Akashvani Recuritment -2025 ಆಕಾಶವಾಣಿಯಲ್ಲಿ ಉದ್ಯೋಗಾವಕಾಶ|ಅರ್ಜಿ ಸಲ್ಲಿಕೆ ವಿಧಾನ, ಅಧಿಸೂಚನೆ ಮಾಹಿತಿ ಇಲ್ಲಿದೆ.
Akashvani Recuritment -2025: ಪ್ರಸಾರ ಭಾರತಿಯು ಸಾರ್ವಜನಿಕ ಸೇವಾ ಪ್ರಸಾರಕ ಸಂಸ್ಥೆಯಾಗಿದೆ.
ಇದಲ್ಲದೇ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಗಳಿಗೆ ಮೂಲ ಸಂಸ್ಥೆಯಾಗಿದೆ. ಪ್ರಸ್ತುತ ಪ್ರಸಾರ ಭಾರತಿಯ ಆಕಾಶವಾಣಿಯ ಸುದ್ದಿ ಸೇವಾ ವಿಭಾಗದಲ್ಲಿ (ಎನ್ ಎಸ್‌ಡಿ) ಕಾಪಿ ಎಡಿಟರ್, ರಿಪೋರ್ಟರ್ ಸೇರಿ ವಿವಿಧ ವೃಂದದ 107 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ ಮೂಲಕ ಸೆ.4ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಪದವಿ, ಬಿ.ಎ/ ಎಲ್.ಎಲ್.ಬಿ/ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ/ಪಿಜಿ ಡಿಪ್ಲೊಮಾ ಅಥವಾ ಹುದ್ದೆಗೆ ಅನುಗುಣವಾಗಿ ಸಂಬಂಧಿತ ಅರ್ಹತೆಯನ್ನು ಹೊಂದಿರಬೇಕು. ಅನುಭವ ಅಗತ್ಯ.
ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ಅಭ್ಯರ್ಥಿಗಳು https://prasarbharati.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಸೆ.4ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ಗೊಂದಲ vơ avedanhelpdesk@gmail.com ಇ-ಮೇಲ್ ಮೂಲಕ ಸಂಪರ್ಕಿಸಬಹುದು.
ಹುದ್ದೆಗಳ ವಿವರದ ಮಾಹಿತಿ:

ಆಯ್ಕೆಪಕ್ರಿಯೆ ಹೇಗಿರಲಿದೆ?
ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಶಾರ್ಟ್‌ಲಿಸ್ಟಗೊಳಿಸಲಾಗು ತ್ತದೆ. ಅರ್ಜಿ ಸಂಖ್ಯೆಗಳ ಆಧಾರ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ನೇಮಕಾತಿ ಸಂದರ್ಭದಲ್ಲಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸದಬಹುದು, ಅಥವಾ ಕಡಿತಗೊಳಿಸಬಹುದಾದ ಸಂಪೂರ್ಣ ಸ್ವಾತಂತ್ರ್ಯವನ್ನು ನೇಮಕಾತಿ ಮಂಡಳಿ ಹೊಂದಿದೆ.
ವಯೋಮಿತಿ ವಿವರ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 2025ರ ಆ.20ಕ್ಕೆ ಅನುಗುಣವಾಗಿ 35 ವಯಸ್ಸಿನೊಳಗಿರಬೇಕು. ನೇಮಕಾತಿ ಮಂಡಳಿ ನಿಯಮಾನುಸಾರ ಮೀಸಲು ವರ್ಗಗಳಿಗೆ ವಯೋಸಡಿಲಿಕೆ ಇರಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ತಕ್ಕಂತೆ 30,000-40,000 ರೂ.,ಗಳ ಆರಂಭಿಕ ಮಾಸಿಕ ವೇತನ ನೀಡಲಾಗುತ್ತದೆ.

