Group Discussion Strategies:ಗ್ರೂಪ್ ಡಿಸ್ಕಷನ್‌ನಲ್ಲಿ ಗೆಲುವು ಸಾಧಿಸಲು 10 ಪ್ರಮುಖ ಸಲಹೆಗಳು
Group Discussion Strategies:ಬ್ಯಾಂಕ್ ಮತ್ತು ಕಾರ್ಪೊರೇಟ್ ಉದ್ಯೋಗಗಳ ನೇಮಕಾತಿಯಲ್ಲಿ ಗುಂಪು ಚರ್ಚೆ ಅಭ್ಯರ್ಥಿಗಳ ಸಂವಹನ ಕಲೆ, ನಾಯಕತ್ವ ಮತ್ತು ತಂಡದ ಮನೋಭಾವವನ್ನು ಅಳೆಯುವ ಪ್ರಮುಖ ಹಂತವಾಗಿದೆ. ಇಲ್ಲಿ ಯಶಸ್ವಿಯಾಗಲು ನಿರಂತರ ಪ್ರಚಲಿತ ವಿದ್ಯಮಾನಗಳ ಜ್ಞಾನ, ಸಕಾರಾತ್ಮಕ ದೇಹಭಾಷೆ ಮತ್ತು ಯೋಜನಾಬದ್ಧ ಸಿದ್ಧತೆ ಅತ್ಯಗತ್ಯ…
ಬ್ಯಾಂಕಿಂಗ್ ವಲಯದ ಪ್ರತಿಷ್ಠಿತ ಹುದ್ದೆಗಳಾದ ಎಸ್‌ಬಿಐ ಬ್ಯಾಂ ಪಿಒ, ಐಬಿಪಿಎಸ್ ಪಿಒ ಹಾಗೂ ಜಾಗತಿಕ ಕಾರ್ಪೊರೇಟ್ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ‘ಗ್ರೂಪ್ ಡಿಸ್ಕಷನ್ (Group Discussion – GD) ನಿರ್ಣಾಯಕ ಹಂತವಾಗಿದೆ. ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಯ ಬೌದ್ಧಿಕ ಜ್ಞಾನವನ್ನು ಅಳೆಯಲಾಗಿದ್ದರೆ, ಜಿಡಿ ಹಂತದಲ್ಲಿ ಆತನ ಸಂವಹನ ಕಲೆ ಮತ್ತು ತಂಡದ ಮನೋಭಾವವನ್ನು ಪರೀಕ್ಷಿಸಲಾಗುತ್ತದೆ.
ಅನೇಕ ಅರ್ಹ ಅಭ್ಯರ್ಥಿಗಳು ಕೇವಲ ವೇದಿಕೆ ಭಯ & ಸರಿಯಾದ ತಂತ್ರಗಾರಿಕೆಯ ಕೊರತೆಯಿಂದಾಗಿ ಈ ಹಂತದಲ್ಲಿ ವಿಫಲರಾಗುತ್ತಾರೆ. ಆದರೆ, ವ್ಯವಸ್ಥಿತವಾದ ಯೋಜನೆ, ನಿರಂತರ ಅಭ್ಯಾಸ ಮತ್ತು ಸಕಾರಾತ್ಮಕ ದೇಹಭಾಷೆಯನ್ನು ರೂಢಿಸಿಕೊಂಡರೆ ಗ್ರೂಪ್ ಡಿಸ್ಕಷನ್ (ಗುಂಪು ಚರ್ಚೆ) ಅನ್ನು ಸುಲಭವಾಗಿ ಜಯಿಸಬಹುದು.
ಗುಂಪು ಚರ್ಚೆಯ ಮೂಲ ಉದ್ದೇಶ:
ಸಮಾನ ಮನಸ್ಕರ ನಡುವೆ ನಡೆಯುವ ಆರೋಗ್ಯಕರ ಮತ್ತು ಸೌಹಾರ್ದಯುತ ಚರ್ಚೆಯನ್ನೇ ಗುಂಪು ಚರ್ಚೆ ಎನ್ನಲಾಗುತ್ತದೆ. ನೇಮಕಾತಿದಾರರು ನಿಮ್ಮ ಇಡೀ ವ್ಯಕ್ತಿತ್ವವನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಮುಖ್ಯವಾಗಿ, ಒಬ್ಬ ಅಭ್ಯರ್ಥಿಯು ಹೊಸ ಪರಿಸರಕ್ಕೆ ಎಷ್ಟು ಬೇಗನೆ ಹೊಂದಿಕೊಳ್ಳುತ್ತಾನೆ ಮತ್ತು ಇತರರ ವಿಭಿನ್ನ ದೃಷ್ಟಿಕೋನಗಳನ್ನು ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಮೌಲ್ಯಮಾಪನ ಮಾಡಲಾಗು ತ್ತದೆ. ಬ್ಯಾಂಕಿಂಗ್‌ನಂತಹ ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಉದ್ಯೋಗಗಳಿಗೆ ಸಹನೆ, ಸ್ಪಷ್ಟತೆ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಅತಿ ಮುಖ್ಯವಾಗಿರುವುದರಿಂದ, ಜಿಡಿಯಲ್ಲಿ ಈ ಗುಣಗಳನ್ನು ಪ್ರದರ್ಶಿಸುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಸಿಗುತ್ತದೆ.
ಪ್ರಚಲಿತ ವಿದ್ಯಮಾನಗಳ ಜ್ಞಾನ:
ಜಿಡಿಯಲ್ಲಿ ಆತ್ಮವಿಶ್ವಾಸದಿಂದ ಮಾತನಾಡಲು ವಿಷಯದ ಜ್ಞಾನವೇ ಅತಿ ದೊಡ್ಡ ಬಂಡವಾಳ. ಯಾವುದೇ ಚರ್ಚೆಯ ವಿಷಯಕ್ಕೆ ತಕ್ಷಣವೇ ಸ್ಪಂದಿಸಬೇಕಾದರೆ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿರಂತರ ಅರಿವಿರಬೇಕು. ಇದಕ್ಕಾಗಿ ಅಭ್ಯರ್ಥಿಗಳು ಪ್ರತಿದಿನ ಕನಿಷ್ಠ ಒಂದು ಪ್ರಮುಖ ದಿನಪತ್ರಿಕೆಯ ‘ಸಂಪಾದಕೀಯ’ ಪುಟವನ್ನು ಆಳವಾಗಿ ವಿಶ್ಲೇಷಿಸಬೇಕು. ಇದು ನಿಮಗೆ ಒಂದು ಸಮಸ್ಯೆಯ ಸಾಧಕ-ಬಾಧಕಗಳೆರಡನ್ನೂ ಸಮತೋಲಿತವಾಗಿ ಅರ್ಥಮಾಡಿ ಕೊಳ್ಳಲು ನೆರವಾಗುತ್ತದೆ.
ಬ್ಯಾಂಕ್ ಉದ್ಯೋಗದ ಆಕಾಂಕ್ಷಿಗಳು ವಿಶೇಷವಾಗಿ ಆರ್‌ಬಿಐ ನಿಯಮಗಳು, ಡಿಜಿಟಲ್ ಬ್ಯಾಂಕಿಂಗ್, ಆರ್ಥಿಕ ಸುಧಾರಣೆಗಳು ಮತ್ತು ದೇಶದ ಜಿಡಿಪಿ ಬೆಳವಣಿಗೆ ಯಂತಹ ವಿಷಯಗಳ ಮೇಲೆ ಹೆಚ್ಚಿನ ಹಿಡಿತ ಹೊಂದಿರಬೇಕು.
ವಿಷಯಗಳ ವರ್ಗೀಕರಣ:
ಗ್ರೂಪ್ ಡಿಸ್‌ಕಷನ್‌ನಲ್ಲಿ ಕೇಳಲಾಗುವ ವಿಷಯಗಳನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದಾಗಿ, Factual Topics ಆಧರಿತ ವಿಷಯಗಳು – ಉದಾಹರಣೆಗೆ ಭಾರತದಲ್ಲಿ ಜಿಎಸ್‌ಟಿ ವ್ಯವಸ್ಥೆಯ ಪ್ರಭಾವ. ಇಂತಹ ವಿಷಯಗಳಿಗೆ ನಿಖರವಾದ ಅಂಕಿ-ಅಂಶಗಳ ಮಾಹಿತಿ ಅತ್ಯಗತ್ಯ. ಎರಡನೆಯದಾಗಿ, ವಿವಾದಾತ್ಮಕ ವಿಷಯಗಳು- ಉದಾಹರಣೆಗೆ ಖಾಸಗೀಕರಣ ಮತ್ತು ಸರಕಾರಿ ಸ್ವಾಮ್ಯ: ಯಾವುದು ಉತ್ತಮ? ಇಲ್ಲಿ ಅಭ್ಯರ್ಥಿಗಳು ಯಾವುದೇ ಒಂದು ಕಡೆ ಅತಿಯಾಗಿ ವಾಲಿ ತೀವ್ರ ಭಾವನಾತ್ಮಕ ನಿಲುವು ತಳೆಯದೆ, ಸಮರ್ಪಕ ವಾದ ಮಂಡಿಸಬೇಕು. ಮೂರನೆಯದಾಗಿ, ಅಮೂರ್ತ ವಿಷಯಗಳು – ಉದಾಹರಣೆಗೆ ಉದಾಹರಣೆಗೆ ಖಾಸಗೀಕರಣ ಕಪ್ಪು ಬಣ್ಣ ಅಥವಾ ಕನ್ನಡಿ. ಇಂತಹ ವಿಷಯಗಳನ್ನು ನೀಡಿದಾಗ ಅಭ್ಯರ್ಥಿಯ ಸೃಜನಶೀಲ ಆಲೋಚನಾ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ.
ಮಾಡಬಾರದ ತಪ್ಪುಗಳು:
ಯಶಸ್ಸಿನ ನಿಯಮಗಳನ್ನು ತಿಳಿಯುವುದರ ಜೊತೆಗೆ ಜೆಡಿಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬ ಅರಿವು ಕೂಡ ಇರಬೇಕು. ಮೊದಲನೆಯದಾಗಿ, ಚರ್ಚೆಯ ಸಂಪೂರ್ಣ ಸಮಯವನ್ನು ತಾವೊಬ್ಬರೇ ತೆಗೆದುಕೊಳ್ಳಲು ಪ್ರಯತ್ನಿಸಬಾರದು. ಕೇವಲ ನಿಮ್ಮ ಜ್ಞಾನ ಪ್ರದರ್ಶನಕ್ಕೆ ಇಳಿಯದೆ ಇತರರಿಗೂ ಮಾತನಾಡಲು ಮುಕ್ತ ಅವಕಾಶ ನೀಡಬೇಕು. ಎರಡನೆಯದಾಗಿ, ದೇಶದ ಧರ್ಮ, ಜಾತಿ ಅಥವಾ ಸೂಕ್ಷ್ಮ ರಾಜಕೀಯ ವಿದ್ಯಮಾನಗಳ ಕುರಿತು ಯಾವುದೇ ರೀತಿಯ ವೈಯಕ್ತಿಕ ಅಥವಾ ಪೂರ್ವಗ್ರಹ ಪೀಡಿತ ಕಮೆಂಟ್‌ಗಳನ್ನು ಮಾಡಬಾರದು. ಮೂರನೆಯದಾಗಿ, ಇತರರು ಮಾತನಾಡುವಾಗ ಮಧ್ಯದಲ್ಲೇ ತಡೆಯಬಾರದು. ‘ವಿಷಯಕ್ಕೆ ಬದ್ಧವಾಗಿ ತಾರ್ಕಿಕವಾಗಿ ಚರ್ಚಿಸಬೇಕು.
ಇದ್ದರೆ ಮಾತ್ರ ಮೊದಲು ಆರಂಭಿಸಬೇಕು. ಇಲ್ಲದಿದ್ದರೆ ತಪ್ಪು ಮಾಹಿತಿಯೊಂದಿಗೆ ಚರ್ಚೆ ಶುರುಮಾಡಿದರೆ ನೆಗೆಟಿವ್ * ಅಂಕಗಳನ್ನು ಪಡೆಯಬೇಕಾಗುತ್ತದೆ. ಒಂದು ವೇಳೆ ಮೊದಲು ಮಾತನಾಡಲು ಸಾಧ್ಯವಾಗದಿದ್ದರೆ, 2ನೇ ಅಥವಾ 3ನೆಯವರಾಗಿ ಪ್ರವೇಶಿಸಿ ಇತರರ ವಾದಕ್ಕೆ ಪೂರಕವಾದ ಅಂಶಗಳನ್ನು ಜೋಡಿಸಿ ಮುನ್ನಡೆಯಬಹುದು. ಹಾಗೆಯೇ, ಚರ್ಚೆಯ ಕೊನೆಯ 1-2 ನಿಮಿಷಗಳಲ್ಲಿ ಇಡೀ ಗುಂಪಿನ ವಿಭಿನ್ನ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಪಕ್ಷಪಾತವಿಲ್ಲದೆ ಸಮಾರೋಪ ಮಾಡುವ ಅಭ್ಯರ್ಥಿಗೆ ನಾಯಕತ್ವದ ಗುಣದ ಅಡಿಯಲ್ಲಿ ಹೆಚ್ಚಿನ ಅಂಕಗಳು ಲಭಿಸುತ್ತವೆ.
ಆಲಿಸುವಿಕೆ ಮತ್ತು ದೇಹಭಾಷೆ:
ಗುಂಪು ಚರ್ಚೆಯಲ್ಲಿ ಕೇವಲ ನಿಮ್ಮ ಮಾತುಗಾರಿಕೆ ಮಾತ್ರವಲ್ಲ, ನಿಮ್ಮ ಆಲಿಸುವಿಕೆಯ ಸಾಮರ್ಥ್ಯವೂ ಸಹ ಅಷ್ಟೇ ಮುಖ್ಯವಾಗಿರುತ್ತದೆ. ಸಹ-ಅಭ್ಯರ್ಥಿಯು ಮಾತನಾಡುತ್ತಿರುವಾಗ ಆತನ ಕಡೆಗೆ ತಿರುಗಿ, ಸಕ್ರಿಯವಾಗಿ ಕೇಳಿಸಿಕೊಳ್ಳಿ. ನಿಮ್ಮ ಶಬ್ದಗಳಿಗಿಂತಲೂ ನಿಮ್ಮ ದೇಹಭಾಷೆ ಸಂದರ್ಶಕರಿಗೆ ಹೆಚ್ಚಿನ ಸಂದೇಶವನ್ನು ರವಾನಿಸುತ್ತದೆ. ಕುರ್ಚಿಯಲ್ಲಿ ಕೂರುವಾಗ ಬೆನ್ನು ನೇರಮಾಡಿ, ಆರಾಮದಾಯಕವಾಗಿ ಕುಳಿತುಕೊಳ್ಳಿ.
ಮಾತನಾಡುವಾಗ ಇಡೀ ವೃತ್ತದಲ್ಲಿರುವ ಎಲ್ಲಾ ಅಭ್ಯರ್ಥಿಗಳೊಂದಿಗೆ ಕಣ್ಣಿನ ಸಂಪರ್ಕ ಸಾಧಿಸಿ ಮಾತನಾಡಿ. ಕೈಗಳನ್ನು ಅತಿಯಾಗಿ ಆಡಿಸುವುದು ಅಥವಾ ಮುಖದಲ್ಲಿ ತೀವ್ರ ಆಕ್ರೋಶದ ಭಾವನೆಗಳನ್ನು ತರುವುದು ನಿಮ್ಮ ಒಳಗಿರುವ ಹೆದರಿಕೆಯನ್ನು ತೋರ್ಪಡಿಸುತ್ತದೆ.
ಮುಗುಳು ನಗೆಯೊಂದಿಗೆ ಆತ್ಮವಿಶ್ವಾಸದ ನಗು ಮುಖ ಇರಲಿ.
