Caste Census: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025

Caste Census: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025

Caste Census: ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿದೆ.

1. ಸಮೀಕ್ಷೆಯ ಉದ್ದೇಶ:

a. ರಾಜ್ಯದ ಎಲ್ಲಾ ವರ್ಗಗಳ/ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು.

b. ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ- ಅಂಶಗಳ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮವನ್ನು ರೂಪಿಸುವುದು.

ವಿದ್ಯುತ್ ಸಂಪರ್ಕವಿಲ್ಲದೆ ಇರುವ ಮನೆಗಳ ವಿವರವನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿರುತ್ತದೆ. ಚಾಮರಾಜನಗರ, ಚಿಕ್ಕಮಗಳೂ ಹಾವೇರಿ, ಕಲಬುರಗಿ, ಉತ್ತರ ಕನ್ನಡ, ಕೊಡಗು, ಬಳ್ಳಾರಿ, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಿಂದ ಮಾಹಿತಿ ಬಂದಿರುತ್ತದೆ. ಸದರಿ ಮನೆಗಳನ್ನು ಸಹ VA/PDO ಗಳ ಮೂಲಕ Geo tag ಮಾಡಲು ಕ್ರಮವಹಿಸಬೇಕು.

2. ಸಮೀಕ್ಷೆ ನಡೆಯುವ ದಿನಾಂಕ:

ದಿನಾಂಕ: 22.09.2025 ರಿಂದ 07.10.2025 ರ ವರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು.

3. ಮನೆ ಪಟ್ಟಿ ತಯಾರಿಕೆ, ಬ್ಲಾಕ್ ಗಳ ಗುರುತಿಸುವಿಕೆ ಮತ್ತು ಮನೆಹಂಚಿಕೆ:

ಈಗಾಗಲೇ ಇಂಧನ ಇಲಾಖೆಯ ಮೀಟರ್ ರೀಡರ್ ಗಳ ಮೂಲಕ ಪ್ರತಿ ಮನೆಗೆ UHID ವಿವರದೊಂದಿಗೆ ಸ್ಟಿಕರ್ ಅಂಟಿಸಲು ಕ್ರಮವಹಿಸಲಾಗುತ್ತಿದೆ. ಇದನ್ನು Geo tag ಮಾಡಲಾಗುತ್ತಿದೆ.

4. ಸಮೀಕ್ಷೆಯ ಬಗ್ಗೆ ಪ್ರಚಾರ ಮಾಡುವುದು ಮತ್ತು ಅರಿವು ಮೂಡಿಸುವುದು.

▪️NSS ವಿದ್ಯಾರ್ಥಿಗಳ ಮೂಲಕ ಮನೆ-ಮನೆಗೆ ದಿನಾಂಕ:10-09-2025 ರಿಂದ 20-09-2025 ರ ವರೆಗೆ ಸಮೀಕ್ಷಾ ನಮೂನೆ ವಿತರಿಸಿ ವ್ಯಾಪಕ ಪ್ರಚಾರ ಮಾಡಲಾಗುವುದು.

▪️ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಮೂಲಕ ಸಮೀಕ್ಷೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು.

▪️ಆಯೋಗದಿಂದ ನಿಯಮಿತವಾಗಿ ಪತ್ರಿಕಾ ಗೋಷ್ಠಿಗಳನ್ನು ಆಯೋಜಿಸಿ ಸಮೀಕ್ಷೆಯ ಬಗ್ಗೆ ಕೈಗೊಂಡಿರುವ ಕ್ರಮ ಇತ್ಯಾದಿಗಳ ಕುರಿತು ಮಾಹಿತಿ ನೀಡುವುದು.

▪️ಜಿಲ್ಲಾಧಿಕಾರಿಗಳ ಹಂತದಲ್ಲಿ Self Declaration form ಅನ್ನು ಕೇಂದ್ರ ಕಛೇರಿಯಿಂದ ನೀಡುವ ನಿಗದಿತ ನಮೂನೆಯಲ್ಲಿ ಮುದ್ರಣ ಮಾಡುವುದು.

▪️ಸಮೀಕ್ಷೆಯ ಬ್ಲಾಕ್ ಗಳ ವಿವರಗಳನ್ನು ಒಳಗೊಂಡ, ಮ್ಯಾಪ್/ ಸಮೀಕ್ಷೆ ಮಾಡಬೇಕಾದ ಮನೆಪಟ್ಟಿಗಳ ಮುದ್ರಣ.

▪️ಸಮೀಕ್ಷಾದಾರರ/ಬ್ಲಾಕ್ ಗಳ ಮ್ಯಾಪಿಂಗ್ ಆದ ಬಳಿಕ ವಿವರವನ್ನು ತಹಶೀಲ್ದಾರರ ಲಾಗಿನ್ ಐಡಿಗೆ ಒದಗಿಸಲಾಗುವುದು. (20-09-2025)

5. ಕೈಪಿಡಿಗಳ ಮುದ್ರಣ ಮತ್ತು ವಿತರಣೆ

▪️ಸರ್ಕಾರಿ ಮುದ್ರಣಾಲಯದ ಮೂಲಕ 1.50 ಲಕ್ಷ ಕೈಪಿಡಿಗಳ ಮುದ್ರಣವನ್ನು ಕೈಗೊಳ್ಳಲಾಗುತ್ತಿದೆ.

▪️ದಿನಾಂಕ:12-09-2025 ರಂದು ಜಿಲ್ಲೆಗಳಿಗೆ ಕೈಪಿಡಿಗಳನ್ನು ಸರಬರಾಜು ಮಾಡಲು ಕ್ರಮ ವಹಿಸಲಾಗುವುದು.

▪️ಸಮೀಕ್ಷಾ ನಮೂನೆಯ 1.80 ಕೋಟಿ ಪ್ರತಿಗಳನ್ನು ದಿನಾಂಕ:07-09-2025 ರಂದು ಮುದ್ರಿಸಿ ಸರಬರಾಜು ಮಾಡಲಾಗುವುದು

▪️ಸದರಿ ನಮೂನೆಗಳನ್ನು NSS ವಿದ್ಯಾರ್ಥಿಗಳ ಮೂಲಕ ಮನೆ-ಮನೆಗೆ ದಿನಾಂಕ: 10-09-2025 00 20-09-2025 ರ ವರೆಗೆ ವಿತರಿಸಲು ಹಾಗೂ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.

6. ಮಾಸ್ಟರ್ ಟ್ರೈನರ್ ಗಳ ನೇಮಕ ಮತ್ತು ತರಬೇತಿ

▪️ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆದು ಪ್ರತಿ ಜಿಲ್ಲೆಯಿಂದ ತಲಾ 5 ರಂತೆ ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಗಳ ನೇಮಕ ಮಾಡಲು ಸೂಚಿಸಲಾಗಿದೆ.

▪️ದಿನಾಂಕ:08-09-2025 ರಂದು ರಾಜ್ಯ ಮಟ್ಟದಲ್ಲಿ ಮಾಸ್ಟರ್ ಟ್ರೈನರ್ ಗಳ ತರಬೇತಿಯನ್ನು ದೇವರಾಜ ಅರಸು ಭವನ, ವಸಂತ ನಗರ ಇಲ್ಲಿ ಆಯೋಜಿಸಲಾಗುವುದು.

7. ಸಮೀಕ್ಷೆದಾರರ ಮತ್ತು ಮೇಲ್ವಿಚಾರಕರ ನೇಮಕ ಮತ್ತು ತರಬೇತಿ

▪️ಜಿಲ್ಲಾಧಿಕಾರಿಗಳ ಹಂತದಲ್ಲಿ ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರನ್ನು ನೇಮಿಸಬೇಕಾಗಿದೆ. ಶಾಲಾ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ಜಿಲ್ಲಾವಾರು ಸಂಖ್ಯಾ ವಿವರವನ್ನು ನೀಡಿರುತ್ತಾರೆ. ಅಗತ್ಯ ಇದ್ದ ಕಡೆ ಇತರೆ ಇಲಾಖೆಗಳಿಂದ ಸರ್ಕಾರಿ ನೌಕರರನ್ನು ಸಮೀಕ್ಷೆಗೆ ನಿಯೋಜಿಸುವುದು.

▪️ನಿಯೋಜಿಸಿದ ಸಮೀಕ್ಷೆದಾರರ ಮಾಹಿತಿಯನ್ನು ಪೋರ್ಟಲ್ ನಲ್ಲಿ ಅಪ್ಲೋಡ್‌ ಮಾಡುವುದು.

▪️ಪ್ರತಿ 10 ಬ್ಲಾಕ್ ಗಳಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸುವುದು.

7. ಸಮೀಕ್ಷೆದಾರರ ಮತ್ತು ಮೇಲ್ವಿಚಾರಕರ ನೇಮಕ ಮತ್ತು ತರಬೇತಿ:

▪️50 ಸಮೀಕ್ಷೆದಾರರಿಗೆ ಒಬ್ಬ ಮಾಸ್ಟರ್ ಟೈನರ್ ತರಬೇತಿ ನೀಡಲು ಕ್ರಮ ವಹಿಸಬೇಕು.

▪️ಸಮೀಕ್ಷೆದಾರರಿಗೆ 2 ಬಾರಿ ತರಬೇತಿಯನ್ನು ದಿನಾಂಕ: 12-09-2025 ರಿಂದ 19-09-2025 ರವರೆಗೆ ಆಯೋಜಿಸಬೇಕು. ತರಬೇತಿಯನ್ನು ಶೈಕ್ಷಣಿಕ ಕ್ಲಸ್ಟರ್ ಮಟ್ಟಗಳಲ್ಲಿ ಶಾಲಾ ಅವಧಿ ಬಳಿಕ ಆಯೋಜಿಸುವುದು.

▪️ಎಲ್ಲಾ ಸಮೀಕ್ಷೆದಾರರಿಗೆ ಮಾಹಿತಿ ನೀಡಲು Training App ಅನ್ನು ಅಭಿವೃದ್ಧಿ ಪಡಿಸಿ ದಿನಾಂಕ:10-09-2025ರ ಒಳಗೆ ಎಲ್ಲಾ ಸಮೀಕ್ಷಾದಾರರಿಗೆ ಒದಗಿಸಲಾಗುವುದು.

▪️ಸಮೀಕ್ಷೆದಾರರಿಗೆ ಸರ್ಕಾರವು ನಿಗದಿ ಪಡಿಸುವ ದರದಲ್ಲಿ ಗೌರವಧನವನ್ನು ನೀಡಲಾಗುವುದು.ಅತ್ಯಂತ ಪ್ರಮುಖವಾದದ್ದು

1.ಅಲೆಮಾರಿ, ಅರೆ-ಅಲೆಮಾರಿ ವಾಸಸ್ಥಳ ಮತ್ತು ಕೊಳಚೆ ಪ್ರದೇಶಗಳಲ್ಲಿ ಪ್ರತಿ ಕುಟುಂಬವನ್ನು ಸಮೀಕ್ಷೆ ಮಾಡುವ ಬಗ್ಗೆ  ಕಡ್ಡಾಯಗೊಳಿಸುವುದು.ವಿದ್ಯಾರ್ಥಿಗಳ ಮೂಲಕ ದಿನಾಂಕ:10-09-2025 ರಿಂದ 19-09-2025 ರ ವರೆಗೆ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷಾ ನಮೂನೆ ಮೂಲಕ ಪ್ರಚಾರ ಮಾಡಿಸುವುದು. ಇವರಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ತರಬೇತಿ ನೀಡುವ ಜವಾಬ್ದಾರಿ ವಹಿಸುವುದು, ಹಾಗೂ ಪ್ರಚಾರ ಅಭಿಯಾನದ ಸಂಯೋಜಕರು.ಸಮೀಕ್ಷೆಯ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸುವುದು.

▪️ಸಮೀಕ್ಷೆಯ ಬಗ್ಗೆ Clip (ಧ್ವನಿ ಸುರುಳಿ) ನೀಡಲಿದ್ದು, ಇದನ್ನು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪ್ರತಿ ದಿನ ಕಸ ಸಂಗ್ರಹಣಾ ವಾಹನಗಳಲ್ಲಿ/ಘನತ್ಯಾಜ್ಯ ನಿರ್ವಹಣಾ ವಾಹನಗಳಲ್ಲಿ ಘೋಷಣೆ ಮಾಡಲು ಕ್ರಮವಹಿಸುವುದು.

▪️ಅರಣ್ಯ ಪ್ರದೇಶಗಳಲ್ಲಿ VAO ಮತ್ತು PDO ಗಳು ಮನೆಪಟ್ಟಿ ಮಾಡುವ ಕಾರ್ಯನಿರ್ವಹಿಸುವುದು.

▪️ಪ್ರತಿ ಮನೆಗೆ UHID ಸಂಖ್ಯೆ ನೀಡಿದ್ದು, ಖಚಿತಪಡಿಸಿಕೊಳ್ಳುವುದು. ಕಸ ಸಂಗ್ರಹಣಾಗಾರರು, ನೀರು ಸರಬರಾಜುದಾರರು, ಗ್ರಾಮ ಸಹಾಯಕ, VAO,PDO ಎಲ್ಲರೂ ಇದಕ್ಕೆ ಜವಾಬ್ದಾರರು. UHID Sticker ಅಂಟಿಸದ ಮನೆ ಇದ್ದಲ್ಲಿ ತಹಶೀಲ್ದಾರ್ ಗಮನಕ್ಕೆ ತರುವುದು.

App ಬಳಸಿ ಸಮೀಕ್ಷೆ ಮಾಡುವ ವಿಧಾನ: CLICK HERE TO DOWNLOAD PDF

ಸಮೀಕ್ಷೆ ಮಾಡುವ ವಿಧಾನ ಹೇಗೆ? ಈ ಕೆಳಗಿನ ವಿಡಿಯೋ ವೀಕ್ಷಿಸಿ

👇👇👇👇👇👇👇👇

 

 

 

CLICK HERE KSCBC Questionnaier 

CLICK HERE – List of Postal Department officials to link Aadhaar numbers to mobile numbers for social and educational survey purposes

CLICK HERE TO CASTE CENSUS HAND BOOK

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “Caste Census: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025”

Leave a Comment

You cannot copy content of this page

error: Content is protected !!