Alvas ಕನ್ನಡ ಮಾಧ್ಯಮ ಉಚಿತ ಶಿಕ್ಷಣ.
Alvas: 6 ರಿಂದ 9ನೇ ತರಗತಿ ಕನ್ನಡ ಮಾಧ್ಯಮ ಪ್ರವೇಶ ಪರೀಕ್ಷೆ ಅಭ್ಯರ್ಥಿಗಳು / ಪೋಷಕರಿಗೆ ಸೂಚನೆಗಳು.
ತಂತ್ರಜ್ಞಾನ ಆಧಾರಿತ ಪರೀಕ್ಷೆ ಆಗಿದ್ದು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತದೆ.
ಅಭ್ಯರ್ಥಿಗಳು ಮತ್ತು ಪೋಷಕರು ಶಾಲಾ ಹಾಗೂ ಹಾಸ್ಟೆಲ್ ಆವರಣಗಳ ಸ್ವಚ್ಛತೆಯನ್ನು, ಶಾಂತತೆಯನ್ನು ಕಾಪಾಡುವುದು.
ಆಯ್ಕೆಯ ಕುರಿತಾದ ಯಾವುದೇ ವಿವಿಧ ಶಿಫಾರಸ್ಸು ತರುವಂತಿಲ್ಲ. ಸಂವಹನಕ್ಕೆ ಪೂರಕವಲ್ಲದ ದೂರವಾಣಿ ಸಂಖ್ಯೆಯನ್ನು ನೀಡಿ ಮಾಹಿತಿ ಲಭಿಸದಿದ್ದಲ್ಲಿ ಆಡಳಿತ ಮಂಡಳಿ ಜವಾಬ್ದಾರಿಯಾಗಿರುವುದಿಲ್ಲ.
ಪರೀಕ್ಷಾ ಕೇಂದ್ರದೊಳಗೆ ಅವಶ್ಯವಿರುವ ವಸ್ತುಗಳು : ಪ್ರವೇಶ ಪತ್ರ,, ಪೆನ್, ಪೆನ್ಸಿಲ್ ಮತ್ತು ನೀರಿನ ಬಾಟಲ್ ಮಾತ್ರ.
ಅಭ್ಯರ್ಥಿಗಳಿಗೆ ಪರೀಕ್ಷಾ ವಿಚಾರದಲ್ಲಿ ಸಂಶಯಗಳು ಕಂಡು ಬಂದಲ್ಲಿ ಕೊಠಡಿ ಮೇಲ್ವಿಚಾರಕರ ಮಾರ್ಗದರ್ಶನವನ್ನು ಪಡೆಯುವುದು.
ಪ್ರವೇಶ ಪತ್ರದಲ್ಲಿ ಪರೀಕ್ಷಾಕೇಂದ್ರವನ್ನು ನಮೂದಿಸಲಾಗಿದ್ದು, ಅದೇ ಕೇಂದ್ರದಲ್ಲಿ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವುದು.
ಪ್ರವೇಶ ಪತ್ರ ಕಡ್ಡಾಯವಾಗಿದ್ದು. ಒಂದು ವೇಳೆ ಪ್ರವೇಶ ಪತ್ರ ಇಲ್ಲದೇ ಇದ್ದಲ್ಲಿ ಪರೀಕ್ಷೆಗೆ ಹಾಕಿದ ಅರ್ಜಿಯನ್ನು ವಿದ್ಯಾರ್ಥಿಯ ಬಳಿ ನೀಡುವುದು.
ಕಡ್ಡಾಯವಾಗಿ ಗಮನಹರಿಸಬೇಕಾದ ಮುಖ್ಯ ಅಂಶಗಳು.
ಪ್ರವೇಶ ಪತ್ರದಲ್ಲಿ ನೀಡಿರುವ ತರಗತಿಯ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ತರಗತಿ ಬದಲಾವಣೆಗೆ ಅವಕಾಶವಿಲ್ಲ.
ಪ್ರವೇಶ ಪರೀಕ್ಷೆಯ ಸಮಯ:
ಬೆಳಗ್ಗೆ 10.00 ರಿಂದ 12.30 ರವರೆಗೆ
OMR – ಉತ್ತರ ಪತ್ರಿಕೆ ತುಂಬುವ ವಿಧಾನ :
ಈ ಪರೀಕ್ಷೆಯ ಮೂಲಕ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಫಲಿತಾಂಶವನ್ನು ಮಾತ್ರ ಸದರಿ ಅಭ್ಯರ್ಥಿಗಳ ವೈಯಕ್ತಿಕ ದೂರವಾಣಿ ಸಂಖ್ಯೆಗೆ ತಿಳಿಸಲಾಗುತ್ತದೆ. ಉಳಿದಂತೆ ನಿಮ್ಮ ಮಕ್ಕಳ ಫಲಿತಾಂಶಕ್ಕಾಗಿ 20 ದಿನಗಳ ಬಳಿಕ www.alvasschools.com ನಲ್ಲಿ ಪರಿಶೀಲಿಸುವುದು.
ಆತ್ಮೀಯರೇ,…..
ದಿನಾಂಕ 02/03/2025ರಂದು ನಡೆಯುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಆಯ್ಕೆ ಪ್ರಕ್ರಿಯೆಯ ಪೂರ್ವಭಾವಿಯಾಗಿ ಕೆಲವಾರು ಸೂಚನೆಗಳು…
* ಪರೀಕ್ಷೆಯ ಹಿಂದಿನದಿನ ಬಂದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ (open Hall) ವಸತಿ ವ್ಯವಸ್ಥೆ ಇರುತ್ತದೆ.. ಊಟ/ತಿಂಡಿ ಇನ್ನಿತರ ವ್ಯವಸ್ಥೆ ಇರುವುದಿಲ್ಲ.
* ಬೇರೆ ಬೇರೆ ಊರಿನಿಂದ ಆಗಮಿಸುವ ಪಾಲಕರಿಗೆ ಧರ್ಮಸ್ಥಳಕ್ಕೆ ತೆರಳುವ ಹೆಚ್ಚಿನ ಎಲ್ಲಾ KSRTC ಬಸ್ಗಳು ಮೂಡುಬಿದಿರೆಗೆ ಬರುತ್ತದೆ.. ಬಜ್ಪೆಯ ಸಮೀಪ ಏರ್ಪೋರ್ಟ್ ವ್ಯವಸ್ಥೆ ಇದೆ(15KM)ಬಂಟ್ವಾಳದಲ್ಲಿ ರೈಲ್ವೆ ವ್ಯವಸ್ಥೆ ಇದೆ(25KM )
* ಪರೀಕ್ಷೆ ಬರೆಯಲು ಪೆನ್ನು ಪೆನ್ಸಿಲ್, ರಬ್ಬರ್ ಮಾತ್ರ ಅಗತ್ಯವಿರುತ್ತದೆ,, ಬೇರೆ ಫೋಟೋ, ಆಧಾರ್ ಕಾರ್ಡ್ ಪ್ರತಿಗಳು ಅಗತ್ಯವಿರುವುದಿಲ್ಲ,
* ಆಳ್ವಾಸ್ ಕ್ಯಾಂಪಸ್ ಮೂಡುಬಿದಿರೆ ಸಿಟಿಗೆ ಅತ್ಯಂತ ಸಮೀಪದಲ್ಲಿದೆ.
* ಆಳ್ವಾಸ್ ಕ್ಯಾಂಪಸ್ ಶಿಸ್ತು, ಶುಚಿತ್ವ ಕ್ಕೆ ಹೆಸರಾಗಿದ್ದು ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಇದನ್ನು ತಾವೆಲ್ಲರೂ ಕಾಪಾಡಿಕೊಂಡು ಬರುವುದು.. ಅನಗತ್ಯ ಗಲಾಟೆ, ಬೊಬ್ಬೆ ಇನ್ನಿತರ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಿರಿ.. ಇಂತಹ ಘಟನೆ ನಡೆದಲ್ಲಿ ಆಯ್ಕೆ ಪ್ರಕ್ರಿಯೆಯಿಂದ ನಿಮ್ಮ ಮಗುವನ್ನು ಕೈಬಿಡಲಾಗುವುದು.
* ಕ್ಯಾಂಪಸ್ ಒಳಗೆ ಪರೀಕ್ಷೆಯ ಸ್ಥಳಗಳ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಸೆಕ್ಯೂರಿಟಿಯವರನ್ನು, NCC ಸ್ವಯಂಸೇವಕರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಳ್ಳಿ.
* ಪರೀಕ್ಷಾ ದಿನದಂದು ತರಗತಿ /ಹೆಸರು ಇನ್ನಿತರ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಿಲ್ಲ…
* ತಾಳ್ಮೆಯಿಂದ ವ್ಯವಹರಿಸಿ.. ಗೊಂದಲಗಳಿಗೆ ಅವಕಾಶ ಮಾಡದಿರಿ.. ಕ್ರಮಬದ್ದ ಮಾಹಿತಿಯನ್ನು ಕೃಷಿ ಸಿರಿ ವೇದಿಕೆಯಲ್ಲಿ ಸಂಜೆ 5.00 ರ ನಂತರ ಇರುವ ಕೌಂಟರ್ ನಲ್ಲಿ ಪಡೆದುಕೊಳ್ಳಿ.. ಅನಧಿಕೃತ ವ್ಯಕ್ತಿಗಳಿಂದ ಮಾಹಿತಿ ಪಡೆದು ವ್ಯವಹರಿಸಿದಲ್ಲಿ ನಾವುಗಳು ಜವಾಬ್ದಾರಿ ಅಲ್ಲ.
* ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪರೀಕ್ಷೆ ಕುರಿತಂತೆ ಯಾವುದೇ ಶುಲ್ಕ ಪ್ರಯಾಣ ವೆಚ್ಚ ಅರ್ಜಿ ಶುಲ್ಕ ಇರುವುದಿಲ್ಲ.. ಆಯ್ಕೆ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿ ಇರುತ್ತದೆ..
* ಹಿಂದಿನ ದಿನ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆನಿಗದಿತ ಸ್ಥಳವನ್ನು ಗುರುತಿಸಿದ್ದು ಅಲ್ಲೇ ಪಾರ್ಕಿಂಗ್ ಮಾಡಿಕೊಳ್ಳುವುದು.
* ಊಟಕ್ಕಾಗಿ ಗ್ಯಾಸ್ / ಓಲೆ ಇನ್ನಿತರ ವ್ಯವಸ್ಥೆ ಇದ್ದಲ್ಲಿ ಸಂಸ್ಥೆ ಸೂಚಿಸಿದ ಸ್ಥಳದಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು.
* ಆಳ್ವಾಸ್ ಕ್ಯಾಂಪಸ್ ವಿಶಾಲವಾದ ಆವರಣವಾದ ಹಿನ್ನಲೆಯಲ್ಲಿ ಪಾಲಕರು ಇಲ್ಲದೆ ವಿದ್ಯಾರ್ಥಿಗಳು ಬೇರೆಡೆಗೆ ತಿರುಗುವಂತಿಲ್ಲ.. ನಿಮ್ಮ ಮಕ್ಕಳಿಗೆ ನೀವೇ ಜವಾಬ್ದಾರರಾಗಿರುತ್ತಿರಿ..
* ಆಳ್ವಾಸ್ ನ ಆಯ್ಕೆ ಪ್ರಕ್ರಿಯೆಗೆ ಆಗಮಿಸುವ ವಾಹನ ಚಾಲಕರು/ ಮಾಲಕರು ಸರಿಯಾದ ವಾಹನ ನಿಯಮ /ದಾಖಲೆ ಇಲ್ಲದೆ ಯಾವುದೇ ವಿಧದ ಸಮಸ್ಯೆ ಆದಲ್ಲಿ ಸಂಸ್ಥೆ ಹೊಣೆಗಾರ ಆಗಿರುವುದಿಲ್ಲ.. ನೀವುಗಳೇ ನೇರವಾಗಿ ಜವಾಬ್ದಾರಿ ಆಗಿರುತ್ತಿರಿ..
* ಪರೀಕ್ಷೆಗೆ ಸಂಬಂಧ ಪಟ್ಟಂತೆ ಯಾವುದೇ ದೂರು /ಸಲಹೆಗಳಿದ್ದಲ್ಲಿ ನಿಮ್ಮ ಮಗು ಪರೀಕ್ಷೆ ಬರೆಯುವ ಕೇಂದ್ರದಲ್ಲಿ ಲಿಖಿತ ರೂಪದಲ್ಲಿ ನೀಡುವುದು. ಹೆಸರು ವಿಳಾಸ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಿ.. ಈ ಮಾಹಿತಿ ಇಲ್ಲದಿದ್ದಲ್ಲಿ ನಿಮ್ಮ ಪತ್ರವನ್ನು ತಿರಸ್ಕರಿಸಲಾಗುತ್ತದೆ.
* ಅಪ್ಲಿಕೇಶನ್ ಹಾಕದೆ ನೇರವಾಗಿ ಯಾರಿಗೂ ಅವಕಾಶ ಇರುವುದಿಲ್ಲ ಅವರಿಗೆ ಪರೀಕ್ಷೆಯನ್ನೂ ನೀಡಲಾಗುವುದಿಲ್ಲ.
* ಪ್ರವೇಶ ಪತ್ರವನ್ನು ನೀವೇ ಖುದ್ದು ಡೌನ್ಲೋಡ್ ಮಾಡಿಕೊಂಡು ತರುವುದು.. ಇಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ..
* ಆಯ್ಕೆ ಪ್ರಕ್ರಿಯೆಗೆ ಪಾಲಕರೇ ಬರಬೇಕು ಎಂಬ ಕಡ್ಡಾಯ ನಿಯಮ ಇರುವುದಿಲ್ಲ..
ಎಲ್ಲಾ ಅಭ್ಯರ್ಥಿಗಳಿಗೆ ಮನದಾಳದ ಶುಭಾಶಯಗಳು….
ಅಳ್ವಾಸ್ ಕನ್ನಡ ಮಾಧ್ಯಮ ಶಾಲೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಇದರ ಅಂಗ ಸಂಸ್ಥೆ ವಿವೇಕಾನಂದನಗರ, ಪುತ್ತಿಗೆ ಗ್ರಾಮ, ಸಂಪಿಗೆ ಅಂಚೆ, ಮೂಡುಬಿದಿರೆ, ದ.ಕ. – 574227