NCTE Draft Rules-2025; ಶಿಕ್ಷಕರ ಶಿಕ್ಷಣ ಕೋರ್ಸ್‌ಗಳಲ್ಲಿ ಭಾರಿ ಬದಲಾವಣೆ, ಕರಡು ಅಧಿಸೂಚನೆ ಪ್ರಕಟ ಮಾಡಿದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ

NCTE DRAFT RULES-2025: :ನಾಲ್ಕು ಹಂತಗಳಿಗೆ ಅನುಗುಣವಾಗಿ ಕೋರ್ಸ್ ರಚನೆ,NEP ಅನ್ವಯ ಕೋರ್ಸ್‌ಗಳಲ್ಲಿ ಮಾರ್ಪಾಡು.

 

NCTE DRAFT RULES: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಶಾಲಾ ಶಿಕ್ಷಣವನ್ನು ಬುನಾದಿ, (ಫೌಂಡೇಷನ್), ಸಿದ್ಧತಾ ಹಂತ (ಪ್ರಿಪರೇಟರಿ), ಮಾಧ್ಯಮಿಕ (ಮಿಡಲ್) ಹಾಗೂ ಪ್ರೌಢ ಶಿಕ್ಷಣ (ಸೆಕೆಂಡರಿ) ಹಂತದಲ್ಲಿ ವಿಭಾಗಿಸಲಾಗಿದೆ.

ಈ ಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (NCTE) ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕೋರ್ಸ್‌ಗಳಲ್ಲಿ ಬದಲಾವಣೆಗಳನ್ನು ಮಾಡಲು ಕರಡು ಅಧಿಸೂಚನೆಗಳನ್ನು ಪ್ರಕಟಿಸಿದೆ.

ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು,ವಿಶ್ವವಿದ್ಯಾಲಯಗಳಿಗೆ ಈ ಅಧಿಸೂಚನೆಯನ್ನು ರವಾನಿಸಲಾಗಿದೆ. ಜತೆಗೆ, ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಿಂದ ಈ ಬಗ್ಗೆ ಸಲಹೆ, ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಮಾ.8ರವರೆಗೆ ಅಭಿಪ್ರಾಯಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಈ ಮಾರ್ಪಾಡುಗಳನ್ನು 2026-27ನೇ ಸಾಲಿನಿಂದ ಜಾರಿಗೊಳಿಸಲಾಗುತ್ತಿದೆ.

11 ವರ್ಷಗಳ ಬಳಿಕ ಬದಲಾವಣೆ:

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ನೀತಿಯಲ್ಲಿ 11 ವರ್ಷಗಳ ಬಳಿಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಸ್ನಾತಕೋತ್ತರ ಶಿಕ್ಷಣ ಅಥವಾ ಪದವಿ ಬಳಿಕ ಒಂದು ವರ್ಷದ ಬಿ.ಇಡಿಗೆ ಅವಕಾಶ ನೀಡಲಾಗುತ್ತಿದೆ. ಅಂತೆಯೇ ಪದವಿ ಬಳಿಕ ಎರಡು ವರ್ಷಗಳ ಬಿ.ಇಡಿ ಕೋರ್ಸ್, ಪಿಯು ನಂತರ ಒಟ್ಟಾರೆ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳನ್ನು ಉಲ್ಲೇಖಿಸಲಾಗಿದೆ.

ಎಂ.ಇಡಿ ಫುಲ್‌ಟೈಮ್ ಹಾಗೂ ಪಾರ್ಟ್‌ ಟೈಮ್ ಪಠ್ಯಕ್ರಮದಲ್ಲೂ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು NCTE ತಿಳಿಸಿದೆ.

ಇನ್ನೊಂದು ವಿಶೇಷವೆಂದರೆ 10 ವರ್ಷಗಳ ಮತ್ತೆ ಒಂದು ವರ್ಷದ ಬಿ.ಇಡಿ ಕೋರ್ಸ್ ಆರಂಭಿಸಿರುವುದು. ಅಂದರೆ ಎನ್‌ಇಪಿ ಅನ್ವಯ ನಾಲ್ಕು ವರ್ಷಗಳ ಪದವಿ ಪಡೆಯುವ ಅಭ್ಯರ್ಥಿಗಳು ಒಂದು ವರ್ಷದ ಬಿ.ಇಡಿ ಕೋರ್ಸ್ ಅಧ್ಯಯನ ಮಾಡಬಹುದಾಗಿದೆ. ಮುಂಬರುವ ವರ್ಷದಿಂದಲೇ ಈ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುತ್ತಿದೆ.

ಕೌಶಲಾಭಿವೃದ್ಧಿಯೂ ಇದೆ:

ನೂತನ ಕೋರ್ಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಪರಿಚಯ ಹಾಗೂ ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಪರಿಚಯಿಸಲು ಆದ್ಯತೆ ನೀಡಲಾಗುತ್ತದೆ.

ಆಶಯವೇನು?

ಶಿಕ್ಷಕರ ಶಿಕ್ಷಣದಲ್ಲಿ ಗುಣಮಟ್ಟ ಸುಧಾರಿಸಲು ಈ ಕರಡು ನಿಯಮಗಳಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಆಶಯಗಳು ಹಾಗೂ 2047ರ ವಿಕಸಿತ ಭಾರತದ ಗುರಿಗಳಿಗೆ ಅನುಸಾರವಾಗಿ ಶಿಕ್ಷಕರ ಶಿಕ್ಷಣದ ಪಠ್ಯಕ್ರಮ, ಕೋರ್ಸ್‌ಗಳನ್ನು ತಯಾರು ಮಾಡಲಾಗಿದೆ ಎನ್ನುವುದು ಎನ್‌ಸಿಟಿಇ ಸಮರ್ಥನೆ. ಶಾಲಾ ಶಿಕ್ಷಣ ಹಂತವನ್ನು ಎನ್‌ಇಪಿಯಲ್ಲಿ ವಿಭಾಗಿಸಿದಂತೆ ಪ್ರತ್ಯೇಕವಾಗಿ ಕೋರ್ಸ್ ಗಳಿರಲಿವೆ. ಇದಲ್ಲದೆ, ರಾಷ್ಟ್ರೀಯ ಕ್ರೆಡಿಟ್ ಫ್ರೇಮ್ ವರ್ಕ್ ಮಾರ್ಗಸೂಚಿಗಳನ್ನು ಇದರಲ್ಲಿ ಪರಿಗಣಿಸಲಾಗಿದೆ.

ಪಠ್ಯಕ್ರಮ ಚೌಕಟ್ಟಿಗೆ ಸಮಿತಿ ರಚನೆ:

ನಾಲ್ಕು ವರ್ಷಗಳ ಸಮಗ್ರ ಬಿ.ಇಡಿ ಕೋಸ್ ೯ಗೆ (ಐಟಿಇಪಿ) ಹೊಸ ವಿಷಯಗಳನ್ನು ಸೇರ್ಪಡೆ ಮಾಡುತ್ತಿದೆ. ಅದರಂತೆ ಐಟಿಇಪಿ ಯೋಗ ಶಿಕ್ಷಣ, ಐಟಿಇಪಿ ದೈಹಿಕ ಶಿಕ್ಷಣ, ಐಟಿಇಪಿ ಸಂಸ್ಕೃತ ಹಾಗೂ ಐಟಿಇಪಿ ಪ್ರದರ್ಶನ ಕಲೆಗಳ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ಈ ಎಲ್ಲ ಕೋರ್ಸ್‌ಗಳಿಗೆ ಪಠ್ಯಕ್ರಮ ಚೌಕಟ್ಟು ರೂಪಿಸಲು 8 ಸದಸ್ಯರ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು. ಈ ಬಗ್ಗೆ ಎನ್‌ಸಿಟಿಇ ಅಧ್ಯಕ್ಷ ಪಂಕಜ್ ಅರೋರಾ ಈ ಹಿಂದೆಯೇ ಮಾಹಿತಿ ನೀಡಿದ್ದರು.

CLICK HERE TO DOWNLOAD DRAFT RULES

CLICK HERE TO OFFICIAL WEBSITE 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!