Bhartiya bhasha utsav 2025: ಶಾಲೆಗಳಲ್ಲಿ ಭಾರತೀಯ ಭಾಷಾ ದಿವಸ್ 2025ನ್ನು ಆಯೋಜನೆ ಸರ್ಕಾರದ ಸುತ್ತೋಲೆ
Bhartiya bhasha utsav 2025: ಶಾಲೆಗಳಲ್ಲಿ ಭಾರತೀಯ ಭಾಷಾ ದಿವಸ್ 2025ನ್ನು ಆಯೋಜನೆ ಸರ್ಕಾರದ ಸುತ್ತೋಲೆ:
ಮೇಲಿನ ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿ ವರ್ಷ ಡಿಸೆಂಬರ್ 11 ರಂದು ಮಹಾಕವಿ ಸುಬ್ರಮಣ ಭಾರತಿರವರ ಜನ್ಮ ದಿನಾಚರಣೆಯನ್ನು ‘ಭಾರತೀಯ ಭಾಷಾ ಉತ್ಸವ 2025’ ಆಗಿ ಆಚರಿಸಲಾಗುತ್ತಿದೆ. ಈ ವರ್ಷದೆ ಧೈಯವಾಕ್ಯವಾದ “ಭಾಷೆಗಳು ಹಲವು, ಭಾವನೆ ಒಂದು” (Many Languages, One Emotion) ಭಾರತದ ವಿಶಾಲ ಮತ್ತು ವೈವಿಧ್ಯಮಯ ಭಾಷಾ ಪರಂಪರೆಯನ್ನು ಒಟ್ಟಿಗೆ ಹೆಣೆಯುವ ಏಕತೆ ಮತ್ತು ಸಾಂಸ್ಕೃತಿಕ ಗುರುತನ್ನು ಸಾಕಾರಗೊಳಿಸುವ ಕಾರ್ಯಕ್ರಮವಾಗಿದೆ.
ಭಾಷೆ ಸಾಂಸ್ಕೃತಿಕ ಗುರುತಿನ ಮೂಲಾಧಾರ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ವ್ಯಕ್ತಪಡಿಸುವ ಪ್ರಮುಖ ಮಾಧಮವಾಗಿದೆ. ಈ ವರ್ಷದ ಭಾರತೀಯ ಭಾಷಾ ಉತ್ಸವವು ಕೆಳಗಿನ ವಿಷಯಗಳನ್ನು ಆಧರಿಸಿ, ಡಿಸೆಂಬರ್ 4 ರಿಂದ 11, 2025 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಸರಣಿಯನ್ನು ಆಯೋಜಿಸಲು ತಿಳಿಸಿದೆ.

ಶಾಲಾ ವಿದ್ಯಾರ್ಥಿಗಳಲ್ಲಿ ಭಾರತೀಯ ಭಾಷೆಗಳು ಮತ್ತು ಸಾಹಿತ್ಯದ ಅರಿವು ಮತ್ತು ಅಭಿಮಾನ ಬೆಳೆಸುವುದು.
ಭಾರತೀಯ ಭಾಷಾ ಕಲಿಕೆಯನ್ನು ಉತ್ತೇಜಿಸುವ ಮೂಲಕ ಏಕ್ ಭಾರತ್ ಶ್ರೇಷ್ ಭಾರತ್ ಭಾವನೆಗಳನ್ನು ಪ್ರೋತ್ಸಾಹಿಸುವುದು.
ಸಾಂಸ್ಕೃತಿಕ ಮತ್ತು ಭಾಷೆಯ ಮೂಲಕ ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವುದು.
ಭಾರತವನ್ನು ಬಹುಭಾಷಾ, ಜ್ಞಾನ ಚಾಲಿತ ಸಮಾಜವಾಗಿ ಅಭಿವೃದ್ಧಿಪಡಿಸುವ ದೃಷ್ಟಿಕೋನವನ್ನು ಬೆಳೆಸುವುದು.
ಭಾರತೀಯ ಭಾಷಾ ಉತ್ಸವದ ಸಮಯದಲ್ಲಿ ಭಾಷೆಗಳ ಮೂಲಕ ಏಕತೆಯ ಭಾವನೆಯನ್ನು ಪೋಷಿಸಿ ಮತ್ತು ಸಾಂಸ್ಕೃತಿಕ ಒಗ್ಗಟ್ಟನ್ನು ನಿರಂತರವಾಗಿ ಬೆಂಬಲಿಸಿ ಬೆಳೆಸಲು ಕಾರ್ಯಕ್ರಮಗಳನ್ನು ಆಯೋಜಿಸಲು ತಿಳಿಸಿದೆ.
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ರವರು ಕಾರ್ಯಕ್ರಮದ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಮುಖ್ಯ ಶಿಕ್ಷಕರಿಗೆ ಮಾಹಿತಿಯನ್ನು ನೀಡಿ “ಭಾರತೀಯ ಭಾಷಾ ದಿವಸ್’ 2025 ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು, ಅನುಷ್ಠಾನಗೊಳಿಸಿದ ಬಗ್ಗೆ ಫೋಟೋಗಳ ಸಹಿತ ವರದಿಯನ್ನು ಪ್ರತಿ ದಿನವು ಕಡ್ಡಾಯವಾಗಿ ನೀಡಿರುವ Link ನಲ್ಲಿ
https://docs.google.com/spreadsheets/d/1BJxhQD4j5AzWbmdOYjmFHmfLFIB6ZZ5Rz7bfSKHTWcE/edit?usp=sharing
ರಲ್ಲಿ upload ಮಾಡುವುದು (ಹೆಚ್ಚಿನ ಮಾಹಿತಿಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಸರ್ಕಾರ, ನವದೆಹಲಿರವರ ಪತ್ರವನ್ನು ಲಗತ್ತಿಸಿದೆ.)