PRASHAST App-2.0: ಎಲ್ಲಾ ಶಿಕ್ಷಕರ ನೋಂದಣಿ ಮತ್ತು ವಿದ್ಯಾರ್ಥಿಗಳ Screening ಕಡ್ಡಾಯ!
PRASHAST App-2.0 Registration 2026: ರಾಜ್ಯದ ಎಲ್ಲಾ ಶಿಕ್ಷಕರ ನೋಂದಣಿ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಸ್ಕ್ರೀನಿಂಗ್ ಕುರಿತು ಸಂಪೂರ್ಣ ಮಾಹಿತಿ, ಮಾರ್ಗಸೂಚಿಗಳು ಮತ್ತು ಹಂತ-ಹಂತದ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಹಾಗೂ ವಿಕಲಚೇತನರ ಹಕ್ಕುಗಳ ಕಾಯ್ದೆ (RPwD Act-2016) ಅನ್ವಯ ಮಕ್ಕಳಲ್ಲಿ ಕಂಡುಬರುವ 21 ವಿಧದ ಅಂಗವೈಕಲ್ಯಗಳನ್ನು ಶಾಲಾ ಹಂತದಲ್ಲಿಯೇ ಗುರುತಿಸುವ ಉದ್ದೇಶದಿಂದ PRASHAST-2.0 (Pre-Assessment Holistic Screening Tool) ಮೊಬೈಲ್ ಆಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಸದರಿ ಆಯಪ್ ಮೂಲಕ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಮಕ್ಕಳ ಸ್ಕ್ರೀನಿಂಗ್ ಗೆ ಒಳಪಡಿಸಲು ಸೂಚಿಸಿದೆ.
ಆದ್ದರಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.
1. ಶಾಲೆಯ ಎಲ್ಲಾ ಶಿಕ್ಷಕರು ತಮ್ಮ ಮೊಬೈಲ್‌ನಲ್ಲಿ PRASHAST App ಅನ್ನು ಡೌನ್‌ಲೋಡ್ ಮಾಡಿಕೊಂಡು ನೋಂದಣಿ (Registration) ಮಾಡಿಕೊಳ್ಳಬೇಕು.
2. ಶಾಲೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ವಿವರಗಳನ್ನು Appನಲ್ಲಿ ನಮೂದಿಸಿ ಸ್ಕ್ರೀನಿಂಗ್ ಪ್ರಕ್ರಿಯೆ ಕೈಗೊಳ್ಳಬೇಕು.
3. ಯಾವುದೇ ವಿದ್ಯಾರ್ಥಿಯಲ್ಲಿ ವಿಶೇಷ ಅಗತ್ಯತೆ ಅಥವಾ ಅಂಗವೈಕಲ್ಯದ ಲಕ್ಷಣಗಳು ಕಂಡುಬಂದಲ್ಲಿ, ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಮುಂದಿನ ಕ್ರಮ ಕೈಗೊಳ್ಳಬೇಕು.
4. ಸ್ಕ್ರೀನಿಂಗ್ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕು.
5. ಪ್ರಗತಿ ವರದಿಯನ್ನು ತಾಲ್ಲೂಕು/ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿಯಮಿತವಾಗಿ ಕಳುಹಿಸಬೇಕು.
ಈ ಕಾರ್ಯವನ್ನು ಅತ್ಯಂತ ಆದ್ಯತೆಯಿಂದ ಕೈಗೊಂಡು, ಶಾಲೆಯ ಶೇ.100 ರಷ್ಟು ಮಕ್ಕಳ ಸ್ಕ್ರೀನಿಂಗ್ ಪೂರ್ಣಗೊಳಿಸಲು ಕ್ರಮವಹಿಸಬೇಕು. PRASHAST App 2.0 ಶಾಲಾ ಆಧಾರಿತ ಸ್ಕ್ರೀನಿಂಗ್ ಹಾಗೂ ವರದಿ ಸಿದ್ಧಪಡಿಸಲು ವಿನ್ಯಾಸಗೊಳಿಸಲ್ಪಟ್ಟಿದ್ದು, ಮಕ್ಕಳನ್ನು ಗುರುತಿಸಿ ಅಗತ್ಯ ಸೇವೆಗಳಿಗೆ ಸಂಪರ್ಕಿಸಲು ಸಹಕಾರಿಯಾಗಿದೆ.
ಆದ್ದರಿಂದ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿಮ್ಮ ವ್ಯಾಪ್ತಿಯ ಎಲ್ಲಾ ಮುಖ್ಯ ಶಿಕ್ಷಕರುಗಳು, ಎಲ್ಲಾ ಶಿಕ್ಷಕರುಗಳು, ವಿಶೇಷ ಶಿಕ್ಷಕರುಗಳು(BIERTS) ಹಾಗೂ ಅಂಗನವಾಡಿ ಕಾರ್ಯಕರ್ತೆಯರುಗಳಿಗೆ ನಿರ್ದೇಶನ ನೀಡಲು ಸೂಚಿಸಿದೆ.
