Arattai app: ವಾಟ್ಸಾಪ್‌ಗೆ ಪರ್ಯಾಯ ಅರಟ್ಟೈ ಅಪ್ಲಿಕೇಶನ್ ಕುರಿತು ಒಂದಿಷ್ಟು ಮಾಹಿತಿ
Arattai app: ವಾಟ್ಸಾಪ್‌ಗೆ ಪರ್ಯಾಯ ಅರಟ್ಟೈ ಅಪ್ಲಿಕೇಶನ್,ಐಟಿ ದೈತ್ಯ ಗೂಗಲ್, ಮೈಕ್ರೋಸಾಫ್ಟ್ ಗೆ ಸಡ್ಡು ಹೊಡೆದ ಭಾರತೀಯ ಕಂಪನಿ ಈ ಕುರಿತು ಒಂದಿಷ್ಟು ಮಾಹಿತಿ.
ವಾಟ್ಸಾಪ್, ಗೂಗಲ್, ಮೈಕ್ರೋಸಾಫ್ಟ್ ಸಾಮ್ರಾಜ್ಯಕ್ಕೆ ಈಗ ಭಾರತದ ಸ್ವದೇಶಿ ಆಸ್ತ್ರಝಹೋ ಸಡ್ಡು ಹೊಡೆಯುತ್ತಿದೆ. ಮೋದಿ ಸ್ವದೇಶಿ ಚಳವಳಿಯ ಬೆಂಬಲದ ನಡುವೆ, ಝೂಹೋ ಅರಟ್ಟೈ ಆಪ್ ಮೂಲಕ ವಾಟ್ಸಾಪ್ ನೇರ ಸವಾಲು ಎಸೆದಿದೆ. ಕೆಲವೇ ದಿನಗಳಲ್ಲಿ 3 ಸಾವಿರದಿಂದ 75 ಲಕ ಬಳಕೆದಾರರ ವರೆಗೆ ಏರಿಕೆಯಾದ ಅರಟ್ಟೈ ಈಗಾಗಲೇ ವಾಟ್ಸಾಪ್ ಕಿಲ್ಲರ್ ಎಂಬ ಹೆಸರನ್ನು ಕೂಡ ಗಳಿಸಿದೆ. ಹಾಗಾದರೆ ಏನಿದು ಮೇಡ್ ಇನ್ ಇಂಡಿಯಾ ಝಹೋ ಟೆಕ್ ಕ್ರಾಂತಿ ಎಂಬುದನ್ನು ಇಲ್ಲಿ ನೋಡೋಣ.
ಅರಟ್ಟೈ ಹುಟ್ಟಿದ್ದು ಹೇಗೆ?
ಈಗ ಟ್ರೆಂಡ್‌ಗೆ ಬಂದಿರೋ ಅರಟ್ಟೈ ಆ್ಯಪ್ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಭಾರತದ ಟೆಕ್ ಕಂಪನಿ ಝೂಹೋ ಕಾರ್ಪೊರೇಷನ್, ಇದನ್ನು 2021ರಲ್ಲಿ ಒಂದು ಸಣ್ಣ ಪ್ರಾಜೆಕ್ಟ್ ಆಗಿ ಆರಂಭಿಸಿತ್ತು. ಅದು ಈಗ ಸ್ವದೇಶಿ ಚಳವಳಿ ಶುರುವಾದ ಬಳಿಕ ಮತ್ತೆ ಟ್ರೆಂಡ್‌ಗೆ ಬಂದಿದೆ. ಈ ಆ್ಯಪ್‌ನಲ್ಲಿ ವೈಯಕ್ತಿಕ ಚಾಟ್, ಗ್ರೂಪ್ ಚಾಟ್, ವಾಯ್ಸ್ ನೋಟ್ಸ್, ಫೋಟೊ ಮತ್ತು ವಿಡಿಯೊ ಶೇರಿಂಗ್, ಸ್ಟೋರಿಗಳು ಮತ್ತು ಬ್ರಾಡ್‌ಕಾಸ್ಟ್ ಚಾನೆಲ್‌ಗಳಂತಹ ಎಲ್ಲ ಅಗತ್ಯ ಫೀಚರ್‌ಗಳನ್ನು ಹೊಂದಿದ್ದು, ವಾಟ್ಸ್‌ಆಪ್ ಮೆಸೇಜಿಂಗ್ ಆಪ್ ಗೆ ಸಡ್ಡು ಹೊಡೆಯುತ್ತಿದೆ. ಇದು ಫುಲ್ ಮೇಡ್ ಇನ್ ಇಂಡಿಯಾ ಆಪ್ ಆಗಿದ್ದು, ನಮ್ಮ ಡಿಜಿಟಲ್ ಜೀವನವನ್ನು ಆಳುತ್ತಿರುವ ಜಾಗತಿಕ ದೈತ್ಯ ಕಂಪನಿಗಳ ಸ್ಟೈವೇರ್‌ಗಳಿಂದ ಮುಕ್ತವಾದ, ಸುರಕ್ಷಿತವಾದ ಒಂದು ಪರ್ಯಾಯ ವೇದಿಕೆಯಾಗಿದೆ. ಇದೇ ಇದರ ಅಸಲಿ ಶಕ್ತಿಯಾಗಿದೆ.

ಡಿಜಿಟಲ್ ವಲಯದಲ್ಲಿ ವಾಟ್ಸಾಪ್, ಗೂಗಲ್, ಮೈಕ್ರೋಸಾಫ್ಟ್ ದೈತ್ಯ ಕಂಪನಿಗಳದ್ದೆ ಪಾರುಪತ್ಯ. ಈ ಸಾಮ್ರಾಜ್ಯಕ್ಕೆ ಭಾರತದ ಸ್ವದೇಶಿ ಅಸ್ತ್ರವೊಂದು ಸವಾಲು ಎಸೆಯುತ್ತಿದೆ. ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಆರಂಭಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಸ್ವದೇಶಿ ಚಳವಳಿಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತದ ಝೇಹೋ ಕಂಪನಿ ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಹೆಜ್ಜೆಯನ್ನು ಗಟ್ಟಿಯಾಗಿ ಇಡುತ್ತಿದೆ.
ಗೂಗಲ್, ಮೈಕ್ರೋಸಾಫ್ಟ್‌ಗೆ ಈಗಾಗಲೇ ಝೇಹೋ ಸೂಟ್‌ನಿಂದ ಸವಾಲು ಹಾಕಿದ ಝೇಹೋ ಕಂಪನಿ, ಇದೀಗ ಅರಟ್ಟೈ ಆ್ಯಪ್ ಮೂಲಕ ವಾಟ್ಸಾಪ್‌ಗೆ ಎದುರಾಳಿ ಆಗಿದೆ. ಕೇವಲ ಮೂರೇ ಮೂರು ದಿನದಲ್ಲಿ ದಿನಕ್ಕೆ 3,000 ಬಳಕೆದಾರರಿಂದ ನೇರವಾಗಿ 3.5 ಲಕ್ಷ ಬಳಕೆದಾರರ ವರೆಗೆ ಏರಿಕೆಯಾಗಿದ್ದು, ಭಾರತದ ಟೆಕ್ ವಲಯದಲ್ಲಿ ಹೊಸ ಕ್ರಾಂತಿಯ ಅಲೆ ಎಬ್ಬಿಸಿದೆ.
ಕೇಂದ್ರ ಸರಕಾರದ ಬೆಂಬಲದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿರುವ ಅರಟ್ಟೈ ಆ್ಯಪ್ ಅನ್ನು ಹಲವರು ವಾಟ್ಸಾಪ್ ಕಿಲ್ಲರ್ ಎಂದು ಕರೆಯುತ್ತಿದ್ದಾರೆ. ಏನಿದು ಅರಟ್ಟೆ ಇದರ ಹಿಂದಿರುವ ಶಕ್ತಿ ಯಾವುದು? ಜಾಗತಿಕ ಟೆಕ್ ದೈತ್ಯರಿಗೆ ಝಹೋ ಹೇಗೆ ಸವಾಲು ಹಾಕುತ್ತಿದೆ ಝಹೋ ಕಂಪನಿಯ ಸ್ವದೇಶಿ ಕ್ರಾಂತಿ,
ವಾಟ್ಸಾಪ್ ಅನ್ನು ಮೀರಿಸುತ್ತಾ ಅರಟ್ಟೈ?
ಜನಪ್ರಿಯತೆ, ಫೀಚರ್‌ಗಳು ಮತ್ತು ಸ್ವದೇಶಿ ಭಾವನೆಯ ನಡುವೆಯೂ, ಅರಟ್ಟೈ, ವಾಟ್ಸಾಪ್ ಅನ್ನು ಸೋಲಿಸಬಲ್ಲುದೇ ಎಂಬ ಜಿಜ್ಞಾನೆ ಇದೆ. ಭಾರತದಲ್ಲಿಯೇ ವಾಟ್ಸಾಪ್ 500 ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇದು ಕೇವಲ ಒಂದು ಮೆಸೇಜಿಂಗ್ ಆಪ್ ಆಗಿ ಉಳಿದಿಲ್ಲ. ನಮ್ಮ ದೈನಂದಿನ ಜೀವನದ, ಕಚೇರಿ ಸಂಭಾಷಣೆಗಳ ಮತ್ತು ವ್ಯಾಪಾರದ ಅವಿಭಾಜ್ಯ ಅಂಗವಾಗಿದೆ. ಅರಟ್ಟೈ ಈ ಸ್ಥಾನವನ್ನು ತಲುಪಬೇಕಾದರೆ, ಕೇವಲ ಪರ್ಯಾಯವಾದರೆ ಸಾಲದು, ವಾಟ್ಸಾಪ್ ಗಿಂತ ಉತ್ತಮ ಅನುಭವವನ್ನು ನೀಡಬೇಕಾಗುತ್ತದೆ. ಆಗ ಮಾತ್ರ ಝೇಹೋ ಅರಟ್ಟೈ ಟೆಕ್ ಕ್ಷೇತ್ರದಲ್ಲಿ ಮೇಲೆ ಹೋಗಿ ನಿಲ್ಲಲಿದೆ. ಆದರೆ, ಸದ್ಯಕ್ಕೆ ಅರಟ್ಟೈ ಒಂದು ಪ್ರಮುಖ ಕೊರತೆಯನ್ನು ಎದುರಿಸುತ್ತಿದೆ. ವಾಟ್ಸಾಪ್‌ನಲ್ಲಿ ಚಾಟ್‌ಗಳು ಕೂಡ ಎಂಡ್-ಟು-ಎಂಡ್ ಎನ್ಕ್ರೀಪೈಡ್ ಆಗಿರುತ್ತೆ. ಆದರೆ, ಅರಟ್ಟೈನಲ್ಲಿ ಸದ್ಯಕ್ಕೆ ಕರೆಗಳು ಮಾತ್ರ ಎನ್ಕ್ರಿಪೈಡ್ ಆಗಿದೆ. ಈ ಮಹತ್ವದ ಸೆಕ್ಯುರಿಟಿ ಅಪ್ ಡೇಟ್ ಅನ್ನು ಝೇಹೋ ತಂದಾಗ ವಾಟ್ ಆಪ್‌ಗೆ ಪರ್ಯಾಯವಾಗಿ ನಿಲ್ಲಲಿದೆ. ಇಲ್ಲದಿದ್ದರೆ, ಸಣ್ಣ ಆಪ್ ಆಗಿಯೇ ಉಳಿಯಲಿದೆ.
ಝೂಹೋಗೆ ಸಮಸ್ಯೆ ಸೃಷ್ಟಿಸಿದ ಬೆಳವಣಿಗೆ:
ಅದಲ್ಲದೇ, ಈ ಅನಿರೀಕ್ಷಿತ ಬೆಳವಣಿಗೆ ಅರಟ್ಟೆಗೆ ದೊಡ್ಡ ಸವಾಲನ್ನು ತಂದೊಡ್ಡಿದೆ. ಲಕ್ಷಾಂತರ ಹೊಸ ಬಳಕೆದಾರರ ಪ್ರವಾಹವನ್ನು ನಿಭಾಯಿಸಲು ಅದರ ವ್ಯವಸ್ಥೆ ಹೆಣಗಾಡುತ್ತಿದೆ. ಆರಂಭಿಕ ಬಳಕೆದಾರರು ಓಟಿಪಿ ವಿಳಂಬ, ಕಾಂಟ್ಯಾಕ್ಸ್ ಸಮಸ್ಯೆಗಳು ಮತ್ತು ಕರೆ ವೈಫಲ್ಯಗಳ ಬಗ್ಗೆ ದೂರು ನೀಡಿದ್ದಾರೆ. ಝೂಹೋ ಕೂಡ ಈ ಸಮಸ್ಯೆಗಳನ್ನು ಒಪ್ಪಿಕೊಂಡಿದ್ದು, ಸರ್ವ‌್ರಗಳನ್ನು ಸ್ಥಿರಗೊಳಿಸಲು ಒಂದೆರಡು ದಿನಗಳು ಬೇಕಾಗಬಹುದು ಎಂದು ಹೇಳಿದೆ. ಶ್ರೀಧರ್ ವೆಂಬು ಅವರ ಪ್ರಕಾರ, ಕಂಪನಿಯು ನವೆಂಬರ್‌ನಲ್ಲಿ ಹೊಸ ಫೀಚರ್ ಗಳೊಂದಿಗೆ ದೊಡ್ಡ ಬಿಡುಗಡೆಯನ್ನು ಯೋಜಿಸಿತ್ತು. ಆದರೆ, ಬೆಳವಣಿಗೆ ನಿರೀಕ್ಷೆಗಿಂತ ಹಲವು ತಿಂಗಳು ಮೊದಲೇ ಬಂದಿದೆ. ಸದ್ಯಕ್ಕೆ, ಝೂಹೋ ತಂಡವು ಹಗಲಿರುಳು ಶ್ರಮಿಸಿ ಸರ್ವ‌್ರಗಳನ್ನು ವಿಸ್ತರಿಸಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡುತ್ತಿದೆ. ಇದು ಕೇವಲ ಒಂದು ಆಪ್‌ನ ಸವಾಲಲ್ಲ, ಬದಲಾಗಿ ಸ್ವದೇಶಿ ತಂತ್ರ ಜ್ಞಾನದ ಸಾಮರ್ಥ್ಯದ ಅಗ್ನಿಪರೀಕ್ಷೆಯಾಗಿದೆ.
ಡಿಜಿಟಲ್ ಸೆಕ್ಯುರಿಟಿ ಭರವಸೆ!
ನೋಡಲು, ಅರಟ್ಟೈ ಮೆಸೇಜಿಂಗ್ ಆ್ಯಪ್ ಹೊಸದೇನನ್ನೂ ನಿಮಗೆ ಕೊಡಲ್ಲ ಅನಿಸ ಬಹುದು. ಆದರೆ, ಝೂಹೋ ಕಂಪನಿ, ಈಗಾಗಲೇ ಚಾಲ್ತಿಯಲ್ಲಿರುವ ಅತ್ಯುತ್ತಮ ಫೀಚರ್‌ಗಳನ್ನೇ ಅತ್ಯಂತ ಸೆಕ್ಯುರ್ ಆಗಿ ನಿಮಗೆ ಕೊಡುತ್ತಿದೆ. ಆದರೆ, ಈ ಎಲ್ಲ ಫೀಚರ್‌ಗಳಿಗಿಂತ ಮುಖ್ಯವಾಗಿ ಬಳಕೆದಾರರನ್ನು ಸೆಳೆಯುತ್ತಿರುವುದು ಝೇಹೋ ಕಂಪನಿಯ ಖಾಸಗಿತನವೇ ನಮ್ಮ ಆದ್ಯತೆ ಎಂಬ ಬದ್ದತೆ. ನಾವು ಅರಟ್ಟೆ ಮೂಲಕ ಬಳಕೆದಾರರ ವೈಯಕ್ತಿಕ ಡೇಟಾವನ್ನು ಎಂದಿಗೂ ಹಣಗಳಿಸಲು ಬಳಸುವುದಿಲ್ಲ ಎಂದು ಝೇಹೋ ಸ್ಪಷ್ಟವಾಗಿ ಹೇಳಿದೆ. ಡಿಜಿಟಲ್ ಸಾರ್ವ ಭೌಮತ್ವ ಮತ್ತು ಸ್ಟೈವೇರ್‌ಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ಈ ಕಾಲದಲ್ಲಿ, ಝೂಹೋದ ಈ ಸೆಕ್ಯುರಿಟಿ ಭರವಸೆ ಭಾರತೀಯ ಬಳಕೆದಾರರ ಹೃದಯ ಗೆದ್ದಿದೆ. ಆದ್ದರಿಂದ ಅರಟ್ಟೆ ಬಳಕೆದಾರರ ಸಂಖ್ಯೆಯು ಮೂರೇ ದಿನದಲ್ಲಿ 100 ಪಟ್ಟು ಹೆಚ್ಚಾಗಿದೆ. ಆ್ಯಪ್‌ಸ್ಟೋರ್‌ನಲ್ಲಿ ನೋಡ ನೋಡುತ್ತಿದ್ದಂತೆ ನಂಬರ್ 1 ಸ್ಥಾನಕ್ಕೆ ಏರಿಕೆಯಾಗಿದೆ.
2021ರ ಆಪ್ ಈಗ ಟ್ರೆಂಡ್ ಆಗಿದ್ದು ಹೇಗೆ?
2021ರಿಂದಲೂ ಆಪ್ ಸ್ಟೋರ್‌ಗಳಲ್ಲಿದ್ದ ಅರಟ್ಟೈ, ಇದ್ದಕ್ಕಿದ್ದಂತೆ ಮುನ್ನೆಲೆಗೆ ಬಂದಿದ್ದು ಹೇಗೆ? ಎಂಬುದನ್ನು ನೋಡಿದರೆ, ಇದರ ಹಿಂದಿರುವುದು ಸ್ವದೇಶಿ ಕರೆ. ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರು ದೇಶದ ನಾಗರಿಕರಿಗೆ ಸ್ವದೇಶಿ ಡಿಜಿಟಲ್ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದಾಗ, ಆ ಪಟ್ಟಿಯಲ್ಲಿ ಅರಟ್ಟೈ ಅಗ್ರಸ್ಥಾನದಲ್ಲಿತ್ತು. ಸರ್ಕಾರದಿಂದ ಸಿಕ್ಕ ಈ ಬೆಂಬಲವೇ ಕಿಡಿಯಂತೆ ಕೆಲಸ ಮಾಡಿದ್ದು, ಲಕ್ಷಾಂತರ ಜನರು ಆಪ್ ಡೌನ್‌ಲೋಡ್ ಮಾಡಲು ಮುಗಿಬಿದ್ದರು, ಕೆಲವೇ ಗಂಟೆಗಳಲ್ಲಿ ಐಓಎಸ್ ಮತ್ತು ಆಂಡ್ರಾಯ್ಡ್ ಆಪ್ ಸ್ಟೋರ್‌ಗಳಲ್ಲಿ ಅರಟ್ಟೈ ನಂಬರ್ 1 ಸ್ಥಾನಕ್ಕೇರಿದೆ. ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಪಾರ್ಕ್ ಕೊತೆಗಿನ ಹೋಲಿಕೆಗಳು, ಚರ್ಚೆಗಳು ಶುರುವಾಗಿ, ಈ ವಾಟಾಪ್ ಆಪ್ ವೈರಲ್ ಆಗಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಝೂಹೋ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಹೇಳುವಂತೆ, ಕೇವಲ 3 ದಿನಗಳಲ್ಲಿ ಅರಟ್ಟೈ ಟ್ರಾಫಿಕ್ 100 ಪಟ್ಟು ಹೆಚ್ಚಾಗಿದೆ, ಹೊಸ ಸೈನ್-ಅಪ್‌ಗಳು ದಿನಕ್ಕೆ 3 ಸಾವಿರದಿಂದ 3.5 ಲಕ್ಷಕ್ಕೆ ಏರಿದೆ. ಇದು ಮತ್ತೆ ಏರಿಕೆಯಾಗುವ ಸಾಧ್ಯತೆ ಇದ್ದು, ಮತ್ತೊಂದು 100 ಪಟ್ಟು ಬೆಳವಣಿಗೆಯನ್ನು ನಿಭಾಯಿಸಲು ತುರ್ತಾಗಿ ಮೂಲಸೌಕರ್ಯವನ್ನು ಸೇರಿಸುತ್ತಿದ್ದೇವೆ ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಮೇಕ್ ಇನ್ ಇಂಡಿಯಾಗೆ ಮೋದಿ ಪುಶ್!
ಇನ್ನು, ಭಾರತ ಸರಕಾರದ ಸಚಿವರೇ ಝೂಹೋ ಉತ್ಪನ್ನಗಳನ್ನು ಬಳಸಲು ಆರಂಭಿಸಿರುವುದು ಮತ್ತು ಇತರರಿಗೂ ಬಳಸಲು ಉತ್ತೇಜಿಸುತ್ತಿರುವುದು, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಝೂಹೋ ನೀಡುತ್ತಿರುವ ಕೊಡುಗೆಯಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಅಧಿಕೃತ ಕೆಲಸಗಳಿಗೆ ಝಹೋ ಬಳಸಲು ಆರಂಭಿಸಿರುವುದು ಈ ಸ್ವದೇಶಿ ಅಲೆಗೆ ಮತ್ತಷ್ಟು ಬಲ ತುಂಬಿದೆ. ಝೇಹೋ ತನ್ನ ಕಾರ್ಯಾಚರಣೆಯನ್ನು ಕೇವಲ ದೊಡ್ಡ ನಗರಗಳಿಗೆ ಸೀಮಿತಗೊಳಿಸಿಲ್ಲ. ಕೇರಳದಂತಹ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ತೆರೆದು, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದೆ. ಇದು ನಿಜವಾದ ಅರ್ಥದಲ್ಲಿ ಭಾರತಕ್ಕಾಗಿ, ಭಾರತದಿಂದ ಎಂಬ ತತ್ವವನ್ನು ಪಾಲಿಸುತ್ತಿದೆ. ಇನ್ನು, ಪ್ರಮುಖ ಸವಾಲಾಗಿದ್ದ ಡೇಟಾ ಸಂಗ್ರಹ ಸಮಸ್ಯೆಯನ್ನು ಭಾರತ ಎದುರಿಸುತ್ತಿದೆ. ಇದಕ್ಕೆ ಝಹೋ ಪರಿಹಾರವನ್ನು ಝೇಹೋ ನೀಡುತ್ತಿದ್ದು, ಭಾರತೀಯರ ಡೇಟಾವನ್ನು ಭಾರತದ ಸರ್ವ‌್ರಗಳಲ್ಲೇ ಸಂಗ್ರಹಿಸುತ್ತದೆ. ಇದು ನಮ್ಮ ದೇಶದ ಡೇಟಾ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ನೀಡುವ ದೊಡ್ಡ ಭರವಸೆಯಾಗಿದೆ.
1996ರಲ್ಲಿಯೇ ಹುಟ್ಟಿದ ಸಂಸ್ಥೆ:
ಝೂಹೋ ಕಂಪನಿಯನ್ನು ಶ್ರೀಧರ್ ವೆಂಬು ಎಂಬವರು 1996 ರಲ್ಲಿ ತಮ್ಮ ಸಹೋದರರು ಮತ್ತು ಟೋನಿ ಥಾಮಸ್ ಅವರೊಂದಿಗೆ ಹುಟ್ಟು ಹಾಕಿದರು. ಅದರ ಮೂಲ ಹೆಸರು ಅಡ್ವವೆಂಟ್ ನೆಟ್ ಎಂದಿತ್ತು. ಶ್ರೀಧರ್ ವೆಂಬು ಅವರು ಭಾರತೀಯ ಬಿಲಿಯನೇರರ್ ಆಗಿದ್ದು, ಯಾವುದೇ ವಿದೇಶಿ ಹೂಡಿಕೆಯಿಲ್ಲದೇ, ಸ್ವಂತ ಬಂಡವಾಳ, ಸ್ವತಂತ್ರ ಬೆಳವಣಿಗೆಯ ಮಾಡೆಲ್ ಅನುಸರಿಸಿ, ಝೂಹೋವನ್ನು ಜಾಗತಿಕ ಸಾಫ್ಟ್‌ವೇರ್-ಆಸ್-ಎ-ಸರ್ವೀಸ್’ ಕಂಪನಿಯಾಗಿ ರೂಪಿಸಿದ್ದಾರೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಾಫ್ಟ್‌ವೇರ್ ಪ್ರತಿಭೆಗಳನ್ನು ಬೆಳೆಸುವುದು ಇದರ ಮುಖ್ಯಗುರಿಯಾಗಿದೆ. ಝೂಹೋ ವಿಶ್ವಾದ್ಯಂತ 10 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಒಟ್ಟಿನಲ್ಲಿ, ಝಹೋದ ಅರಟ್ಟೈಯ ಪಯಣ ಕೇವಲ ಒಂದು ಮೆಸೇಜಿಂಗ್ ಆಪ್‌ನ ಸಕ್ಸಸ್ ಸ್ಟೋರಿ ಅಲ್ಲ. ಇದು ಆತ್ಮನಿರ್ಭರ ಭಾರತ ಹಾಗೂ ಸ್ವದೇಶಿ ಚಳವಳಿಗೆ ರೆಕ್ಕೆ ಪುಕ್ಕ ನೀಡುವ ಕಥೆ. ಆದರೆ, ಅರಟ್ಟೈ ವಾಟ್ಸಾಪ್ ಕಿಲ್ಲರ್ ಆಗುತ್ತದೋ ಇಲ್ಲವೋ, ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಝಹೋ ತನ್ನ ಮೂಲ ಸೌಕರ್ಯವನ್ನು ಎಷ್ಟು ಬೇಗನೆ ಬಲಪಡಿಸುತ್ತದೆ ಮತ್ತು ತನ್ನ ಭರವಸೆಗಳನ್ನು ಹೇಗೆ ಈಡೇರಿಸುತ್ತದೆ ಎಂಬುದರ ಮೇಲೆ ಇದರ ಭವಿಷ್ಯ ನಿಂತಿದೆ. ಟೆಕ್ ದೈತ್ಯರ ಮುಂದೆ ಝಹೋ ಮತ್ತಷ್ಟು ಬಲಿಷ್ಟವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.