Aadhaar MBU for Students -2025: ಶಾಲಾ ಶಿಕ್ಷಣ ಇಲಾಖೆಯ ಆದೇಶ

Aadhaar MBU for Students -2025: ಶಾಲಾ ಶಿಕ್ಷಣ ಇಲಾಖೆಯ ಆದೇಶ

Aadhaar MBU for Students -2025: ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ Aadhaar Mandatory Biometric Update (Aadhaar MBU) ಕುರಿತು ಹೊಸ ಆದೇಶ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಆಧಾರ್ ನವೀಕರಣ, ಅಗತ್ಯ ದಾಖಲೆಗಳು ಮತ್ತು ಶಾಲೆಗಳು ಪಾಲಿಸಬೇಕಾದ ಕ್ರಮಗಳು ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದ ಶಾಲಾ ವಿದ್ಯಾರ್ಥಿಗಳ Aadhar Mandatory Biometric Update (Aadhar MBU) ಬಾಕಿಯಿರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹಲವಾರು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಇನ್ನು ಹಲವಾರು ಕೇಂದ್ರ/ ರಾಜ್ಯ ಕಾರ್ಯಕ್ರಮಗಳ ಪ್ರಯೋಜನಗಳು ದೊರಕುವುದು ವಿಳಂಬವಾಗಿರುತ್ತದೆ. ಈ ಹಿನ್ನಲೆಯಲ್ಲಿ, 5 ವರ್ಷ ಮತ್ತು 15 ವರ್ಷ ವಯಸ್ಸನ್ನು ತಲುಪಿದ ಎಲ್ಲಾ ವಿದ್ಯಾರ್ಥಿಗಳ ಆಧಾರ್ ಕಡ್ಡಾಯ ಬಯೋಮೆಟ್ರಿಕ್ ನವೀಕರಣವನ್ನು (ಎಂಬಿಯು) ಪೂರ್ಣಗೊಳಿಸುವುದು ಅವಶ್ಯಕವಾಗಿರುತ್ತದೆ.

ರಾಜ್ಯದ ವಿದ್ಯಾರ್ಥಿಗಳ Aadhar Mandatory Biometric Update(MBU) ನವೀಕರಣ ಕಾರ್ಯದಲ್ಲಿನ ವಿವಿಧ ಅಧಿಕಾರಿಗಳು/ಸಂಸ್ಥೆಗಳ ಜವಾಬ್ದಾರಿಗಳು ಈ ಮುಂದಿನಂತಿವೆ:-

A.Centre for e-Governance (CeG)

1. CeG ಯು ಆಧಾರ್ MBU ಕಾರ್ಯದ ರೆಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುವುದು.

2. ದಿನಾಂಕ:16.09.2025 ರ ಸಭೆಯಲ್ಲಿ ತೀರ್ಮಾನಿಸಿದಂತೆ, ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸುವ ವರೆಗೂ ಇತರೆ ರೆಜಿಸ್ಟ್ರಾರ್ ಗಳೊಂದಿಗೆ ಸಮನ್ವಯ ನಡೆಸಿ MBU ಕಾರ್ಯವನ್ನು ನಡೆಸಲು ಸಹಕರಿಸುವುದು.

B.Unique Identification Authority of India (UIDAI)

1. UIDAI ಸಂಸ್ಥೆಯು UDISE ಆಧಾರದಲ್ಲಿ ಆಧಾರ್ MBU ಆಗಬೇಕಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ತಾಲ್ಲೂಕುವಾರು ಹಾಗೂ ಶಾಲಾ-ಕಾಲೇಜುವಾರು ಮಾಹಿತಿ ಸಂಗ್ರಹಿಸಿ ಒದಗಿಸುವುದು.

2. ರಾಜ್ಯದಾದ್ಯಂತ ಶಾಲಾ, ಕಾಲೇಜು ವಿದ್ಯಾರ್ಥಿಗಳ Aadhar Mandatory Biometric Update (Aadhar MBU) ಪಕ್ರಿಯೆಯನ್ನು ದಿನಾಂಕ: 01.03.2026ರ ಒಳಗೆ ಪೂರ್ಣಗೊಳಿಸತಕ್ಕದ್ದು

C.ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ

1. UIDAI ಸಂಸ್ಥೆಯಿಂದ ಲಭ್ಯವಾದ ಆಧಾರ್ MBU ಆಗಬೇಕಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾ ಹಂತದ ಸಮಿತಿಗೆ ಮತ್ತು ಜಿಲ್ಲಾ ಹಂತದ ಉಪನಿರ್ದೇಶಕರಿಗೆ ಒದಗಿಸುವುದು.

2. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಶಾಲೆಗಳಲ್ಲಿ ವಿದ್ಯಾರ್ಥಿಗಳ Aadhar Mandatory Biometric Update (Aadhar MBU) ಶಿಬಿರಗಳನ್ನು ಕೈಗೊಳ್ಳುವ ಸಂಬಂಧ ಸಮಗ್ರವಾದ ವೇಳಾಪಟ್ಟಿಯನ್ನು ತಯಾರಿಸಲು ಜಿಲ್ಲಾ ಹಂತದ ಸಮಿತಿಗೆ ಮಾರ್ಗದರ್ಶನ ಒದಗಿಸುವುದು.

3. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು Aadhar MBU ನೀಡಿರುವ ವೇಳಾಪಟ್ಟಿಯಂತೆ ಹಾಗೂ ನಿಗಧಿತ ಸಮಯದಲ್ಲಿ, ಸದರಿ ಕಾರ್ಯವನ್ನು ಪೂರ್ಣಗೊಳಿಸಲು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ಒದಗಿಸುವುದು.

4. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಪ್ರತಿ ವಾರಕೊಮ್ಮೆ Aadhar Mandatory Biometric Update (Aadhar MBU) ವಸ್ತು ಸ್ಥಿತಿ  ಕುರಿತು ಸಂಬಂಧಿತ ಜಿಲ್ಲಾ ಉಪನಿರ್ದೇಶಕರೊಂದಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವುದು.

5. ಹಿರಿಯ ಸಹಾಯಕ ನಿರ್ದೇಶಕರು, ಇ-ಆಡಳಿತ ವಿಭಾಗ, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರುರವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸುವುದು.

6. ದಿನಾಂಕ: 16.09.2025 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ  Aadhar MBU (Mandatory Biometric Update) of Children, Enrolment of Children and use of Al based attendance system in School Education Department ನಡವಳಿಯನ್ವಯ ಕ್ರಮವಹಿಸತಕ್ಕದ್ದು.

7. ರಾಜ್ಯದಾದ್ಯಂತ ಶಾಲಾ, ಕಾಲೇಜು ವಿದ್ಯಾರ್ಥಿಗಳ Aadhar Mandatory Biometric Update (Aadhar MBU) ಪ್ರಕ್ರಿಯೆಯನ್ನು ದಿನಾಂಕ: 01.03.2026ರ ಒಳಗೆ ಪೂರ್ಣಗೊಳಿಸತಕ್ಕದ್ದು,

D.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್

1. ಜಿಲ್ಲೆಯ ಎಲ್ಲಾ ಶಾಲಾ ವಿದ್ಯಾರ್ಥಿಗಳ ಆಧಾರ್ MBU ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸುವುದು.

2. ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಸ್ಥಳೀಯ UIDAI ಅಧಿಕಾರಿಗಳು ಹಾಗೂ ಅಧಿಕೃತ ದಾಖಲಾತಿ ಏಜೆನ್ಸಿಗಳ ನಡುವೆ ಸಮನ್ವಯತೆ ಸಾಧಿಸಲು ಕ್ರಮವಹಿಸುವುದು.

3. ಆಧಾರ್ MBU ಸಾಧಿಸಲು ತಾಲ್ಲೂಕುವಾರು ಹಾಗೂ ಶಾಲಾ ಕಾಲೇಜುವಾರು ಪ್ರತಿ ವಾರದ ಗುರಿ ನಿರ್ಧರಿಸಿ ಮೇಲ್ವಿಚಾರಣೆ ಮಾಡುವುದು.

4. ದಿನಾಂಕ: 16.09.2025 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ Aadhar MBU (Mandatory Biometric Update) of Children, Enrolment of Children and use of Al based attendance system in School Education Department ನಡವಳಿ ಅನ್ವಯ  ಕ್ರಮವಹಿಸತಕ್ಕದ್ದು.

E.ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ

1. ರಾಜ್ಯ ಹಂತದ ಆಧಾರ್ MBU ಬಾಕಿ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ತಾಲ್ಲೂಕು ಹಂತದ ಅಧಿಕಾರಿಗಳಿಗೆ ಹಾಗೂ ಶಾಲಾ ಕಾಲೇಜು ಮುಖ್ಯಸ್ಥರಿಗೆ ಒದಗಿಸುವುದು.

2. ಜಿಲ್ಲಾ ಹಂತದ ಸಮಿತಿಯ ನಿರ್ದೇಶನಗಳಂತೆ ಉಪ ನಿರ್ದೇಶಕರು/ಪದವಿ ಪೂರ್ವ,ಮಹಿಳಾ ಮತ್ತು ಮಕ್ಕಳ ಇಲಾಖೆ, CeG & UIDAI ನ ಪ್ರತಿನಿಧಿಗಳು ಹಾಗೂ ಶಾಲಾ ಕಾಲೇಜುಗಳ ಮುಖ್ಯಸ್ಥರ ನಡುವೆ ಸಹಕಾರ ಮತ್ತು ಸಂಪರ್ಕ ವ್ಯವಸ್ಥೆಯನ್ನು ರೂಪಿಸುವುದು.

3. ತಮ್ಮ ಕಛೇರಿಯಲ್ಲಿನ ಶಿಕ್ಷಣಾಧಿಕಾರಿಗಳನ್ನು ಸದರಿ ಕಾರ್ಯ ಸಾಧನೆಗಾಗಿ ನೋಡಲ್ ಅಧಿಕಾರಿಯನ್ನಾಗಿ ನಿಯುಕ್ತಿಗೊಳಿಸುವುದು.

4. ಶಾಲಾ-ಕಾಲೇಜುಗಳಿಗೆ ಪ್ರತಿವಾರದ ಗುರಿಯನ್ನು CeG & UIDAIನ ಪ್ರತಿನಿಧಿಗಳ ಸಹಕಾರದೊಂದಿಗೆ ನಿರ್ಧರಿಸುವುದು ಹಾಗೂ ನಿರ್ಧರಿತ ಗುರಿಯನ್ನು ಸಾಧಿಸಲು ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಬೆಂಬಲವನ್ನು ಒದಗಿಸುವುದು.

5. ರಾಜ್ಯದಾದ್ಯಂತ ಶಾಲಾ, ಕಾಲೇಜು ವಿದ್ಯಾರ್ಥಿಗಳ Aadhar Mandatory Biometric Update (Aadhar MBU) ಪ್ರಕ್ರಿಯೆಯನ್ನು ದಿನಾಂಕ: 01.03.2026ರ ಒಳಗೆ ಪೂರ್ಣಗೊಳಿಸತಕ್ಕದ್ದು.

F.ಶಾಲಾ-ಕಾಲೇಜುಗಳ ಹಂತದ ಕರ್ತವ್ಯಗಳು

1. ಶಾಲಾ ಆವರಣದಲ್ಲಿ ಆಧಾರ್ ನವೀಕರಣದ ಶಿಭಿರಗಳನ್ನು ನಡೆಸಲು ಎಲ್ಲಾ ರೀತಿಯ ಸಹಕಾರ ಒದಗಿಸುವುದು.

2. ಜಿಲ್ಲಾ ಮಟ್ಟದ ಸಮಿತಿಯು ನಿದಧಿಪಡಿಸಿದ ದಿನಾಂಕದಂದು ಸಂಬಂಧಪಟ್ಟ ವಿದ್ಯಾರ್ಥಿಗಳು ಆಧಾ‌ರ್ ನವೀಕರಣ ಶಿಭಿರಕ್ಕೆ ಹಾಜರಿರುವುದನ್ನು ಖಚಿತಪಡಿಸತಕ್ಕದ್ದು.

3. ಶಾಲೆಗಳಲ್ಲಿ ಆಧಾರ್ ನವೀಕರಣ ಕಾರ್ಯಕ್ಕೆ ಅಧಿಕೃತ ಆಧಾರ್ ಏಜೆನ್ಸಿ ಗಳಿಗೆ ಅಗತ್ಯ ಸಹಕಾರಗಳನ್ನು ಒದಗಿಸಿವುದು.

4. ವಿದ್ಯಾರ್ಥಿ, ಪೋಷಕರಿಗೆ ಹಾಗೂ SDMC ಗೆ ಆಧಾರ್ MBU ನವೀಕರಣದ ಮಹತ್ವ ಮತ್ತು ಉದ್ದೇಶದ ಬಗ್ಗೆ ಪೂರ್ಣ ತಿಳುವಳಿಕೆ ಮೂಡಿಸುವುದು.

5. ಜಿಲ್ಲಾ ಹಂತದ ಸಮಿತಿಯು ನಿರ್ಧರಿಸಿದ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳ ಆಧಾ‌ರ್ ನವೀಕರಣ ಗುರಿಯನ್ನು ತಲುಪಲು ಅಗತ್ಯವಾದ ಕ್ರಮವಹಿಸುವುದು.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ Aadhaar Mandatory Biometric Update (MBU) ಕಡ್ಡಾಯಗೊಳಿಸಿದೆ. ಶಾಲೆಗಳು ಕೈಗೊಳ್ಳಬೇಕಾದ ಕ್ರಮಗಳು, ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನ ಸುತ್ತೋಲೆಯಲ್ಲಿ ನೋಡಬಹುದು.

Aadhaar MBU for Students


CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!