CEIR:Request for blocking lost/stolen mobile, Information-01

CEIR:Request for blocking lost/stolen mobile, Information-01

CEIR:ದೂರಸಂಪರ್ಕ ಇಲಾಖೆಯ ಸೆಂಟ್ರಲ್ ಇಕ್ವಿಪ್ಟೆಂಟ್ ಐಡೆಂಟಿಟಿರಿಜಿಸ್ಟರ್ (ಸಿಇಐ ಆರ್) ಪೋರ್ಟಲ್ ಎನ್ನುವ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆ ಒಂದೂವರೆ ವರ್ಷದ ಹಿಂದೆ ಅಳವಡಿಸಿಕೊಂಡಿದ್ದು, ಇದರ ಮೂಲಕ ಕಳೆದು ಕೊಂಡ ಮೊಬೈಲ್‌ಗಳನ್ನು ಸುಲಭವಾಗಿ ಪತ್ತೆಹಚ್ಚಿ ಮೂಲ ಮಾಲಕರಿಗೆ ನೀಡಲಾಗುತ್ತಿದೆ. ಇದರಲ್ಲಿ ಕರ್ನಾಟಕ ಪೊಲೀಸ್ ಪ್ರಥಮ ಸ್ಥಾನದಲ್ಲಿದೆ.

ಸ್ನೇಹಿತರೆ.. ನಿಮ್ಮ ಮೊಬೈಲ್ ಆಕಸ್ಮಿಕವಾಗಿ ಆಗಿ ಹೋದಾಗ ಅದನ್ನ ಮರಳಿ ಪಡಿಯೋದು ಹೇಗೆ? ಅನ್ನುವಂತಹ ಚಿಂತೆ ಎಲ್ಲರನ್ನ ಕಾಡುತ್ತ ಇರುತ್ತೆ ಅದ್ದರಿಂದ ಅದಕ್ಕಾಗಿ ಇದೀಗ ಸರ್ಕಾರವೇ ಒಂದು ಹೊಸ ವೆಬ್ಸೈಟ್ ಅನ್ನ ಬಿಡುಗಡೆ ಮಾಡಿದೆ. ನೀವು ಸುಲಭವಾಗಿ ಅದರಲ್ಲಿ ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಬಹುದು.

ಜೊತೆಗೆ ನಂತರ ನಿಮ್ಮ ಮೊಬೈಲ್ ಎಲ್ಲಿದೆ ಅನ್ನೋದನ್ನು ಪತ್ತೆ ಕೂಡ ಮಾಡಬಹುದಾಗಿದೆ. ಹಾಗಾದರೆ ಯಾವುದದು ಆಪ್ ಯಾವುದದು ವೆಬ್ಸೈಟ್ ಲಿಂಕ್ ಅನ್ನೋದನ್ನು ಇಂದಿನ ಈ ಲೇಖನದಲ್ಲಿ ನಾನು ನಿಮಗೆ ಹೇಳುವಂತಹ ಕೆಲಸವನ್ನು ಮಾಡುತ್ತೇನೆ. ಆ ಲಿಂಕನ್ನು ಕೂಡ https://www.ceir.gov.in/Home/index.jsp ಹಾಕಲಾಗಿದೆ. ಈ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

ಈಗ ಐಫೋನ್ ಆಂಡ್ರಾಯ್ಡ್ ಬೆಲೆ ಬಾಳುವಂತಹ ಮೊಬೈಲ್ ಅನ್ನು ಖರೀದಿ ಮಾಡುತ್ತೀರಿ ಅದನ್ನು ಸಾಕಷ್ಟು ಜೋಪಾನ ಕೂಡ ಮಾಡುತ್ತ ಇರುತ್ತೀರಾ ಆದರೂ ಕೂಡ ಆಕಸ್ಮಿಕವಾಗಿ ಕಳೆದು ಹೋಯಿತು ಅಂತಾ ಹೇಳಿದರೆ ನೀವಿಲ್ಲಿ ಅವಲೋಕಿಸುತ್ತ ಇರಬಹುದು.

ಈಗಾಗಲೇ ಸರ್ಕಾರದಿಂದ ಬಿಡುಗಡೆ ಮಾಡಲಾದ ಈ ಒಂದು ಪ್ರಕಟಣೆಯಲ್ಲಿ ಏನಿದೆ? ಕಳೆದು ಹೋದ ಅಥವಾ ಕಳ್ಳತನವಾದ ಮೊಬೈಲ್ ಗಳನ್ನ ಬ್ಲಾಕ್ ಮಾಡಲು ಸರ್ಕಾರ ರೂಪಿಸಿರುವ ವ್ಯವಸ್ಥೆ CEIR IMEI ನಂಬರ್ ಮೂಲಕ ಮೊಬೈಲ್ ಪತ್ತೆ ಮಾಡಲು ಈ ವ್ಯವಸ್ಥೆ ಅನುಕೂಲವಾಗಿದೆ.

ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ತಕ್ಷಣವೇ CEIR ವೆಬ್ಸೈಟ್ ಗೆ ಭೇಟಿ ನೀಡಬೇಕು.

ಮೊಬೈಲ್ ವಿವರಗಳನ್ನ IMEI ನಂಬರ್ ಹಾಗೂ ಓಟಿಪಿ ಸಮೇತವಾಗಿ ದಾಖಲು ಮಾಡಬೇಕು.ದಾಖಲು ಮಾಡಿದ ನಂತರ ನೀವು ದಾಖಲಿಸಿದ ಮಾಹಿತಿ ರಶೀದಿ ಕೂಡ ತಮಗೆ ದೊರಕುತ್ತದೆ. ಹಾಗೆ ಈ ದೂರು ಸಲ್ಲಿಸಿದ ಮೇಲೆ ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನೆ ಆಗುತ್ತದೆ.

ತಕ್ಷಣವೇ ನೀವು ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿಕೊಳ್ಳಬಹುದು ಹಾಗಾದರೆ ಈ ವೆಬ್ಸೈಟ್ ಗೆ ಲಾಗಿನ್ ಆಗ್ತಾ ಹೋಗುವದಾದರೆ ಮೊದಲು ನೀವು ಇಲ್ಲಿ ಕೊಟ್ಟಿರುವಂತಹ ವೆಬ್ಸೈಟ್ CEIR ಅಂತ ಹೇಳಿ ಟೈಪ್ ಮಾಡಿ ಹೀಗೆ ಟೈಪ್ ಮಾಡಿದ ತಕ್ಷಣ ಕೂಡ ಇಲ್ಲಿ ನೀವು ನೋಡ್ತಾ ಇರಬಹುದು ಬ್ಲಾಕ್ ಸ್ಟೋಲನ್ ಆರ್ ಲಾಸ್ಟ್ ಮೊಬೈಲ್ ಅನ್ನುವಂತಹ ಆಪ್ಷನ್ ಇಲ್ಲಿದೆ.

CLICK ಮಾಡಿ  ಮುಂದುವರಿಯಿರಿ.ಈ ರೀತಿಯಾಗಿ

ಒಂದು ಪೇಜ್ ಓಪನ್ ಆಗುತ್ತೆ Request for blocking lost/stolen mobile ಮೊಬೈಲ್ ಅಂತ ಹೇಳಿ  ಇಲ್ಲಿ device information ಅನ್ನು ಫಸ್ಟ್ ಕೇಳಿರ್ತಾರೆ ಅಂದ್ರೆ ನಿಮ್ಮ ಮೊಬೈಲ್ ಎಲ್ಲಿ ಖರೀದಿಸಿದ್ದು ಅಥವಾ ಮೊಬೈಲ್ IMEI ನಂಬರ್ 15 ಡಿಜಿಟ್ ನ ನಂಬರ್ ಇರುತ್ತೆ.

ಅದರ ಬಗ್ಗೆ ಡಿವೈಸ್ ಬ್ರಾಂಡ್ ಡಿವೈಸ್ ಮಾಡೆಲ್ ಎಲ್ಲವೂ ಕೂಡ ಡೀಟೇಲ್ ಆಗಿ ನೀವು ಇಲ್ಲಿ ಮೊಬೈಲ್ ನಂಬರ್ ನಂತರ IMEI Device Brand Device model ಮೊಬೈಲ್ ನಂಬರ್ ಟು ಅಂದ್ರೆ ಎರಡು ನಂಬರಗಳ ಎರಡು ಸಿಮ್ ಗಳನ್ನು ಒಂದೇ ಮೊಬೈಲ್ ನಲ್ಲಿ ಉಪಯೋಗಿಸುತ್ತಾ ಇದ್ದರೆ ಆ ನಂಬರನ್ನ ಕೂಡ ಇಲ್ಲಿ ನಮೂದು ಮಾಡಬೇಕು. 

IMEI ಟು ಅಪ್ಲೋಡ್ ಇನ್ವಾಯ್ಸ್  ಏನು ನೀವು ಮೊಬೈಲ್ ಖರೀದಿಸುವಂತಹ ಸಂದರ್ಭದಲ್ಲಿ ಏನು ಇನ್ವಾಯ್ಸ್  ಇರುತ್ತೆ ಅದನ್ನು ಇಲ್ಲಿ ಚೂಸ್ ಫೈಲ್ ಅಂತ ಹೇಳಿ ಇಲ್ಲಿ ಕಾಲಂ ಇರುತ್ತೆ ನೀವು ಇದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಇನ್ವಾಯ್ಸ್ ಸೈಜ್ ಏನು ಹೇಳುತ್ತೆ ಅದೇ ಸೈಜ್ ನಲ್ಲಿ ಇನ್ವಾಯ್ಸ್ ಅಪ್ಲೋಡ್ ಮಾಡಬೇಕು.

Lost Information

 

Lost Information ಎಲ್ಲಿ ಕಳೆದು ಹೋಯಿತು ಅನ್ನುವ ಮಾಹಿತಿಯನ್ನು ಕೂಡ ನೀವು ನೀಡಬೇಕಾಗುತ್ತದೆ.

 

ಫೋನ್ ಕಳೆದು ಹೋದ ಸ್ಥಳ, ರಾಜ್ಯ ಮತ್ತೆ ಇಲ್ಲಿ ಎಲ್ಲಿ ಯಾವ ರಾಜ್ಯದಲ್ಲಿ ಕಳೆದು ಹೋಯ್ತು ಹಾಗೇನೇ ಯಾವ ಪೊಲೀಸ್ ಸ್ಟೇಷನ್ ನಲ್ಲಿ ನೀವು ದೂರನ್ನ ದಾಖಲಿಸಿದ್ದೀರಿ ಅಲ್ಲಿ ಲಾಸ್ಟ್ ಡೇಟ್ ಯಾವತ್ತು ಕಳೆದು ಹೋಯಿತು. ಅನ್ನೋದು ಮತ್ತೆ ಅದಕ್ಕೂ ಕೂಡ ಯಾವ ಜಿಲ್ಲೆ ಅಂತ ಹೇಳಿ ಪೊಲೀಸ್ ಕಂಪ್ಲೇಂಟ್ ನಂಬರ್ ನೀವೇನು ಕಂಪ್ಲೇಂಟ್ ಅನ್ನು ದಾಖಲಿಸಿರ್ತೀರಿ ಆ ಸಂಖ್ಯೆಯನ್ನು [Complent Number] ಕೂಡ ನಮೂದಿಸಿ.

ನೀವು ಈ ಈ ರೀತಿಯಾಗಿ ಮೊಬೈಲ್ ಮಾಲಿಕರ personal Information ಮೊಬೈಲ್ ಮಾಲಿಕರ ಮಾಹಿತಿ ಅಂದ್ರೆ ನಿಮ್ಮ ಮಾಹಿತಿಯನ್ನು ಕೂಡ ಕೇಳುತ್ತೆ ಇಲ್ಲಿ  ಓನರ್ ನೇಮ್ ಐಡೆಂಟಿಟಿ ಅಡ್ರೆಸ್ ಅಪ್ಲೋಡ್ ಐಡೆಂಟಿಟಿ, ಐಡೆಂಟಿಟಿ ನಂಬರ್ ಇಮೇಲ್ ಐಡಿ ಈ ಕ್ಯಾಪ್ಚಾ ಏನು ಕೊಟ್ಟಿರ್ತಾರೆ ಇದನ್ನು  ಹೇಗಿರತ್ತೋ ಹಾಗೆ ಮರು ನಮೂದಿಸಿ  ಗೆಟ್ ಓಟಿಪಿ ಅಂತ ಹೇಳಿ ಬರುತ್ತೆ ತದನಂತರದಲ್ಲಿ ಮೊಬೈಲ್ ನಂಬರ್ ಫಾರ್ ಓಟಿಪಿ ಯಾವ ಅಂದ್ರೆ ನಿಮಗೆ ಯಾವ ಮೊಬೈಲ್ ನಂಬರ್ ಗೆ ಓಟಿಪಿ ಬರಬೇಕು ಯಾಕಂತ ಹೇಳಿದ್ರೆ ನಿಮ್ಮ ಮೊಬೈಲ್ ಕಳೆದು ಹೋಗಿದ್ರೆ ಬೇರೆ ನಂಬರ್ ಇಂದ ನೀವು ಉಪಯೋಗಿಸುತ್ತಿರುವ ಆ ಮೊಬೈಲ್ ಸಂಖ್ಯೆಯನ್ನು ಇಲ್ಲಿ ಹಾಕಿ ಗೆಟ್ ಓಟಿಪಿ ಅಂತ ಹೇಳಿ  ಮತ್ತೆ ಡಿಕ್ಲರೇಷನ್ ನಾನು ಕೊಟ್ಟಿರುವಂತಹ ಎಲ್ಲಾ ಮಾಹಿತಿಯು ಕೂಡ ಸರಿಯಾಗಿದೆ ಅಂತ ಹೇಳಿ ಇದರ ಮೇಲೆ ಕ್ಲಿಕ್ ಮಾಡಿ.

ಸಬ್ಮಿಟ್ ಮಾಡಿದ ತಕ್ಷಣ ನಿಮ್ಮ ಓಟಿಪಿ ಏನು ಜನರೇಟ್ ಆಗಿರುತ್ತೆ ಅದು ನಿಮ್ಮ ಮೊಬೈಲ್ ಗೆ ಬರುತ್ತೆ ಆ ಓಟಿಪಿ ಜನರೇಟ್ ಆದ ನಂತರ ನಿಮ್ಮ ಮೊಬೈಲ್ ತಕ್ಷಣವೇ ಬ್ಲಾಕ್ ಆಗುತ್ತೆ ತದನಂತರದಲ್ಲಿ ನಿಮ್ಮ ಮೊಬೈಲ್ ಎಲ್ಲಿ ಇದೆ ಅನ್ನೋದನ್ನ ಪತ್ತೆ ಹಚ್ಚಲು ಇದು ಸಹಕಾರಿಯಾಗಿದೆ.

ಸರ್ಕಾರ ಈ ಒಂದು ಹೊಸ ವೆಬ್ಸೈಟ್ ಅನ್ನ ಈಗಾಗಲೇ ಜಾರಿ ಮಾಡಿದ್ದು ಸಾಕಷ್ಟು ಕಿಮ್ಮತ್ತಿನ ಮೊಬೈಲ್ ಅಥವಾ ಯಾವುದೇ ನೀವು ನಿಮ್ಮ ಖರೀದಿ ಮಾಡಿರುವಂತಹ ಮೊಬೈಲ್ ಕಳೆದು ಹೋಯ್ತು ಅಂತ ಹೇಳಿದ್ರೆ ತಕ್ಷಣವೇ ನೀವು ಈ ವೆಬ್ಸೈಟ್ ಗೆ ಹೋಗಿ ನಿಮ್ಮೆಲ್ಲ ಮಾಹಿತಿಯನ್ನ ಕೊಟ್ಟು ನಿಮ್ಮ ಮೊಬೈಲ್ ಎಲ್ಲಿ ಇದೆ ಅನ್ನೋದನ್ನ ಬಹಳ ಸುಲಭವಾಗಿ ಪತ್ತೆ ಹಚ್ಚಬಹುದು.

IMEI ಸಂಖ್ಯೆಯನ್ನು ಸುರಕ್ಷಿವಾಗಿ ಇಡುವದು ಮುಖ್ಯ.

ಹೊಸ ಮೊಬೈಲ್ ಫೋನ್ ಖರೀದಿ ಮಾಡಿದ ಮೇಲೆ ಅದರ ಬಾಕ್ಸ್‌ನಲ್ಲಿರುವ ಅಥವಾ ಲೇಬಲ್‌ನಲ್ಲಿರುವ IMEI ಸಂಖ್ಯೆಗಳನ್ನು ಕಳೆದುಹಾಕುವವರ ಸಂಖ್ಯೆಯೇ ಬಹುತೇಕ ಹೆಚ್ಚು, ಮೊಬೈಲ್ ಕಳೆದುಹೋದರೆ ಅದನ್ನು ಪತ್ತೆ ಮಾಡಲು IMEI ಸಂಖ್ಯೆ ಬೇಕೇ ಬೇಕು. ಆದ್ದರಿಂದ ಆ ಸಂಖ್ಯೆಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಬಹು ಮುಖ್ಯ.

CLICK HERE TO OFFICIAL WEBSITE

ಇದನ್ನೂ ನೋಡಿ….. PhonePe ನಲ್ಲಿ ನಿಮ್ಮ LPG ಸಿಲಿಂಡರ್ ಬುಕಿಂಗ್‌ನಲ್ಲಿ ಸ್ಕ್ರ್ಯಾಚ್ ಕಾರ್ಡ್ ಪಡೆಯಿರಿ ಮತ್ತು ₹100 ಕ್ಯಾಶ್‌ಬ್ಯಾಕ್ ಗೆಲ್ಲಿರಿ!*

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!