LBA Question Bank Revision 2026-27:1 ರಿಂದ10ನೇ ತರಗತಿಗಳಿಗೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿ ಪರಿಷ್ಕರಣೆ

LBA Question Bank Revision 2026-27:1 ರಿಂದ 10ನೇ ತರಗತಿಗಳಿಗೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿ ಪರಿಷ್ಕರಣೆ.

LBA Question Bank Revision 2026-27:2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಗಳಿಗೆ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸಿ, ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ತರಗತಿವಾರು, ವಿಷಯವಾರು ಮತ್ತು ಮಾಧ್ಯಮವಾರು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಗಳನ್ನು ಸಿದ್ಧಪಡಿಸಲಾಗಿದೆ.

ಉಲ್ಲೇಖ-1 ಮತ್ತು 2 ರಂತೆ 2026-27ನೇ ಸಾಲಿನಲ್ಲಿ ಸದರಿ ಪ್ರಶ್ನೆಕೋಠಿಗಳನ್ನು ಪರಿಷ್ಕರಿಸಲು ಮತ್ತು ಹೊಸ ಪಠ್ಯಪುಸ್ತಕಗಳಿಗೆ ಪ್ರಶ್ನೆಕೋಠಿ ರಚಿಸಲು ನಿರ್ದೇಶನವಿರುತ್ತದೆ. ಪರಿಶೀಲಿಸಲಾಗಿ, 1 ರಿಂದ 10ನೇ ತರಗತಿಗಳ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ ಸಂಬಂಧಿಸಿದಂತೆ, ಒಟ್ಟು 65 ಪ್ರಶ್ನೆಕೋಠಿಗಳಲ್ಲಿ 12 ಪ್ರಶ್ನೆಕೋಠಿಗಳನ್ನು ರಚಿಸಬೇಕಾಗಿದೆ ಹಾಗೂ 53 ಪ್ರಶ್ನೆಕೋಠಿಗಳನ್ನು ಪರಿಷ್ಕರಿಸಬೇಕಾಗಿದೆ.

ಅದರಂತೆ, LBA ಪ್ರಶ್ನೆಕೋಠಿಯನ್ನು ಸಿದ್ಧಪಡಿಸಲು 3 ಹಂತಗಳಲ್ಲಿ ಕಾರ್ಯಾಗಾರವನ್ನು ಆಯೋಜಿಸಿ, (1 ದಿನ ಆನ್‌ಲೈನ್, 2+3 ದಿನಗಳು ಮುಖಾಮುಖಿ) ಕಳೆದ ಸಾಲಿನಲ್ಲಿ ಕಾರ್ಯ ನಿರ್ವಹಿಸಿದ ಡಯಟ್‌ಗಳಿಗೆ ಸದರಿ ಕಾರ್ಯವನ್ನು ನಿರ್ವಹಿಸಲು ಅನುಬಂಧದನ್ವಯ ಕಾರ್ಯಹಂಚಿಕೆ ಮಾಡಲಾಗಿದೆ.

ಕಾರ್ಯಹಂಚಿಕೆ ಮಾಡಿರುವ ಡಯಟ್‌ಗಳು LBA ಪ್ರಶ್ನೆಕೋಠಿಯ ರಚನೆ ಮತ್ತು ಪರಿಷ್ಕರಣೆ ಮಾಡಲು ಕೆಳಕಂಡ ಮಾರ್ಗಸೂಚಿ ಅಂಶಗಳನ್ನು ಅನುಸರಿಸುವುದು.

▪️ಡಯಟ್‌ಗಳಿಗೆ ಪಾಠವಾರು ಮೌಲ್ಯಾಂಕನ ಸಾಮಗ್ರಿ ಸಿದ್ಧಪಡಿಸಲು ಕಾರ್ಯ ಹಂಚಿಕೆ ಮಾಡಲಾಗಿದ್ದು, ಕ್ರಿಯಾಯೋಜನೆಯಂತೆ ಸಂಪನ್ಮೂಲ ವ್ಯಕ್ತಿಗಳು ಮತ್ತು ಪರಿಶೀಲಕರನ್ನು ನಿಯೋಜಿಸಿಕೊಂಡು ಕಾರ್ಯವನ್ನು ನಿರ್ವಹಿಸುವುದು.

▪️ಸದರಿ ಕಾರ್ಯವನ್ನು ನಿರ್ವಹಿಸಲು ಡಯಟ್ ಹಂತದಲ್ಲಿ ನೋಡಲ್ ಅಧಿಕಾರಿಯನ್ನು ಮತ್ತು ತಾಂತ್ರಿಕ ಸಹಾಯಕ್ಕಾಗಿ ಒಬ್ಬರು ತಾಂತ್ರಿಕ ಸಹಾಯಕರನ್ನು ನಿಯೋಜಿಸುವುದು.

▪️ನಿಯೋಜಿತ ನೋಡಲ್ ಅಧಿಕಾರಿ, ತಾಂತ್ರಿಕ ಸಹಾಯಕರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಪರಿಶೀಲಕರ ಮಾಹಿತಿಯನ್ನು ನೀಡಿರುವ Google Spread Sheet ನಲ್ಲಿ ದಿನಾಂಕ: 23-05-2026 ರೊಳಗೆ ಭರ್ತಿ ಮಾಡುವುದು.

▪️ಡಿ.ಎಸ್.ಇ.ಆರ್.ಟಿ ಕಛೇರಿಯಿಂದ ಪ್ರತಿ ವಿಷಯಕ್ಕೆ ಒಬ್ಬರು ನುರಿತ ಸಂಪನ್ಮೂಲ ವ್ಯಕ್ತಿಯನ್ನು ನಿಯೋಜಿಸಲಾಗುವುದು. ಉಳಿದಂತೆ ಕಳೆದ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ನುರಿತ ಸಂಪನ್ಮೂಲ ವ್ಯಕ್ತಿಯನ್ನು ತಮ್ಮ ಹಂತದಲ್ಲಿಯೇ ನಿಯೋಜಿಸಿಕೊಳ್ಳುವುದು.

▪️4 ಮತ್ತು 5ನೇ ತರಗತಿಗಳ ಹೊಸ ಪಠ್ಯಪುಸ್ತಕಗಳಾದ ದ್ವಿಭಾಷಾ ಇಂಗ್ಲಿಷ್ ಮತ್ತು ಗಣಿತ ವಿಷಯಗಳಿಗೆ ಪ್ರಶ್ನೆಕೋಠಿಯನ್ನು ರಚಿಸಲು ಪ್ರತಿ ವಿಷಯಕ್ಕೆ 3 ಜನ ಸಂಪನ್ಮೂಲ ವ್ಯಕ್ತಿಗಳು ಮತ್ತು ಒಬ್ಬರು ಪರಿಶೀಲಕರನ್ನು ನಿಯೋಜಿಸಿಕೊಳ್ಳುವುದು.

▪️7 ಮತ್ತು 8ನೇ ತರಗತಿಗಳ ಹೊಸ ಪಠ್ಯಪುಸ್ತಕಗಳಾದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಪ್ರಶ್ನೆಕೋಠಿಯನ್ನು ರಚಿಸಲು ಪ್ರತಿ ವಿಷಯಕ್ಕೆ 6 ಜನ ಸಂಪನ್ಮೂಲ ವ್ಯಕ್ತಿಗಳು ಮತ್ತು ಒಬ್ಬರು ಪರಿಶೀಲಕರನ್ನು ನಿಯೋಜಿಸಿಕೊಳ್ಳುವುದು.

▪️1 ರಿಂದ 10ನೇ ತರಗತಿಗಳ ಪ್ರಶ್ನೆಕೋಠಿಯನ್ನು ಪರಿಷ್ಕರಿಸಲು ಪ್ರತಿ ವಿಷಯಕ್ಕೆ ಇಬ್ಬರು ಸಂಪನ್ಮೂಲ ವ್ಯಕ್ತಿಗಳು ಮತ್ತು ಒಬ್ಬರು ಪರಿಶೀಲಕರನ್ನು ನಿಯೋಜಿಸಿಕೊಳ್ಳುವುದು.

▪️6 ರಿಂದ 10ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ LBA ಪ್ರಶ್ನೆಕೋಠಿಯನ್ನು ಪರಿಷ್ಕರಿಸುವ ಸಂಪನ್ಮೂಲ ವ್ಯಕ್ತಿಗಳೇ ಆಂಗ್ಲ ಮಾಧ್ಯಮದಲ್ಲಿಯೂ ಪರಿಷ್ಕರಿಸುವುದು.

▪️ಸಂಪನ್ಮೂಲ ವ್ಯಕ್ತಿಗಳು ಮತ್ತು ಪರಿಶೀಲಕರು Copyright ಇಲ್ಲದಿರುವ ಚಿತ್ರಗಳು ಮತ್ತು ಸಾಹಿತ್ಯವನ್ನು ಬಳಸುವುದು. ಹಾಗೂ Al Generated ಚಿತ್ರಗಳನ್ನು ಬಳಸಿದ್ದಲ್ಲಿ ಕರ್ನಾಟಕದ ಸ್ಥಳೀಯತೆಗೆ ಹೊಂದಿಸಿಕೊಳ್ಳುವುದು.

▪️ಕಳೆದ ಸಾಲಿನಲ್ಲಿ ಅನುಸರಿಸಿದ ವಿಧಾನವನ್ನೇ ಅನುಸರಿಸಿ ಈಗಾಗಲೇ ಸಿದ್ದಪಡಿಸಿರುವ ಪ್ರಶ್ನೆಕೋಠಿಯನ್ನು ಅವ್ಯಕತೆಗನುಗುಣವಾಗಿ ಮಾರ್ಪಾಡು ಮಾಡುವುದು.

▪️LBA ಪ್ರಶ್ನೆಕೋಠಿ ರಚನೆ ಮತ್ತು ಪರಿಷ್ಕರಣೆ ಮಾಡುವಾಗ ಪಠ್ಯಪುಸ್ತಕದಲ್ಲಿನ ಪ್ರತಿ ಪಾಠದ ಅಭ್ಯಾಸದ ಪ್ರಶ್ನೆಗಳು, ಕೌಶಲ ಮತ್ತು ಅನ್ವಯದ ಪ್ರಶ್ನೆಗಳನ್ನು ಒಳಗೊಂಡಿರಬೇಕು.

▪️ಪ್ರಶ್ನೆಕೋಠಿಯು ಪ್ರತಿ ಪಾಠದಲ್ಲಿ ರಚಿಸಬಹುದಾದ ಗರಿಷ್ಠ ಸಂಖ್ಯೆಯ ಪ್ರಶ್ನೆಗಳು ಹಾಗೂ ಉತ್ತಮ ಗುಣಮಟ್ಟದ ಪ್ರಶ್ನೆಗಳನ್ನು ಹೊಂದಿರಬೇಕು.

▪️ಪ್ರಶ್ನೆಕೋಠಿಯನ್ನು A4 ಅಳತೆಯಲ್ಲಿ 150 ಪುಟಗಳ ಮಿತಿಯಲ್ಲಿ ವಿನ್ಯಾಸಗೊಳಿಸುವುದು.

▪️ಪ್ರಶ್ನೆಗಳನ್ನು ಸಿದ್ಧಪಡಿಸುವಾಗ ಕನ್ನಡ ಭಾಷೆಗೆ FONT 15 (Heading), FONT 14 (Sub-Heading), FONT 13 (Content) ಮತ್ತು ಇಂಗ್ಲೀಷ್ ಭಾಷೆಗೆ FONT 14 (Heading), FONT 13 (Sub-Heading), FONT 12 (Content), LINE SPACE 1.15 ಇರುವಂತೆ ಕ್ರಮವಹಿಸುವುದು.

▪️ಕನ್ನಡ ಭಾಷೆಗೆ UNICODE 6.0, ಹಾಗೂ ಇಂಗ್ಲಿಷ್ ಭಾಷೆಗೆ Times New Roman Font ನಲ್ಲಿ Type ಮಾಡುವುದು.

▪️Page Border ಬೇಡ Text Box Line ಇರಲಿ . Box Line jump ಆಗದಂತೆ ಕ್ರಮವಹಿಸುವುದು.

▪️Page Number ಅನ್ನು Below Right Corner ನಲ್ಲಿ ನಮೂದಿಸುವುದು.

▪️ಚಿತ್ರಗಳು ಮೂಲ ಬಣ್ಣದಲ್ಲಿಯೇ ಇರಲಿ. ಚಿತ್ರದ ಮೇಲೆ ಅಕ್ಷರಗಳಿದ್ದಲ್ಲಿ ಸರಿಯಾಗಿ ಕಾಣುವಂತೆ ಸರಿಪಡಿಸುವುದು.

▪️ಪ್ರಶ್ನೆ ಕೋಠಿಯು ಸೂಕ್ತ Cover Pages-4, Preliminary Pages-6 (1. Cover page ನ ಒಂದನೇ ಪುಟ, 2. ಪರಿಕಲ್ಪನೆ ಮತ್ತು ಮಾರ್ಗದರ್ಶನ, 3. ನಿರ್ದೇಶಕರು, DSERT ರವರ ಮುನ್ನುಡಿ,4. ಶಿಕ್ಷಕರಿಗೆ ಸೂಚನೆಗಳು 5. ಕಲಿಕಾ ಫಲಗಳ ಪಟ್ಟಿ, 6. ಪರಿವಿಡಿ) Content Pages ಗಳನ್ನು ಒಳಗೊಂಡಿದ್ದು, Preliminary Pages ಗೆ Roman ಸಂಖ್ಯೆಗಳನ್ನು ಹಾಗೂ Content Pages ಗೆ Hindu Arabic (1,2,3,4…….) ಸಂಖ್ಯೆಗಳನ್ನು ನಮೂದಿಸುವುದು.

ಸಿದ್ಧಪಡಿಸಿರುವ LBA ಪ್ರಶ್ನೆಕೋಠಿಗಳ Soft ಪ್ರತಿಯನ್ನು (Editable and PDF) ದಿನಾಂಕ: 05-06-2026 ರೊಳಗೆ evg.kardsert@gmail.com ಗೆ ಕಳುಹಿಸುವುದು.

▪️ನಂತರ DSERT ಹಂತದಲ್ಲಿ 2 ದಿನಗಳ ಪರಿಶೀಲನಾ ಕಾರ್ಯಾಗಾರವನ್ನು ಆಯೋಜಿಸಿ ಪ್ರಶ್ನೆಕೋಠಿಯನ್ನು ಅಂತಿಮಗೊಳಿಸಲಾಗುವುದು.

LBA Question Bank Revision 2026-27

CLICK HERE TO DOWNLOAD MEMORANDUM

ಡಯಟ್ಗಳಿಗೆ ತರಗತಿವಾರು, ವಿಷಯವಾರು ಹಂಚಿಕೆ ಮಾಡಿರುವ ಮಾಹಿತಿ.- CLICK HERE

ವಿಷಯವಾರು ಪ್ರಶ್ನೆ ಕೊಠಿಗಳನ್ನು ಡೌನ್ಲೋಡ್ ಮಾಡಲು – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!