BSF Recuritment-2025 ಬಿಎಸ್‌ಎಫ್‌ನಲ್ಲಿ 1,121 ಹೆಡ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನ.

BSF Recuritment-2025 ಬಿಎಸ್‌ಎಫ್‌ನಲ್ಲಿ 1,121 ಹೆಡ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನ.

BSF Recuritment-2025 ಗಡಿ ಭದ್ರತಾ ಪಡೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ (ರೇಡಿಯೋ ಆಪರೇಟರ್) ಹಾಗೂ ಹೆಡ್ ಕಾನ್ ಸ್ಟೆಬಲ್ (ರೇಡಿಯೋ ಮೆಕಾನಿಕ್) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಗ್ರೂಪ್ ಸಿ ವೃಂದದ ನಾನ್ -ಮಿನಿಸ್ಟ್ರಿಯಲ್ ಹುದ್ದೆಗಳು ಇವಾಗಿವೆ. ಆರಂಭಿಕವಾಗಿ ತಾತ್ಕಾಲಿಕ ನೆಲೆಯಲ್ಲಿ ಭರ್ತಿ ಮಾಡಿಕೊಂಡರೂ, ನಂತರದಲ್ಲಿ ಕಾಯಂ ಸೇವಾ ಹುದ್ದೆಗಳಾಗಿ ಪರಿಗಣಿಸಲಾಗುತ್ತದೆ.

ಅಖಿಲ ಭಾರತ ಮಟ್ಟದ ಸೇವಾ ವ್ಯಾಪ್ತಿ ಹೊಂದಿರುವುದರಿಂದ ದೇಶದ ಯಾವುದೇ ಭಾಗದಲ್ಲಿ ಅಥವಾ ವಿದೇಶಗಳಲ್ಲಿಯೂ ಕರ್ತವ್ಯಕ್ಕೆ ನಿಯೋಜಿಸಬಹುದು.

ಆನ್‌ಲೈನ್ ಮೂಲಕವಷ್ಟೇ ಅರ್ಜಿಗಳನ್ನು ಸಲ್ಲಿಸಬೇಕಿದ್ದು, ಆ.24ರಿಂದ ಅವಕಾಶ ನೀಡಲಾಗುತ್ತದೆ. ಸೆ.23 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ವೇತನಶ್ರೇಣಿ: ಏಳನೇ ವೇತನ ಆಯೋಗದ 4ನೇ ಹಂತದ ಹುದ್ದೆಗಳಾಗಿದ್ದು, 25,500- 81,100 ರೂ. ವೇತನಶ್ರೇಣಿ ಇರಲಿದೆ. ಇದಲ್ಲದೆ, ವಿಶೇಷ ಪಿಂಚಣಿ ಸೌಲಭ್ಯವೂ ಸೇರಿ ಇತರ ಭತ್ಯೆಗಳನ್ನು ನೀಡಲಾಗುತ್ತದೆ.

▪️ಹುದ್ದೆಗಳು

ರೇಡಿಯೋ ಆಪರೇಟ‌ರ್, ರೇಡಿಯೋ ಮೆಕಾನಿಕ್ ಹುದ್ದೆಗಳು

ದೈಹಿಕ ಪರೀಕ್ಷೆ:

▪️ಪುರುಷರು 168 ಸೆಂ. ಮೀಟರ್ ಹಾಗೂ

▪️ಮಹಿಳೆಯರು 157 ಸೆಂ.ಮೀಟರ್ ಎತ್ತರವಿರಬೇಕು. ಎತ್ತರಕ್ಕೆ ಅನುಗುಣವಾದ ತೂಕ ಹೊಂದಿರಬೇಕು. ಪುರುಷರು ಆರೂವರೆ ನಿಮಿಷಗಳಲ್ಲಿ 1.6.ಕಿ. ಮಿ ಓಟ 11 ಅಡಿಗಳ  ಉದ್ದ ಜಿಗಿತ, ಮೂರುವರೆ ಅಡಿಗಳ ಎತ್ತರ ಜಿಗಿತವನ್ನು ಮೂರು ಪ್ರಯತ್ನಗಳಲ್ಲಿ ಪೂರೈಸಬೇಕು. ಮಹಿಳೆಯರು ನಾಲ್ಕು ನಿಮಿಷಗಳಲ್ಲಿ 800 ಮೀಟರ್ ಓಟ. ಮೂರು ಪ್ರಯತ್ನಗಳಲ್ಲಿ 9 ಅಡಿ ಉದ್ದ ಜಿಗಿತ, 3 ಅಡಿಗಳ ಎತ್ತರ ಜಿಗಿತ ಪೂರ್ಣಗೊಳಿಸಬೇಕು.

ವಿದ್ಯಾರ್ಹತೆ:

ಎಚ್‌ಸಿ (ಆರ್‌ಒ) ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯನ್ನು ಪಾಸಾಗಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು ಅಥವಾ ರೇಡಿಯೋ/ ಟೆಲಿವಿಷನ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಕಂಪ್ಯೂಟರ್ ಆಪರೇಟರ್/ ಪ್ರೋಗ್ರಾಮಿಂಗ್ ಅಸಿಸ್ಟೆಂಟ್/ಡೇಟಾ ಪ್ರಿಪರೇಷನ್/ ಕಂಪ್ಯೂಟರ್ ಸಾಫ್ಟ್‌ವೇರ್/ಜನರಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು. ರೇಡಿಯೋ ಮೆಕಾನಿಕ್ ಹುದ್ದೆಗೆ ಪಿಯು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು ಇಲ್ಲವೇ ಹಾರ್ಡ್‌ವೇರ್/ನೆಟ್ವರ್ಕ್ ಟೆಕ್ನಿಷಿಯನ್/ ಮೆಕಟ್ರಾನಿಕ್ಸ್/ ಡೇಟಾ ಎಂಟ್ರಿ ಆಪರೇಟರ್‌ನಲ್ಲಿ ಎರಡು ವರ್ಷಗಳ ಐಟಿಐ ಪೂರೈಸಿದವರನ್ನು ಪರಿಗಣಿಸಲಾಗುತ್ತದೆ.

ವಯೋಮಿತಿ:

ಕನಿಷ್ಠ 18 ವರ್ಷ ತುಂಬಿರಬೇಕು.ಗರಿಷ್ಠ 25 ವರ್ಷದೊಳಗಿರಬೇಕು. ಒಬಿಸಿ ವರ್ಗದವರಿಗೆ 3 ವರ್ಷ, ಪರಿಶಿಷ್ಟರಿಗೆ 5 ವರ್ಷ ವಯೋ ಸಡಿಲಿಕೆ ನೀಡಲಾಗಿದೆ.

 

ಆಯ್ಕೆಯ ಹಂತಗಳು:

ಮೊದಲ ಹಂತದಲ್ಲಿ ದೈಹಿಕ ಸಾಮರ್ಥ್ಯ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗೆ ಮೂರು ದಿನ ಮುಂಚೆ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಅರ್ಹತೆ ಪಡೆದವರನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ನಡೆಯಲಿದೆ. ಮೂರನೇ ಹಂತದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ. ರೇಡಿಯೋ ಅಪರೇಟರ್ (ಆರ್‌ಒ) ಹುದ್ದೆಯ ಅಭ್ಯರ್ಥಿಗಳಿಗೆ ಉಕ್ತಲೇಖನ/ ಪ್ಯಾರಾಗ್ರಾಫ್ ಓದು ಇರಲಿದೆ. ಜತೆಗೆ ವೈದ್ಯಕೀಯ ತಪಾಸಣೆಯನ್ನು ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಉಕ್ತ ಲೇಖನ ಪರೀಕ್ಷೆ (50 ಅಂಕಗಳು) ಸೇರಿ ಒಟ್ಟಾರೆ 250ಕ್ಕೆ ಪಡೆದ ಅಂಕಗಳನ್ನು ಆಧರಿಸಿ ರೇಡಿಯೋ ಅಪರೇಟರ್ ಹುದ್ದೆಗಳಿಗೆ ಹಾಗೂ ರೇಡಿಯೋ ಮೆಕಾನಿಕ್ ಹುದ್ದೆಗಳಿಗೆ 200 ಅಂಕಗಳಿಗೆ ಪಡೆದ ಒಟ್ಟು ಮಾರ್ಕ್ಸ್ ಪರಿಗಣಿಸಲಾಗುತ್ತದೆ.

ಪರೀಕ್ಷೆ ಪಠ್ಯಕ್ರಮ:

ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಸಿಬಿಎಸ್‌ಇ/ರಾಜ್ಯ ಶಿಕ್ಷಣ ಮಂಡಳಿಗಳ 12ನೇ ತರಗತಿ ಪಠ್ಯಕ್ರಮದ 80 ಪ್ರಶ್ನೆಗಳಿದ್ದು, 20 ಪ್ರಶ್ನೆಗಳು ಇಂಗ್ಲಿಷ್ ಭಾಷೆ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತವೆ. 100 ಪ್ರಶ್ನೆಗಳಿಗೆ 200 ಅಂಕಗಳಿದ್ದು, ತಪ್ಪು ಉತ್ತರಗಳಿಗೆ 1/4 ಅಂಕಗಳನ್ನು ಕಳೆಯಲಾಗುತ್ತದೆ.

ಹುದ್ದೆಗಳ ವಿವರ:

▪️ಎಚ್‌ಸಿ (ರೇಡಿಯೋ ಆಪರೇಟರ್): 910
▪️ಎಚ್‌ಸಿ (ರೇಡಿಯೋ ಮೆಕಾನಿಕ್): 211 ಈ ಪೈಕಿ 280 ಹುದ್ದೆಗಳನ್ನು ಇಲಾಖೆ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು ಮೀಸಲಿಡಲಾಗಿದೆ. ಇನ್ನುಳಿದವುಗಳಿಗೆ ನೇರ ನೇಮಕಾತಿ ಅನ್ವಯವಾಗಲಿದೆ.

ಅರ್ಜಿ ಶುಲ್ಕ:

▪️100 ರೂ. (ಪರಿಶಿಷ್ಟರು, ಮಹಿಳೆಯರಿಗೆ ಶುಲ್ಕ ವಿನಾಯ್ತಿಯಿದೆ)

ಪ್ರಮುಖ ದಿನಾಂಕಗಳು:

▪️ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ:24-08-2025

▪️ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:23-09-2025

 

▪️ಅರ್ಜಿ ಸಲ್ಲಿಕೆ ಮಾಡಲು ಮತ್ತು ಹೆಚ್ಚಿನ ಮಾಹಿತಿ – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!