AWES RECURITMENT-2025: Applications invited for the recruitment of teachers in Army schools

AWES RECURITMENT-2025: Applications invited for the recruitment of teachers in Army schools.

 

AWES RECURITMENT-2025: ಭಾರತೀಯ ಸೇನಾ ಸಿಬ್ಬಂದಿಗಳ ಮಕ್ಕಳಿಗೆ ಶಿಕ್ಷಣ ಬಾನೀಡುವ ನಿಟ್ಟಿನಲ್ಲಿ ದೇಶದಾದ್ಯಂತ ಅರ್ಮಿ ಪಟ್ಟಣ ಸ್ಕೂಲ್‌ಗಳನ್ನು ಸ್ಥಾಪಿಸಲಾಗಿದೆ. ಇವು ಆರ್ಮಿ ವೆಲ್‌ಫೇ‌ರ್ ಎಜುಕೇಶನ್ ಸೊಸೈಟಿಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಈಗ ನೇಮಕ ನಡೆಯುತ್ತಿದ್ದು ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಈ ನೇಮಕಕ್ಕೆ ಸೆಪ್ಟೆಂಬರ್ 20 ಮತ್ತು 21ರಂದು ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

2025-26ರ ಶೈಕ್ಷಣಿಕ ವರ್ಷಕ್ಕೆ ಈ ನೇಮಕ ನಡೆಯುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷ 8 ಸಾವಿರ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಈ ವರ್ಷ ಹುದ್ದೆಗಳ ಸಂಖ್ಯೆಯನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಪೋಸ್ಟ್ ಗ್ರಾಜುಯೇಟ್ ಟೀಚರ್ (ಪಿಜಿಟಿ), ಟ್ರೇನ್ಸ್ ಗ್ರಾಜುಯೇಟ್ ಟೀಚರ್ (ಟಿಜಿಟಿ) ಮತ್ತು ಪೈಮರಿ ಟೀಚರ್ (ಪಿಆರ್‌ಟಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೂ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆ ಜೊತೆಗೆ ಬಿಎಡ್ ಪೂರ್ಣಗೊಳಿಸುವುದು ಕಡ್ಡಾಯ.

ಅರ್ಹತೆಗಳೇನು?:

ಕಂಪ್ಯೂಟ‌ರ್ ಸೈನ್ಸ್ ಫಿಸಿಕಲ್ ಎಜುಕೇಶನ್, ಇಂಗ್ಲಿಷ್, ಹಿಂದಿ, ಸಂಸ್ಕೃತ, ಹಿಸ್ಟರಿ, ಜಿಯಾಗ್ರಫಿ, ಎಕನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಮ್ಯಾನ್ಸ್ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ, ಬಯೋ ಟೆಕ್ನಾಲಜಿ, ಸೈಕಾಲಜಿ, ಕಾಮರ್ಸ್, ಹೋಂ ಸೈನ್ಸ್ ವಿಭಾಗಗಳಲ್ಲಿ ಪಿಜಿಟಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ:

ಪಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಡ್ ಜೊತೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಹಾಗೆಯೇ ಸಂಸ್ಕೃತ, ಹಿಂದಿ, ಇಂಗ್ಲಿಷ್, ಸೋಷಿಯಲ್ ಸ್ಟಡೀಸ್, ಗಣಿತ, ವಿಜ್ಞಾನ ಮತ್ತು ಕಂಪ್ಯೂಟ‌ರ್ ಸೈನ್ಸ್‌ನಲ್ಲಿ ಟಿಜಿಟಿ ಹುದ್ದೆಗಳಿವೆ. ಇವುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಜೊತೆಗೆ ಬಿಎಡ್ ಪೂರ್ಣಗೊಳಿಸಿರಬೇಕು. ಇನ್ನು ಪಿಆರ್‌ಟಿ ಹುದ್ದೆಗಳ ಆಕಾಂಕ್ಷಿಗಳು ಪದವಿ ಜೊತೆಗೆ ಡಿ.ಇಐ.ಎಡ್ /ಬಿಎಡ್ ಅರ್ಹತೆ ಹೊಂದಿರಬೇಕು. ನಿಗದಿತ ವಿದ್ಯಾರ್ಹತೆ (ಪದವಿ/ಸ್ನಾತ ಕೋತ್ತರ) ಮತ್ತು ಬಿಎಡ್‌ ನಲ್ಲಿ ಅಭ್ಯರ್ಥಿಗಳು ಶೇ.50 ಅಂಕಗಳನ್ನು ಪಡೆದರೆ ಮಾತ್ರ ಅರ್ಜಿ ಸಲ್ಲಿಸುವ ಅರ್ಹತೆ ಇರುತ್ತದೆ.

ನೆನಪಿರಲಿ:

ಇದರೊಂದಿಗೆ ಸಿಟಿಇಟಿ/ಟಿಇಟಿ ಅರ್ಹತೆ ಕಡ್ಡಾಯ. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನಾನುಭವ ಹಾಗೂ ಕಂಪ್ಯೂಟರ್ ಜ್ಞಾನ ಇರುವವರಿಗೆ ಆದ್ಯತೆ ಮೊದಲು. ಟಿಜಿಟಿ (ಕಂಪ್ಯೂಟರ್ ಸೈನ್ಸ್) ಹುದ್ದೆಗೆ ಮಾತ್ರ ಬಿಎಡ್ ಅರ್ಹತೆಯಿಂದ ವಿನಾಯಿತಿ ಇರುತ್ತದೆ.

ವಯೋಮಿತಿ:

ಈಗಾಗಲೇ ಬೋಧಕರಾಗಿ ಕೆಲಸ ಮಾಡಿದ ಅನುಭವ ಇದ್ದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 57 ವರ್ಷ (ಐದು ವರ್ಷ ಬೋಧನಾನುಭವ ಇರಬೇಕು) ಮೀರಿರಬಾರದು. ಹೊಸದಾಗಿ ಅರ್ಜಿ ಸಲ್ಲಿಸುವ (ಫ್ರೆಷರ್ಸ್) ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.

ನೇಮಕ ಹೇಗೆ?

ಮೊದಲಿಗೆ ಆನ್‌ಲೈನ್‌ನಲ್ಲಿ ಸ್ಟೀನಿಂಗ್ ಟೆಸ್ಟ್ /ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದ ನಂತರ ಬೋಧನಾ ಪರೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಅವಶ್ಯಕತೆ ಇದ್ದಲ್ಲಿ ಕಂಪ್ಯೂಟರ್ ಜ್ಞಾನವನ್ನೂ ಪರೀಕ್ಷಿಸಲಾಗುತ್ತದೆ. ಸಂದರ್ಶನ ಮತ್ತು ಬೋಧನಾ ಪರೀಕ್ಷೆಯನ್ನು ಶಾಲೆಗಳ ಆಡಳಿತ ಮಂಡಳಿಗಳು ನಡೆಸಲಿವೆ. ಸಿಬಿಎಸ್‌ಸಿ/ಅರ್ಮಿ ಪಬ್ಲಿಕ್ ಸ್ಕೂಲ್‌ಗಳ ನಿಯಮಾವಳಿಗಳ ಪ್ರಕಾರ ನೇಮಕ ಪ್ರಕ್ರಿಯೆಗಳು ನಡೆಯುತ್ತವೆ.

ಪ್ರಮುಖ ದಿನಾಂಕಗಳು:

▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:ಆಗಸ್ಟ್ 16, 2025

▪️ಪರೀಕ್ಷೆ ದಿನಾಂಕ: ಸೆಪ್ಟೆಂಬರ್, 20-21, 2025

▪️ಪ್ರವೇಶ ಪತ್ರ ಲಭ್ಯ:  ಸೆಪ್ಟೆಂಬರ್ 8ರ ನಂತರ

▪️ಫಲಿತಾಂಶ ಪ್ರಕಟ: ಅಕ್ಟೋಬರ್,8, 2025

▪️ಅರ್ಜಿ ಶುಲ್ಕ: 385 ರೂ.

ಸಹಾಯವಾಣಿ: 917969049948

ಹೆಚ್ಚಿನ ಮಾಹಿತಿಗೆ: https://awesindia.com

ಇದನ್ನೂ ನೋಡಿ…..

▪️Havaldar posts-2025: ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ SSLC ಪಾಸಾದವರಿಗೆ ಹುದ್ದೆಗಳು.

▪️SSC RECURITMENT -SSC ಮೂಲಕ 2423 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ.

▪️ಜವಾಹರ ನವೋದಯ ವಿದ್ಯಾಲಯ : 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ-2026-27

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!