Aadhaar Service 2025: ಆಧಾರ್ ಸೇವೆ ಈಗ ಇನ್ನಷ್ಟು ಸುಲಭ ಹೊಸ ಆಪ್ ತಂದ UIDAI
Aadhaar Service 2025: ಆಧಾರ್ ಸೇವೆ ಈಗ ಇನ್ನಷ್ಟು ಸುಲಭ ಹೊಸ ಆಪ್ ನ್ನು UIDAI ಪರಿಚಯಿಸಿದೆ.
ಹೊಸ Aadhaar App:
ಆಧಾರ್ ಸೇವೆಗಳನ್ನು ಇನ್ನಷ್ಟು ಸುಲಭಗೊಳಿಸಲು UIDAI ಹೊಸ ‘Aadhaar App’ ಅನ್ನು ಬಿಡುಗಡೆ ಮಾಡಿದೆ.
ಸ್ಮಾರ್ಟ್‌ಫೋನ್‌ನಲ್ಲೇ ಆಧಾರ್ ವಿವರಗಳನ್ನು ಭದ್ರವಾಗಿ ಸ೦ಗ್ರಹಿಸಿ, ಬೇಕಾದ ಮಾಹಿತಿಯನ್ನಷ್ಟೇ ಇತರರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಈ ಆಪ್ ವಿನ್ಯಾಸಗೊಳಿಸಲಾಗಿದೆ. ಆಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ, ಐಫೋನ್ ಬಳಕೆದಾರರು ಆಪಲ್ ಸ್ಟೋರ್ ನಲ್ಲಿ ಈ ಆಪ್‌ನ್ನು ಡೌನ್‌ಲೋಡ್ ಮಾಡಬಹುದು.
ಹೊಸ ವೈಶಿಷ್ಟ್ಯವೇನು?
ಇದೇ ಹಿಂದೆ ಇದ್ದ mAadhaar ಆಪ್‌ನ್ನು ಇನ್ನಷ್ಟು ಸುಧಾರಿಸಿ, ಹೊಸ ವೈಶಿಷ್ಟ್ಯಗಳೊಂದಿಗೆ ಈ ಆಪ್ ಬಿಡುಗಡೆ ಮಾಡಲಾಗಿದೆ. ಡಿಜಿಟಲ್ ಆಧಾರ್ ಅನ್ನು ತಕ್ಷಣವೇ ಡೌನ್‌ಲೋಡ್ ಮಾಡುವುದು, PVC ಕಾರ್ಡ್ ಆರ್ಡರ್ ಮಾಡುವುದು ಮುಂತಾದ ಸೌಲಭ್ಯಗಳು ಇದರಲ್ಲಿ ಲಭ್ಯ. ಆದರೆ ಈ ಆಪ್‌ನಲ್ಲಿ ಇ-ಮೇಲ್, ಮೊಬೈಲ್ ವೆರಿಫಿಕೇಶನ್, ವರ್ಚುವಲ್ ಐಡಿ ಮುಂತಾದ ಸೇವೆಗಳು ಇಲ್ಲವೆಂದು UIDAI ಸ್ಪಷ್ಟಪಡಿಸಿದೆ.
ಕುಟುಂಬ ಸದಸ್ಯರ ವಿವರಗಳು ಒಂದೇ ಸ್ಥಳದಲ್ಲಿ:
ಹೊಸ ಆಪ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಡಿಜಿಟಲ್ ಆಧಾರ್ ಅನ್ನು ಯಾವಾಗ ಬೇಕಾದರೂ ಸುಲಭವಾಗಿ ನೋಡಬಹುದಾಗಿದೆ. ಕುಟುಂಬ ಸದಸ್ಯರ ಆಧಾರ್ ವಿವರಗಳನ್ನು ಕೂಡ ಒಂದೇ ಸ್ಥಳದಲ್ಲಿ ಸೇರಿಸುವ ಅವಕಾಶ ಇದರಲ್ಲಿ ಇದೆ. ಜೊತೆಗೆ, ಫೇಸ್ ಅಥೆಂಟಿಕೇಶನ್ ಮೂಲಕ ಸುರಕ್ಷಿತವಾಗಿ ಸೈನ್ ಇನ್ ಆಗಲು ಸಾಧ್ಯ.
ವಿವರಗಳನ್ನು ಲಾಕ್ ಮಾಡುವ ಸೌಲಭ್ಯ:
ಅತ್ಯಂತ ಉಪಯುಕ್ತವಾದ ವಿಷಯ ಎ೦ದರೆ ಬೇಡಿಕೆಯಾದ ಒ೦ದೇ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಅವರು ಕೇಳಿದ ವಿವರವನ್ನು ಮಾತ್ರ ನೀಡುವಂತೆ ಈ ಆಪ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಮಾಹಿತಿಯನ್ನು ಲಾಕ್ ಮಾಡುವುದು, ಕೊನೆಯದಾಗಿ ಆಧಾರ್ ಡೇಟಾವನ್ನು ಎಲ್ಲಿ ಬಳಸಿದ್ದೇವೆ ಎಂಬುದನ್ನು ಪರಿಶೀಲಿಸುವ ಸಾಧ್ಯತೆಯೂ ನೀಡಲಾಗಿದೆ.
ಬಳಸುವ ವಿಧಾನ:
ಈ ಆಪ್ ಬಳಸಲು ಮೊದಲು ಆಪ್ ಡೌನ್‌ಲೋಡ್ ಮಾಡಿ, ಬೇಕಾದ ಅನುಮತಿಗಳನ್ನು ನೀಡಬೇಕು. ನಂತರ ನಿಯಮಗಳಿಗೆ ಒಪ್ಪಿಗೆ ನೀಡಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಿದರೆ ಪರಿಶೀಲನೆ ಪೂರ್ಣಗೊಳ್ಳುತ್ತದೆ.
ಸುರಕ್ಷಿತ ಪಿನ್:
ಆ ನಂತರ ಫೇಸ್ ಆಥೆಂಟಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕೊನೆಯದಾಗಿ ಒಂದು ಸುರಕ್ಷಿತ ಪಿನ್ ಅನ್ನು ಸೆಟ್ ಮಾಡಬೇಕು. ಇದರಿಂದ ಆಪ್ ಸಂಪೂರ್ಣವಾಗಿ ಸಕ್ರಿಯಗಾಗುತ್ತದೆ. ಒಟ್ಟಾರೆ, ಈ ಹೊಸ ಆಧಾರ್ ಆಪ್ ಬಳಕೆದಾರರಿಗೆ ಹೆಚ್ಚು ಭದ್ರತೆ ಮತ್ತು ಸುಲಭವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.