KVS NOTIFICATION-2025-26: ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಅಹ್ವಾನ.

KVS NOTIFICATION-2025-26

KVS NOTIFICATION-2025-26 : ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ದೇಶಾದ್ಯಂತದ ಕೇಂದ್ರೀಯ ವಿದ್ಯಾಲಯಗಳಲ್ಲಿ 2025-26ನೇ ಸಾಲಿಗಾಗಿ ವಿವಿಧ ತರಗತಿಗಳಿಗೆ ದಾಖಲಾತಿ ಪ್ರಕ್ರಿಯೆಗೆ ಅಧಿಸೂಚನೆ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಬಾಲವಾಟಿಕಾ 1, 2, 3ನೇ ಹಂತ (ಶಿಶುವಿಹಾರ) ಹಾಗೂ ಒಂದನೇ ತರಗತಿಗೆ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಲು ಮಾ.21 ಕೊನೆಯ ದಿನ. 2ನೇ ತರಗತಿ ಹಾಗೂ ಮೇಲ್ಪಟ್ಟ ಕ್ಲಾಸ್‌ಗಳಿಗೆ ಆಫ್‌ಲೈನ್‌ನಲ್ಲಿ ನೋಂದಣಿ ಇರಲಿದೆ. 10ನೇ ಕ್ಲಾಸ್ ರಿಸಲ್ಟ್ ಬಳಿಕ 11ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ.

ಯಾರಿಗೆ ಅವಕಾಶ:

 

11ನೇ ತರಗತಿ ಪ್ರವೇಶ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟಿಸಿದ 10 ದಿನಗಳ ಒಳಗಾಗಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳತಕ್ಕದ್ದು. 20 ದಿನಗಳ ಒಳಗಾಗಿ ಪ್ರವೇಶಾತಿ ಪಟ್ಟಿ ಪ್ರಕಟಿಸತಕ್ಕದ್ದು ಎಂದು ತಿಳಿಸಲಾಗಿದೆ. ಕೇಂದ್ರೀಯ ವಿದ್ಯಾಲಯದ ಹೊರತಾದ ವಿದ್ಯಾರ್ಥಿಗಳಿದ್ದಲ್ಲಿ, ಅಂಥವರಿಗೆ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವಕಾಶ ಕಲ್ಪಿಸತಕ್ಕದ್ದು ಎಂದು ತಿಳಿಸಲಾಗಿದೆ.

 

ಮೀಸಲಾತಿ ಮಾಹಿತಿ:

ಎಸ್‌ಸಿ ಶೇ.15, ಎಸ್‌ಟಿ, ಶೇ.7.5, ಒಬಿಸಿ ಮಕ್ಕಳಿಗೆ ಶೇ.27 ಮೀಸಲು ನಿಗದಿ ಮಾಡಲಾಗಿದೆ. ಇದಲ್ಲದೆ, ಒಟ್ಟಾರೆ ಸೀಟುಗಳಲ್ಲಿ ಅಂಗವಿಕಲರಿಗೆ ಶೇ.3 ಮೀಸಲಿಡುವಂತೆ ತಿಳಿಸಲಾಗಿದೆ. ಕೆವಿ, ಸಿಬಿಎಸ್‌ಇ ವಿದ್ಯಾರ್ಥಿಗಳ ದಾಖಲಾತಿ ಬಳಿಕ ಉಳಿಯುವ ಸೀಟುಗಳಿಗೆ ರಾಜ್ಯ, ಇತರ ಪಠ್ಯಕ್ರಮಗಳ ಮಕ್ಕಳನ್ನು ಪರಿಗಣಿಸುವಂತೆ ನಿರ್ದೇಶಿಸಲಾಗಿದೆ.

ಅಡ್ಮಿಷನ್ ವೇಳಾಪಟ್ಟಿ:

▪️ ಬಾಲವಾಟಿಕಾ-1, ಒಂದನೇ ತರಗತಿಗೆ ಆನ್‌ಲೈನ್ ನೋಂದಣಿಗೆ ಅಂತಿಮ ದಿನಾಂಕ: ಮಾ.21

▪️ಮೊದಲ ಪಟ್ಟಿ ಹಾಗೂ ಕಾಯ್ದಿರಿಸಿದ ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ: ಮಾ.25 (1ನೇ ಕ್ಲಾಸ್), ಮಾ.26 (ಬಾಲವಾಟಿಕಾ-1)

▪️ಎರಡನೇ ಪಟ್ಟಿ: ಏ.4 (ಸೀಟುಗಳು ಲಭ್ಯವಿದ್ದಲ್ಲಿ)

▪️ಮೂರನೇ ಪಟ್ಟಿ ಬಿಡುಗಡೆ:

ಏ.7 (ಉಳಿಕೆ ಸೀಟುಗಳು ಲಭ್ಯವಿದ್ದಲ್ಲಿ ಮಾತ್ರ)

 

ವಯೋಮಿತಿ ನಿಗದಿ:

ಒಂದನೇ ತರಗತಿ: 2025ರ ಮಾ.31ಕ್ಕೆ ಅನ್ವಯ ವಾಗುವಂತೆ ಕನಿಷ್ಠ 6 ವರ್ಷ ಹಾಗೂ ಗರಿಷ್ಠ 8 ವರ್ಷ ಎಂದು ನಿಗದಿ ಮಾಡಲಾಗಿದೆ. ಏ.1ರಂದು ಜನಿಸಿದ ಮಗುವನ್ನು ಪರಿಗಣಿಸುವಂತೆ ತಿಳಿಸಲಾಗಿದೆ. ಪ್ರತಿ ತರಗತಿಗೆ ಗರಿಷ್ಠ 40 ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಬಾಲವಾಟಿಕಾ-1 ಹಂತಕ್ಕೆ 3-4 ವರ್ಷ ದೊಳಗಿರಬೇಕು. ಬಾಲವಾಟಿಕಾ-2 ಹಂತಕ್ಕೆ 4-5 ವರ್ಷ, ಬಾಲವಾಟಿಕಾ-3 ಹಂತಕ್ಕೆ 5-6 ವರ್ಷ ನಿಗದಿ ಮಾಡಲಾಗಿದೆ.

ಆಫ್‌ಲೈನ್ ಅಧಿಸೂಚನೆ

▪️ಬಾಲವಾಟಿಕಾ 1, 3 ಹಾಗೂ ಒಂದನೇ ತರಗತಿಗೆ ಆಫ್‌ಲೈನ್‌ ಅಧಿಸೂಚನೆ: ಏ.7

▪️ಆಫ್‌ಲೈನ್ ಅಧಿಸೂಚನೆಗೆ ನೋಂದಣಿ: ದಿನಾಂಕ: 8 ರಿಂದ 14 ರ ವರೆಗೆ

▪️ಪಟ್ಟಿ ಬಿಡುಗಡೆ ಹಾಗೂ ಪ್ರವೇಶಾತಿ ಏಪ್ರಿಲ್ 23 ರಿಂದ 28
▪️ಬಾಲವಾಟಿಕಾ 2, ಎರಡನೇ ತರಗತಿಗೆ ನೋಂದಣಿ ಏಪ್ರಿಲ್.2 ರಿಂದ 11
▪️ಪಟ್ಟಿ ಬಿಡುಗಡೆ: ಏ.17
▪️ಪ್ರವೇಶ ಅವಧಿ ಏಪ್ರಿಲ್ 180 ರಿಂದ 21
▪️11ನೇ ತರಗತಿ ಹೊರತು ಎಲ್ಲ ಕ್ಲಾಸ್‌ಗಳ ಪ್ರವೇಶಕ್ಕೆ ಕೊನೆಯ ದಿನ: ಜೂ.30
▪️ಸೀಟು ಉಳಿದರೆ ಜಿಲ್ಲಾಧಿಕಾರಿ ಸಲಹೆ ಮೇರೆಗೆ ಪ್ರವೇಶಕ್ಕೆ ಕೊನೆ ದಿನ: ಜು.31

1ನೇ ಕ್ಲಾಸ್ ಪ್ರವೇಶಕ್ಕೆ ಮಾರ್ಗಸೂಚಿಗಳು

ಹೊಸದಾಗಿ ಪ್ರವೇಶಕ್ಕೆ ಲಭ್ಯವಿರುವ ಒಟ್ಟಾರೆ ಸೀಟುಗಳಲ್ಲಿ ಶೇ.25 ಸೀಟುಗಳನ್ನು ಆರ್‌ಟಿಇ ಅನ್ವಯ ಭರ್ತಿ ಮಾಡಿಕೊಳ್ಳತಕ್ಕದ್ದು. ಇದರಲ್ಲಿ ಮೀಸಲು ನಿಯಮ ಪಾಲಿಸತಕ್ಕದ್ದು. ಅಂದರೆ 40 ಸೀಟುಗಳಲ್ಲಿ 10 ಸೀಟುಗಳು ಆರ್ ಟಿಇ ಅನ್ವಯ ಭರ್ತಿಯಾಗಬೇಕಿದೆ. 6 ಎಸ್‌ಸಿ, 3 ಎಸ್‌ಟಿ ಹಾಗೂ 11 ಸೀಟುಗಳಲ್ಲಿ ಒಬಿಸಿ ವಿದ್ಯಾರ್ಥಿಗಳಿರತಕ್ಕದ್ದು. ಎಲ್ಲ ಮೀಸಲು ವರ್ಗದ ಸೀಟುಗಳ ಆಯ್ಕೆಯೂ ಲಾಟರಿ ಪ್ರಕ್ರಿಯೆಯ ಮೂಲಕವೇ ನೆರವೇರಿಸತಕ್ಕದ್ದು ಎಂದು ತಿಳಿಸಲಾಗಿದೆ.

ವೇಳಾಪಟ್ಟಿ ಲಿಂಕ್ – CLICK HERE

ಅಧಿಸೂಚನೆ ಲಿಂಕ್ – CLICK HERE

ಅಧಿಕೃತ ವೆಬ್ಸೈಟ್ – CLICK HERE

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!