BPL Card: ನಿಮ್ಮ BPL ಕಾರ್ಡ್ ರದ್ದಾದ್ರೆ ನಿಮಗಿದೆ 45 ದಿನಗಳ ಕಾಲಾವಕಾಶ! ದಾಖಲೆಗಳನ್ನು ಇವರಿಗೆ ಸಲ್ಲಿಸಿ
BPL Card: ಕರ್ನಾಟಕ ಸರ್ಕಾರವು ಅನರ್ಹ ಬಿಪಿಎಲ್ (BPL -Below Poverty Line) ಕಾರ್ಡ್‌ದಾರರ ವಿರುದ್ಧ ಕಠಿಣ ಕ್ರಮಕೈಗೊಂಡಿದ್ದು, ಲಕ್ಷಾಂತರ ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚಿದೆ. ಈ ಕಾರ್ಡ್‌ಗಳನ್ನು ಎಪಿಎಲ್ (APL – Above Poverty Line) ಪರಿವರ್ತಿಸಲು ಸರ್ಕಾರ ತೀರ್ಮಾನಿಸಿದೆ.
ಈ ಕ್ರಮವು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಅರ್ಹರಿಗೆ ಮಾತ್ರ ಒದಗಿಸುವ ಗುರಿಯನ್ನು ಹೊಂದಿದೆ.
ಕೆಲವು ತಾಂತ್ರಿಕ ಕಾರಣಗಳಿಂದ ಅರ್ಹ BPL ಕಾರ್ಡ್‌ದಾರರ ಕಾರ್ಡ್‌ಗಳು APL ಆಗಿ ಪರಿವರ್ತನೆಯಾದರೆ, ಚಿಂತಿಸುವ ಅಗತ್ಯವಿಲ್ಲ. ಸರ್ಕಾರವು ಇಂತಹ ಕಾರ್ಡ್‌ದಾರರಿಗೆ 45 ದಿನಗಳ ಕಾಲಾವಕಾಶವನ್ನು ನೀಡಿದೆ.
ಈ ಅವಧಿಯಲ್ಲಿ, ನೀವು ಅಗತ್ಯ ದಾಖಲೆಗಳನ್ನು ತಹಶೀಲ್ದಾರರ ಕಚೇರಿಗೆ ಸಲ್ಲಿಸುವ ಮೂಲಕ ನಿಮ್ಮ BPL ಕಾರ್ಡ್‌ನ ಸ್ಥಿತಿಯನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ತಹಶೀಲ್ದಾರರು ದಾಖಲೆಗಳನ್ನು ಪರಿಶೀಲಿಸಿ, ಕಾರ್ಡ್‌ದಾರರ ಅರ್ಹತೆಯನ್ನು ನಿರ್ಧರಿಸಿ BPL ಅಥವಾ APL ಕಾರ್ಡ್‌ಗೆ ಸಂಬಂಧಿಸಿದ ತೀರ್ಮಾನವನ್ನು ಕೈಗೊಳ್ಳುತ್ತಾರೆ.