಪತ್ರಗಳ ಆರ್.ಡಿ ನಂಬರ್‌ನ್ನು ನಮೂದಿಸಿದಲ್ಲಿ ಮಾತ್ರ ಸಂಬಂಧಿಸಿದ ಮೀಸಲಾತಿಯನ್ನು ಪರಿಗಣಿಸಲಾಗುವುದು.

36. ಪರೀಕ್ಷಾ ಪ್ರವೇಶ ಪತ್ರವನ್ನು ಪಡೆಯಲು ಮುಂದಿನ ದಿನಾಂಕದಲ್ಲಿ ಇಲಾಖಾ ವೆಬ್‌ಸೈಟ್ (www.schooleducation.karnataka.gov.in) ಅಥವಾ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವ ನಿಗದಿತ ದಿನಾಂಕದಂದು ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರವಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ

 

37. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

 

38. ಈ ಅಧಿಸೂಚನೆಗೆ ಅನುಸಾರವಾಗಿ ಸಲ್ಲಿಸಿದ ಅರ್ಜಿಯನ್ನು ಇಲಾಖೆಯು ನಡೆಸುವ ಇತರೆ ಅಧಿಸೂಚನೆಗಳ ಆಯ್ಕೆ ಪರೀಕ್ಷೆಗಳಿಗೆ ಪರಿಗಣಿಸಲಾಗುವುದಿಲ್ಲ.

 

39. ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಆಥವಾ ಪರೀಕ್ಷಾ ಸಂಬಂಧಿತ ಸಮಸ್ಯೆ ಎದುರಾದಲ್ಲಿ ಈ ಕೆಳಕಂಡ ಸ್ಥಿರ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ಕೇಂದ್ರೀಕೃತ ದಾಖಲಾತಿ ಘಟಕ, ಬೆಂಗಳೂರು – ಇಲ್ಲಿನ ಸಹಾಯವಾಣಿ ಸಂಖ್ಯೆ: 22483145, 22483140, 9483024723 ಗಳನ್ನು ಸಂಪರ್ಕಿಸಬಹುದು.

ಈ ಮೇಲ್ಕಂಡ ಹಾಗೆ ಸೂಚನೆಗಳನ್ನು ಚೆನ್ನಾಗಿ ಅರಿತುಕೊಂಡು ಅರ್ಜಿ ಸಲ್ಲಿಸುವತ್ತ ಗಮನ ಹರಿಸುವುದು ಒಳಿತು.

Teacher Recruitment 2026

CLICK HERE TO DOWNLOAD PDF

CLICK HERE -GUIDELINES TO THE CANDIDATES REGARDING RECRUITMENT OF PST/GST/HST AND PE TEACHERS

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!